ಅಕ್ಟೋಬರ್ 5 ರಿಂದ ಹೊಸ ಮೈಕ್ರೋಸಾಫ್ಟ್‌ ವಿಂಡೋಸ್ 11 ಅಪ್ಡೇಟ್‌ ಲಭ್ಯ!

|

ಮೈಕ್ರೋಸಾಫ್ಟ್‌ ತನ್ನ ಬಹು ನಿರೀಕ್ಷಿತ ವಿಂಡೋಸ್ 11 ಆಪರೇಟಿಂಗ್‌ ಸಿಸ್ಟಂ ಅನ್ನು ಮೂರು ತಿಂಗಳ ಹಿಂದೆಯಷ್ಟೇ ಅನಾವರಣಗೊಳಿಸಿತ್ತು. ಇದೀಗ ಮೈಕ್ರೋಸಾಫ್ಟ್‌ ವಿಂಡೋಸ್‌ 11 ಮುಂದಿನ ಅಕ್ಟೋಬರ್ 5 ರಿಂದ ಹಂತ ಹಂತವಾಗಿ ಅರ್ಹ ವಿಂಡೋಸ್ 10 ಬಳಕೆದಾರರಿಗೆ ಉಚಿತ ಅಪ್‌ಡೇಟ್ ಲಭ್ಯವಾಗಲಿದೆ. ಇನ್ನು ಈ ಹೊಸ ಅಪ್ಡೇಟ್‌ ಮೂಲಕ ಹೊಸ ಫೀಚರ್ಸ್‌ಗಳನ್ನು ಹಾಗೂ ಹೊಸ ವಿನ್ಯಾಸದ ವಿಂಡೋಸ್‌ ಅನ್ನು ಕಾಣಬಹುದಾಗಿದೆ.

ಮೈಕ್ರೋಸಾಫ್ಟ್‌ ವಿಂಡೋಸ್‌ 11

ಹೌದು, ಮೈಕ್ರೋಸಾಫ್ಟ್‌ ವಿಂಡೋಸ್‌ 11 ಆಪರೇಟಿಂಗ್‌ ಸಿಸ್ಟಂ ಆಪ್ಡೇಟ್‌ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ. ಇದು ಆಕ್ಟೋಬರ್‌ ತಿಂಗಳಿನಿಂದ 2022ರ ಮಧ್ಯ ಭಾಗದವರೆಗೆ ಮುಂದುವರಿಯಲಿದೆ ಎಂದು ಮೈಕ್ರೋಸಾಫ್ಟ್‌ ಸಂಸ್ಥೆ ಸ್ಪಷ್ಟಪಡಿಸಿದೆ. ಇನ್ನು ಈ ಹೊಸ ಆಪರೇಟಿಂಗ್ ಸಿಸ್ಟಂ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ? ಇದನ್ನು ಇನ್‌ಸ್ಟಾಲ್ ಮಾಡಲು ನೀವು ಅರ್ಹರಾಗಿದ್ದೀರಾ ಎಂದು ತಿಳಿದುಕೊಳ್ಳುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿಂಡೋಸ್ 11

ಮೈಕ್ರೋಸಾಫ್ಟ್ ವಿಂಡೋಸ್ 11 ಆಪ್ಡೇಟ್‌ ಮುಂದಿನ ಆಕ್ಟೋಬರ್‌ನಿಂದ ಲಭ್ಯವಾಗಲಿದೆ ನಿಜ. ಆದರೆ ನೀವು ಹೊಸ ಅಪ್‌ಡೇಟ್‌ ಮಾಡಿಕೊಳ್ಳಬೇಕಾದರೆ ಅದಕ್ಕಾಗಿ ಕೆಲವು ಅರ್ಹತೆಗಳನ್ನು ನಿಮ್ಮ ಕಂಪ್ಯೂಟರ್‌ ಹೊಂದಿರಬೇಕಾಗುತ್ತದೆ. ವಿಂಡೋಸ್ 11 ಅಪ್‌ಡೇಟ್‌ಗೆ ನಿಮ್ಮ ಪಿಸಿ ಅರ್ಹವಾಗಿಲ್ಲದಿದ್ದರೆ ಅದು ಅಪ್ಡೇಟ್‌ ಆಗುವುದಿಲ್ಲ. ಮೈಕ್ರೋಸಾಫ್ಟ್ ವಿಂಡೋಸ್ 11 ಅಪ್ಡೇಟ್‌ಗೆ ಅರ್ಹತೆ ಪಡೆಯಲು, ಬಳಕೆದಾರರು ತಮ್ಮ ಕಂಪ್ಯೂಟರ್‌ನಲ್ಲಿ ಅವರು ವಿಂಡೋಸ್ 11 ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ.

ವಿಂಡೋಸ್ 11 ಅಪ್ಡೇಟ್‌ ಮಾಡುವುದಕ್ಕೆ ಅರ್ಹರಾಗಿದ್ದೀರಾ ಎಂದು ಪರಿಶೀಲಿಸುವುದು ಹೇಗೆ?

ವಿಂಡೋಸ್ 11 ಅಪ್ಡೇಟ್‌ ಮಾಡುವುದಕ್ಕೆ ಅರ್ಹರಾಗಿದ್ದೀರಾ ಎಂದು ಪರಿಶೀಲಿಸುವುದು ಹೇಗೆ?

ಪ್ರೊಸೆಸರ್: 1GHz ಹೊಂದಿರಬೇಕು

RAM: 4GB ಯಷ್ಟಿರಬೇಕು

ಸ್ಟೋರೇಜ್‌: 64GBಅಥವಾ ದೊಡ್ಡ ಶೇಖರಣಾ ಸಾಧನ
ಸಿಸ್ಟಮ್ ಫರ್ಮ್‌ವೇರ್: UEFI, ಸುರಕ್ಷಿತ ಬೂಟ್ ಸಾಮರ್ಥ್ಯ
ಟಿಪಿಎಂ: ಟಿಪಿಎಂ ಆವೃತ್ತಿ 2.0
ಗ್ರಾಫಿಕ್ಸ್ ಕಾರ್ಡ್: ಡೈರೆಕ್ಟ್ ಎಕ್ಸ್ 12 ಚಾಲಕದೊಂದಿಗೆ ಹೊಂದಿಕೊಳ್ಳುವಂತಿರಬೇಕು
ಡಿಸ್‌ಪ್ಲೇ:ಹೆಚ್‌ಡಿ ಡಿಸ್ಪ್ಲೇ 9 ಇಂಚುಗಳಿಗಿಂತ ಹೆಚ್ಚಿರಬೇಕು.
ಇತರ ಅವಶ್ಯಕತೆಗಳು: ಇಂಟರ್ನೆಟ್ ಸಂಪರ್ಕ, ಸೆಟಪ್‌ಗಾಗಿ ಮೈಕ್ರೋಸಾಫ್ಟ್ ಖಾತೆ, ಹೆಚ್ಚುವರಿ ಫೀಚರ್ಸ್‌ ಹೊಂದಿರಬೇಕು

ಮೈಕ್ರೋಸಾಫ್ಟ್‌ಗೆ ಅಗತ್ಯವಿರುವ 64-ಬಿಟ್ ಪ್ರೊಸೆಸರ್ ಈಗ ಇಂಟೆಲ್ ಕೋರ್ ಎಕ್ಸ್-ಸರಣಿ, ಕ್ಸಿಯಾನ್ ಡಬ್ಲ್ಯೂ-ಸರಣಿ ಮತ್ತು ಇಂಟೆಲ್ ಕೋರ್ 7820 ಎಚ್‌ಕ್ಯೂ ಪ್ರೊಸೆಸರ್ ಹೊಂದಿರುವ ಸಾಧನಗಳನ್ನು ಸಹ ಒಳಗೊಂಡಿದೆ.

ವಿಂಡೋಸ್ 11 ಅನ್ನು ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಮಾಡುವುದು ಹೇಗೆ?

ವಿಂಡೋಸ್ 11 ಅನ್ನು ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಮಾಡುವುದು ಹೇಗೆ?

ಎಲ್ಲಾ ಅರ್ಹ ಬಳಕೆದಾರರು ಮಾಡಬೇಕಾಗಿರುವುದು ಸೆಟ್ಟಿಂಗ್‌ಗಳು> ವಿಂಡೋಸ್ ಅಪ್‌ಡೇಟ್‌ಗೆ ಹೋಗಿ. ಇಲ್ಲಿ, 'ಅಪ್ಡೇಟ್‌ಗಾಗಿ ಪರಿಶೀಲಿಸಿ' ಬಟನ್ ಅನ್ನು ಕ್ಲಿಕ್ ಮಾಡಿ. ನಂತರ, ನೀವು ಇಲ್ಲಿ 'ಅಪ್‌ಡೇಟ್ ಲಭ್ಯವಿದೆ' ಪ್ರಾಂಪ್ಟ್ ಅನ್ನು ಕಾಣುತ್ತೀರಿ. ಅಪ್ಡೇಟ್‌ ಮಾಡಲು ವೈ-ಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆದ ನಂತರ ಅದರ ಮೇಲೆ ಕ್ಲಿಕ್ ಮಾಡಿ. ಡೌನ್‌ಲೋಡ್ ಮಾಡಿದ ನಂತರ, ಮೈಕ್ರೋಸಾಫ್ಟ್ ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಸ್ಥಾಪಿಸಲು ಮತ್ತು ರೀಬೂಟ್ ಮಾಡಬಹುದೇ ಎಂದು ಕೇಳುತ್ತದೆ ಡೌನ್‌ಲೋಡ್ ಕ್ಲಿಕ್ ಮಾಡಿ ಮತ್ತು ಇನ್‌ಸ್ಟಾಲ್‌ ಮಾಡಿರಿ.

Best Mobiles in India

English summary
Here's how you can get download and install the update when it's available on October 5.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X