ಫೇಕ್​​ನ್ಯೂಸ್ ಹಬ್ಬಿಸುವುದರಲ್ಲಿ ಭಾರತೀಯರೇ ಮುಂದು: ಮೈಕ್ರೋಸಾಫ್ಟ್ ರಿಪೋರ್ಟ್!!

|

ನಾವು ಭಾರತೀಯರು ಗ್ರೇಟ್ ಎಂದು ಕೊಚ್ಚಿಕೊಳ್ಳುವವರು ಸಹ ವಿಶ್ವದ ಮುಂದೆ ತಲೆತಗ್ಗಿಸುವಂತಹ ಸಮೀಕ್ಷೆ ರಿಪೋರ್ಟ್ ಒಂದನ್ನು ಅಮೆರಿಕ ಮೂಲದ ಸಾಫ್ಟ್​ವೇರ್ ದಿಗ್ಗಜ ಕಂಪನಿ ಮೈಕ್ರೋಸಾಫ್ಟ್ ಬಿಡುಗಡೆ ಮಾಡಿದೆ. ಅಂತರ್ಜಾಲ ಬಳಕೆದಾರರಿಂದ ಜಾಗತಿಕ ಮಟ್ಟದ ಬಿತ್ತರವಾಗುವ ಫೇಕ್​​ನ್ಯೂಸ್​ಗಳಲ್ಲಿ ಭಾರತೀಯರ ಪಾಲು ಅತ್ಯಧಿಕ ಎಂದು ರಿಪೋರ್ಟ್ ಹೇಳಿದೆ.

ಹೌದು,ಅಂತರ್ಜಾಲದಲ್ಲಿ ಫೇಕ್​ನ್ಯೂಸ್​ ಕುರಿತ ಸಮೀಕ್ಷೆ ನಡೆಸಿ ನಡೆಸಿರುವ ಮೈಕ್ರೋಸಾಫ್ಟ್ ಇಂತಹದೊಂದು ಆಘಾತಕಾರಿ ಮಾಹಿತಿಯನ್ನು ಹೊರಹಾಕಿದ್ದು, ಒಟ್ಟು ​22 ದೇಶಗಳಲ್ಲಿ ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ ಭಾರತೀಯರೇ ಹೆಚ್ಚು ಫೇಕ್‌ನ್ಯೂಸ್ ಅನ್ನು ಪಸರಿಸುತ್ತಾರೆ ಎಂದು ಹೇಳಿದೆ. ಇದು ಹೀಗೆ ಮುಂದುವರಿದರೆ ಅಪಾಯ ಹೆಚ್ಚಿಸಲಿದೆ ಎಂದು ಆಂತಕ ವ್ಯಕ್ತಪಡಿಸಿದೆ.

ಫೇಕ್​​ನ್ಯೂಸ್ ಹಬ್ಬಿಸುವುದರಲ್ಲಿ ಭಾರತೀಯರೇ ಮುಂದು: ಮೈಕ್ರೋಸಾಫ್ಟ್ ರಿಪೋರ್ಟ್!!

ಭಾರತದಲ್ಲಿ ಸಾಮಾಜಿಕ ವಲಯದಲ್ಲಿನ ಸುಳ್ಳು ಸುದ್ದಿ ಸಮಸ್ಯೆ ಅಪಾಯಕಾರಿಯಾಗಿ ವ್ಯಾಪಿಸಿಕೊಳ್ಳುತ್ತಿದೆ. ಜಾಗತಿಕ ಅಪಾಯದ ಮಟ್ಟಕ್ಕಿಂತ ಭಾರತದಲ್ಲಿ ಇದರ ಪ್ರಮಾಣ ಶೇ 29ರಷ್ಟು ಹೆಚ್ಚಳವಾಗಿದ್ದು,.ದೇಶದ ಆನ್​ಲೈನ್​ ಅಪಾಯದ ಪ್ರಮಾಣ ಶೇ 52ರಷ್ಟು ಇರುವುದನ್ನು, ಹಾಗೂ ಇದೇ ವೇಳೆಯಲ್ಲಿ ಜಾಗತಿಕ ಮಟ್ಟದಲ್ಲಿ ಇದು ಶೇ 28ರಷ್ಟು ಇದೆ ಎಂದು ಸಮೀಕ್ಷೆ ತಿಳಿಸಿದೆ.

ಇನ್ನು ಜಾಗತಿಕ ಮಟ್ಟದಲ್ಲಿ ಶೇ 57 ರಷ್ಟು ಜನರು ಫೇಕ್​ ನ್ಯೂಸ್​ಗಳಿಗೆ ಕಿವಿಗೊಟ್ಟಿದ್ದರೇ ಭಾರತದಲ್ಲಿ ಶೇ 64 ಜನರು ಈ ಕೃತ್ಯಗಳಿಗೆ ಒಳಗಾಗುತ್ತಿದ್ದಾರೆ. ಇದು ಸುಳ್ಳು ಸುದ್ದಿಯ ಗಂಭೀರತೆ ತೋರ್ಪಡಿಸುತ್ತದೆ. ನಮ್ಮಲ್ಲಿ ಶೇ 54ರಷ್ಟು ಮಂದಿ ಇಂಟರ್ನೆಟ್​ ಸಂಬಂಧಿತ ವಂಚನೆಗೆ ಒಳಗಾಗಿದ್ದರೇ ಜಾಗತಿಕವಾಗಿ ಇದು ಶೇ 42ರಷ್ಟು ಪ್ರಮಾಣದಲ್ಲಿದೆ ಎಂದು ಮೈಕ್ರೋಸಾಫ್ಟ್​ ತಿಳಿಸಿದೆ.

ಫೇಕ್​​ನ್ಯೂಸ್ ಹಬ್ಬಿಸುವುದರಲ್ಲಿ ಭಾರತೀಯರೇ ಮುಂದು: ಮೈಕ್ರೋಸಾಫ್ಟ್ ರಿಪೋರ್ಟ್!!

ದೇಶದ ಲೋಕಸಭಾ ಚುನಾವಣೆ ಘೋಷಣೆಗೆ ಬೆರಳೆಣಿಕೆ ತಿಂಗಳಷ್ಟೆ ಬಾಕಿ ಇದ್ದು, ಸುಳ್ಳು ಸುದ್ದಿ ಬಿತ್ತರಿಸುವ ಪ್ರಮಾಣ ಹೆಚ್ಚಾದರೇ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ ಎಂಬುದನ್ನು ಸಹ ಮೈಕ್ರೋಸಾಫ್ಟ್ ಎಚ್ಚರಿಸಿದೆ. ಇನ್ನೊಂದು ಕುತೂಹಲಕಾರಿ ಅಂಶವೆಂದರೆ ಆನ್​ಲೈನ್ ಸುಳ್ಳು ಸುದ್ದಿಗಳಲ್ಲಿ ಶೇ 29ರಷ್ಟು ಸ್ನೇಹಿತರಿಂದ ಮತ್ತು ಶೇ 9ರಷ್ಟು ಸಂಬಂಧಿಕರಿಂದ ಹಬ್ಬುತ್ತಿದೆಯಂತೆ.

Best Mobiles in India

English summary
Microsoft survey: India topping fake news menace globally, more pains likely ahead of polls. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X