5 ಲಕ್ಷ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ತರಬೇತಿ: ಮೈಕ್ರೋಸಾಫ್ಟ್!

|

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಭಾರತೀಯ ಯುವಕರ ಕೌಶಲ್ಯ ಅಭಿವೃದ್ದಿಪಡಿಸಲು ಮೈಕ್ರೋಸಾಫ್ಟ್ ಐದು ಲಕ್ಷ ಯುವಕರಿಗೆ ತರಬೇತಿ ನೀಡಲು ತಯಾರಾಗಿದೆ. ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ ಮುಂಚೂಣಿ ಸ್ಥಾನವನ್ನು ಆಕ್ರಮಿಸುತ್ತಿರುವ ಸೂಚನೆಗಳ ನಡುವೆಯೇ ದೇಶದ 10 ವಿವಿಗಳಲ್ಲಿ ಸದ್ಯವೇ ಕೃತಕ ಬುದ್ಧಿಮತ್ತೆ ಲ್ಯಾಬ್‌ಗಳು ಸ್ಥಾಪನೆಯಾಗಲಿವೆ.

ಹೌದು, ತಂತ್ರಜ್ಞಾನ ದಿಗ್ಗಜ ಮೈಕ್ರೋಸಾಫ್ಟ್ ಇಂಡಿಯಾ ದೇಶಾದ್ಯಂತ 10 ವಿವಿಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಪ್ರಯೋಗಾಲಯ ಸ್ಥಾಪಿಸಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಕಂಪನಿ ಉದ್ದೇಶಿಸಿರುವುದಾಗಿ ತಿಳಿಸಿದೆ. ಜೊತೆಗೆ ಮುಂದಿನ 3 ವರ್ಷಗಳಲ್ಲಿ 10,000 ಡೆವಲಪರ್‌ಗಳ ತಂತ್ರಜ್ಞಾನ ಕೌಶಲ್ಯ ವೃದ್ಧಿಗೂ ನೆರವಾಗುವುದಾಗಿ ಹೇಳಿದೆ.

5 ಲಕ್ಷ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ತರಬೇತಿ: ಮೈಕ್ರೋಸಾಫ್ಟ್!

ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಬುದ್ಧಿಮತ್ತೆ ಆಧಾರಿತ ಇಂಟೆಲಿಜೆನ್ಸ್ ಕ್ಲೌಡ್ ಹಬ್ ಪ್ರೋಗ್ರಾಂ ಸಂಶೋಧನೆಗೆ ಮೈಕ್ರೊಸಾಫ್ಟ್‌ ಒತ್ತು ನಿಡಿದ್ದು, ಲ್ಯಾಬ್ ಸ್ಥಾಪನೆಯಿಂದ ವಿದ್ಯಾರ್ಥಿಗಳಿಗೆ ಕ್ಲೌಡ್‌ ಕಂಪ್ಯೂಟಿಂಗ್‌, ಹಬ್‌, ಡೇಟಾ ಸೈನ್ಸ್‌, ಎಐ ಮತ್ತು ಐಒಟಿಯಲ್ಲಿ ಕೌಶಲ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮೈಕ್ರೊಸಾಫ್ಟ್‌ ಇಂಡಿಯಾದ ಅಧ್ಯಕ್ಷ ಅನಂತ್ ಮಹೇಶ್ವರಿ ತಿಳಿಸಿದ್ದಾರೆ.

ಭಾರತದ ಪ್ರಗತಿಗೆ ಮತ್ತು ಅದರಲ್ಲೂ ವಿಶೇಷವಾಗಿ ಶಿಕ್ಷಣ, ಕೌಶಲ್ಯ, ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳ ಅಭಿವೃದ್ದಿಗೆ ಕೃತಕ ಬುದ್ದಿಮತ್ತೆಯು ಹೆಚ್ಚು ಸಹಕಾರಿಯಾಗುತ್ತದೆ ಎಂಬುದನ್ನು ನಾವು ನಂಬುತ್ತೇವೆ. ಉದ್ಯಮ ವಲಯದ ಸ್ವರೂಪವನ್ನೇ ಬದಲಿಸುವ ಇದರ ಸುರಕ್ಷತೆಗೆ ಹೆಚ್ಚಿನ ಅರಿವು ಮತ್ತು ಸಾಮರ್ಥ್ಯಗಳನ್ನು ನಿರ್ಮಿಸುವ ಅವಶ್ಯಕತೆಯಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.

5 ಲಕ್ಷ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ತರಬೇತಿ: ಮೈಕ್ರೋಸಾಫ್ಟ್!

ಭಾರತದಲ್ಲಿ ಸರಕಾರಿ ಹಾಗೂ ಖಾಸಗಿ ವಲಯದ 700ಕ್ಕೂ ಹೆಚ್ಚು ಸಂಸ್ಥೆಗಳು ತನ್ನ ಎಐ ತಂತ್ರಜ್ಞಾನ ಬಳಸುತ್ತಿವೆ. ಇವುಗಳಲ್ಲಿ ಶೇ.60ರಷ್ಟು ಬೃಹತ್‌ ಉದ್ದಿಮೆಗಳು. ಹಾಗಾಗಿ, ಹೊಸ ಲ್ಯಾಬ್‌ಗಳಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಕಲಿಕೆ ಅವಕಾಶ ಲಭ್ಯವಿದ್ದು, ಇದರಿಂದ ಉದ್ದಿಮೆ, ಶಿಕ್ಷಣ, ಆರೋಗ್ಯ, ಕೌಶಲ್ಯ, ಕೃಷಿ ಕ್ಷೇತ್ರಕ್ಕೆ ಭಾರಿ ಅನುಕೂಲವಾಗಲಿದೆ.

Best Mobiles in India

English summary
The company also plan to set up Artificial Intelligence labs in 10 universities in the next three years. to know more visit to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X