Subscribe to Gizbot

ಮೈಕ್ರೋಸಾಫ್ಟ್ ಸಹಾಯದಿಂದ 100 ಕೋಟಿ ಜನರಿಗೆ ಡಿಜಿಟಲ್ ಗುರುತು!!

Written By:

ಜಗತ್ತಿನಲ್ಲಿ ಬದುಕುತ್ತಿರುವ ಆರು ಜನರಲ್ಲಿ ಒಬ್ಬರು ಅಧಿಕೃತ ಗುರುತು ದಾಖಲೆ ಇಲ್ಲದೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹಾಗಾಗಿ, 'ನಾವು ನಾವೇ' ಎಂದು ಗುರುತಿಸಿಕೊಳ್ಳಲು ಅಧಿಕೃತ ದಾಖಲೆ ಇಲ್ಲದವರನ್ನು ಡಿಜಿಟಲ್ ಗುರುತು ವ್ಯವಸ್ಥೆಯಡಿ ತರಲು ಜಾಗತಿಕ ಮಟ್ಟದಲ್ಲಿ ಯೋಜನೆ ರೂಪಿಸಲಾಗಿದೆ.!!

ಹೌದು, ಜಾಗತಿಕ ಡಿಜಿಟಲ್ ಗುರುತು ವ್ಯವಸ್ಥೆಯನ್ನು ತರಲು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮುಂದಾಗಿದ್ದು, ಇದಕ್ಕಾಗಿ, 'ಐಡಿ2020' ಯೋಜನೆ ರೂಪಿಸಲಾಗಿದೆ. ಕಾನೂನುಬದ್ಧ ಯಾವ ಗುರುತನ್ನೂ ಹೊಂದಿಲ್ಲದ ಜಗತ್ತಿನ ಹಲವು ಭಾಗಗಳಲ್ಲಿ ಬದುಕುತ್ತಿರುವ 100 ಕೋಟಿಗೂ ಅಧಿಕಜನರಿಗೆ ಡಿಜಿಟಲ್ ದಾಖಲೆ ನೀಡಲಾಗುತ್ತಿದೆ.!!

ಮೈಕ್ರೋಸಾಫ್ಟ್ ಸಹಾಯದಿಂದ 100 ಕೋಟಿ ಜನರಿಗೆ ಡಿಜಿಟಲ್ ಗುರುತು!!

ಭಾರತದಲ್ಲಿ ಬಹುತೇಕ ಆಧಾರ್ ದಾಖಲೆ ಇರುವಂತೆಯೇ ಇರುವ ನೂತನ ತಂತ್ರಜ್ಞಾನದ ಮೂಲಕ ವಿಶ್ವದಲ್ಲಿ ಈ ಯೋಜನೆ ಜಾರಿಗೆ ತರಲು 'ಐಡಿ2020' ಯೋಜನೆ ಕಾರ್ಯನಿರತವಾಗಿದೆ.! ಹಾಗಾದರೆ, 100 ಕೋಟಿ ಜನರಿಗೆ ಡಿಜಿಟಲ್ ಗುರುತು ವ್ಯವಸ್ಥೆ ಹೇಗಿರಲಿದೆ? ಇದರಿಂದ ನಿರಾಶ್ರಿತರಿಗೆ ಹೇಗೆ ಸಹಾಯವಾಗಲಿದೆ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಸಾಫ್ಟ್ ಸಹಾಯ ಮತ್ತು ತಂತ್ರಜ್ಞಾನ!!

ಮೈಕ್ರೋಸಾಫ್ಟ್ ಸಹಾಯ ಮತ್ತು ತಂತ್ರಜ್ಞಾನ!!

ಈ ಯೋಜನೆಗಾಗಿ ನೂತನ ಅಭಿವೃದ್ಧಿ ತಂತ್ರಜ್ಞಾನ ಬಳಸಿ ಡಿಜಿಟಲ್ ಗುರುತು ನೀಡಲು ಅಗತ್ಯವಿರುವ ತಂತ್ರಜ್ಞಾನ ಸಹಕಾರವನ್ನು ಮತ್ತು 10 ಲಕ್ಷ ಡಾಲರ್ ಆರ್ಥಿಕ ನೆರವನ್ನು ಮೈಕ್ರೋಸಾಫ್ಟ್ ಪೂರೈಸುತ್ತಿದೆ. ಅಸೆಂಚರ್ ಕಂಪೆನಿ ಕೂಡ ಮೈಕ್ರೋಸಾಫ್ಟ್ ನೊಂದಿಗೆ ಕೈಜೋಡಿಸಿದೆ ಎಂದು ವರದಿಗಳಿಮದ ತಿಳಿದುಬಂದಿದೆ.!!

ಅಝೂರ್ ವ್ಯವಸ್ಥೆ!!

ಅಝೂರ್ ವ್ಯವಸ್ಥೆ!!

100 ಕೋಟಿ ಜನರಿಗೆ ಡಿಜಿಟಲ್ ಗುರುತು ನೀಡುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅಝೂರ್ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುವ ಗುರುತು ಸುರಕ್ಷತಾ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಗುರುತಿಗಾಗಿ ಪೇಪರ್, ಕಾರ್ಡ್‌ಗಳನ್ನು ಬಳಸದೆಯೇ ಸೌಲಭ್ಯ, ಸೇವೆಗಳನ್ನು ಡಿಜಿಟಲ್ ಗುರುತಿನಿಂದ ಪಡೆಯಬಹುದಾಗಿದೆ.

ಆಧಾರ್‌ಗಿಂತ ಕೊಂಚ ಭಿನ್ನ!!

ಆಧಾರ್‌ಗಿಂತ ಕೊಂಚ ಭಿನ್ನ!!

ಅಝೂರ್ ವ್ಯವಸ್ಥೆಯಲ್ಲಿ ಬ್ಲಾಕ್‍ಚೇನ್ ತಂತ್ರಜ್ಞಾನ ಬಳಸಲಾಗಿದ್ದು, ಇತರರು ವೈಯಕ್ತಿಕ ಮಾಹಿತಿ ಪಡೆಯುವುದನ್ನು ಬಳಕೆದಾರ ನಿಯಂತ್ರಿಸಲು ಸಾಧ್ಯವಿದೆ ಎಂದು ಹೇಳಲಾಗಿದೆ.! ಬ್ಲಾಕ್‍ಚೇನ್ ತಂತ್ರಜ್ಞಾನ ಹೊಂದಿರುವ ಈ ಡಿಜಿಟಲ್ ಗುರುತು ಭಾರತದ ಆಧಾರ್‌ಗಿಂತ ಕೊಂಚ ಭಿನ್ನವಾಗಿದೆ.!!

13 ಲಕ್ಷ ಬಯೋಮೆಟ್ರಿಕ್ ನೋಂದಣಿ!

13 ಲಕ್ಷ ಬಯೋಮೆಟ್ರಿಕ್ ನೋಂದಣಿ!

ಅಝೂರ್ ವ್ಯವಸ್ಥೆಯಲ್ಲಿ ಈಗಾಗಲೇ ಏಷ್ಯಾ, ಆಫ್ರಿಕಾ ಖಂಡದಲ್ಲಿ 29 ದೇಶಗಳ 13 ಲಕ್ಷಕ್ಕೂ ಹೆಚ್ಚು ನಿರಾಶ್ರಿತರನ್ನು ಬಯೋಮೆಟ್ರಿಕ್ ಗುರುತಿನ ಮೂಲಕ ನೋಂದಣಿ ಮಾಡಿಕೊಂಡಿದೆ. ಈ ವ್ಯವಸ್ಥೆಯನ್ನು 75 ರಾಷ್ಟ್ರಗಳ ನಿರಾಶ್ರಿತರ ಗುರುತಿಗಾಗಿ ಬಳಸಲು ‘ಐಡಿ2020' ಯೋಜನೆಯಲ್ಲಿ ಉದ್ದೇಶಿಸಲಾಗಿದೆ.

ಮೂಲಭೂತ ಸೌಕರ್ಯಕ್ಕೆ ಯೋಜನೆ!!

ಮೂಲಭೂತ ಸೌಕರ್ಯಕ್ಕೆ ಯೋಜನೆ!!

ಜಗತ್ತಿನಾಧ್ಯಂತ ‘ನಾವು ನಾವೇ' ಎಂದು ಗುರುತಿಸಿಕೊಳ್ಳಲು ಅಧಿಕೃತ ದಾಖಲೆ ಇಲ್ಲದೆ ಇರುವ ಮಕ್ಕಳು, ಮಹಿಳೆಯರು, ನಿರಾಶ್ರಿತರು ಮತದಾನದ ಹಕ್ಕು, ಆರೋಗ್ಯ-ಶಿಕ್ಷಣ ಸೌಲಭ್ಯಗಳನ್ನು ಪಡೆಯದಂತಾಗಿದೆ. ಅಂತವರನ್ನು ಮುಖ್ಯವಾಹಿನಿಗೆ ತಂದು ಮೂಲಭೂತ ಸೌಕರ್ಯಗಳನ್ನು ನೀಡಲು ಯೋಜನೆ ಮುಂದಾಗಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Last year Microsoft joined ID2020, a global Alliance whose goal is to create universal digital identities for everyone. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot