Microsoft: ಮೈಕ್ರೋಸಾಫ್ಟ್ ಸರ್ಫೇಸ್ ಗೋ 2, ಸರ್ಫೇಸ್ ಬುಕ್ 3 ಬಿಡುಗಡೆ!
ಸಾಫ್ಟ್‌ವೇರ್ ಲೋಕದ ದಿಗ್ಗಜ ಮೈಕ್ರೋಸಾಫ್ಟ್ ಟೆಕ್ ವಲಯದಲ್ಲಿ ಸಾಕಷ್ಟು ಪ್ರಖ್ಯಾತಿಯನ್ನು ಹೊಂದಿದೆ. ಸಾಫ್ಟ್‌ವೇರ್ ವಲಯ ಮಾತ್ರವಲ್ಲದೆ ಲ್ಯಾಪ್‌ಟಾಪ್ ವಲಯದಲ್ಲೂ ಸಾಕಷ್ಟು ಸದ್ದು ಮಾಡಿದೆ. ಸದ್ಯ ಈಗಾಗಲೇ ಹಲವು ಮಾದರಿಯ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ತನ್ನ ಹೊಸ ಮಾದರಿಯ ಹೊಸ ಸರ್ಫೇಸ್ ಗೋ 2 ಟ್ಯಾಬ್ಲೆಟ್, ಸರ್ಫೇಸ್ ಬುಕ್ 3 ಲ್ಯಾಪ್‌ಟಾಪ್, ಸರ್ಫೇಸ್ ಹೆಡ್‌ಫೋನ್ 2, ಸರ್ಫೇಸ್ ಇಯರ್‌ಬಡ್ಸ್, ಸರ್ಫೇಸ್ ಡಾಕ್ 2 ಮತ್ತು ಯುಎಸ್‌ಬಿ-ಸಿ ಟ್ರಾವೆಲ್ ಹಬ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಹೌದು, ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್ ತನ್ನ ಹಾರ್ಡ್‌ವೇರ್ ಅನ್ನು ವಿಂಡೋಸ್ 10 ನ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಹೊಸ ಮಾದರಿಯ ಲ್ಯಾಪ್‌ಟಾಪ್‌ಗಳನ್ನ ಬಿಡುಗಡೆ ಮಾಡಿದೆ. ಸದ್ಯ ಇದೀಗ ಬಿಡುಗಡೆ ಮಾಡಿರುವ ಸರ್ಫೇಸ್ ಗೋ 2 ಟ್ಯಾಬ್ಲೆಟ್, ಸರ್ಫೇಸ್ ಬುಕ್ 3 ಲ್ಯಾಪ್ಟಾಪ್, ಅನ್ನು ಹೊಸ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಇವುಗಳ ಮೂಲಕ ಜನರಿಗೆ ಕೆಲಸ ಮಾಡಲು ಮತ್ತು ಕಲಿಯಲು, ಕಮ್ಯೂನಿಕೆಟ್ ಮಾಡಲು ಮತ್ತು ಮನರಂಜನೆಯನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. ಹಾಗಾದ್ರೆ ಈ ಹೊಸ ಪ್ರಾಡಕ್ಟ್‌ಗಳು 2-ಇನ್ -1 ಪ್ರಾಡಕ್ಟ್‌ಗಳಾಗಿವೆ ಹಾಗಾದ್ರೆ ಈ ಪ್ರಾಡಕ್ಟ್‌ಗಳ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೈಕ್ರೋಸಾಫ್ಟ್ ಸರ್ಫೇಸ್ ಗೋ 2
ಹೊಸ ಮೈಕ್ರೋಸಾಫ್ಟ್ ಸರ್ಫೇಸ್ ಗೋ 2 ಟ್ಯಾಬ್ಲೆಟ್ 1920x1280-ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿರುವ 10.5-ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಈ ಡಿಸ್ಪ್ಲೇಯು 3: 2 ಅನುಪಾತವನ್ನ ಹೊಂದಿದೆ. ಅಲ್ಲದೆ ಈ ಟ್ಯಾಬ್ಲೆಟ್ 8 ನೇ ಜನ್ ಇಂಟೆಲ್ ಕೋರ್ ಎಂ ಪ್ರೊಸೆಸರ್ ಹೊಂದಿದೆ. ಜೊತೆಗೆ ಇದು ಟಾಪ್-ಎಂಡ್ ರೂಪಾಂತರದಲ್ಲಿ ಸುಧಾರಿತ ಬ್ಯಾಟರಿ ಬಾಳಿಕೆಯನ್ನ ಒಳಗೊಂಡಿದೆ. ಇನ್ನು ಈ ಟ್ಯಾಬ್ಲೆಟ್ 64 ಪ್ರತಿಶತದಷ್ಟು ವೇಗದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದಲ್ಲದೆ ಸರ್ಫೇಸ್ ಗೋ 2 ಮೆಗ್ನೀಸಿಯಮ್ ದೇಹವನ್ನು ಸಂಯೋಜಿತ ಕಿಕ್‌ಸ್ಟ್ಯಾಂಡ್ ಹೊಂದಿದೆ. ಕೀಬೋರ್ಡ್ ಕವರ್ ಇಲ್ಲದೆ ಇದು ಕೇವಲ 553 ಗ್ರಾಂ ತೂಗುತ್ತದೆ. ಯುಎಸ್ಬಿ ಟೈಪ್-ಸಿ ಪೋರ್ಟ್, ಚಾರ್ಜಿಂಗ್ ಮತ್ತು ಪರಿಕರಗಳಿಗಾಗಿ ಮೈಕ್ರೋಸಾಫ್ಟ್ನ ಸ್ವಾಮ್ಯದ ಸರ್ಫೇಸ್ ಕನೆಕ್ಟರ್, ಹೆಡ್ಫೋನ್ ಸಾಕೆಟ್, ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್, ಡ್ಯುಯಲ್ "ಸ್ಟುಡಿಯೋ" ಮೈಕ್ರೊಫೋನ್ ಮತ್ತು 5 ಮೆಗಾಪಿಕ್ಸೆಲ್ ವೆಬ್ಕ್ಯಾಮ್ ಇತರ ಸಾಮಾನ್ಯ ಫೀಚರ್ಸ್‌ಗಳನ್ನ ಹೊಂದಿದೆ.

ಇನ್ನು ಹೊಸ ಸರ್ಫೇಸ್ ಗೋ 2 ಟ್ಯಾಬ್ಲೆಟ್ ಇಂಟೆಲ್ ಪೆಂಟಿಯಮ್ ಗೋಲ್ಡ್ ಪ್ರೊಸೆಸರ್ ಅನ್ನು ಒಳಗೊಂಡಿದೆ. ಹಾಗೇಯೇ 4GB RAM ಮತ್ತು 64GB ಸಂಗ್ರಹ ಸಾಮರ್ಥ್ಯವನ್ನ ಒಳಗೊಂಡಿದೆ. ಜೊತೆಗೆ ಹೈ-ಎಂಡ್ ಮಾದರಿಯು 8GB RAM ಹಾಗೂ 128GB ಸಂಗ್ರಹ ಸಾಮರ್ಥ್ಯವನ್ನ ಹೊಂದಿರುವ ಉನ್ನತ-ಮಟ್ಟದ ಸಿಪಿಯು ಹೊಂದಿದೆ. ಇನ್ನು ಸರ್ಫೇಸ್ ಗೋ 2 ಟ್ಯಾಬ್ಲೆಟ್‌ನ ಮೂಲ ಮಾದರಿಯ ಬೆಲೆ $ 399.99 (ಅಂದಾಜು 30,500 ರೂ.) ಆಗಿದೆ. ಇನ್ನು 8GB RAM + 128GB ಸಾಮರ್ಥ್ಯದ ಉನ್ನತ-ಮಟ್ಟದ ಸಿಪಿಯು ಹೊಂದಿರುವ ಟ್ಯಾಬ್ಲೆಟ್‌ನ ಬೆಲೆ $629 (ಅಂದಾಜು ರೂ. 47,970) ಆಗಿದೆ.

ಮೈಕ್ರೋಸಾಫ್ಟ್ ಸರ್ಫೇಸ್ ಬುಕ್ 3
ಪ್ರೀಮಿಯಂ ಮೈಕ್ರೋಸಾಫ್ಟ್ ಸರ್ಫೇಸ್ ಬುಕ್ 3 ಡಿಟ್ಯಾಚೇಬಲ್ 2-ಇನ್ -1 ಹಿಂದಿನ ಮಾದರಿಗಳಿಗಿಂತ 50 ಪ್ರತಿಶತದಷ್ಟು ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದು 13.5-ಇಂಚಿನ ಮತ್ತು 15-ಇಂಚಿನ ಡಿಸ್‌ಪ್ಲೇ ಹೊಂದಿರುವ ಎರಡು ಆವೃತ್ತಿಗಳಲ್ಲಿ ಲಭ್ಯವಾಗಲಿದೆ. ದೊಡ್ಡ ಗಾತ್ರದ ಡಿಸ್‌ಪ್ಲೇ ಹೊಂದಿರುವ ಸರ್ಫೇಸ್ ಬುಕ್ 3 ಸ್ಟ್ಯಾಂಡ್‌ಬೈನಲ್ಲಿ ಸುಧಾರಿತ ವಿದ್ಯುತ್ ದಕ್ಷತೆಯೊಂದಿಗೆ 17.5 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಇನ್ನು ಗೇಮಿಂಗ್ ಅಥವಾ ವೃತ್ತಿಪರ ವಿಷಯ ರಚನೆಗಾಗಿ ನೀವು ಪ್ರತ್ಯೇಕವಾದ ಎನ್ವಿಡಿಯಾ ಜಿಫೋರ್ಸ್ ಜಿಟಿಎಕ್ಸ್ ಅಥವಾ ಕ್ವಾಡ್ರೊ ಆರ್ಟಿಎಕ್ಸ್ ಜಿಪಿಯು ಆಯ್ಕೆಯನ್ನು ಸಹ ಪಡೆಯಬಹುದಾಗಿದೆ. ಇದರಲ್ಲಿ ಮೈಕ್ರೋಸಾಫ್ಟ್ ಇಂಟೆಲ್‌ನ 10 ನೇ ಜನ್ 'ಐಸ್ ಲೇಕ್' ಕೋರ್ ಐ 5 ಮತ್ತು ಕೋರ್ ಐ 7 ಪ್ರೊಸೆಸರ್‌ಗಳನ್ನು ಬಳಸಲಾಗಿದೆ. ಅಲ್ಲದೆ 13.5-ಇಂಚಿನ ಮಾದರಿಯು ಡಿಟ್ಯಾಚೇಬಲ್ ಟ್ಯಾಬ್ಲೆಟ್ ಮತ್ತು ಕೀಬೋರ್ಡ್ ಬೇಸ್ ಅನ್ನು ಒಳಗೊಂಡಿದೆ. ಜೊತೆಗೆ ವೈ-ಫೈ 6, ಎರಡು ಯುಎಸ್‌ಬಿ 3.1 ಜೆನ್ 2 ಟೈಪ್-ಎ ಪೋರ್ಟ್‌ಗಳು, ಒಂದು ಯುಎಸ್‌ಬಿ 3.1 ಜೆನ್ 2 ಟೈಪ್-ಸಿ ಪೋರ್ಟ್, ಎರಡು ಸೂಫೇಸ್ ಕನೆಕ್ಟ್ ಪೋರ್ಟ್‌ಗಳು, ಎಸ್‌ಡಿಎಕ್ಸ್‌ಸಿ ಕಾರ್ಡ್ ಸ್ಲಾಟ್, 5 ಮೆಗಾಪಿಕ್ಸೆಲ್ ಫ್ರಂಟ್ ಮತ್ತು 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾಗಳು, ದೂರದ-ಕ್ಷೇತ್ರ ಸ್ಟಿರಿಯೊ ಮೈಕ್ರೊಫೋನ್ಗಳು ಮತ್ತು ಸಂಪೂರ್ಣ ಬ್ಯಾಕ್ಲಿಟ್ ಕೀಬೋರ್ಡ್ ಅನ್ನು ಬೆಂಬಲಿಸಲಿದೆ. ಇದಲ್ಲದೆ 13.5-ಇಂಚಿನ ಸರ್ಫೇಸ್ ಬುಕ್ 3 $ 1,599 (ಅಂದಾಜು 1,21,940 ರೂ.) ಬೆಲೆಯನ್ನ ಹೊಂದಿದೆ. ಜೊತೆಗೆ 15 ಇಂಚಿನ ಆವೃತ್ತಿಯ ಬುಕ್ 1.3GHz ಕೋರ್ ಐ 7 ಸಿಪಿಯು, ಜೀಫೋರ್ಸ್ ಜಿಟಿಎಕ್ಸ್ 1660 ಟಿ ಜಿಪಿಯು, 32 ಜಿಬಿ RAM ಮತ್ತು 2 ಟಿಬಿ ಎನ್‌ವಿಎಂ ಹೊಂದಿದ್ದು, ಇದು $ 3,399 (ಅಂದಾಜು 2,59,200 ರೂ.)ಗೆ ಲಭ್ಯವಾಗಲಿದೆ.


Click it and Unblock the Notifications








