ಆಂಡ್ರಾಯ್ಡ್ ಟ್ಯಾಬ್ಲೇಟ್‌ಗಳಿಗಾಗಿ ಮೈಕ್ರೋಸಾಫ್ಟ್ ಹೊಸ ಆಫೀಸ್

Written By:

ಆಂಡ್ರಾಯ್ಡ್ ಟ್ಯಾಬ್ಲೇಟ್‌ಗಳಿಗಾಗಿ ತನ್ನ ಆಫೀಸ್ ಉತ್ಪಾದಕತೆಯಲ್ಲಿನ ಆವೃತ್ತಿಯಲ್ಲಿ ಮೈಕ್ರೋಸಾಫ್ಟ್ ಕೆಲವೊಂದು ಬದಲಾವಣೆಗಳನ್ನು ತರುವ ನಿರೀಕ್ಷೆ ಇದೆ. ಕಂಪೆನಿಯು ಸದ್ಯಕ್ಕೆ ಬೀಟಾ ಆವೃತ್ತಿಯನ್ನು ಸಿದ್ಧಪಡಿಸುತ್ತಿದ್ದು, ಕೆಲವೊಂದು ಬಳಕೆದಾರರ ಮೇಲೆ ಇದರ ಪ್ರಯೋಗ ಸದ್ಯವೇ ನಡೆಯಲಿದೆ.

ಈ ವರ್ಷದ ನಂತರವೇ ಇದರ ಪೂರ್ಣ ಯೋಜನೆಯನ್ನು ಲಾಂಚ್ ಮಾಡಲಾಗುವುದೆಂದು ವರ್ಜ್ ವರದಿ ಮಾಡಿದೆ. 2015 ರಲ್ಲಿ ಮೈಕ್ರೋಸಾಫ್ಟ್ ಲಾಂಚ್ ಮಾಡಬೇಕೆಂದಿರುವ ವಿಂಡೋಸ್‌ಗಾಗಿ ಆಫೀಸ್‌ನ ಟಚ್ ಆವೃತ್ತಿಗೂ ಮುನ್ನ ಇದು ಆಂಡ್ರಾಯ್ಡ್ ಟ್ಯಾಬ್ಲೆಟ್ ಅಪ್ಲಿಕೇಶನ್‌ನಲ್ಲಿ ಗೋಚರಿಸುತ್ತದೆ.

ಮೈಕ್ರೋಸಾಫ್ಟ್‌ನಿಂದ ಆಂಡ್ರಾಯ್ಡ್ ಟ್ಯಾಬ್ಲೇಟ್‌ಗಳಿಗೆ ಹೊಸ ಆಫೀಸ್!!!

ಎಷ್ಟು ಜನ ಬಳಕೆದಾರರು ಈ ಪರೀಕ್ಷೆಯಲ್ಲಿ ಭಾಗವಹಿಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ, ಆದರೆ ನೋಂದಾಯಿತ ಭಾಗವಹಿಸುವವರ ಪಟ್ಟಿಯನ್ನು ಮೈಕ್ರೋಸಾಫ್ಟ್ ಕೂಡಲೇ ಬಿಡುಗಡೆ ಮಾಡಲಿದೆ ಎಂದು ವರದಿ ತಿಳಿಸಿದೆ.

ಇಲ್ಲಿ ಭಾಗವಹಿಸುವವರಿಗೆ ಹೊಸ ಸಾಫ್ಟ್‌ವೇರ್ ಅನ್ನು ಪ್ರವೇಶಿಸುವ ಉತ್ತಮ ಅವಕಾಶ ಒದಗಿ ಬರಲಿದ್ದು ಬೀಟಾ ಪರೀಕ್ಷೆಯ ಮುನ್ನವೇ ಈ ಸಾಫ್ಟ್‌ವೇರ್ ಬಗೆಗಿನ ಮಾಹಿತಿಯನ್ನು ಬಳಕೆದಾರರು ತಿಳಿದುಕೊಳ್ಳಬಹುದಾಗಿದೆ.

ವಾಶಿಂಗ್ಟನ್ ಆಧಾರಿತ ಕಂಪೆನಿ ರೆಡ್‌ಮಂಡ್ ಐಪ್ಯಾಡ್‌ಗಾಗಿ ಹೊಸ ಆಫೀಸ್ ಅನ್ನು ಬಿಡುಗಡೆ ಮಾಡಿದ್ದು, ಇಂಡಿವಿಶುವಲ್ ವರ್ಡ್, ಎಕ್ಸೆಲ್ ಮತ್ತು ಪವರ್ ಪಾಯಿಂಟ್ ಅಪ್ಲಿಕೇಶನ್‌ಗಳನ್ನು ಇದು ಒಳಗೊಂಡಿದೆ.

ಮೈಕ್ರೋಸಾಫ್ಟ್ ಕೂಡ ಆಂಡ್ರಾಯ್ಡ್ ಟ್ಯಾಬ್ಲೇಟ್‌ಗಳಿಗಾಗಿ ಇದೇ ಮಾದರಿಯನ್ನು ಅನುಸರಿಸಲಿದ್ದು ಇದನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದಾಗಿದೆ. ಆದರೆ ಇದರ ಕೆಲವೊಂದು ಕಾರ್ಯಗಳಿಗೆ ನೀವು ಬೆಲೆ ತೆರುವುದು ಕಡ್ಡಾಯವಾಗಿದೆ. ಆಫೀಸ್‌ನ ಆಂಡ್ರಾಯ್ಡ್ ಫೋನ್ ಅಪ್ಲಿಕೇಶನ್‌ಗಳಿಗೂ ಕೂಡ ತಮ್ಮ ಪೂರ್ಣ ವೈಶಿಷ್ಟ್ಯಗಳನ್ನು ಮುಚ್ಚಲು ಚಂದಾದಾರಿಕೆಯ ಅವಶ್ಯಕತೆಯಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot