ಗೂಗಲ್ ಕ್ರೋಮ್-ಫೈರ್‌ಫಾಕ್ಸ್ ಬಳಸಬೇಡಿ: ಎಚ್ಚರಿಸಿದ ಮೈಕ್ರೊಸಾಫ್ಟ್‌..!

|

ಮೈಕ್ರೋ ಸಾಫ್ಟ್ ಮಾರುಕಟ್ಟೆಯಲ್ಲಿ ತನ್ನ ವಿಂಡೋಸ್ ಬಳಕೆದಾರರಿಗೆ ಹೊಸದೊಂದು ಕಿವಿ ಮಾತನ್ನು ಹೇಳಿದೆ. ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಮಂದಿ ಬಳಕೆ ಮಾಡಿಕೊಳ್ಳುತ್ತಿರುವ ಆಪರೇಟಿಂಗ್ ಸಿಸ್ಟಮ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ವಿಂಡೋಸ್‌ ಬಳಸುವವರಿಗೆ ಇಂಟರ್ನೆಟ್ ಬಳಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಬಳಸುತ್ತಿರುವ ಬ್ರೌಸರ್ ಬಗ್ಗೆ ಕಿವಿ ಮಾತು ಹೇಳಿದೆ.

ಗೂಗಲ್ ಕ್ರೋಮ್-ಫೈರ್‌ಫಾಕ್ಸ್ ಬಳಸಬೇಡಿ: ಎಚ್ಚರಿಸಿದ ಮೈಕ್ರೊಸಾಫ್ಟ್‌..!

ವಿಂಡೋಸ್‌ ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಇಂಟರ್ನೆಟ್ ಬ್ರೌಸ್ ಮಾಡುವ ಸಲುವಾಗಿ ಕ್ರೋಮ್ ಇಲ್ಲವೇ ಫೈರ್‌ಫಾಕ್ಸ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಕುರಿತು ಮಾಹಿತಿಯನ್ನು ನೀಡಿರುವ ಮೈಕ್ರೋಸಾಫ್ಟ್‌, ಈ ಎರಡು ಬ್ರೌಸರ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ಇದು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ವಿಂಡೋಸ್ 10:

ವಿಂಡೋಸ್ 10:

ಮಾರುಕಟ್ಟೆಯಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ 10 ಬಳಕೆ ಮಾಡುತ್ತಿರುವವರಿಗೆ ಎಚ್ಚರಿಕೆಯನ್ನು ನೀಡಿರುವ ಮೈಕ್ರೋಸಾಫ್ಟ್. ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಗೂಗಲ್ ಕ್ರೋಮ್ ಮತ್ತು ಮೊಜಿಲಾ ಫೈರ್ಫಾಕ್ಸ್ ಬ್ರೌಸರ್ ಅನ್ನು ಬಳಕೆ ಮಾಡದಂತೆ ಎಚ್ಚರಿಕೆಯನ್ನು ನೀಡಿದೆ.

ಎಡ್ಜ್ ಬಳಕೆ:

ವಿಂಡೋಸ್‌ 10 ಬಳಕೆದಾರರಿಗೆ ವಿಶೇಷವಾಗಿ ಎಡ್ಜ್ ಬ್ರೌಸರ್ ಅನ್ನು ಬಳಕೆಗೆ ನೀಡುತ್ತಿದೆ. ಇದು ಗೂಗಲ್ ಕ್ರೋಮ್ ಮತ್ತು ಮೊಜಿಲಾ ಫೈರ್ಫಾಕ್ಸ್ ಬ್ರೌಸರ್ ಗಿಂತಲೂ ಉತ್ತಮವಾಗಿದೆ. ಇದರಿಂದಾಗಿ ಎಡ್ಜ್ ಬ್ರೌಸರ್ ಅನ್ನು ಬಳಸುವಂತೆ ಕಿವಿ ಮಾತು ಹೇಳಿದೆ. ಎಡ್ಜ್ ಬ್ರೌಸರ್ ಸೆಫ್ ಮತ್ತು ಸೆಕ್ಯೂರ್ ಆಗಿದೆ ಎಂದು ತಿಳಿಸಿದೆ.

ಸಮಸ್ಯೆಗೆ ಆಹ್ವಾನ:

ಸಮಸ್ಯೆಗೆ ಆಹ್ವಾನ:

ಎಡ್ಜ್ ಬ್ರೌಸರ್ ಅನ್ನು ಬಳಕೆ ಮಾಡಿಕೊಂಡ ಸಂದರ್ಭದಲ್ಲಿ ವಿಂಡೋಸ್ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಸುರಕ್ಷತೆಯನ್ನು ನೀಡಲಿದೆ. ಆದರೆ ಗೂಗಲ್ ಕ್ರೋಮ್ ಮತ್ತು ಮೊಜಿಲಾ ಫೈರ್ಫಾಕ್ಸ್ ಬ್ರೌಸರ್ ಬಳಕೆ ಮಾಡಿಕೊಂಡ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಸಮಸ್ಯಗೆ ಆಹ್ವಾನವನ್ನು ನೀಡಿದಂತೆ ಎಂದಿದೆ.

ಸುರಕ್ಷತೆ:

ಸುರಕ್ಷತೆ:

ಇಂದಿನ ದಿನದಲ್ಲಿ ಬಳಕೆದಾರರ ಮಾಹಿತಿಯೂ ಹೆಚ್ಚಿನ ಪ್ರಮಾಣದಲ್ಲಿ ಲೀಕ್ ಆಗುತ್ತಿರುವ ಹಿನ್ನಲೆಯಲ್ಲಿ ಗೂಗಲ್ ಕ್ರೋಮ್ ಮತ್ತು ಮೊಜಿಲಾ ಫೈರ್ಫಾಕ್ಸ್ ಬ್ರೌಸರ್ ಹೆಚ್ಚಿನ ಮಂದಿಯ ಮಾಹಿತಿಯನ್ನು ಲೀಕ್ ಮಾಡಲು ಪ್ರಮುಖ ಕಾರಣವಾಗುತ್ತಿವೆ. ಆದರೆ ಇದು ಎಡ್ಜ್ ನಲ್ಲಿ ಆಗುವುದಿಲ್ಲ. ಬಳಕೆದಾರರಿಗೆ ಸಂಪೂರ್ಣ ಸುರಕ್ಷತೆ ದೊರೆಯಲಿದೆ.

ಬೆಸ್ಟ್‌:

ಬೆಸ್ಟ್‌:

ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಿಸಿಕೊಂಡಿರುವ ಆಯ್ಕೆಗಳನ್ನು ಎಡ್ಜ್ ಬ್ರೌಸರ್ ಗಳಲ್ಲಿ ಕಾಣಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಆಯ್ಕೆಯೂ ಬಳಕೆಯ ಸಂದರ್ಭದಲ್ಲಿ ದೊರೆಯಲಿದೆ. ಇದರಿಂದಾಗಿ ಹೆಚ್ಚಿನ ಮಂದಿ ಎಡ್ಜ್ ಬ್ರೌಸರ್ ಬಳಸುವಂತೆ ಮೈಕ್ರೋಸಾಫ್ಟ್ ಮನವಿಯನ್ನು ಮಾಡಿದೆ.

Best Mobiles in India

English summary
Microsoft Warns Users Not To Install Chrome & Firefox, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X