ನಿಮಗೆ ಬೇಡವಾದ ಮೇಲ್ ಉಸ್ತುವಾರಿ ಇನ್ನು ಕ್ಲಟ್ಟರ್ ಪಾಲಿಗೆ

By Shwetha
|

ನಿಮ್ಮ ಜಿಮೇಲ್ ಇನ್‌ಬಾಕ್ಸ್‌ನಲ್ಲಿ ತುಂಬಿರುವ ಸಂದೇಶದಿಂದ ಅತಿ ಮುಖ್ಯವಾಗಿರುವುದನ್ನು ಬೇರ್ಪಡಿಸುವುದು ತುಂಬಾ ಸುಲಭದ ಕೆಲಸವಲ್ಲ ಎಂಬುದು ನಿಮಗೆ ಗೊತ್ತೇ?

ಇದಕ್ಕಾಗಿಯೇ ಮೈಕ್ರೋಸಾಫ್ಟ್, ಕ್ಲಟ್ಟರ್ ಎಂಬ ಇನ್‌ಬಾಕ್ಸ್ ಟೂಲ್ ಅನ್ನು ಆಫೀಸ್ 365 ವ್ಯವಹಾರಕ್ಕಾಗಿ ರೂಪಿಸುತ್ತಿದ್ದು ಔಟ್‌ಲುಕ್‌ನೊಳಗೆಯೇ ಇಮೇಲ್‌ ಅನ್ನು ಆಯ್ಕೆಮಾಡುವ ಅಂಶವನ್ನು ಇದು ಹೊಂದಿದೆ ಎನ್ನಲಾಗಿದೆ.

ಮೈಕ್ರೋಸಾಫ್ಟ್‌ನ ಎಕ್ಸ್‌ಚೇಂಜ್ ಕಾನ್ಫರೆನ್ಸ್‌ನಲ್ಲಿ ಈ ವರ್ಷದ ಪ್ರಾರಂಭದಲ್ಲಿ ಇದನ್ನು ಪೂರ್ವವೀಕ್ಷಣೆ ಮಾಡಲಾಗಿದ್ದು, ಇತರ ಇಮೇಲ್‌ಗಳಿಂದ ತಮಗೆ ಪ್ರಮುಖವಾಗಿರುವ ಇಮೇಲ್ ಅನ್ನು ಬೇರ್ಪಡಿಸಲು ಕ್ಲಟ್ಟರ್ ಬಳಕೆದಾರರಿಗೆ ಸಹಾಯ ಮಾಡುತ್ತದೆ.

ಬೇಡವಾಗಿರುವ ಇಮೇಲ್ ಉಸ್ತುವಾರಿ ಕ್ಲಟ್ಟರ್ ಪಾಲಿಗೆ

ಇದನ್ನೂ ಓದಿ: ನೀವು ಕಂಡರಿಯದ ಉಪಯುಕ್ತ ಗೂಗಲ್ ಟೂಲ್‌ಗಳು

ಜಿಮೇಲ್‌ಗಾಗಿ ಗೂಗಲ್‌ನ ಪ್ರಿಯಾರ್ಟಿ ಇನ್‌ಬಾಕ್ಸ್‌ನಂತೆಯೇ, ನೀವು ಹೆಚ್ಚು ತಿರಸ್ಕರಿಸಬೇಕೆಂದು ಬಯಸುವ ಇಮೇಲ್ ಅನ್ನು ಅಭ್ಯಸಿಸಿ ಅದರಿಂದ ನಿಮಗೆ ಅತಿ ಪ್ರಮುಖವಾಗಿರುವುದನ್ನು ಒದಗಿಸಲು ಸಹಾಯ ಮಾಡುತ್ತದೆ. ಈ ಸಂದೇಶಗಳನ್ನು "ಕ್ಲಟ್ಟರ್" ಫೋಲ್ಡರ್ ಬೇರ್ಪಡಿಸಿ ನೀಡುತ್ತದೆ. ಇದನ್ನು ನಿಮಗೆ ಯಾವಾಗ ಬೇಕಾದರೂ ನೋಡಬಹುದು ಆದರೆ ಇದು ಮುಖ್ಯ ಇನ್‌ಬಾಕ್ಸ್‌ನಲ್ಲಿ ಗೋಚರಿಸುವುದಿಲ್ಲ.

ಐಟಮ್‌ಗಳನ್ನು ಮಾರ್ಕ್ ಮಾಡುವ ಮೂಲಕ ಅಥವಾ ಅವುಗಳನ್ನು ಸರಿಸುವ ಮೂಲಕ ಈ ಸಂದೇಶಗಳನ್ನು ಕ್ಲಟ್ಟರ್ ಫೋಲ್ಡರ್‌ಗೆ ವರ್ಗಾಯಿಸಬಹುದು. ಎಂದು ಕಂಪೆನಿ ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ. ನೀವು ಹೊಸ ಪ್ರಾಜೆಕ್ಟ್ ಅಥವಾ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿರುವಂತೆ ಕ್ಲಟ್ಟರ್ ಇದನ್ನು ಅಭ್ಯಸಿಸಲು ಆರಂಭಿಸುತ್ತದೆ ಮತ್ತು ಅದನ್ನು ತನ್ನಲ್ಲಿ ಅಳವಡಿಸಿಕೊಳ್ಳುತ್ತದೆ.

ವ್ಯವಹಾರಲ್ಲದ ಆಫೀಸ್ 365 ಬಳಕೆದಾರರಿಗೂ ಈ ಕ್ಲಟ್ಟರ್ ಸಹಕಾರಿಯಾಗಿದೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ.

Best Mobiles in India

English summary
This article tells about Microsoft rolls out Clutter tool to help you ignore email you don't want to see.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X