Home
ಸುದ್ದಿಜಾಲ

ಭಾರತವೀಗ ವಿಶ್ವದ 'ಸ್ಪೇಸ್ ಸೂಪರ್ ಪವರ್'!..ಕಾರಣವಾದ 'ಮಿಷನ್ ಶಕ್ತಿ' ಏನಿದು?

ಇದು ದೇಶದ ಅತಿ ದೊಡ್ಡ ಸಂತಸದ ಕ್ಷಣ. ಎಲ್ಲರೂ ಹೆಮ್ಮೆ ಪಡಬೇಕಾದ ಸಮಯ. ಈಗ ನಾವು ನಮ್ಮ ಭೂಮಿ, ಗಾಳಿ ಮತ್ತು ನೀರನ್ನು ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯದ ಜೊತೆಗೆ ಬಾಹ್ಯಾಕಾಶದಲ್ಲೂ ರಕ್ಷಣಾ ಸಾಮರ್ಥ್ಯದಲ್ಲಿ ಸೈ ಎನಿಸಿಕೊಂಡಿದ್ದೆವೆ. ಭಾರತ ಇಂದು 'ಗ್ರೇಟ್ಸ್​ ಆಫ್​ ದಿ ಸ್ಪೇಸ್​ ರೇಸ್'​ನಲ್ಲಿ ತನ್ನ ಹೆಸರನ್ನು ಯಶಸ್ವಿಯಾಗಿ ನೋಂದಾಯಿಸಿಕೊಂಡಿದೆ. 'ಮಿಷನ್​ ಶಕ್ತಿ' ಯೋಜನೆ ಬೃಹತ್​ ಮಟ್ಟದಲ್ಲಿ ಯಶಸ್ವಿಯಾಗಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ ನಂತರ ಏನಿದು 'ಮಿಷನ್ ಶಕ್ತಿ' ಎಂಬುದು ವೈರಲ್ ಆಗಿದೆ.

ಹೌದು, ಇಂದು ಮಧ್ಯಾಹ್ನ 12.30 ಮಾತು ಆರಂಭಿಸಿದ ಪ್ರಧಾನಿ ಮೋದಿ, 'ಮಿಷನ್ ಶಕ್ತಿ' ಭಾರತ ಬಾಹ್ಯಾಕಾಶ ಶಕ್ತಿಯನ್ನು ಪ್ರಪಂಚದಲ್ಲೇ ನಾಲ್ಕನೇ ಸ್ಥಾನಕ್ಕೇರಿದ್ದೇವೆ ಎಂಬ ಸಂತಸದ ಸುದ್ದಿಯನ್ನು ಹಂಚಿಕೊಂಡರು. ಯೋಜನೆಯಲ್ಲಿ ಪಾಲುದಾರರಾದ ಇಸ್ರೋದ ಎಲ್ಲ ವಿಜ್ಞಾನಿಗಳಿಗೂ ನಾನು ಅಭಿನಂದನೆ ಸಲ್ಲಿಸಿ, ಈ ಮೂಲಕ ತಂತ್ರಜ್ಞಾನ ಆವಿಷ್ಕಾರ ಮತ್ತು ಉಪಯೋಗದಲ್ಲಿ ಭಾರತ ದೊಡ್ಡ ಸಾಧನೆ ಮಾಡಿದೆ ಎಂಬುದನ್ನು ತಿಳಿಸಿದರು. ಇದಾದ ನಂತರ ಮಿಷನ್ ಶಕ್ತಿ' ಎಂಬುದು ಏನು ಎಂಬುದು ಆನ್‌ಲೈನಿನಲ್ಲಿ ವೈರಲ್ ಆಯಿತು.

ಭಾರತವೀಗ ವಿಶ್ವದ 'ಸ್ಪೇಸ್ ಸೂಪರ್ ಪವರ್'!..ಕಾರಣವಾದ 'ಮಿಷನ್ ಶಕ್ತಿ' ಏನಿದು?

ಈವರೆಗೂ ಅಮೆರಿಕ, ರಷ್ಯಾ ಮತ್ತು ಚೀನಾ ಈ ಸಾಧನೆ ಮಾಡುವ ಮೂಲಕ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ ಎಂಬುದು ತಿಳಿದುಬಂದಾಗ 'ಮಿಷನ್ ಶಕ್ತಿ' ಬಗ್ಗೆ ಆನ್‌ಲೈನಿನಲ್ಲಿ ಮಾಹಿತಿ ದೊರೆತಿದೆ. ಬಾಹ್ಯಾಕಾಶದಲ್ಲಿ ವಿರೋಧಿ ಉಪಗ್ರಹ ಕ್ಷಿಪಣಿಯನ್ನು ಕೆಲವೇ ನಿಮಿಷದಲ್ಲಿ ಹೊಡೆದುರುಳಿಸುವ ಬಾಹ್ಯಾಕಾಶ ಶಕ್ತಿಶಾಲಿ ತಂತ್ರಜ್ಞಾನವನ್ನೇ 'ಮಿಷನ್ ಶಕ್ತಿ' ಎಂದು ಕರೆಯಲಾಗಿದೆ. ಹಾಗಾದಗಿ, ಏನಿದು 'ಮಿಷನ್ ಶಕ್ತಿ'?, ಇದರ ಸಾಮರ್ಥ್ಯ ಏನು ಎಂಬ ಪೂರ್ಣ ಮಾಹಿತಿ ಮಾಹಿತಿಯನ್ನು ಮುಂದೆ ಓದಿ ತಿಳಿಯಿರಿ.

 ಏನಿದು ಮಿಷನ್​ ಶಕ್ತಿ?

ಏನಿದು ಮಿಷನ್​ ಶಕ್ತಿ?

ಭೂಮಿಯಿಂದಲೇ ಲೇಸರ್​ ಕಿರಣಗಳನ್ನು ಬಾಹ್ಯಾಕಾಶಕ್ಕೆ ಬಿಟ್ಟು ಅನುಪಯುಕ್ತ ಉಪಗ್ರಹವನ್ನು ನಾಶ ಮಾಡುವುದನ್ನು ಮಿಷನ್​ ಶಕ್ತಿ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇತ್ತಿಚಿಗೆ ಭಾರತವು ಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗಿಸಿ ಕೆಳ ಕಕ್ಷೆಯಲ್ಲಿದ್ದ ಉಪಗ್ರಹವನ್ನು ಹೊಡೆದುರುಳಿಸಿದೆ. ಈ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.

3 ನಿಮಿಷದಲ್ಲಿ ಉಪಗ್ರಹ ನಾಶ!

3 ನಿಮಿಷದಲ್ಲಿ ಉಪಗ್ರಹ ನಾಶ!

'ಮಿಷನ್ ಶಕ್ತಿ' ತಂತ್ರಜ್ಞಾನದ ಮೂಲಕ ಬಾಹ್ಯಾಕಾಶದಲ್ಲಿ 300 ಕಿ.ಮೀ. ದೂರದಲ್ಲಿರುವ ಕಡಿಮೆ ಕಕ್ಷೆಯ ಉಪಗ್ರಹದ ಮೂಲಕ ಉಪಗ್ರಹವನ್ನು ಮೂರು ನಿಮಿಷದಲ್ಲಿ ಹೊಡೆದುರುಳಿಸುವ ಸಾಮರ್ಥ್ಯ ಇದೀಗ ಭಾರತಕ್ಕೆ ಇದೆ. ಇದು ಶತ್ರುಗಳದ್ದೇ ಆಗಿರಬಹುದು ಅಥವಾ ನಮ್ಮದೇ ಯಾವುದಾದರೂ ಉಪಗ್ರಹಗಳೇ ಆಗಿರಬಹುದು ಎಂದು ತಜ್ಞ ವಿಜ್ಞಾನಿಗಳು ತಿಳಿಸಿದ್ದಾರೆ.

ಮಿಷನ್​ ಶಕ್ತಿ ಉಪಯೋಗವೇನು?

ಮಿಷನ್​ ಶಕ್ತಿ ಉಪಯೋಗವೇನು?

ಉಡಾವಣೆ ಮಾಡುವ ಉಪಗ್ರಹಗಳು ತನ್ನ ಕೆಲಸ ಮುಗಿಸಿದ ನಂತರ ಅಥವಾ ತಂತ್ರಜ್ಞಾನದ ಸಮಸ್ಯೆಯಿಂದ ಉಪಗ್ರಹ ಅನುಪಯುಕ್ತವಾಗಬಹುದು. ಈ ಸಮಯದಲ್ಲಿ ಭೂಮಿಯಿಂದ ಅದನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಅದರಿಂದ ಇತರ ಉಪಗ್ರಹಗಳ ಕಾರ್ಯಾಚರಣೆಗೆ ಅಡಚಣೆಯಾಗಬಹುದು. ಇದಕ್ಕೆ ಪರಿಹಾರವೇ ಮಿಷನ್​ ಶಕ್ತಿ ತಂತ್ರಜ್ಞಾನ ಎಂದಿದ್ದಾರೆ.

ಮಿಷನ್​ ಶಕ್ತಿ ಸಾಮರ್ಥ್ಯ ಏನು?

ಮಿಷನ್​ ಶಕ್ತಿ ಸಾಮರ್ಥ್ಯ ಏನು?

ಕೆಟ್ಟ ಅಥವಾ ದ್ರೋಹಿಗಳ ಉಪಗ್ರಹವನ್ನು ಯಾವ ಸಮಯದಲ್ಲಿ ಅಂತರಿಕ್ಷದಲ್ಲಿ ಯಾವ ಕಕ್ಷೆಗೆ ಬರುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಿ ಲೇಸರ್​ ಕಿರಣಗಳನ್ನು ಭೂಮಿಯಿಂದಲೇ ಕಳುಹಿಸಿ ಉಪಗ್ರಹವನ್ನು ಸುಟ್ಟು ಬಿಡಬಹುದು. ನಮ್ಮ ಕೆಟ್ಟ ಉಪಗ್ರಹಗಳಿಂದ ಇತರ ಉಪಗ್ರಹಗಳ ಕಾರ್ಯಾಚರಣೆಗೆ ಅಡಚಣೆಯಾಗಬಹುದನ್ನು ಮಿಷನ್​ ಶಕ್ತಿ ಮೂಲಕ ತಡೆಯಬಹುದು.

ಜಾಗತಿಕವಾಗಿ ನಾಲ್ಕನೇ ರಾಷ್ಟ್ರ

ಜಾಗತಿಕವಾಗಿ ನಾಲ್ಕನೇ ರಾಷ್ಟ್ರ

ಬಾಹ್ಯಾಕಾಶದಲ್ಲಿ ವಿರೋಧ ಉಪಗ್ರಹ ಕ್ಷಿಪಣಿಯನ್ನು ನಿಮಿಷದಲ್ಲಿ ಹೊಡೆದುರುಳಿಸುವ ಬಾಹ್ಯಾಕಾಶ ಶಕ್ತಿಶಾಲಿ ರಾಷ್ಟ್ರಗಳ ಸಾಲಿಗೆ ಇಂದು ಭಾರತ ಸೇರಿದೆ. ಜಾಗತಿಕವಾಗಿ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿದೆ 1997ರಲ್ಲಿ ಇದೇ ರೀತಿಯ ಪರೀಕ್ಷೆಯನ್ನು ಅಮೆರಿಕ ಮಾಡಿತ್ತು, 2007 ಚೀನಾ ದೇಶ ಮಾಡಿದ್ದರೆ, ಅದಕ್ಕೂ ಮುನ್ನನೇ ರಷ್ಯಾ ಕೂಡ ಮಾಡಿ ಮುಗಿಸಿದೆ.

Best Mobiles in India

English summary
What is anti-satellite weapon India successfully tested under Mission Shakti?.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+