ಮೈಕ್ರೋಸಾಫ್ಟ್‌ನ 'ಸರ್ಫೇಸ್ ಬುಕ್ 3' ಮತ್ತು 'ಸರ್ಫೇಸ್ ಗೋ 2' ಫೀಚರ್ಸ್‌ ಲೀಕ್‌!

|

ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್‌ ಮತ್ತು ಸ್ಮಾರ್ಟ್‌ಡಿಸ್‌ಪ್ಲೇ ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಈಗಾಗ್ಲೆ ಹಲವಾರು ಬ್ರ್ಯಾಂಡ್‌ ಕಂಪೆನಿಗಳು ವಿವಿಧ ಬಗೆಯ ಸ್ಮಾರ್ಟ್‌ ಡಿಸ್‌ಪ್ಲೇ, ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿವೆ. ಆದರೆ ಗ್ರಾಹಕರು ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳ ಲ್ಯಾಪ್‌ಟಾಪ್‌, ಸ್ಮಾರ್ಟ್‌ ಡಿಸ್‌ಪ್ಲೇ ಗಳನ್ನೇ ಖರೀದಿಸಲು ಮುಂದಾಗುತ್ತಾರೆ. ಇನ್ನ ಸಾಫ್ಟವೇರ್‌ ದಿಗ್ಗಜ ಕಂಪೆನಿ ಮೈಕ್ರೋಸಾಫ್ಟ್‌ ಕೂಡ ಈಗಾಗ್ಲೆ ಹಲವಾರು ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಹೊಸ ಮಾದರಿಯ ಸ್ಮಾರ್ಟ್‌ ಡಿಸ್‌ಪ್ಲೇ ಹಾಗೂ ಲ್ಯಾಪ್‌ಟಾಪ್‌ ಪರಿಚಯಿಸಲು ಮುಂದಾಗಿದೆ.

ಹೌದು

ಹೌದು, ಮೈಕ್ರೋಸಾಫ್ಟ್ ಕಂಪೆನಿ ತನ್ನ ಹೊಸ ಸರ್ಫೇಸ್ ಬುಕ್ 3 ಮತ್ತು ಸರ್ಫೇಸ್ ಗೋ 2 ಲ್ಯಾಪ್‌ಟಾಪ್‌ ಗಳನ್ನ ಪರಿಚಯಿಸಲು ಮುಂದಾಗಿದೆ. ಇನ್ನು ಈ ಎರಡು ಸ್ಮಾರ್ಟ್‌ ಡಿವೈಸ್‌ಗಳು 2 ಇನ್ 1 ಮಾದರಿಯಲ್ಲಿ ಲಭ್ಯವಾಗಲಿವೆ ಎಂದು ಹೇಳಲಾಗ್ತಿದೆ. ಇನ್ನು ಸರ್ಫೇಸ್ ಬುಕ್ 3 10th gen ಇಂಟೆಲ್ ಪ್ರೊಸೆಸರ್‌ ಹೊಂದಿದ್ದು, ಸರ್ಫೇಸ್ ಗೋ 2 ಕೋರ್ ಎಂ ಆವೃತ್ತಿಯ ಇಂಟೆಲ್ ಪ್ರೊಸೆಸರ್‌ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಸದ್ಯ ಬಿಡುಗಡೆಗೆ ಸಿದ್ದವಿರುವ ಈ ಎರಡು ಸ್ಮಾರ್ಟ್‌ ಡಿವೈಸ್‌ಗಳ ಫೀಚರ್ಸ್‌ಗಳೇನು ಅನ್ನೊದು ಆನ್‌ಲೈನ್‌ನಲ್ಲಿ ಲೀಕ್‌ ಆಗಿದ್ದು, ಆ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಮೈಕ್ರೋಸಾಫ್ಟ್ ಸರ್ಫೇಸ್ ಬುಕ್ 3

ಮೈಕ್ರೋಸಾಫ್ಟ್ ಸರ್ಫೇಸ್ ಬುಕ್ 3

ಮೈಕ್ರೋಸಾಫ್ಟ್ ಸರ್ಫೇಸ್ ಬುಕ್ 3 10th gen ಇಂಟೆಲ್ ಪ್ರೊಸೆಸರ್‌ ಹೊಂದಿದ್ದು, ಕೋರ್ i7-1068G7 ಇರಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಬುಕ್‌ 15 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1TB SSD ವರೆಗಿನ ಸ್ಟೋರೇಜ್‌ ಸಾಮರ್ಥ್ಯ ಹೊಂದಿರಬಹುದು ಎಂದು ಹೇಳಲಾಗಿದೆ. ಅಲ್ಲದೆ Nvidia ಜಿಫೋರ್ಸ್ GTX 16 ಆವೃತ್ತಿಯ ಗ್ರಾಫಿಕ್ಸ್ ಕಾರ್ಡ್‌ ಹೊಂದಿದೆ. ಅಲ್ಲದೆ RAM ನಲ್ಲಿ ವೇರಿಯೆಂಟ್‌ ಆಯ್ಕೆಗಳನ್ನ ಹೊಂದಿದ್ದು, ಗರಿಷ್ಠ 32GB ಇರಲಿದೆ ಎನ್ನಲಾಗಿದೆ. ಇದಲ್ಲದೆ ಸರ್ಫೇಸ್ ಬುಕ್ 3 ವರ್ಕ್‌ಸ್ಟೇಷನ್ ಜಿಪಿಯು Nvidia ಕ್ವಾಡ್ರೊ ಯೂನಿಟ್‌ ಅನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಮೈಕ್ರೋಸಾಫ್ಟ್ ಸರ್ಫೇಸ್ ಗೋ 2

ಮೈಕ್ರೋಸಾಫ್ಟ್ ಸರ್ಫೇಸ್ ಗೋ 2

ಮೈಕ್ರೋಸಾಫ್ಟ್ ಸರ್ಫೇಸ್ ಗೋ 2 ಅನ್ನು ಈಗಾಗ್ಲೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸರ್ಫೇಸ್‌ ಗೋ ನ ಮುಂದುವರೆದ ಆವೃತ್ತಿಯಾಗಿದೆ. ಸರ್ಫೇಸ್‌ ಗೋ ಇಂಟೆಲ್ 4415 ವೈ ಪ್ರೊಸೆಸರ್‌ ಹೊಂದಿತ್ತು. ಆದರೆ ಸರ್ಫೇಸ್ ಗೋ 2 ಕ್ವಾಲ್ಕಾಮ್ ಪ್ರೊಸೆಸರ್‌ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಇದು ಕೋರ್ ಎಂ ಆವೃತ್ತಿಯ ಇಂಟೆಲ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗ್ತಿದ್ದು, ಇದರ ಇಂಟೆಲ್ ಕೋರ್ m3-8100Y ಆಗಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಇದು ಪೆಂಟಿಯಮ್ ಗೋಲ್ಡ್ ಚಿಪ್ ಹೊಂದಿಲಿದೆ ಎಂದು ಹೇಳಲಾಗ್ತಿದೆ.

ಎರಡು ಡಿವೈಸ್‌ಗಳ ವಿಶೇಷತೆ

ಎರಡು ಡಿವೈಸ್‌ಗಳ ವಿಶೇಷತೆ

ಈ ಎರಡೂ ಡಿವೈಸ್‌ಗಳು ಮೈಕ್ರೋಸಾಫ್ಟ್‌ ಕಂಪೆನಿ ಈಗಾಗ್ಲೆ ಪರಿಚಯಿಸಿರುವ ಸ್ಮಾರ್ಟ್‌ ಡಿವೈಸ್‌ಗಳ ಮುಂದುವರೆದ ಆವೃತ್ತಿಯಾಗಿದ್ದು, ರಿಫ್ರೆಶ್‌ ಮಾದರಿಯಲ್ಲಿ ಹೊಸ ವಿನ್ಯಾಸದಲ್ಲಿ ಮಾರುಕಟ್ಎಗೆ ಲಗ್ಗೆ ಇಡಲು ಸಿದ್ದವಾಗಿವೆ. ಇನ್ನು ಇವು ಹೊಸ ಆವೃತ್ತಿಯ ಸ್ಮಾರ್ಟ್‌ ಡಿವೈಸ್‌ಗಳಾದರೂ ಮೈಕ್ರೋಸಾಫ್ಟ್ ಹೆಚ್ಚಿನ ವಿನ್ಯಾಸ ಬದಲಾವಣೆಗಳನ್ನು ಮಾಡಿರುವುದಿಲ್ಲ ಎಂಬ ಮಾತು ಇದೆಯಾದರೂ ಹೊಸತನಕ್ಕೆ ಕೊರತೆ ಇರುವುದಿಲ್ಲ ಎನ್ನಲಾಗಿದೆ. ಹಾಗೇ ನೋಡಿದರೆ ಈ ಎರಡು ಸ್ಮಾರ್ಟ್‌ ಡಿವೈಸ್‌ಗಳು ಮಲ್ಟಿ ಟಾಸ್ಕ್‌ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರಸ್ತುತ ಬಳಕೆದಾರರ ಆಶಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮೈಕ್ರೋಸಾಫ್ಟ್ ಸರ್ಫೇಸ್ ಬುಕ್ 3 ಬೆಲೆ $1400 (ಸರಿಸುಮಾರು 1,00,200 ಲಕ್ಷ ರೂ.) ನಿಂದ ಪ್ರಾರಂಭವಾಗುವ ನಿರೀಕ್ಷೆಯಿದ್ದು, ಶೀಘ್ರದಲ್ಲೇ ನ್ಯೂಯಾರ್ಕ್‌ನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ. ಇನ್ನು ಮೈಕ್ರೋಸಾಫ್ಟ್ ಸರ್ಫೇಸ್ ಗೋ 2, $399 (ಅಂದಾಜು 28,500 ರೂ.) ನಿಂದ ಪ್ರಾರಂಭವಾಗಬಹುದು ಎಂದು ಅಂದಾಜಿಸಲಾಗಿದ್ದು, ಈ ವರ್ಷದ ಮೊದಲ ತ್ರೈಮಾಸಿಕದೊಳಗೆ ನ್ಯೂಯಾರ್ಕ್ ನಗರದಲ್ಲಿ ಇದನ್ನು ಲಾಂಚ್‌ ಮಾಡುವ ನಿರೀಕ್ಷೆಯಿದೆ.

Most Read Articles
Best Mobiles in India

English summary
Microsoft Surface Go 2 will be a follow-up to the 2018 Surface Go. It might be powered by a Core M processor.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X