ವಾಹ್ ಇನ್ನು ವಿಂಡೋಸ್‌ನಲ್ಲೂ ಆಂಡ್ರಾಯ್ಡ್ ಐಓಎಸ್ ಲಭ್ಯ!

Written By:

ಮೈಕ್ರೋಸಾಫ್ಟ್‌ನ ವಾರ್ಷಿಕ ಕಾನ್ಫರೆನ್ಸ್ ಬುಧವಾರ ಸ್ಯಾನ್‌ಫ್ರಾನಿಸ್ಕೋದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಕಂಪೆನಿ ಹಲವಾರು ಮುಖ್ಯ ಘೋಷಣೆಗಳನ್ನು ಮಾಡಿದೆ. ಇಂದಿನ ಲೇಖನದಲ್ಲಿ ಆ ಘೋಷಣೆಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೋಡಲಿದ್ದೇವೆ. ಮೈಕ್ರೋಸಾಫ್ಟ್‌ ಟೆಕ್ ಜಗತ್ತಿನಲ್ಲೇ ಅದ್ವಿತೀಯ ಎಂದೆನಿಸಬಹುದಾದ ಅಂಶಗಳನ್ನು ಈ ಸಂದರ್ಭದಲ್ಲಿ ತಿಳಿಯಪಡಿಸಿದ್ದು ಇದು ಹೆಚ್ಚು ಸ್ವಾರಸ್ಯಮಯ ಎಂದೆನಿಸಿದೆ.

ಓದಿರಿ: ಮೈಕ್ರೋಸಾಫ್ಟ್ ಪ್ರಥಮ ಸೆಲ್ಫೀ ಫೋನ್ ಕಮಾಲ್

ಬಿಲ್ಡ್ 2015 ಎಂಬ ಈ ಕಾನ್ಸೆಪ್ಟ್‌ ಇದಾಗಿದ್ದು ಮೈಕ್ರೋಸಾಫ್ಟ್ ಬಹುಮುಖ್ಯ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅದು ಏನು ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಂಡೋಸ್ ಫೋನ್ ಎಂದರೆ ವಿಂಡೋಸ್ 10 ಪಿಸಿ

ವಿಂಡೋಸ್ ಫೋನ್ ಎಂದರೆ ವಿಂಡೋಸ್ 10 ಪಿಸಿ

ನಿಮ್ಮ ವಿಂಡೋಸ್ ಫೋನ್ ಎಂದರೆ ವಿಂಡೋಸ್ 10 ಪಿಸಿ

ವಿಂಡೋಸ್ 10ನಲ್ಲಿ ಪಿಸಿಯಂತೆಯೇ ನೀವು ಕಾರ್ಯನಿರ್ವಹಿಸಬಹುದಾಗಿದ್ದು ಮೌಸ್ ಮತ್ತು ಕೀಬೋರ್ಡ್ ಅಳವಡಿಸಿ ಸಾಮಾನ್ಯ ಕಂಪ್ಯೂಟರ್ ಮಾದರಿಯಲ್ಲೇ ಮೊಬೈಲ್‌ನಲ್ಲಿ ಕಾರ್ಯನಿರ್ವಹಿಸಬಹುದಾಗಿದೆ.

ವಿಂಡೋಸ್ 10

ವಿಂಡೋಸ್ 10

ಆಂಡ್ರಾಯ್ಡ್ ಐಓಎಸ್ ಅಪ್ಲಿಕೇಶನ್ ವಿಂಡೋಸ್ 10 ನಲ್ಲಿಯೂ

ಮೈಕ್ರೋಸಾಫ್ಟ್ ಒಂದು ಟೂಲ್ ಅನ್ನು ಬಿಡುಗಡೆ ಮಾಡುತ್ತಿದ್ದು ಇದು ಸ್ವಯಂಚಾಲಿತವಾಗಿ ಅಪ್ಲಿಕೇಶನ್ ಅನ್ನು ಕನ್ವರ್ಟ್ ಮಾಡುತ್ತದೆ. ಇದರಿಂದ ವಿಂಡೋಸ್ 10 ನಲ್ಲಿಯೂ ಆಂಡ್ರಾಯ್ಡ್ ಮತ್ತು ಐಓಎಸ್ ಅನ್ನು ಆನಂದಿಸಬಹುದಾಗಿದೆ.

ಅಪ್ಲಿಕೇಶನ್

ಅಪ್ಲಿಕೇಶನ್

ಇಂಟಿಗ್ರೇಶನ್‌ಗಳು

ನಿಮ್ಮ ಪಿಸಿಯಲ್ಲಿ ನೀವು ಕಾರ್ಯನಿರ್ವಹಿಸುತ್ತಿರುವಾಗಲೇ ಉಬರ್ ಅನ್ನು ಪಡೆದುಕೊಳ್ಳಲು ರಿಮೈಂಡರ್ ಅನ್ನು ಸ್ಕೆಡ್ಯೂಲ್ ಮಾಡಬಹುದಾಗಿದೆ. ಕ್ಯಾಬ್ ಬುಕ್ ಮಾಡಲು ಅಪ್ಲಿಕೇಶನ್ ಅನ್ನು ಕಂಪ್ಯೂಟರ್‌ನಲ್ಲಿಯೇ ನಿಮಗೆ ಅಳವಡಿಸಬಹುದಾಗಿದೆ.

ನೈಜ ರೂಪದಲ್ಲಿ

ನೈಜ ರೂಪದಲ್ಲಿ

ಹೋಲೋಲೆನ್ಸ್ ನೈಜ ರೂಪದಲ್ಲಿ

ಹೋಲೋಲೆನ್ಸ್ ಅನ್ನು ಮೈಕ್ರೋಸಾಫ್ಟ್ ಜನವರಿಯಲ್ಲಿ ಪ್ರಸ್ತುತಪಡಿಸಿತ್ತು. ಇನ್ನು ವಿಂಡೋಸ್ 10 ಹೋಲೋಲೆನ್ಸ್ ಅನ್ನು ಗುರುತಿಸಲಿದ್ದು, ಇದು ನಿಮ್ಮ ವೀಕ್ಷಣೆಯನ್ನು ಇನ್ನಷ್ಟು ಭಿನ್ನಗೊಳಿಸಲಿದೆ.

ಅದ್ಭುತ

ಅದ್ಭುತ

ಇಂಟರ್ನೆಟ್ ಎಕ್ಸ್‌ಪ್ಲೋರರ್ ಅದ್ಭುತ

ಇಂಟರ್ನೆಟ್ ಎಕ್ಸ್‌ಪ್ಲೋರರ್ ಮೈಕ್ರೋಸಾಫ್ಟ್ ಎಡ್ಜ್ ಎಂಬ ಹೊಸ ಹೆಸರಿನಿಂದ ವಿಂಡೋಸ್ 10 ನಲ್ಲಿ ಕಂಡುಬರಲಿದ್ದು ಹೊಸ ಫೀಚರ್‌ಗಳನ್ನು ಇದರಲ್ಲಿ ನಿಮಗೆ ಕಾಣಬಹುದಾಗಿದೆ.

ಬಿಲ್ಲಿಂಗ್ಸ್

ಬಿಲ್ಲಿಂಗ್ಸ್

ಕ್ಯಾರಿಯಲ್ ಬಿಲ್ಲಿಂಗ್ಸ್

ಮೈಕ್ರೋಸಾಫ್ಟ್‌ನ ಎಲ್ಲಾ ವಿಂಡೋಸ್ ಡಿವೈಸ್‌ಗಳು ಕ್ಯಾರಿಯರ್ ಬಿಲ್ಲಿಂಗ್ ಅನ್ನು ಬೆಂಬಲಿಸಲಿದ್ದು ವಿಂಡೋಸ್ ಸ್ಟೋರ್ ಬಳಸಿ ಕ್ರೆಡಿಟ್ ಕಾರ್ಡ್ ಇಲ್ಲವೇ ಡೆಬಿಟ್ ಕಾರ್ಡ್ ಬಳಸದೆಯೇ ನಿಮಗಿಲ್ಲಿ ಪಾವತಿ ಮಾಡಬಹುದಾಗಿದೆ.

ವಿಂಡೋಸ್ ಸ್ಟೋರ್

ವಿಂಡೋಸ್ ಸ್ಟೋರ್

ವಿಂಡೋಸ್ ಸ್ಟೋರ್ ಅಪ್ಲಿಕೇಶನ್ ಬದಲಾವಣೆಯತ್ತ

ವಿಂಡೋಸ್ ಸ್ಟೋರ್‌ನಲ್ಲಿ ಮಹತ್ತರ ಬದಲಾವಣೆಯನ್ನು ಮೈಕ್ರೋಸಾಫ್ಟ್ ಮಾಡಲಿದ್ದು, ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಳು ವಿಂಡೋಸ್ ಸ್ಟೋರ್‌ಗೆ ಬರಲಿವೆ. ಇದು ಡೆವಲಪರ್‌ಗಳಿಗೆ ಸಹಕಾರಿಯಾಗಲಿದ್ದು ಬಳಕೆದಾರರು ಸುಲಭವಾಗಿ ಅಪ್ಲಿಕೇಶನ್‌ಗಳಿಗೆ ನವೀಕರಣಗಳನ್ನು ಮಾಡಬಹುದಾಗಿದೆ.

ಏರೊ ಗ್ಲಾಸ್ ಮತ್ತು ಅಪ್‌ಗ್ರೇಡೆಡ್ ಕೋರ್ಟಾನಾ

ಏರೊ ಗ್ಲಾಸ್ ಮತ್ತು ಅಪ್‌ಗ್ರೇಡೆಡ್ ಕೋರ್ಟಾನಾ

ಆಧುನಿಕ ವಿಂಡೋಸ್ ಪ್ರಿವ್ಯೂಗಾಗಿ ಏರೊ ಗ್ಲಾಸ್ ಮತ್ತು ಅಪ್‌ಗ್ರೇಡೆಡ್ ಕೋರ್ಟಾನಾ

ವಿಂಡೋಸ್ 10 ಗಾಗಿ ಪ್ರಿವ್ಯೂ ಪ್ರಕ್ರಿಯೆಯನ್ನು ಮೈಕ್ರೋಸಾಫ್ಟ್ ಹೊರತರಲಿದ್ದು ಇದರಲ್ಲಿ ಅಪ್‌ಗ್ರೇಡ್ ಮಾಡಬಹುದಾದ ಕೋರ್ಟಾನಾ ಆವೃತ್ತಿಯನ್ನು ನಿಮಗೆ ಕಾಣಬಹುದಾಗಿದೆ.

ಸ್ಟುಡಿಯೊ

ಸ್ಟುಡಿಯೊ

ವಿಶುವಲ್ ಸ್ಟುಡಿಯೊ

ಮ್ಯಾಕ್ ಮತ್ತು ಲೀನಕ್ಸ್‌ಗಾಗಿ ಮೈಕ್ರೋಸಾಫ್ಟ್ ವಿಶುವಲ್ ಸ್ಟುಡಿಯೋದ ಪ್ರಥಮ ಆವೃತ್ತಿಯನ್ನು ಹೊರತರಲಿದೆ. ಬುಧವಾರದಂದೇ ಇದು ಲಭ್ಯವಾಗಲಿದೆ. ಪ್ರಪ್ರಥಮ ಬಾರಿಗೆ ಮೈಕ್ರೋಸಾಫ್ಟ್ ಹೊರತರುತ್ತಿರುವ ಡೆವಲಪ್‌ಮೆಂಟ್ ಸಾಫ್ಟ್‌ವೇರ್ ಇದಾಗಿದೆ.

ವಿಂಡೋಸ್

ವಿಂಡೋಸ್

ಜಾಹೀರಾತು ಬೆಂಬಲಿತ ವಿಂಡೋಸ್

ನಿಮಗೆ ಬೇಕಾದ ಮಾಹಿತಿಯನ್ನು ಕ್ಷಣದಲ್ಲೇ ಒದಗಿಸಿಕೊಡುವ ವಿಧಾನದಲ್ಲಿ ಕಂಪೆನಿ ವಿಂಡೋಸ್ 10 ಅನ್ನು ಅಭಿವೃದ್ಧಿಪಡಿಸಿದ್ದು ವಿಂಡೋಸ್ ಸ್ಟೋರ್‌ಗೆ ಬಳಕೆದಾರರನ್ನು ದೂಡುವಂತಹ ರೀತಿಯಲ್ಲಿ ಇದನ್ನು ವಿನ್ಯಾಸಪಡಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
At Microsoft's annual developer's conference Build, which kicked off on Wednesday in San Francisco, the company made a series of announcements that show the new direction that it is headed in.Here were the 10 biggest announcements from Build 2015.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot