India

ಭಾರತದಲ್ಲಿ ಮೈಕ್ರೋಸಾಫ್ಟ್ ಸರ್ಫೇಸ್ ಗೋ 3 ಲ್ಯಾಪ್‌ಟಾಪ್‌ ಬಿಡುಗಡೆ!

|

ಸಾಫ್ಟ್‌ವೇರ್‌ ದೈತ್ಯ ಮೈಕ್ರೋಸಾಫ್ಟ್‌ ಕಂಪೆನಿ ತನ್ನ ವೈವಿಧ್ಯಮಯ ಲ್ಯಾಪ್‌ಟಾಪ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಸರ್ಫೇಸ್ ಗೋ 3 ಲ್ಯಾಪ್‌ಟಾಪ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು 2 ಇನ್ 1 ಡಿವೈಸ್‌ ಆಗಿದ್ದು, ಟಚ್ ಸ್ಕ್ರೀನ್‌ಗೆ ಬೆಂಬಲವನ್ನು ನೀಡಲಿದೆ. ಜೊತೆಗೆ ಇದನ್ನು ಲ್ಯಾಪ್‌ಟಾಪ್ ಮೋಡ್, ಟ್ಯಾಬ್ಲೆಟ್ ಮೋಡ್ ಮತ್ತು ಸ್ಟ್ಯಾಂಡ್ ಮೋಡ್ ಸೇರಿದಂತೆ ಮೂರು ವಿಭಿನ್ನ ಮೋಡ್‌ಗಳಲ್ಲಿ ಬಳಸಲು ಸಾಧ್ಯವಾಗಲಿದೆ.

ಮೈಕ್ರೋಸಾಪ್ಟ್‌

ಹೌದು, ಮೈಕ್ರೋಸಾಪ್ಟ್‌ ಕಂಪೆನಿ ಹೊಸ ಮೈಕ್ರೋಸಾಫ್ಟ್ ಸರ್ಫೇಸ್ ಗೋ 3 ಲ್ಯಾಪ್‌ಟಾಪ್‌ ಅನ್ನು ಲಾಂಚ್‌ ಮಾಡಿದೆ. ಇದು ವಿಂಡೋಸ್ 11 ಪ್ರಿ ಇನ್‌ಸ್ಟಾಲ್‌ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಡ್ಯುಯಲ್-ಕೋರ್ 10ನೇ ಜನ್ ಇಂಟೆಲ್ ಕೋರ್ i3-10100Y ಆಯ್ಕೆಯನ್ನು ಹೊಂದಿದೆ. ಇದು ಡಿಜಿಟಲ್ ಪೆನ್ ಅನ್ನು ಬೆಂಬಲಿಸಲಿದ್ದು, ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಅನ್ನು ಪಡೆದಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೈಕ್ರೋಸಾಫ್ಟ್‌

ಮೈಕ್ರೋಸಾಪ್ಟ್‌ ಕಂಪೆನಿಯ ಹೊಸ ಮೈಕ್ರೋಸಾಫ್ಟ್‌ ಸರ್ಫೇಸ್ ಗೋ 3 ಲ್ಯಾಪ್‌ಟಾಪ್ 1920×1280 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 10.5 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಅನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 220ppi ಪಿಕ್ಸೆಲ್ ಸಾಂದ್ರೆತಯನ್ನು ಹೊಂದಿದ್ದು, 3:2 ರಚನೆಯ ಅನುಪಾತವನ್ನು ಪಡೆದುಕೊಂಡಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ಡ್ಯುಯಲ್-ಕೋರ್ ಇಂಟೆಲ್ ಪೆಂಟಿಯಮ್ ಗೋಲ್ಡ್ 6500Y ಮತ್ತು ಡ್ಯುಯಲ್-ಕೋರ್ 10ನೇ ಜನ್ ಇಂಟೆಲ್ ಕೋರ್ i3-10100Y ಸೇರಿದಂತೆ ಹಲವು ಆಯ್ಕೆಗಳಲ್ಲಿ ಬರುತ್ತದೆ.

ಲ್ಯಾಪ್‌ಟಾಪ್‌

ಇದು GPU ಗಾಗಿ ಇಂಟೆಲ್‌ UHD ಗ್ರಾಫಿಕ್ಸ್ 615 ನಿಂದ ಬೆಂಬಲಿತವಾಗಿದೆ. ಈ ಲ್ಯಾಪ್‌ಟಾಪ್‌ 2 in 1 ಡಿವೈಸ್‌ ಎಂಟರ್‌ಪ್ರೈಸ್-ಗ್ರೇಡ್ ಪ್ರೊಟೆಕ್ಷನ್ ಫೀಚರ್ಸ್‌ ಅನ್ನು ಹೊಂದಿದೆ. ಜೊತೆಗೆ Windows Hello ಫೇಸ್ ಸೈನ್-ಇನ್ ಅನ್ನು ಹೊಂದಿದೆ. ಹಾಗೆಯೇ ಇದು 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ 8MP ರಿಯರ್‌ ಕ್ಯಾಮೆರಾ ಹೊಂದಿದ್ದು, 1080p HD ವೀಡಿಯೊಗಳನ್ನು ರೆಕಾರ್ಡ್ ಮಾಡಲು ಸಾಧ್ಯವಾಗಲಿದೆ. ಇದಲ್ಲದೆ 1080HD ವೀಡಿಯೊ ಬೆಂಬಲಿಸುವ 5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಇದು ಡ್ಯುಯಲ್ ಫಾರ್-ಫೀಲ್ಡ್ ಸ್ಟುಡಿಯೋ ಮೈಕ್ಸ್ ಮತ್ತು ಡಾಲ್ಬಿ ಆಡಿಯೊಗೆ ಬೆಂಬಲದೊಂದಿಗೆ 2W ಸ್ಟಿರಿಯೊ ಸ್ಪೀಕರ್‌ಗಳನ್ನು ಸಹ ಒಳಗೊಂಡಿದೆ.

ಮೈಕ್ರೋಸಾಫ್ಟ್

ಇನ್ನು ಮೈಕ್ರೋಸಾಫ್ಟ್ ಸರ್ಫೇಸ್ ಗೋ 3 ಲ್ಯಾಪ್‌ಟಾಪ್‌ 11 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಮೈಕ್ರೋಸಾಫ್ಟ್ ಕಂಪೆನಿ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 1x USB-C, 3.5mm ಆಡಿಯೋ ಜ್ಯಾಕ್, ಮೈಕ್ರೊ SD ಕಾರ್ಡ್ ರೀಡರ್ ಮತ್ತು ಚಾರ್ಜ್ ಮಾಡಲು ಸರ್ಫೇಸ್ ಕನೆಕ್ಟ್ ಪೋರ್ಟ್ ಬೆಂಬಲಿಸಲಿದೆ. ಈ ಡಿವೈಸ್‌ ಮೈಕ್ರೋಸಾಫ್ಟ್ ಸೂಟ್ ಅಪ್ಲಿಕೇಶನ್‌ಗಳೊಂದಿಗೆ ಪ್ರೀ ಲೋಡ್ ಆಗಿರುತ್ತದೆ. ಇದರಲ್ಲಿ ಮೈಕ್ರೋಸಾಫ್ಟ್ 365, ಟೀಂ, ಎಡ್ಜ್ ಸೇರಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮೈಕ್ರೋಸಾಫ್ಟ್ ಸರ್ಫೇಸ್ ಗೋ 3 ಭಾರತದಲ್ಲಿ 57,999ರೂ. ಆರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಬ್ಯುಸಿನೆಸ್‌ ಗ್ರಾಹಕರಿಗೆ 42,999ರೂ. ಆರಂಭಿಕ ಬೆಲೆಯಲ್ಲಿ ಮಾರಾಟವಾಗಲಿದೆ. ಇನ್ನು ಈ ಲ್ಯಾಪ್‌ಟಾಪ್‌ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಜಾಗತಿಕವಾಗಿ ಬಿಡುಗಡೆ ಮಾಡಲಾಯಿತು.

Most Read Articles
Best Mobiles in India

English summary
Microsoft has launched its latest Surface Go 3 laptop in India.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X