ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೋ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಬಹಿರಂಗ!

|

ಟೆಕ್‌ ವಲಯದಲ್ಲಿ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆನೂ ಭರವಿಲ್ಲ. ಪ್ರತಿನಿತ್ಯವೂ ಹೊಸ ಸ್ಮಾರ್ಟ್‌ಫೋನ್‌ ಭಟರಾಟೆ ಜೋರಾಗಿಯೇ ನಡೆಯುತ್ತಲೇ ಇದೆ. ಬಜೆಟ್‌ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಹೈ ಎಂಡ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳವರೆಗೂ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಬ್ಯವಿವೆ. ಆದರೂ ಗ್ರಾಹಕರು ಮಾತ್ರ ನೆಚ್ಚಿನ ಬ್ರ್ಯಾಂಡ್‌ ಕಂಪೆನಿಯ ಸ್ಮಾರ್ಟ್‌ಫೋನ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಈ ಸಾಲಿನಲ್ಲಿ ಮೈಕ್ರೋಸಾಫ್ಟ್‌ ಕಂಪೆನಿ ಕೂಡ ಸೇರಿಕೊಂಡಿದೆ. ಹಲವು ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ತನ್ನ ಮತ್ತೊಂದು ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ದತೆ ನಡೆಸಿದೆ.

ಮೈಕ್ರೋಸಾಫ್ಟ್‌

ಹೌದು, ಸಾಫ್ಟವೇರ್‌ ದಿಗ್ಗಜ ಎನಿಸಿಕೊಂಡಿರುವ ಮೈಕ್ರೋಸಾಫ್ಟ್‌ ತನ್ನ ಹೊಸ ಡ್ಯುಯಲ್-ಸ್ಕ್ರೀನ್ ಸರ್ಫೇಸ್ ಡ್ಯುಯೊ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಲು ವೇದಿಕೆ ಸಿದ್ದ ಪಡಿಸಿಕೊಳ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಹೆಸರೇ ಸೂಚಿಸುವಂತೆ ಎರಡು ಸ್ಕ್ರೀನ್‌ಗಳನ್ನು ಹೊಂದಿದ್ದು, 360 ಡಿಗ್ರಿ ಹಿಂಜ್ ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೆ ಇದು ಒಂದು ರೀತಿಯ ಮತ್ತು ಮಡಿಸಬ ಹುದಾದ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಉತ್ತಮ ವಿನ್ಯಾಸವನ್ನ ಒಳಗೊಂಡಿರಲಿದೆ ಎಂದು ಹೇಳಲಾಗ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನೇನು ಅನ್ನೊದು ಆನ್‌ಲೈನ್‌ನಲ್ಲಿ ಲೀಕ್‌ ಆಗಿದ್ದು, ಲೀಕ್‌ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಬನ್ನಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಇನ್ನು ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೊ ಸ್ಮಾರ್ಟ್‌ಫೋನ್‌ನ ಎರಡೂ ಸ್ಕ್ರೀನ್‌ಗಳು ಒಂದೇ ಆಗಿರುತ್ತವೆ. ಅಲ್ಲದೆ ಇದು 1800 × 1350 ರೆಸಲ್ಯೂಶನ್ ಪ್ಯಾನೆಲ್‌ ಹೊಂದಿರುವ 5.6-ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು ದೊಡ್ಡ ಬೆಜೆಲ್‌ಗಳನ್ನು ಸಹ ಹೊಂದಿರಲಿದೆ ಎನ್ನಲಾಗಿದೆ. ಇದಲ್ಲದೆ ಈ ಡಿವೈಸ್‌ ಅನ್ನು ಪೂರ್ಣವಾಗಿ ತೆರೆದಾಗ ಅದು 4.8 ಮಿಮೀ ಆಗಿರುತ್ತದೆ ಎಂದು ಹೇಳಲಾಗ್ತಿದೆ. ಜೊತೆಗೆ ಈ ಸ್ಕ್ರೀನ್‌ ಅನ್ನು ಮುಚ್ಚಿದಾಗ, ಡ್ಯುಯೊ ಥಿಕ್‌ನೆಸ್‌ 9.6 ಮಿಮೀ ಆಗಿರಲಿದೆ ಎನ್ನಲಾಗಿದೆ. ಇದಲ್ಲದೆ ಈ ಡಿಸ್‌ಪ್ಲೇಗೆ ಸರ್ಫೇಸ್ ಪೆನ್ ಸ್ಟೈಲಸ್‌ಗೆ ಸಹ ಬೆಂಬಲಿಸಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ, ಅಲ್ಲದೆ ಬಿಡುಗಡೆಯಾದ ಕೂಡಲೇ ಆಂಡ್ರಾಯ್ಡ್ 11 ಗೆ ಯೋಜಿತ ನವೀಕರಣವನ್ನು ಹೊಂದಲಿದೆ ಎಂದು ಸಹ ನಿರೀಕ್ಷಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6GB RAM ಮತ್ತು 256GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಹೊಂದಿದೆ ಎಂದು ಅಂದಾಜಿಸಲಾಗಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಇನ್ನು ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೊದಲ್ಲಿ ಸಿಂಗಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಇರಲಿದೆ. ಅಲ್ಲದೆ ಈ ಕ್ಯಾಮೆರಾ 11 ಮೆಗಾಪಿಕ್ಸೆಲ್ F/ 2.0 ಲೆನ್ಸ್‌ ಹೊಂದಿದ್ದು, 1.12um ಪಿಕ್ಸೆಲ್ ಗಾತ್ರವನ್ನು ಹೊಂದಿದೆ ಎನ್ನಲಾಗಿದೆ. ಇನ್ನು ಸೆಲ್ಫಿ ಕ್ಯಾಮೆರಾ ಇದೆಯೋ ಇಲ್ಲವೊ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಈ ಸ್ಮಾರ್ಟ್‌ಫೋನ್‌ 3,460mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿರಲಿದ್ದುವ ವೇಗದ ಚಾರ್ಜಿಂಗ್‌ ಬೆಂಬಲದ ಬಗ್ಗೆ ಮಾಹಿತಿ ಇಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌ ಅನ್ನು ಬೆಂಬಲಿಸಲಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಬೆಲೆ ಹಾಗೂ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Best Mobiles in India

English summary
Microsoft’s upcoming dual-screen Surface Duo is still one of the most awaited pieces of technology this year.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X