ಮಿಟಾಶಿಯ 55-ಇಂಚ್ ಕರ್ವ್ಡ್ 4K LED ಟಿವಿ ಭಾರತದಲ್ಲಿ ಬಿಡುಗಡೆ, ಬೆಲೆ ರೂ 79,990/-
ಮಿಟಾಶಿ ಯು ನೂತನ 55-ಇಂಚ್ ಕರ್ವ್ಡ್ 4K LED ಸ್ಮಾರ್ಟ್ ಟಿವಿಯನ್ನು ಭಾರತದಾದ್ಯಂತ ಲಾಂಚ್ ಮಾಡಿದ್ದು, ಬೆಲೆ ರೂ 79,990/-.
ನಮ್ಮ ದೇಶೀ ಇಲೆಕ್ಟ್ರಾನಿಕ್ ಉತ್ಪನ್ನಗಳ ಕಂಪೆನಿಯಾದ ಮಿಟಾಶಿ ದೇಶದಾದ್ಯಂತ ಬಿಡುಗಡೆ ಮಾಡಿದೆ ನೂತನ 55-ಇಂಚ್ 4K ಕರ್ವ್ಡ್ LED ಟಿವಿ. ರೂ 79,990/- ಬೆಲೆಯ ಈ ಟಿವಿ ದೇಶದಾದ್ಯಂತ ಎಲ್ಲಾ ಪ್ರಮುಖ ಆನ್ಲೈನ್ ಮತ್ತು ಆಫ್ಲೈನ್ ರಿಟೈಲ್ ಮಳಿಗೆಗಳಲ್ಲಿ ಲಭ್ಯವಿದೆ.

ಮಿಟಾಶಿಯ ಈ ಹೊಸ ದೂರದರ್ಶನ ಆಂಡ್ರಾಯ್ಡ್ ಬಳಸುತ್ತಿದ್ದು ಉತ್ತಮ ಫೀಚರ್ಗಳನ್ನು ಒಳಗೊಂಡಿದೆ.55-ಇಂಚ್ 4K LED ಡಿಸ್ಪ್ಲೇ ಹೊಂದಿರುವ ಈ ಟಿವಿ 3840X2160 ಪಿಕ್ಸೆಲ್ಸ್ ನ UHD ರೆಸೊಲ್ಯೂಶನ್ ಪಡೆದಿದೆ.ಅಲ್ಲದೆ ಇದರ ಡಿಸ್ಪ್ಲೇ 4,00,000:1 ರಷ್ಟು ಡೈನಾಮಿಕ್ ಕಾಂಟ್ರಾಸ್ಟ್ ರೇಶಿಯೋ ಕೂಡ ಹೊಂದಿದೆ.
ಇದರ ಡಿಸ್ಪ್ಲೇ ಪ್ಯಾನಲ್ ಅನ್ನು ಸ್ಯಾಮ್ಸಂಗ್ ತಯಾರಿಸಿದ್ದು ಉತ್ತಮ ಗುಣಮಟ್ಟದ ದೃಶ್ಯಾವಳಿಗಳನ್ನು ಇದು ನೀಡುತ್ತದೆ. ಇದರ ಡಿಸ್ಪ್ಲೇ ಕರ್ವ್ಡ್ ಆಗಿರುವುದರಿಂದ ಉತ್ತಮ ವೀಕ್ಷಣೆಯ ಅನುಭವ ನಿಮಗೆ ದೊರೆಯಲಿದೆ.
ಮಿಟಾಶಿಯ ಈ ಹೊಸ ದೂರದರ್ಶನದ ಡಿಸ್ಪ್ಲೇ ಹೆಚ್ಚಿನ ರಕ್ಷಣೆಗಾಗಿ ಟೆಂಪರ್ಡ್ ಗ್ಲಾಸ್ ಕವಚವನ್ನು ಹೊಂದಿದ್ದು ಇದೇ ಶ್ರೇಣಿಯಲ್ಲಿ ಲಭ್ಯವಿರುವ ಇತರ ದೂರದರ್ಶನಗಳಿಗಿಂತ ಇದು ಉತ್ತಮವಾಗಿದೆ.ಇದರ ದೃಶ್ಯಗಳು ಹೆಚ್ಚು ಕರಾರುವಕ್ಕಾಗಿ ಕಾಣಲಿದ್ದು ಹೆಚ್ಚಿನ ನಿಖರತೆಯನ್ನು ಹೊಂದಿದೆ.
ಮಿಟಾಶಿಯ ಈ ಹೊಸ ಟಿವಿ ಸ್ಮಾರ್ಟ್ ಟಿವಿ ಯಾಗಿದ್ದು, ಆಧುನಿಕ ಸ್ಮಾರ್ಟ್ ಟಿವಿಗಳಲ್ಲಿರುವ ಎಲ್ಲಾ ಆಯ್ಕೆಗಳು ಇಲ್ಲಿಯೂ ಲಭ್ಯವಿದೆ.USB ಮೂವಿ ಪ್ಲಗ್ ಆಂಡ್ ಪ್ಲೇ, HDMI ಇನ್ಪುಟ್, ಪಿಸಿ ಇನ್ಪುಟ್, ಬಿಲ್ಟ್-ಇನ್ ವೈಫೈ , ಸ್ಕ್ರೀನ್ ಮಿರರಿಂಗ್ ಮೊದಲಾದ ಆಯ್ಕೆಗಳು ಇಲ್ಲಿದೆ.
ಇದರಲ್ಲಿರುವ ಸ್ಕ್ರೀನ್-ಮಿರರಿಂಗ್ ಫೀಚರ್ ಬಳಸಿ ನೀವು ಮೊಬೈಲ್ನಲ್ಲಿ ನೋಡುತ್ತಿರುವ ವೀಡಿಯೋಗಳನ್ನು ಯಾವುದೇ ಅಡಚಣೆಯಿಲ್ಲದೆ ಸುಲಭವಾಗಿ ಟಿವಿಗೆ ರವಾನಿಸಬಹುದು.
ಮಿಟಾಶಿ ಯ ಈ ಹೊಸ ಟಿವಿ ಜೊತೆಗೆ ನಿಮಗೆ ದೊರೆಯಲಿದೆ ಉಚಿತ ಏರ್-ಮೌಸ್. ಇದನ್ನು ಬಳಸಿ ಟಿವಿ ಯನ್ನು ನೀವು ಆರಾಮವಾಗಿ ನ್ಯಾವಿಗೇಟ್ ಮಾಡಬಹುದು. ಅಲ್ಲದೆ ಮಿಟಾಶಿ ಈ ಹೊಸ ಟಿವಿ ಜೊತೆಗೆ ತನ್ನ ಗ್ರಾಹಕರಿಗೆ ನೀಡುತ್ತಿದೆ ಫ್ರೀ ವಾಲ್ ಮೌಂಟಿಂಗ್ ಸೌಲಭ್ಯ ಮತ್ತು 3-ವರ್ಷದ ವ್ಯಾರೆಂಟಿ ಕೂಡ.


Click it and Unblock the Notifications