ಮೈಕ್ರೋಸಾಫ್ಟ್ ಸಂಸ್ಥೆಯಿಂದ ವಿಂಡೋಸ್ ಫೈಲ್ ರಿಕವರಿ ಅಪ್ಲಿಕೇಶನ್ ಲಾಂಚ್‌!

|

ಸಾಫ್ಟ್‌ವೇರ್‌ ದಿಗ್ಗಜ ಮೈಕ್ರೋಸಾಫ್ಟ್ ತನ್ನ ಬಳಕೆದಾರರಿಗೆ ಹಲವಾರು ಹೊಸ ಮಾದರಿಯ ಪ್ರಾಡಕ್ಟ್‌ಗಳು, ಸ್ಮಾರ್ಟ್‌ಫೋನ್‌, ಹಾಗೂ ಹೊಸ ಮಾದರಿಯ ಅಪ್ಲಿಕೇಶನ್‌ ಅನ್ನು ಪರಿಚಯಿಸುತ್ತಲೇ ಬಂದಿದೆ. ತನ್ನ ಭಿನ್ನ ಮಾದರಿಯ ಪ್ರಾಡಕ್ಟ್‌ಗಳಿಂದ ಗುರುತಿಸಿಕೊಂಡಿರುವ ಮೈಕ್ರೋಸಾಫ್ಟ್‌ ಇದೀಗ ತನ್ನ ಮತ್ತೊಂದು ಹೊಸ ಅಪ್ಲಿಕೇಶನ್‌ ಅನ್ನು ಬಳಕೆದಾರರಿಗೆ ಪರಿಚಯಿಸಿದೆ.

ಮೈಕ್ರೋಸಾಫ್ಟ್‌

ಹೌದು, ಮೈಕ್ರೋಸಾಫ್ಟ್‌ ಕಂಪೆನಿ ತನ್ನ ಬಳಕೆದಾರರಿಗೆ ವಿಂಡೋಸ್ ಫೈಲ್ ರಿಕವರಿ ಎಂಬ ಹೊಸ ಡೇಟಾ ರಿಕವರಿ ಅಪ್ಲಿಕೇಶನ್ ಅನ್ನು ಬಿಡುಗಡೆಗೊಳಿಸಿದೆ. ಇನ್ನು ಈ ಅಪ್ಲಿಕೇಶನ್‌ ಅನ್ನು ಬಳಸಿಕೊಂಡು, ಈ ಹಿಂದೆ ಡಿಲಿಟ್‌ ಮಾಡಲಾದ ಫೈಲ್‌ಗಳನ್ನು ಪಡೆಯಬಹುದಾಗಿದ್ದು, ಡಾಕ್ಯುಮೆಂಟ್‌ಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ರಿಕವರಿ ಮಾಡಬಹುದಾಗಿದೆ. ಸದ್ಯ ಈ ವಿಂಡೋಸ್ ಫೈಲ್ ರಿಕವರಿ ಅಪ್ಲಿಕೇಶನ್‌ ಮೈಕ್ರೋಸಾಫ್ಟ್ ಸ್ಟೋರ್‌ನಲ್ಲಿ ಫ್ರೀಯಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಇನ್ನು ಈ ಅಪ್ಲಿಕೇಶನ್‌ ವಿಶೇಷತೆ ಹಾಗೂ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿಂಡೋಸ್ ಫೈಲ್ ರಿಕವರಿ ಆಪ್

ವಿಂಡೋಸ್ ಫೈಲ್ ರಿಕವರಿ ಆಪ್‌ ಈಗಾಗಲೇ ನಿಮ್ಮ ಡಿವೈಸ್‌ನಲ್ಲಿ ಡಿಲಿಟ್‌ ಆಗಿರುವ ಫೋಟೋಗಳು, ಡಾಕ್ಯುಮೆಂಟ್‌ಗಳು, ವೀಡಿಯೊಗಳನ್ನ ಮತ್ತೆ ರಿಕವರಿ ಮಡಿಕೊಳ್ಳಲು ಇದು ಸಹಾಯ ಮಾಡಲಿದೆ. ಇನ್ನು ಈ ಅಪ್ಲಿಕೇಶನ್ ಸಂಪರ್ಕಿತ ಕ್ಯಾಮೆರಾ ಅಥವಾ ಎಸ್‌ಡಿ ಕಾರ್ಡ್‌ನಿಂದ ಡೇಟಾವನ್ನು ಮರುಪಡೆಯಬಹುದಾಗಿದೆ. ಆದರೆ ಈ ಆಪ್ಲಿಕೇಶನ್‌ ನೆಟ್‌ವರ್ಕ್ ಡ್ರೈವ್‌ಗಳನ್ನು ಬೆಂಬಲಿಸುವುದಿಲ್ಲ. ಇನ್ನು ಈ ಅಪ್ಲಿಕೇಶನ್ NTFS, FAT, exFAT, ಮತ್ತು ReFS ಫೈಲ್ ಸಿಸ್ಟಮ್‌ಗಳನ್ನು ಬೆಂಬಲಿಸುತ್ತದೆ ಮತ್ತು JPEG, PDF, PNG, MPEG, Office, MP3, MP4, ZIP ಫಾರ್ಮ್ಯಾಟ್‌ಗಳಲ್ಲಿ ಫೈಲ್‌ಗಳನ್ನು ರಿಕವರಿ ಮಾಡಬಹುದಾಗಿದೆ.

ಅಪ್ಲಿಕೇಶನ್

ಇನ್ನು ಈ ಅಪ್ಲಿಕೇಶನ್‌ನಲ್ಲಿ ಫೈಲ್ ರಿಕವರಿ ಮಾಡುವುದಕ್ಕೆ ಮೂರು ವಿಧಾನಗಳಿದ್ದು, ಅವುಗಳನ್ನ ಡೀಫಾಲ್ಟ್, ಸೆಗ್ಮೆಂಟ್ ಮತ್ತು ಸಿಗ್ನೇಚರ್ ಎಂದು ಗುರುತಿಸಲಾಗಿದೆ. ನಿಮ್ಮ ವಿಂಡೋಸ್ ಪಿಸಿಯಲ್ಲಿನ ಎಚ್‌ಡಿಡಿಗಳು ಅಥವಾ ಎಸ್‌ಎಸ್‌ಡಿಗಳು ಅಥವಾ ಬಾಹ್ಯ ಹಾರ್ಡ್ ಡ್ರೈವ್‌ಗಳು ಮತ್ತು 4GB ಅಥವಾ ಹೆಚ್ಚಿನ ಫ್ಲ್ಯಾಷ್ ಡ್ರೈವ್‌ಗಳಲ್ಲಿನ ಡಿಲಿಟ್‌ ಆದ ಫೈಲ್‌ಗಳನ್ನು ರಿಕವರಿ ಮಾಡಲು ಡೀಫಾಲ್ಟ್ ಮೋಡ್ ಅನ್ನು ಬಳಸಬಹುದಾಗಿದೆ.

ಫೈಲ್‌

ಇನ್ನು ಬಹಳ ಹಿಂದೆಯೇ ಅಳಿಸಲಾದ ಫೈಲ್‌ಗಳನ್ನ ಅಥವಾ ಡಿಸ್ಕ್‌ಗಳನ್ನ ಫಾರ್ಮ್ಯಾಟ್ ಮಾಡಿದ ನಂತರ ರಿಕವರಿ ಮಾಡುವ ಫೈಲ್‌ಗಳನ್ನು ಸೆಗ್ಮೆಂಟ್‌ ಮೋಡ್‌ ಅನ್ನು ಬಳಸಬಹುದಾಗಿದೆ. ಇನ್ನು ಬಹಳ ದಿನಗಳ ಹಿಂದೆಯೆ ಡಿಲಿಟ್‌ ಮಾಡಿದ ಫೈಲ್‌ಗಳನ್ನ ಕಂಡುಹಿಡಿಯಲು ಸಾಧ್ಯವಾಗದಿದ್ದರೆ ಬಳಕೆದಾರರು ಸಿಗ್ನೇಚರ್ ಮೋಡ್ ಅನ್ನು ಬಳಸಬೇಕಾಗುತ್ತದೆ. ಇನ್ನು ಈ ವಿಂಡೋಸ್ ಫೈಲ್ ರಿಕವರಿ ಅಪ್ಲಿಕೇಶನ್ ವಿಂಡೋಸ್ 10 ಬಿಲ್ಡ್ 19041 ಅಥವಾ ನಂತರದ ದಿನಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ.

Best Mobiles in India

English summary
Microsoft has just made a new free data recovery application available to the public, called Windows File Recovery.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X