Subscribe to Gizbot

ವಿಂಡೋಸ್ 8.1 ಫೋನ್‌ಗಳಿಗೆ ಡೆನೀಮ್ ನವೀಕರಣ ಸದ್ಯದಲ್ಲೇ: ಮೈಕ್ರೋಸಾಫ್ಟ್

Posted By:

ವಿಂಡೋಸ್ ಫೋನ್ 8.1 ಚಾಲನೆಯಾಗುತ್ತಿರುವ ಎಲ್ಲಾ ಲ್ಯೂಮಿಯಾ ಸ್ಮಾರ್ಟ್‌ಫೋನ್‌ಗಳು ಸದ್ಯದಲ್ಲೇ ಲ್ಯೂಮಿಯಾ ಡೆನೀಮ್ ನವೀಕರಣವನ್ನು ಪಡೆದುಕೊಳ್ಳಲಿದೆ ಎಂದು ಮೈಕ್ರೋಸಾಫ್ಟ್ ಘೋಷಿಸಿದೆ.

ಲ್ಯೂಮಿಯಾ 520 ಗಾಗಿ ಲ್ಯೂಮಿಯಾ ಡೆನೀಮ್ ನವೀಕರಣವು ಈಗಾಗಲೇ ದೊರೆಯುತ್ತಿದೆ ಎಂದು ಕಂಪೆನಿ ಟ್ವೀಟಿಸಿದೆ. ಇದೇ ರೀತಿ ವಿಂಡೋಸ್ 8.1 ಚಾಲನೆಯಲ್ಲಿರುವ ಎಲ್ಲಾ ವಿಂಡೋಸ್ ಫೋನ್‌ಗಳು ಲ್ಯೂಮಿಯಾ ಡೆನೀಮ್ ನವೀಕರಣವನ್ನು ಪಡೆದುಕೊಳ್ಳಲಿವೆ. ಈ ತಿಂಗಳ ಕೊನೆಗೆ ಈ ನವೀಕರಣವು ಎಲ್ಲಾ ಫೋನ್‌ಗಳಲ್ಲೂ ಲಭ್ಯವಾಗುತ್ತಿದೆ.

ವಿಂಡೋಸ್ 8.1 ಫೋನ್‌ಗಳಿಗೆ ಡೆನೀಮ್ ನವೀಕರಣ ಸದ್ಯದಲ್ಲೇ: ಮೈಕ್ರೋಸಾಫ್ಟ್

ಲ್ಯೂಮಿಯಾ ಡೆನೀಮ್ ನವೀಕರಣವು ವೈಶಿಷ್ಟ್ಯಗಳಾದ ಕೋರ್ಟಾನಾ, ಲೈವ್ ಫೋಲ್ಡರ್ಸ್, ಆಪ್ಸ್ ಕೋರ್ನರ್, ಎಸ್‌ಎಮ್‌ಎಸ್ ಮರ್ಜ್ ಮತ್ತು ಫಾರ್ವರ್ಡಿಂಗ್ ಅನ್ನು ಒಳಗೊಳ್ಳಲಿದೆ. ಇನ್ನಷ್ಟು ಕ್ಯಾಮೆರಾ ಸುಧಾರಣೆಗಳನ್ನು ಈ ನವೀಕರಣವು ಹೊರತರಲಿದ್ದು, ವಾಯ್ಸ್ ಆಕ್ಟಿವೇಶನ್ ಮೊದಲಾದ ವಿಶೇಷತೆಗಳನ್ನು ಡಿವೈಸ್ ಹೊಂದಲಿದೆ.

ಕಳೆದ ವಾರ, ಫೋನ್‌ಗಳಿಗಾಗಿ ವಿಂಡೋಸ್ 10 ನ ಪ್ರಿವ್ಯೂವನ್ನು ಬಿಡುಗಡೆ ಮಾಡಿದ್ದು ಮೊಬೈಲ್ ಡಿವೈಸ್‌ಗಳಿಗಾಗಿ ಮುಂಬರಲಿರುವ ಮುಖ್ಯ ನವೀರಕಣ ಇದಾಗಿದೆ. ಈ ನವೀಕರಣದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಮಾಡಲಾಗುತ್ತಿದ್ದು ಪ್ರತಿಯೊಂದು ಹಂತವನ್ನೂ ಬಳಕೆದಾರರಿಗೆ ಇದು ತಲುಪಿಸಲಿದೆ.

English summary
This article tells about Microsoft Says All Windows Phone 8.1 Devices to Get Lumia Denim Update This Month.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot