Home
ಸುದ್ದಿಜಾಲ

ಭಾರತದ ಮಾರುಕಟ್ಟೆಯಲ್ಲಿ ಮೈಕ್ರೋಸಾಫ್ಟ್ 'ಸರ್ಫೇಸ್ ಹಬ್ 2s' ಲಾಂಚ್‌!

ಟೆಕ್ನಾಲಜಿ ಮುಂದುವರೆದಂತೆ ಹೊಸ ಮಾದರಿಯ ಟೆಕ್‌ ಪ್ರಾಡಕ್ಟ್‌ಗಳು ಮಾರುಕಟ್ಟೆಗೆ ಎಂಟ್ರಿ ನಿಡುತ್ತಲ್ಲೇ ಇವೆ. ಈಗಾಗಲೇ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಕೈನಲ್ಲಿ ರಿಂಗಣಿಸುತ್ತಿವೆ. ಇವುಗಳ ಜೊತೆಗೆ ಭಿನ್ನ ಮಾದರಿಯ ಟ್ಯಾಬ್ಲೆಟ್‌ಗಳು ವೈವಿಧ್ಯಮಯವಾದ ಲ್ಯಾಪ್‌ಟಾಪ್‌ಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿವೆ. ಸದ್ಯ ಇದೀಗ ಮೈಕ್ರೋಸಾಫ್ಟ್‌ ಕಂಪೆನಿ ತನ್ನ ಹೊಸ ಮಾದರಿಯ ಸರ್ಫೇಸ್‌ ಹಬ್‌ 2 ಅನ್ನು ಬಿಡುಗಡೆ ಮಾಡಿದೆ.

ಮೈಕ್ರೋಸಾಫ್ಟ್‌

ಹೌದು, ಸಾಫ್ಟ್‌ವೇರ್‌ ದಿಗ್ಗಜ ಎನಿಸಿಕೊಂಡಿರುವ ಮೈಕ್ರೋಸಾಫ್ಟ್‌ ತನ್ನ ಹೊಸ ಮಾದರಿಯ ಮಲ್ಟಿ ಟಾಸ್ಕಿಂಗ್‌ ಡಿವೈಸ್‌ ಸರ್ಫೆಸ್‌ ಹಬ್‌ 2 ಅನ್ನು ಬಿಡುಗಡೆ ಮಾಡಿದೆ. ಸದ್ಯ ಈ ಸರ್ಫೇಸ್ ಹಬ್ 2S ನ ಇತ್ತೀಚಿನ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಸರ್ಫೇಸ್‌ ಹಬ್ 2s ಅನ್ನು ಡಿಜಿಟಲ್ ವೈಟ್‌ಬೋರ್ಡ್, ಮೀಟಿಂಗ್ ಪ್ಲಾಟ್‌ಫಾರ್ಮ್ ಮತ್ತು ಇತರೆ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ. ಸದ್ಯ ಟೆಕ್ನಾಲಜಿ ದೈತ್ಯ ಎನಿಸಿಕೊಂಡಿರುವ ಮೈಕ್ರೋಸಾಫ್ಟ್‌ ಈ ಡಿವೈಸ್‌ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ 11,89,999 ರೂ. ಬೆಲೆಯನ್ನ ನಿಗಧಿ ಪಡಿಸಿದೆ. ಇನ್ನು ಈ ಸರ್ಫೇಸ್‌ ಹಬ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಸರ್ಫೇಸ್

ಇದೀಗ ಬಿಡುಗಡೆ ಆಗಿರುವ ಸರ್ಫೇಸ್ ಹಬ್ 2s ಕ್ಯಾಮೆರಾ ಮತ್ತು ಹಬ್ 2 ಪೆನ್ ಅನ್ನು ಒಳಗೊಂಡಿರುತ್ತದೆ. ಇದಲ್ಲದೆ, ಕಂಪನಿಯು ಹಬ್ 2s ಗಾಗಿ "ಸ್ಟೀಲ್‌ಕೇಸ್ ರೋಮ್" ಮೊಬೈಲ್ ಸ್ಟ್ಯಾಂಡ್ ಅನ್ನು 1,17,500 ರೂಗಳಿಗೆ ಬಿಡುಗಡೆ ಮಾಡುತ್ತಿದೆ. ಇದಲ್ಲದೆ ಈ ಹಬ್ 2s ಎಲ್ಲಾ ಮೈಕ್ರೋಸಾಫ್ಟ್ ಸೇವೆಗಳ "ಪೂರ್ಣ ಶಕ್ತಿ" ಮತ್ತು ವಿಭಿನ್ನ ಸಾಫ್ಟ್‌ವೇರ್ ಅನ್ನು ಒಳಗೊಂಡಿದೆ. ಇವುಗಳಲ್ಲಿ ವಿಂಡೋಸ್ 10, ಟೀಂ, ಆಫೀಸ್ 365, ಮೈಕ್ರೋಸಾಫ್ಟ್ ವೈಟ್‌ಬೋರ್ಡ್ ಮತ್ತು ಇತರೆ ಸೇವೆಗಳು ಕೂಡ ಸೇರಿಕೊಂಡಿವೆ.

ಗ್ರಾಫಿಕ್ಸ್

ಅಲ್ಲದೆ ಸರ್ಫೇಸ್‌ ಹಬ್ 2s ನಲ್ಲಿ 50% ಕ್ಕಿಂತ ಹೆಚ್ಚಿನ ವೇಗದ ಗ್ರಾಫಿಕ್ಸ್" ಜೊತೆಗೆ "30%" ಸುಧಾರಿತ ವಿದ್ಯುತ್ ದಕ್ಷತೆಯನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದನ್ನು ಮೀರಿ, ಈ ಹೊಸ ಆವೃತ್ತಿಯು ತೆಳುವಾದ ವಿನ್ಯಾಸವನ್ನ ಹೊಂದಿದ್ದು, 40% ಹಗುರವಾಗಿರುತ್ತದೆ. ಇನ್ನು ಈ ಸರ್ಫೇಸ್‌ ಹಬ್‌ 60 ಇಂಚಿನ IPS ಪ್ಯಾನೆಲ್‌ ಅನ್ನು ಹೊಂದಿದ್ದು, 3,840 × 2,560 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರುವ, 50 ಇಂಚಿನ ಪಿಕ್ಸೆಲ್‌ಸೆನ್ಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ಮತ್ತು 10-ಪಾಯಿಂಟ್ ಮಲ್ಟಿ-ಟಚ್ ಬೆಂಬಲವನ್ನು ಹೊಂದಿದೆ.

ವಿಂಡೋಸ್

ಇನ್ನು ಈ ಡಿವೈಸ್‌ ವಿಂಡೋಸ್ 10 ನಲ್ಲಿ 8 ನೇ ತಲೆಮಾರಿನ ಇಂಟೆಲ್ ಕೋರ್ i5 ಪ್ರೊಸೆಸರ್ ಮತ್ತು ಇಂಟಿಗ್ರೇಟೆಡ್ ಇಂಟೆಲ್ UHD ಗ್ರಾಫಿಕ್ಸ್ 620 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಹಬ್ 2s 8GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಹೊಂದಿದೆ. ಇದಲ್ಲದೆ 3-ವೇ ಸ್ಟಿರಿಯೊ ಸ್ಪೀಕರ್‌ಗಳ ಜೊತೆಗೆ ಎಂಇಎಂಎಸ್ ಮೈಕ್ರೊಫೋನ್ ಅರೇ ಅನ್ನು ಸಹ ನೀಡಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್ಬಿ ಟೈಪ್-ಎ ಪೋರ್ಟ್, ಒಂದು ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು ಗಿಗಾಬಿಟ್ ಈಥರ್ನೆಟ್‌ ಅಲ್ಲದೆ ಆರ್ಜೆ 45 ಪೋರ್ಟ್ ಅನ್ನು ಸಹ ಬೆಂಬಲಿಸಲಿದೆ.

ಮೈಕ್ರೋಸಾಫ್ಟ್

ಇದಲ್ಲೆದರ ಜೊತೆಗೆ ಮೈಕ್ರೋಸಾಫ್ಟ್ ಥರ್ಮಲ್ ಸೆನ್ಸರ್‌ಗಳನ್ನು ಮತ್ತು "ಡಾಪ್ಲರ್ ಆಕ್ಯುಪೆನ್ಸಿ ಸೆನ್ಸಾರ್" ಅನ್ನು ಕೂಡ ಸೇರಿಸಿದೆ. ವಾಲ್ಯೂಮ್ ಅಪ್, ವಾಲ್ಯೂಮ್ ಡೌನ್ ನೀಡಲಾಗಿದೆ. ಜೊತೆಗೆ ಹಬ್ 2 ಕ್ಯಾಮೆರಾವನ್ನು ಸಂಪರ್ಕಿಸಲು ಸರ್ಫೇಸ್ ಹಬ್ 2 ಎಸ್‌ನ ಮೇಲ್ಭಾಗವು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿದೆ. ಇದು 90 ಡಿಗ್ರಿ ಕ್ಷೇತ್ರ ವೀಕ್ಷಣೆ, ಫ್ಲಿಕರ್ ವಿರೋಧಿ ತಂತ್ರಜ್ಞಾನ, 30 ಎಫ್‌ಪಿಎಸ್ ವಿಡಿಯೋ ರೆಕಾರ್ಡಿಂಗ್ ಬೆಂಬಲದಲ್ಲಿ 4 ಕೆ ವಿಡಿಯೋ ಸಾಮರ್ಥ್ಯವನ್ನ ಹೊಂದಿದೆ. ಇದಲ್ಲದೆ ಮೈಕ್ರೋಸಾಫ್ಟ್ ಬ್ಲೂಟೂತ್ 4.0 ತಂತ್ರಜ್ಞಾನದ ಜೊತೆಗೆ ಬ್ಯಾರೆಲ್ ಬಟನ್ ಮತ್ತು ಟೈಲ್ ಎರೇಸರ್ ಅನ್ನು ಸಹ ನೀಡಿದೆ ಎನ್ನಲಾಗಿದೆ.

Best Mobiles in India

English summary
Microsoft has just launched the latest version of its “all-in-one collaborative device”, Surface Hub 2S in India.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+