ಆಪಲ್ ಬಳಕೆದಾರರಿಗೆ ಸಿಗುವ ಸೇವೆಯನ್ನು ಪಡೆಯಲು ಮೈಕ್ರೊಸಾಫ್ಟ್ ಯತ್ನ..!
ಕಂಪ್ಯೂಟರ್ ಲೋಕದ ದೈತ್ಯ ಮೈಕ್ರೊ ಸಾಫ್ಟ್ ತನ್ನ ಬಳಕೆದಾರರಿಗೆ ಹೊಸದಾಗಿ ಸೇವೆಯನ್ನು ನೀಡಲು ಯೋಜನೆಯನ್ನು ರೂಪಿಸುತ್ತಿದೆ. ಅಪಲ್ ನೀಡುತ್ತಿರುವ ಐಮೇಸೆಜ್ ಸೇವೆಯನ್ನು ವಿಂಡೋಸ್ 10 ಬಳಕೆದಾರರಿಗೂ ದೊರೆಯುವಂತೆ ಮಾಡಲು ಪ್ರಯತ್ನತಿಸುತ್ತಿದೆ ಎನ್ನಲಾಗಿದೆ. ಇದರಿಂದಾಗಿ ಮೈಕ್ರೋಸಾಫ್ಟ್ ಬಳಕೆದಾರರು ಆಪಲ್ ಸೇವೆಯ ಲಾಭವನ್ನು ಪಡೆಯಬಹುದಾಗಿದೆ.

ಕೇವಲ ಆಪಲ್ ಐಎಸ್ಓ ಬಳಕೆದಾರರಿಗೆ ಮಾತ್ರವೇ ಲಭ್ಯವಿರುವ ಐಮೇಸೆಜ್ ಸೇವೆಯನ್ನು ಮೈಕ್ರೊಸಾಫ್ಟ್ ತನ್ನ ಬಳಕೆದಾರರಿಗೆ ನೀಡುವ ಸಲುವಾಗಿ ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಆಪಲ್ ತನ್ನ ಬಳಕೆದಾರರಿಗೆ ಎಂಡ್ ಟು ಎಂಡ್ ಎನ್ ಸ್ಕ್ರಿಪ್ಟ್ ಸೇವೆಯನ್ನು ನೀಡುತ್ತಿದೆ. ಇದನ್ನು ಎಲ್ಲಾರಿಗೂ ನೀಡಲು ಸಹಾಯವಾಗುವಂತೆ ಮಾಡುತ್ತಿದೆ.
ವಿಂಡೋಸ್ ಬಳಕೆದಾರರಿಗೂ ಈ ಸೇವೆಯನ್ನು ನೀಡುವ ಸಲುವಾಗಿ ಈ ಹೊಸ ಸೇವೆಯನ್ನು ನೀಡಲು ಯತ್ನಿಸುತ್ತಿದೆ. ಈ ಮೂಲಕ ಇನ್ನಷ್ಟು ಹೆಚ್ಚಿನ ಸೇವೆಯನ್ನು ಬಳಸಿಕೊಳ್ಳುವ ಅವಕಾಶವನ್ನು ನೀಡಲಿದೆ. ಒಂದು ವೇಳೆ ಆಪಲ್ ತನ್ನ ಸೇವೆಯನ್ನು ಮೈಕ್ರೋಸಾಫ್ಟ್ ಗೂ ವಿಸ್ತರಿಸಲು ಮುಂದಾದರೆ ಉತ್ತಮ ಬೆಳವಣಿಗೆಯಾಗಲಿದೆ.

ಐಮೇಸೆಜ್ ಸೇವೆಯೂ ಉತ್ತಮವಾಗಿದ್ದು, ಹೆಚ್ಚಿನ ಪ್ರಮಾಣದ ಐಫೋನ್ ಬಳಕೆದಾರರು ಈ ಸೇವೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮೈಕ್ರೋ ಸಾಫ್ಟ್ ಈ ಉತ್ತಮ ಸೇವೆಯನ್ನು ತನ್ನ ಬಳಕೆದಾರರಿಗೆ ದೊರಕಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದೆ.
ಈ ಹಿನ್ನಲೆಯಲ್ಲಿ ಮೈಕ್ರೋ ಸಾಫ್ಟ್ ಮನವಿಯನ್ನು ಆಪಲ್ ಮನ್ನಿಸುವ ಸಾಧ್ಯತೆ ಇದ್ದು, ಶೀಘ್ರವೇ ವಿಂಡೋಸ್ 10 ರನ್ ಆಗುವ ಗ್ಯಾಜೆಟ್ ಗಳಲ್ಲಿ ಐಮೇಸೆಜ್ ಸೇವೆಯೂ ದೊರೆಯಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ವಿಂಡೋಸ್ ಬಳಕೆದಾರರಿಗೆ ಬಂಪರ್ ಎನ್ನಲಾಗಿದೆ.



Click it and Unblock the Notifications








