ವಿಂಡೋಸ್ 9 ಮೇಲೆ ಮೈಕ್ರೋಸಾಫ್ಟ್ ಭಾರೀ ನಿರೀಕ್ಷೆ

Written By:

ವಿಂಡೋಸ್ 7 ನ ಮುಕ್ತಾಯಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು ವಿಂಡೋಸ್ xp ಈ ವರ್ಷಕ್ಕೆ ಮುಂಚಿತವಾಗಿ ಆಗಮಿಸಲಿದೆ ಎಂದು ಮೈಕ್ರೋಸಾಫ್ಟ್ ತನ್ನ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡುತ್ತಿದೆ.

ವಿಂಡೋಸ್ 7 ಗೆ ಮೈಕ್ರೋಸಾಫ್ಟ್ ನೀಡುತ್ತಿದ್ದ ಉಚಿತ ಮೈನ್‌ಸ್ಟ್ರೀಮ್ ಬೆಂಬಲವನ್ನು ಕಂಪೆನಿ ಜನವರಿ 13, 2015 ಕ್ಕೆ ಅಂತ್ಯಗೊಳಿಸುತ್ತಿದೆ. ಅಂದರೆ ಹ್ಯಾಕರ್‌ಗಳ ವಿರುದ್ಧ ಯಾವುದೇ ಭದ್ರತೆಯನ್ನು, ನವೀಕೃತ ವೈಶಿಷ್ಟ್ಯಗಳು ಅಥವಾ ಕಾರ್ಯಾಚರಣೆ ಸುಧಾರಣೆಗಳನ್ನು ಕಂಪೆನಿ ಇನ್ನು ಮುಂದೆ ನೀಡುವುದಿಲ್ಲ ಎಂದಾಗಿದೆ.

ವಿಂಡೋಸ್ 7 ನ ಎಲ್ಲಾ ಆವೃತ್ತಿಗೆ ಈ ನೀತಿ ಅನ್ವಯಗೊಳ್ಳುತ್ತದೆ ಎಂದು ಮೇರಿ ಜೋಫೋಲಿ ತಿಳಿಸಿದ್ದಾರೆ. ಮೈಕ್ರೋಸಾಫ್ಟ್‌ನ ಈ ನೀತಿಯು ಗ್ರಾಹಕರ ಮೇಲೆ ಪರಿಣಾಮ ಬೀರಲಿದ್ದು ವಿಸ್ತರಿತ ವಿಂಡೋಸ್ 7 ಬೆಂಬಲಕ್ಕಾಗಿ ಪಾವತಿಸಿದಂತಹ ವ್ಯವಹಾರಗಳು ಇನ್ನೊಂದು ಐದು ವರ್ಷಗಳಿಗೆ ಮುಂದುವರಿಯುತ್ತಿದ್ದು, ಜನವರಿ 14 2020 ರವೆರೆಗೆ ಇದು ಪರಿಣಾಮವನ್ನು ಬೀರಲಿದೆ.

ಮೈಕ್ರೋಸಾಫ್ಟ್‌ನಿಂದ ವಿಂಡೋಸ್ 7 ಗೆ ಮುಕ್ತಾಯ

ಹೆಚ್ಚಿನ ವ್ಯವಹಾರಗಳು ತಮ್ಮ ಹಳೆಯ ವಿಂಡೋಸ್ XP PC ಗಳನ್ನು ಅಪ್‌ಗ್ರೇಡ್ ಮಾಡುತ್ತಿದ್ದಾರೆ, ಆದರೆ ಅವರೆಲ್ಲರೂ ವಿಂಡೋಸ್ 7 ಗೆ ಮುಂದುವರಿಯುತ್ತಿದ್ದು ವಿಂಡೋಸ್ 8 ಗಲ್ಲ.

ವಿಂಡೋಸ್ 8 ಇರುವ ಕಂಪ್ಯೂಟರ್‌ಗಳನ್ನು ಖರೀದಿಸುವಂತೆ ಮೈಕ್ರೋಸಾಫ್ಟ್ ಗ್ರಾಹಕರನ್ನು ಸೆಳೆಯಬೇಕಾಗಿದ್ದು ಹೆಚ್ಚಿನ ವಿಂಡೋಸ್ 8 ಸಾಫ್ಟ್‌ವೇರ್ ಅಂದರೆ ಹೆಚ್ಚು ಡೆವಲಪರ್‌ಗಳು ವಿಂಡೋಸ್ 8 ಸಾಫ್ಟ್‌ವೇರ್ ಅನ್ನು ಬರೆಯಬೇಕಾಗುತ್ತದೆ. ಇದು ಹೆಚ್ಚಿನ ಜನರನ್ನು ಖರೀದಿಸುವಂತೆ ಮಾಡುತ್ತದೆ.

ಇಷ್ಟಲ್ಲದೆ ಮೈಕ್ರೋಸಾಫ್ಟ್ ವಿಂಡೋಸ್ 8 ಗಿರುವ ಮೈನ್‌ಸ್ಟ್ರೀಮ್ ಬೆಂಬಲವನ್ನು ಜನವರಿ 9 2018 ಕ್ಕಾಗಿ ನಿಲ್ಲಿಸಲಿದೆ. ಇದರಿಂದ ಮೈಕ್ರೋಸಾಫ್ಟ್ ವಿಂಡೋಸ್‌ನ ಮುಂದಿನ ಆವೃತ್ತಿಯನ್ನು ಸಿದ್ಧಪಡಿಸಿಕೊಂಡಿರಬೇಕಾಗುತ್ತದೆ (ಕೆಲವೊಮ್ಮೆ ಇದು ವಿಂಡೋಸ್ 9 ಹೆಸರನ್ನು ಹೊಂದಿರಬಹುದು)

ಎಲ್ಲವೂ ಸರಿಯಾಗಿದ್ದರೆ ವಿಂಡೋಸ್ 8 ನ ಮುಂದಿನ ಆವೃತ್ತಿಯು ವಿಂಡೋಸ್ 9 ಆಗಿರುತ್ತದೆ. ತನ್ನ 25 ಅತಿ ದೊಡ್ಡ ಟೆಕ್ ಫ್ಲಾಪ್‌ಗಳ ಪಟ್ಟಿಯಲ್ಲಿ ಇನ್‌ಪೋ ವರ್ಲ್ಡ್‌ನಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದ ವಿಂಡೋಸ್ 7 ಸ್ಥಾನದಲ್ಲಿ ವಿಂಡೋಸ್ 9 ಅನ್ನು ನೋಡುವ ತವಕವನ್ನು ಕಂಪೆನಿ ಹೊಂದಿದೆ.

English summary
This article tells that Microsoft to end support for windows 7 in 2015 and giving preference to its next version it may be windows 9.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot