ವಿಂಡೋಸ್ 8 ಉಚಿತ ಟ್ರಯಲ್ version ಡೌನ್ಲೋಡ್

By Varun
|
ವಿಂಡೋಸ್ 8 ಉಚಿತ ಟ್ರಯಲ್ version ಡೌನ್ಲೋಡ್

ಮೈಕ್ರೋಸಾಫ್ಟ್ ಕಂಪನಿ ತನ್ನ ಪ್ರತಿಷ್ಟಿತ ವಿಂಡೋಸ್ 8 ತಂತ್ರಾಂಶವನ್ನು ಅಕ್ಟೋಬರ್ 26 ಕ್ಕೆ ಬಿಡುಗಡೆ ಮಾಡಲಿದ್ದು,ಅವತ್ತು ತನ್ನದೇ ಆದ ಸರ್ಫೇಸ್ ಟ್ಯಾಬ್ಲೆಟ್ ಅನ್ನೂ ಬಿಡುಗಡೆ ಮಾಡಲಿದೆ ಅಂತ ನೀವು ಕನ್ನಡ ಗಿಜ್ಬಾಟ್ ನಲ್ಲಿ ಓದಿದ್ದೀರಿ.

ಈಗ ವಿಂಡೋಸ್ ಅಭಿಮಾನಿಗಳಿಗಾಗಿ 90 ದಿನಗಳ ಕಾಲ ಉಚಿತವಾದ ಟ್ರಯಲ್ ವರ್ಷನ್ ವಿಂಡೋಸ್ 8 ತಂತ್ರಾಂಶವನ್ನು ಮೈಕ್ರೋಸಾಫ್ಟ್ ಘೋಷಿಸಿದ್ದು, ವಿಂಡೋಸ್ 8 ಆಧಾರಿತ ಆಪ್ ಹಾಗು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಕೂಡ ಇದನ್ನು ಬಳಸಬಹುದಾಗಿದೆ.

90 ದಿನಗಳ ಕಾಲ ಉಚಿತವಾಗಿ ಬಳಸಿ, ನಂತರ ವಿಂಡೋಸ್ 8 ಫುಲ್ ವರ್ಷನ್ ಅನ್ನು ಖರೀದಿಸಲು ಅನುವು ಮಾಡಿಕೊಟ್ಟಿರುವ ಮೈಕ್ರೋಸಾಫ್ಟ್ ಇದರ ಮೂಲಕ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಹವಣಿಸುತ್ತಿದೆ.

ಟ್ಯಾಬ್ಲೆಟ್ ಅಲ್ಲಿ ಕೂಡಾ ವಿಂಡೋಸ್ 8 ತಂತ್ರಾಂಶವನ್ನ ಉಪಯೋಗಿಸುವ ಹಾಗೆ ಡೆವಲಪ್ ಮಾಡಲಾಗಿದ್ದು, ಪೆನ್ ಡ್ರೈವ್ ಮೂಲಕವೂ ಇದನ್ನು ಕೊಂಡೊಯ್ಯಬಹುದಾಗಿದೆ.

ಈ ಟ್ರಯಲ್ ವರ್ಶನ್ 32 ಹಾಗು 64 ಬಿಟ್ ನಲ್ಲಿ ಬರಲಿದ್ದು ಇದನ್ನು ಡೌನ್ಲೋಡ್ ಮಾಡಲು ನಿಮ್ಮ ಕಂಪ್ಯೂಟರ್ ಗೆ ಬೇಕಿರುವ ಮಿನಿಮಮ್ ಅವಶ್ಯಕತೆಗಳು ಈ ರೀತಿ ಇದೆ:

  • 1GHz ಪ್ರೋಸೆಸರ್

  • 1 GB RAM

  • 20GB ಹಾರ್ಡ್ ಡಿಸ್ಕ್ ಸ್ಪೇಸ್

  • ಮೈಕ್ರೋಸಾಫ್ಟ್ DirectX 9 ಗ್ರಾಫಿಕ್ಸ್ ಸಾಧನ ಹಾಗು WDDM Driver ಗ್ರಾಫಿಕ್ಸ್ ಕಾರ್ಡ್

ಟ್ರಯಲ್ ಅವಧಿಯಾದ 90 ದಿನಗಳು ಮುಗಿದ ನಂತರ ಹೊಸ ವಿಂಡೋಸ್ 8 ಉಪಯೋಗಿಸಲು ಅದನ್ನು uninstall ಮಾಡಿ ನಂತರ ಕಮರ್ಷಿಯಲ್ ವಿಂಡೋಸ್ 8 ಅನ್ನು install ಮಾಡಿಕೊಳ್ಳಬೇಕು. ವಿಂಡೋಸ್ 8 ಟ್ರಯಲ್ ವರ್ಶನ್ ಅನ್ನು ಡೌನ್ಲೋಡ್ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X