ರೆಡ್ಮಿ 6 ಮತ್ತು 6ಎ ಫೋನ್‌ಗಳಿಗೆ ಸಿಕ್ಕಿತು ಎಂಐಯುಐ 11 ಅಪ್‌ಡೇಟ್!

|

ಇತ್ತೀಚಿಗಷ್ಟೇ ಮೊದಲ ಹಂತದ ಸಾಧನಗಳಿಗಗೆ ಎಂಐಯುಐ 11 ಅಪ್‌ಡೇಟ್ ರೋಲ್‌ಔಟ್ ಮಾಡಿದ ಶಿಯೋಮಿ ಇದೀಗ ಎರಡನೇ ಹಂತದ ಸಾಧನಗಳಿಗೆ ನವೀಕರಣವನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಶಿಯೋಮಿಯ ಸ್ವಾಮ್ಯದ ಇತ್ತೀಚಿನ ಆಂಡ್ರಾಯ್ಡ್ ಒಎಸ್ ಅಪ್‌ಡೇಟ್ ಕಂಪೆನಿಯ ಬಜೆಟ್ ಫೋನ್‌ಗಳಾದ ರೆಡ್ಮಿ 6 ಮತ್ತು 6ಎ ಎರಡೂ ಫೋನ್‌ಗಳಿಗೂ ದೊರೆತಿದ್ದು, ಈ ನವೀಕರಣದೊಂದಿಗೆ ರೆಡ್ಮಿ 6 ಮತ್ತು 6ಎ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ಆಪ್ಟಿಮೈಸ್ಡ್ ಆಧುನಿಕ ಯುಐ ವಿನ್ಯಾಸವನ್ನು ಪಡೆಯಲಿದ್ದಾರೆ.

ರೆಡ್‌ಮಿ 6

ಹೌದು, ರೆಡ್‌ಮಿ 6 ಮತ್ತು ರೆಡ್‌ಮಿ 6ಎ ಗಾಗಿ ಎಂಐಯುಐ 11 ಅಪ್‌ಡೇಟ್ ಹೊರಹೊಮ್ಮಿದ್ದು, ಕ್ರಮವಾಗಿ 508 ಎಮ್‌ಬಿ ಮತ್ತು 517 ಎಮ್‌ಬಿ ಗಾತ್ರದಲ್ಲಿದೆ. ನವೀಕರಣವು ಹೊಸ ಕನಿಷ್ಠ ವಿನ್ಯಾಸ, ತ್ವರಿತ ಪ್ರತ್ಯುತ್ತರಗಳು, ಹೊಸ ಡೈನಾಮಿಕ್ ಸೌಂಡ್ ಎಫೆಕ್ಟ್ಸ್, ಮಿ ಶೇರ್, ಫ್ಲೋಟಿಂಗ್ ಕ್ಯಾಲ್ಕುಲೇಟರ್, ನವೀಕರಿಸಿದ ಮಿ ಫೈಲ್ ಮ್ಯಾನೇಜರ್, ಸ್ಟೆಪ್ಸ್ ಟ್ರ್ಯಾಕರ್ಸ್ ಮತ್ತು ಹೆಚ್ಚಿನದನ್ನು ಒಳಗೊಂಡಿರುವ ಹಲವಾರು ಹೊಸ ವೈಶಿಷ್ಟ್ಯಗಳನ್ನು ತಂದಿದೆ ಮತ್ತು ಇದು ಅಕ್ಟೋಬರ್‌ನ ಭದ್ರತಾ ಪ್ಯಾಚ್ ಅನ್ನು ಸಹ ಒಳಗೊಂಡಿದೆ ಎಂದು ತಿಳಿದುಬಂದಿದೆ.

ನವೀಕರಣ

ಎರಡನೇ ಹಂತದ ಸಾಧನಗಳಿಗೆ ನವೀಕರಣವನ್ನು ಪ್ರಸ್ತುತ ಬೀಟಾ ರೋಲ್‌ಔಟ್‌ನಂತೆ ತೋರಿಸಲಾಗಿದೆ. ದೋಷಗಳ ಯಾವುದೇ ಚಿಹ್ನೆ ಇಲ್ಲದೆ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಿದ ನಂತರ ಬಳಕೆದಾರರು ತಮ್ಮ ಸಾಧನಗಳಲ್ಲಿ ನವೀಕರಣವನ್ನು ಪಡೆಯಬಹುದು ಅಥವಾ ಈಗಾಗಲೇ ಅಪ್‌ಡೇಟ್ ಪಡೆದಿರಬಹುದು ಎಂದು ವರದಿಗಳು ಹೇಳಿವೆ. ಒಂದು ವೇಳೆ ನೀವು ಈಗಾಲೇ ಈ ನೂತನ ಅಪ್‌ಡೇಟ್ ಅನ್ನು ಪಡೆದಿದ್ದರೆ, ನಿಮ್ಮ ಸ್ಮಾರ್ಟ್‌ಫೋನನ್ನು ಅಪ್‌ಡೇಟ್ ಮಾಡುವ ಮೂಲಕ ಎಂಐಯುಐ 11 ವೈಶಿಷ್ಟ್ಯಗಳನ್ನು ಪಡೆದುಕೊಳ್ಳಬಹುದಾಗಿದೆ

ರೆಡ್ಮಿ 6

ನೆನಪಿಸಿಕೊಳ್ಳಬೇಕಾದರೆ, ರೆಡ್ಮಿ 6 ಮತ್ತು 6 ಎ ಎರಡನ್ನೂ 5.45 ಇಂಚಿನ ಡಿಸ್ಪ್ಲೇಯೊಂದಿಗೆ 740 x 1440 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 3,000 mAh ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಾಗಿದೆ. ಎರಡರಲ್ಲಿ, ರೆಡ್‌ಮಿ 6 ಅನ್ನು ಮೀಡಿಯಾ ಟೆಕ್ ಹೆಲಿಯೊ ಪಿ 22 ಎಸ್‌ಒಸಿ ನಿಯಂತ್ರಿಸುತ್ತಿದ್ದು, 3 ಜಿಬಿ RAM ಮತ್ತು 32 ಜಿಬಿ / 64 ಮೆಮೊರಿಯೊಂದಿಗೆ ಜೋಡಿಯಾಗಿದೆ. ಇದು ಹಿಂಭಾಗದಲ್ಲಿ 12 ಎಂಪಿ ಮತ್ತು 5 ಎಂಪಿ ಸಂವೇದಕವನ್ನು ಹೊಂದಿದ್ದರೆ, ಮುಂಭಾಗದಲ್ಲಿ ಹ್ಯಾಂಡ್‌ಸೆಟ್ 5 ಎಂಪಿ ಲೆನ್ಸ್ ಅನ್ನು ಪ್ಯಾಕ್ ಮಾಡುತ್ತದೆ.

 ರೆಡ್‌ಮಿ 6 ಎ

ಮತ್ತೊಂದೆಡೆ, ರೆಡ್‌ಮಿ 6 ಎ ಮೀಡಿಯಾ ಟೆಕ್ ಹೆಲಿಯೊ ಎ 22 ಚಿಪ್‌ಸೆಟ್ ಅನ್ನು ಬಳಸುತ್ತದೆ, ಇದರೊಂದಿಗೆ 2 ಜಿಬಿ RAM ಮತ್ತು 16 ಜಿಬಿ / 32 ಜಿಬಿ ಮೆಮೊರಿ ಇದೆ. ಇದು 13 ಎಂಪಿ ರಿಯರ್ ಸೆನ್ಸಾರ್ ಮತ್ತು 5 ಎಂಪಿ ಸೆಲ್ಫಿ ಸ್ನ್ಯಾಪರ್ ಅನ್ನು ಹೊಂದಿದೆ. 2 ಜಿಬಿ RAM / 16GB ROM ಮತ್ತು 2GB RAM / 32GB ROM ಆಯ್ಕೆಗಳಿಗಾಗಿ ಇದರ ಬೆಲೆ ಮೌಲ್ಯಗಳು ರೂ. 5,999 ಮತ್ತು ರೂ. 6,999 ರೂ.ಗಳಾದರೆ, ರೆಡ್ಮಿ 6 ಬೇಸ್ ರೂಪಾಂತರಕ್ಕೆ 7,299 ರೂ. ಹಾಗೂ ಅದರ 3 ಜಿಬಿ RAM / 64 ಜಿಬಿ ರೂಪಾಂತರವು 7,899. ರೂ. ಬೆಲೆ ಹೊಂದಿದೆ.

Best Mobiles in India

English summary
With the MIUI 11 update, Redmi 6, 6A users will have a new optimized modern UI design on their smartphones. The proprietary skin comes with nifty additions

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X