ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೊ ಸ್ಮಾರ್ಟ್‌ಫೋನ್‌ ಇಮೇಜ್‌ ಆನ್‌ಲೈನ್‌ನಲ್ಲಿ ಬಹಿರಂಗ!

|

ಮೈಕ್ರೋಸಾಫ್ಟ್ ಕಂಪೆನಿ ತನ್ನ future foldable device ಸ್ಮಾರ್ಟ್‌ಫೋನ್‌ ಸರ್ಫೇಸ್ ಡ್ಯುಯೊವನ್ನು ಬಿಡುಗಡೆ ಮಾಡುವುದಾಗಿದೆ ಘೋಷಣೆ ಮಾಡಿತ್ತು. ಇದಾಗಿ ಹೆಚ್ಚು ಕಡಿಮೆ ಹತ್ತು ತಿಂಗಳೇ ಕಳೆದು ಹೋಗಿದೆ. ಆದರೆ ಇಲ್ಲಿಯವರೆಗೂ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿರಲಿಲ್ಲ. ಆದರೆ ಇದೀಗ future foldable ಸ್ಮಾರ್ಟ್‌ಫೋನ್‌ನ ಹಲವಾರು ಇಮೇಜ್‌ಗಳು ಆನ್‌ಲೈನ್‌ನಲ್ಲಿ ಲೀಕ್‌ ಆಗಿವೆ. ಸದ್ಯ ಲೀಕ್‌ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ ಶೀಘ್ರದಲ್ಲಿಯೇ ಬಿಡುಗಡೆ ಆಗುವ ಸಾಧ್ಯತೆ ಇದೆ.

ಮೈಕ್ರೋಸಾಫ್ಟ್‌

ಹೌದು, ಮೈಕ್ರೋಸಾಫ್ಟ್‌ ಕಂಪೆನಿ ಭವಿಷ್ಯದ ಫೊಲ್ಡೇಬಲ್‌ ಸ್ಮಾರ್ಟ್‌ಫೋನ್‌ ಸರ್ಫೇಸ್ ಡ್ಯುಯೊ ಶೀಘ್ರದಲ್ಲಿಯೇ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದರ ಕುರಿತಂತೆ ಆನ್‌ಲೈನ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ವಿನ್ಯಾಸದ ಹಲವು ಇಮೇಜ್‌ಗಳು ಲೀಕ್‌ ಆಗಿವೆ. ಇನ್ನು ಈ ಸ್ಮಾರ್ಟ್‌ಫೋನ್‌ ಈಗಾಗಲೇ ಮಾರುಕಟ್ಟೆಗೆ ಎಂಟ್ರಿ ನೀಡಬೇಕಿತ್ತು. ಆದರೆ ನಾನಾ ಕಾರಣಗಳಿಂದಾಗಿ ಸಾಕಷ್ಟು ವಿಳಂಬವಾಗಿರುವುದು ಗೊತ್ತೆ ಇದೆ. ಸದ್ಯ ಇದೀಗ ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ ಅನ್ನು ಕಸ್ಟಮ್ ರೀತಿಯಲ್ಲಿ ರನ್‌ ಮಾಡಲಿದ್ದು, ಇದರ ಇಂಟರ್‌ಫೇಸ್‌ ಲುಕ್‌ ವಿಂಡೋಸ್ 10ಗೆ ಹೋಲುತ್ತದೆ. ಇನ್ನುಳಿದಂತೆ ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌ ಕಂಪೆನಿ ಬಿಡುಗಡೆ ಮಾಡಲಿರುವ ಸರ್ಫೇಸ್ ಡ್ಯುಯೊ ಕುರಿತು ಅಧಿಕೃತ ಫೀಚರ್ಸ್‌ಗಳ ಬಗ್ಗೆ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಲಭ್ಯ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ ಅನ್ನು ಫೋಲ್ಡೇಬಲ್‌ ಮಾಡಿದಾಗ ವಿಂಡೋಸ್‌ 10 ಮಾದರಿಯ ಲುಕ್‌ ಅನ್ನು ಹೊಂದಿದೆ. ಇನ್ನು ಈ ಡಿವೈಸ್‌ ತಲಾ 5.6 ಇಂಚುಗಳ ಎರಡು ಪ್ರತ್ಯೇಕ ಸ್ಕ್ರೀನ್‌ಗಳನ್ನು ಹೊಂದಿರುತ್ತದೆ, ಇದು ಬಳಕೆದಾರರಿಗೆ ಒಂದೇ ಸಮಯದಲ್ಲಿ ಎರಡು ಅಪ್ಲಿಕೇಶನ್‌ಗಳನ್ನು ತೆರೆಯಲು ಅನುವು ಮಾಡಿಕೊಡುತ್ತದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 855 ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎನ್ನಲಾಗ್ತಿದೆ. ಹಾಗೇಯೇ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಜನ್-ಓಲ್ಡ್ ಚಿಪ್‌ಸೆಟ್‌ ಗಳನ್ನ ಹೊಂದಿರುವುದರಿಂದ ಇದರ ಬೆಲೆಹೆಚ್ಚಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ಈ ಡಿವೈಸ್‌ನ ಬ್ಯಾಟರಿಗೆ ಸಂಬಂಧಿಸಿದಂತೆ, ಇದು ಫೂರ್ಣ ಪ್ರಮಾಣದಲ್ಲಿ ರೀಚಾರ್ಜ್ ಮಾಡದೆಯೇ ಇದ್ದರೂ ಪೂರ್ಣ ದಿನದ ಕಾರ್ಯಾಚರಣೆಯನ್ನು ನಡೆಸುವ ಸಾಧ್ಯತೆಯಿದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸ್ಮಾರ್ಟ್‌ಫೋನ್‌ ಸಿಂಗಲ್‌ ಕ್ಯಾಮೆರಾ ಹೊಂದಿದ್ದು, ಇದು 11 mp‌ ಸೆನ್ಸಾರ್‌ ಸಾಮರ್ಥ್ಯ ಎಂದು ಊಹಿಸಲಾಗಿದೆ. ಇನ್ನು ಆನ್‌ಲೈನ್‌ ಇಮೇಜ್‌ಗಳ ಪ್ರಕಾರ ಇದು ಹೊಸ ವಿನ್ಯಾಸದ ಫೊಲ್ಡೇಬಲ್‌ ಸ್ಮಾರ್ಟ್‌ಫೋನ್ ಆಗಿದೆ. ಒಂದೇ ಬಾರಿಗೆ ಎರಡು ಸ್ಕ್ರೀನ್‌ಗಳಲ್ಲಿ ಪ್ರತ್ಯೇಕ ಅಪ್ಲಿಕೇಶನ್‌ ತೆರೆಯಲು ಅವಕಾಶ ಮಾಡಿಕೊಡುವ ಫೀಚರ್ಸ್‌ ಈ ಸ್ಮಾರ್ಟ್‌ಫೋನ್‌ನಲ್ಲಿದೆ. ಇದರಿಂದ ಬಳಕೆದಾರರು ಒಂದೇ ಸಮಯದಲ್ಲಿ ಎರಡು ಸ್ಕ್ರೀನ್‌ಗಳಲ್ಲಿ ತಮಗಿಷ್ಟವಾದ ಅಪ್ಲಿಕೇಶನ್‌ಗಳನ್ನ ಒಪನ್‌ ಮಾಡಿ ಎಂಜಾಯ್‌ ಮಾಡಬಹುದಾಗಿದೆ.

ಬೆಲೆ

ಸದ್ಯ ಈ ಸ್ಮಾರ್ಟ್‌ಫೋನ್‌ ಬೆಲೆ ಎಷ್ಟಿರಲಿದೆ ಎನ್ನುವ ಮಾಹಿತಿ ಲಬ್ಯವಿಲ್ಲ. ಆದರೆ ಲಭ್ಯ ಮಾಹಿತಿ ಪ್ರಕಾರ, ಇದು $999 (ಅಂದಾಜು 75,000 ರೂ)ಬೆಲೆಯನ್ನ ಹೊಂದಿರುವ ಸಾಧ್ಯೆ ಇದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಇದೇ ಆಗಸ್ಟ್ 24ಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಆಗುವ ನಿರೀಕ್ಷೆಯಿದೆ. ಆದಾಗ್ಯೂ ಕೆಲವು ವರದಿಗಳ ಪ್ರಕಾರ ಇದರ ಬಿಡುಗಡೆ ಇನ್ನು ಕೆಲವು ತಿಂಗಳುಗಳೇ ಆಗಬಹುದು ಎಂದು ಸಹ ಹೇಳಲಾಗಿದೆ.

Best Mobiles in India

English summary
Originally called Andromeda, the Microsoft Surface Duo started being developed back in 2016.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X