ಭಾರತ ಸರ್ಕಾರದಿಂದ ನಿಮ್ಮ ಮೊಬೈಲ್‌ಗೂ ಬಂದಿದೆಯಾ ಎಚ್ಚರಿಕೆಯ ಸಂದೇಶ! ಇಲ್ಲಿದೆ ಅಸಲಿ ವಿಷಯ!
ನಿಮ್ಮ ಮೊಬೈಲ್‌ಗೂ ಕೂಡ ಈ ಎಚ್ಚರಿಕೆ ಸಂದೇಶ ಬಂದಿದೆಯಾ? ಸರ್ಕಾರದಿಂದ ಬಂದಿರುವ ಈ ಎಮರ್ಜೆನ್ಸಿ ಆಲರ್ಟ್ ಮೆಸೇಜ್ ಬಗ್ಗೆ ನೀವು ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ನಿಮಗೆ ಮಾತ್ರವಲ್ಲ ಭಾರತದಲ್ಲಿನ ಅನೇಕ ಮೊಬೈಲ್ ಬಳಕೆದಾರರಿಗೆ ಸರ್ಕಾರದಿಂದ ಎಮರ್ಜೆನ್ಸಿ ಆಲರ್ಟ್ ಸಂದೇಶವನ್ನು ಕಳುಹಿಸಲಾಗಿದೆ.
ಹೌದು, ಇಂದು ಬೆಳಿಗ್ಗೆ ಸುಮಾರು 11:35ರ ಸಮಯದಲ್ಲಿ ಭಾರತದಲ್ಲಿನ ಅನೇಕ ಮೊಬೈಲ್ ಬಳಕೆದಾರರಿಗೆ ಫ್ಲ್ಯಾಶ್ ಸಂದೇಶವನ್ನು ಕಳುಹಿಸಲಾಗಿದೆ. ಈ ಎಚ್ಚರಿಕೆಯು ದೇಶದ ಹೊಸ ಎಮರ್ಜೆನ್ಸಿ ಆಲರ್ಟ್ ಸಿಸ್ಟಂನ ಟೆಸ್ಟಿಂಗ್ ಪ್ರಕ್ರಿಯೆ ಆಗಿದೆ ಎಂದು ಹೇಳಲಾಗಿದೆ. ಇದನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ನಿಯೋಜಿಸಿದೆ ಎನ್ನಲಾಗಿದೆ. ಹಾಗಾದ್ರೆ ಸರ್ಕಾರ ಕಳುಹಿಸಿರುವ ಎಮರ್ಜೆನ್ಸಿ ಆಲರ್ಟ್ ಸಂದೇಶದಲ್ಲಿ ಏನಿದೆ ಅನ್ನೊದನ್ನ ತಿಳಿಸಿಕೊಡ್ತೀವಿ ಈ ಲೇಖನವನ್ನು ಕೊನೆಯ ತನಕ ಓದಿರಿ.

ಭಾರತದಲ್ಲಿ NDMA ಆಗಾಗ ಎಮರ್ಜೆನ್ಸಿ ಆಲರ್ಟ್ ಸಂದೇಶಗಳನ್ನು ಮೊಬೈಲ್ ಬಳಕೆದಾರರಿಗೆ ಕಳುಹಿಸುತ್ತಿರುತ್ತದೆ. ಆದರಂತೆ ಇಂದು ಕೂಡ ಎಮರ್ಜೆನ್ಸಿ ಆಲರ್ಟ್ ಸಂದೇಶವನ್ನು ಕಳುಹಿಸಿದೆ. ಆದರೆ ಈ ಸಂದೇಶದ ಬಗ್ಗೆ ಆತಂಕ ಪಡುವಂತಹದ್ದು ಏನಿಲ್ಲ. ಏಕೆಂದರೆ ಇದು ಹೊಸ ಎಮರ್ಜೆನ್ಸಿ ಸಿಸ್ಟಂನ ಟೆಸ್ಟಿಂಗ್ ಪ್ರಕ್ರಿಯೆ ಎನ್ನಲಾಗಿದೆ. ಅದರಂತೆ ತುರ್ತು ಎಚ್ಚರಿಕೆಗಳನ್ನು ಭಾರತದಾದ್ಯಂತ ಸ್ಮಾರ್ಟ್‌ಫೋನ್‌ಗಳ ಯಾದೃಚ್ಛಿಕ ಮಾದರಿಗೆ ಕಳುಹಿಸಲಾಗಿದೆ. ಈ ಸಂದೇಶ ಬಂದಾಗ ಮೊಬೈಲ್ ಹೆಚ್ಚಿನ ಬೀಪ್ ಸೌಂಡ್‌ನೊಂದಿಗೆ ಸಂದೇಶವನ್ನು ಫ್ಲ್ಯಾಶ್ ಮಾಡಿದೆ ಎನ್ನಲಾಗಿದೆ.
ಏನಿದೆ ಸಂದೇಶದಲ್ಲಿ?
ಇನ್ನು ಈ ಎಮರ್ಜೆನ್ಸಿ ಆಲರ್ಟ್ ಸಂದೇಶ "emergency alert: severe" ಎಂದು ಓದುವ ಫ್ಲಾಶ್ ಮೆಸೇಜ್ ಮೂಲಕ ಬಂದಿದೆ. ಇನ್ನು ಈ ಮೆಸೇಜ್ ಅನ್ನು ಇಂಗ್ಲಿಷ್‌ನಲ್ಲಿ ಮತ್ತು ಹಿಂದಿಯಲ್ಲಿ ಹೀಗೆ ಎರಡು ಭಾರಿ ಕೆಲವು ನಿಮಿಷಗಳ ಅಂತರದಲ್ಲಿ ಕಳುಹಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಪ್ರಕಾರ ಎಚ್ಚರಿಕೆ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ನಿರ್ಣಯಿಸುವುದಕ್ಕಾಗಿ ಈ ಸಂದೇಶಗಳನ್ನು ಕಳುಹಿಸಿದೆ. ಇದನ್ನು ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ (CBS) ಮೂಲಕ 11:30 PM ಮತ್ತು 11:44 PM IST ನಡುವೆ ಕಳುಹಿಸಲಾಗಿದೆ ಎಂದು ವಿವರಿಸಲಾಗಿದೆ.
ಇದರಲ್ಲಿ CBS ಎಂದರೆ ಮೊಬೈಲ್ ನೆಟ್‌ವರ್ಕ್ ಅನ್ನು ಲೆಕ್ಕಿಸದೆ ನಿರ್ದಿಷ್ಟ ಪ್ರದೇಶದಲ್ಲಿ ಎಲ್ಲಾ ಫೋನ್‌ಗಳಿಗೆ ಟೆಕ್ಸ್ಟ್ ಸಂದೇಶಗಳನ್ನು ಕಳುಹಿಸಲು ಅನುಮತಿಸುವ ತಂತ್ರಜ್ಞಾನವಾಗಿದೆ. ಇದು ತುರ್ತು ಎಚ್ಚರಿಕೆಗಳನ್ನು ಕಳುಹಿಸಲು ಬಳಸುವ ತಂತ್ರಜ್ಞಾನವಾಗಿದೆ. ಇದರಿಂದ ಆಗಾಗ ಸಿಸ್ಟಮ್ ಸರಿಯಿದೆಯಾ ಇಲ್ಲವಾ ಅನ್ನೊದನ್ನ ಪರೀಕ್ಷಿಸುವುದು ಅನಿವಾರ್ಯವಿದೆ. ಒಂದು ವೇಳೆ ಸಂದೇಶ ತಲುಪದ ಪ್ರದೇಶಗಳು ಕಂಡು ಬಂದರೆ ಅಂತಹ ಪ್ರದೇಶಗಳನ್ನು ಗುರುತಿಸಲು NDMA ಗೆ ಸಹಾಯವಾಗಲಿದೆ.
ಈ ರೀತಿಯ ಎಚ್ಚರಿಕೆ ಸಂದೇಶಗಳನ್ನು ಕಳುಹಿಸುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ರಾಷ್ಟ್ರೀಯ ವಿಪತ್ತು ಪ್ರಾಧಿಕಾರ ಎಚ್ಚರಿಕೆಯ ಸಂದೇಶಗಳನ್ನು ರವಾನಿಸುತ್ತಿರುತ್ತದೆ. ಇದರಲ್ಲಿ ಕೆಲವು ಸಂದೇಶಗಳು ಬಹುಮುಖ್ಯವಾಗಿದ್ದು, ನಿಮ್ಮ ಪ್ರದೇಶಕ್ಕೆ ಕೂಡ ಸೀಮಿತವಾಗಿರುತ್ತದೆ. ಇದೇ ರೀತಿಯ ರೀತಿಯ ಫ್ಲಾಶ್ ಸಂದೇಶಗಳು ಕೆಲ ವಾರಗಳ ಹಿಂದೆ ಕೂಡ ಹಲವು ಮೊಬೈಲ್ ಬಳಕೆದಾರರಿಗೆ ಕಳುಹಿಸಲಾಗಿದೆ. ಆದರೆ ಈ ಸಂದೇಶವು ಮೊಬೈಲ್ ಆಪರೇಟರ್‌ಗಳ ತುರ್ತು ಎಚ್ಚರಿಕೆ ಪ್ರಸಾರ ಸಾಮರ್ಥ್ಯಗಳನ್ನು ಪರಿಣಾಮಕಾರಿಯಾಗಿ ಅಳೆಯುವ ಪ್ರಯತ್ನವಾಗಿದೆ.
C-DOT ನ CEO, ರಾಜ್‌ಕುಮಾರ್ ಉಪಾಧ್ಯಾಯ ಅವರು ಹೇಳಿರುವಂತೆ ಈ ಹಿಂದೆ ಸೆಲ್ ಪ್ರಸಾರದ ಟೆಕ್ನಾಲಜಿ ಪ್ರಸ್ತುತ ವಿದೇಶಿ ಮಾರಾಟಗಾರರಿಂದ ಮಾತ್ರ ಲಭ್ಯವಿದೆ. ಆದ್ದರಿಂದ C-DOT ತನ್ನದೇ ಆದ ಅಭಿವೃದ್ಧಿ ಹೊಂದುತ್ತಿದೆ, ಇದು ಇನ್ನೂ ಕೂಡ ಅಭಿವೃದ್ಧಿ ಹಂತದಲ್ಲಿದೆ. ಆದರೆ ದುರಂತದ ಸಮಯದಲ್ಲಿ ಮೊಬೈಲ್ ಫೋನ್ ಸ್ಕ್ರೀನ್‌ಗಳಿಗೆ ಡೈರೆಕ್ಟ್ ಫ್ಲ್ಯಾಶ್ ಮೆಸೇಜ್‌ಗಳನ್ನು ಕಳುಹಿಸುವುದಕ್ಕೆ NDMA ಇದನ್ನು ಬಳಸುತ್ತಿದೆ ಎಂದು ಹೇಳಿದ್ದಾರೆ.


Click it and Unblock the Notifications