ಬಳಕೆದಾರರಿಗೆ ಹೊಸ ಫೀಚರ್ಸ್‌ ಪರಿಚಯಿಸಿದ ಮೈಕ್ರೋಸಾಫ್ಟ್‌!

|

ಸಾಫ್ಟ್‌ವೆರ್‌ ದಿಗ್ಗಜ ಮೈಕ್ರೋಸಾಫ್ಟ್‌ ತನ್ನ ವಿಂಡೋಸ್‌ ಬಳಕೆದಾರರಿಗೆ ಆಗಾಗ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಮೈಕ್ರೋಸಾಫ್ಟ್‌ ವಿಂಡೋಸ್‌ ಬಳಕೆದಾರರ ಅನುಭವವನ್ನ ಇನ್ನಷ್ಟು ಉತ್ತಮಗೊಳಿಸಲು ಸದಾ ಪ್ರಯತ್ನಿಸುತ್ತಲೇ ಇದೆ. ಇನ್ನು ಈಗಾಗಲೇ ಹಲವು ಉತ್ತಮ ಫೀಚರ್ಸ್‌ಗಳನ್ನ ಪರಿಚಯಿಸಿರೋ ಮೈಕ್ರೋಸಾಫ್ಟ್‌ ಇದೀಗ ತನ್ನ ಬಳಕೆದಾರರ ವೈಯುಕ್ತಿಕ ಜೀವನಮಟ್ಟದ ಸಂತೋಷಕ್ಕಾಗಿ ಒಂದು ಹೆಜ್ಜೆ ಮುಂದೆ ಹೋಗಿದೆ. ಇದಕ್ಕಾಗಿ ಹೊಸದೊಂದು ಪ್ರಯತ್ನಕ್ಕೆ ಅನುವು ಮಾಡಿಕೊಟ್ಟಿದೆ.

ಮೈಕ್ರೋಸಾಫ್ಟ್

ಹೌದು, ಮೈಕ್ರೋಸಾಫ್ಟ್ ಇತ್ತೀಚೆಗೆ ಎಡ್ಜ್, ಹಾಗೂ ವಿಂಡೋಸ್ 365 ಮತ್ತು ಎಡಿಟರ್‌ ಸೇರಿದಂತೆ ತನ್ನ ಉತ್ಪನ್ನಗಳು ಮತ್ತು ಸೇವೆಗಳಿಗಾಗಿ ಹಲವಾರು ಆಪ್ಡೇಟ್‌ಗಳನ್ನ ಮಾಡುವುದಾಗಿ ಘೊಷಣೇ ಮಾಡಿತ್ತು. ಇವುಗಳ ಮೂಲಕ ಬಳಕೆದಾರರ ನಡುವೆ ಒಂದು ಉತ್ತಮ ಗ್ರೂಪ್‌ಗಳನ್ನ ಮಾಡುವುದಾಗಿ ಹೇಳಿತ್ತು. ಇವೆಲ್ಲವು ಇದೇ ವರ್ಷದ ಕೊನೆಯ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಕೂಡ ಇದ್ದು. ಇದು ಬಳಕೆದಾರರ ವೈಯುಕ್ತಿಕ ಜೀವನವನ್ನ ಸಂತೃಪ್ತಗೊಳಿಸುವ ಉತ್ತಮ ಹೆಜ್ಜೆ ಆಗಿದೆ ಎಂದು ಹೇಳಲಾಗ್ತಿದೆ. ಅಷ್ಟಕ್ಕು ಇದರ ಉದ್ದೇಶವೇನು, ಇದೆಲ್ಲದರ ಮಾಹಿತಿಯನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಸದ್ಯ

ಸದ್ಯ ಮೈಕ್ರೋಸಾಫ್ಟ್‌ ತನ್ನ ವಿಂಡೋಸ್‌ ಬಳಕೆದಾರರ ವೈಯುಕ್ತಿಕ ಜೀವನಕ್ಕಾಗಿ ಗ್ರೂಪ್‌ ಅನ್ನು ತಯಾರಿಸುವುದಾಗಿ ಹೇಳಿದೆ. ಇದು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ. ವೈಯಕ್ತಿಕ ಜೀವನಕ್ಕಾಗಿ ಟೀಮ್‌ ಮೈಕ್ರೋಸಾಫ್ಟ್ ಟೀಮ್‌ನ ಗ್ರಾಹಕ ಆವೃತ್ತಿಯಾಗಿದ್ದು, ಬಳಕೆದಾರರು ತಮ್ಮ ಕುಟುಂಬಗಳು ಮತ್ತು ಜನರ ಸಣ್ಣ ಗುಂಪುಗಳೊಂದಿಗೆ ಪಠ್ಯ, ಆಡಿಯೋ ಮತ್ತು ವಿಡಿಯೋ ಸಂದೇಶಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈವೆಂಟ್‌ಗಳನ್ನು ಸಂಘಟಿಸಲು ಮತ್ತು ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ವೀಡಿಯೊ ಕರೆಗಳನ್ನು ಪಡೆಯಲು ಇದು ಅವರಿಗೆ ಅನುವು ಮಾಡಿಕೊಡುತ್ತದೆ.

ಒಂದು

ಇದು ಒಂದು ರೀತಿಯಲ್ಲಿ ಈ ಹಿಂದೆ ಸ್ಕೈಪ್‌ನಲ್ಲಿ ಮನೆ ಮಂದಿಯೆಲ್ಲಾ ಮಾತಾನಾಡುತ್ತಿದ್ದಂತೆ ಅನುಭವ ನಿಡಲಿದೆ ಆದರೂ ಸ್ಕೈಪ್‌ಗೆ ಇದರಿಂದ ಯಾವುದೇ ತೊಮದರೆ ಆಗುವುದಿಲ್ಲ. ಹಾಗಂತ ಇದು ಸ್ಕೈಪ್‌ ಬದಲಿಗೆ ಹೊರ ತಂದಿರುವ ಮುಮದುವರೆದ ಆವೃತ್ತಿಯಲ್ಲ. ಇದು ವೈಯುಕಲ್ತಿಕ ಬಳಕೆದಾರರ ಕುಟುಂಬಗಳು ಅಥವಾ ಸ್ನೇಹಿತರನ್ನ ಒಂದೇ ವೆದಿಕೆಯಲ್ಲಿ ಒಂದೇ ಕಡೆ ತರುವ ಪ್ರಯತ್ನ ಎಂದಷ್ಟೆ ಹೇಳಬಹುದಾಗಿದೆ. ಏಕೆಂದರೆ ಇಲ್ಲಿ ಯಾವುದೇ ಒಮದು ಕಾರ್ಯಕ್ರಮ ಅಥವಾ ಸವೆ ಇಲ್ಲವೇ ಮಾಹಿತಿಯನ್ನ ಹಂಚಿಕೊಳ್ಳಲು ಉತ್ತಮ ವೇದಿಕೆ ಆಗಲಿದೆ.

ಮಾದರಿಯ

ಅಲ್ಲದೆ ಈ ಮಾದರಿಯ ಟೀಂ ಗಳಿಂದ ಚಾಟ್ ಮತ್ತು ವಿಡಿಯೋ ಕರೆ ಮಾಡುವ ಮೂಲಕ ಜನರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡಲಿದೆ. ಈಗಾಗಲೇ ಸ್ಕೈಪ್‌ನಂತಹ ಸಾಧನಗಳನ್ನು ನೀಡಲು ನಾವು ಸಂತೋಷಪಟ್ಟಿದ್ದೇವೆ" ಎಂದು ಮೈಕ್ರೋಸಾಫ್ಟ್‌ನ ಕಾರ್ಪೊರೇಟ್ ವಿ.ಪಿ ಯೂಸುಫ್ ಮೆಹದಿ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಹೇಳೀಕೊಂಡಿದ್ದಾರೆ. ಇದಲ್ಲದೆ 40 ದಶಲಕ್ಷಕ್ಕೂ ಹೆಚ್ಚು ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಚಾಟಿಂಗ್ ಮತ್ತು ವಿಡಿಯೋ ಕರೆ ಮಾಡಲು ಸ್ಕೈಪ್ ಬಳಸುತ್ತಿದ್ದಾರೆ.

ಸ್ಕೈಪ್‌ಗಾಗಿ

ಇದೀಗ ಸ್ಕೈಪ್‌ಗಾಗಿ ಮೈಕ್ರೋಸಾಫ್ಟ್ ಫೀಚರ್ಸ್‌ ಅನ್ನ ಹೊರತಂದಿದ್ದು, ಇದು ಸಭೆಗಳಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಹೆಚ್ಚು ವೇಗವಾಗಿ ಸಂಪರ್ಕ ಸಾಧಿಸಲು ನೌಕರರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಮೈಕ್ರೋಸಾಫ್ಟ್ ಟೀಂ ಗಳು ಜನಸಾಮಾನ್ಯರಲ್ಲಿ ಜನಪ್ರಿಯತೆಯನ್ನು ಗಳಿಸಲು ಪ್ರಯತ್ನಿಸುತ್ತಿರುವಾಗಲೇ ಈ ಫೀಚರ್ಸ್‌ ಕೂಡ ಬಂದಿದ್ದು, ಇದನ್ನ ಮೀಟ್ ನೌ ಎನ್ನಲಾಗಿದೆ. ಈ ಸ್ಕೈಪ್‌ನ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ "ಉಚಿತವಾಗಿ ಮೂರು ಕ್ಲಿಕ್‌ಗಳಲ್ಲಿ" ವೀಡಿಯೊ ಸಭೆಗಳನ್ನು ಸುಲಭವಾಗಿ ರಚಿಸಲು ಅನುಮತಿಸುತ್ತದೆ. ಸರಳವಾಗಿ ಹೇಳುವುದಾದರೆ, ಸ್ಕೈಪ್ ಬಳಕೆದಾರರು ಯಾವುದೇ ಹೆಚ್ಚುವರಿ ಡೌನ್‌ಲೋಡ್‌ಗಳು ಅಥವಾ ಪಾವತಿಗಳಿಲ್ಲದೆ ಈ ಫೀಚರ್ಸ್‌ ಅನ್ನು ಬಳಸಲು ಸಾಧ್ಯವಾಗಲಿದೆ.

Best Mobiles in India

English summary
More than 40 million people were using Skype for chatting and video calling their friends and family members.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X