Home
ಸುದ್ದಿಜಾಲ

Mivi ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಅನಾವರಣ! ಬರೋಬ್ಬರಿ 55 ಗಂಟೆಗಳ ಪ್ಲೇ ಬ್ಯಾಕ್‌ ಟೈಂ ವಿಶೇಷ!

ಮಿವಿ ಕಂಪೆನಿಯ ಇಯರ್‌ಬಡ್ಸ್‌ಗಳಿಗೆ ಭಾರತದಲ್ಲಿ ಉತ್ತಮ ಮಾರುಕಟ್ಟೆಯಿದೆ. ಸ್ಟೈಲಿಶ್‌ ಡಿಸೈನ್‌ನಿಂದಾಗಿ ಮಿವಿ ಇಯರ್‌ಬಡ್ಸ್‌ಗಳು ಬಹುಬೇಗನೆ ಯುವಜನತೆಯನ್ನು ಸೆಳೆಯುವ ಗುಣವನ್ನು ಹೊಂದಿವೆ. ಅದರ ಮುಂದುವರೆದ ಭಾಗವಾಗಿ ಮಿವಿ ಕಂಪೆನಿ ಹೊಸದಾಗಿ ಮಿವಿ ಡ್ಯುಯೋಪಾಡ್ಸ್‌ A750 ಅನ್ನು ಬಿಡುಗಡೆ ಮಾಡಿದೆ.

ಹೌದು, Mivi DuoPods A750 ಇಯರ್‌ಬಡ್ಸ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಇದು ಹೈ-ಎಂಡ್ ಪ್ರೀಮಿಯಂ ಗ್ಲಾಸ್ ಫಿನಿಶ್ ಕೇಸ್ ಮತ್ತು ಪಾಡ್‌ಗಳ ಮೇಲೆ ಉನ್ನತ ದರ್ಜೆಯ ಮೆಟಾಲಿಕ್ ಫಿನಿಶ್ ಅನ್ನು ಹೊಂದಿದೆ. ಜೊತೆಗೆ ಈ ಪಾಡ್ಸ್‌ ಪ್ರೀಮಿಯಂ ಆಗಿ ಕಾಣುವಂತೆ ಡಿಸೈನ್‌ ಮಾಡಲಾಗಿದೆ. ಇವುಗಳನ್ನು ಪ್ಲಗ್ ಇನ್ ಮಾಡಿದಾಗ ಆರಾಮದಾಯಕ ಫಿಟ್ ಅನ್ನು ನೀಡಲಿವೆ. ಹಾಗಾದ್ರೆ ಈ ಇಯರ್‌ಬಡ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Mivi ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಅನಾವರಣ! 55 ಗಂಟೆಗಳ ಪ್ಲೇ ಬ್ಯಾಕ್‌ ಟೈಂ!

ಮಿವಿ ಡ್ಯುಯೋಪಾಡ್ಸ್‌ A750 ಇಯರ್‌ಬಡ್ಸ್‌ ಕಸ್ಟಮ್ ಆಂಪ್ಲಿಫೈಯರ್‌ಗಳೊಂದಿಗೆ 13mm ಎಲೆಕ್ಟ್ರೋಪ್ಲೇಟೆಡ್ ಡೀಪ್ ಡ್ರೈವರ್‌ಗಳನ್ನು ಹೊಂದಿದೆ. ಇದು ಪವರ್‌ಫುಲ್‌ ಗರಿಷ್ಠಗಳು, ಉತ್ತಮ ಮಧ್ಯಗಳು ಮತ್ತು ಕ್ರಿಸ್ಪ್‌ ಲೋಸ್‌ ಅನ್ನು ನೀಡಲಿದೆ. ಜೊತೆಗೆ ಇಯರ್‌ಬಡ್ಸ್‌ ಎಕೋ ಸಿಸ್ಟಂ ಅನ್ನು ತೊಡೆದುಹಾಕಲು AI-ENC ನಿಂದ ಚಾಲಿತವಾಗಿವೆ. ಇದಲ್ಲದೆ ಕರೆಗಳಲ್ಲಿ ಸ್ಪಷ್ಟ ಸಂದೇಶಗಳನ್ನು ತಲುಪಿಸಲು ನಿಮಗೆ ಸಹಾಯ ಮಾಡಲಿವೆ.

Mivi ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಅನಾವರಣ! 55 ಗಂಟೆಗಳ ಪ್ಲೇ ಬ್ಯಾಕ್‌ ಟೈಂ!

ಮಿವಿ ಡ್ಯುಯೋಪಾಡ್ಸ್‌ A750 ಇಯರ್‌ಬಡ್ಸ್‌ ಸ್ವಿಫ್ಟ್ ಚಾರ್ಜ್ ತಂತ್ರಜ್ಞಾನವನ್ನು ಹೊಂದಿದೆ. ಇದು 55 ಗಂಟೆಗಳ ಸಂಯೋಜಿತ ಪ್ಲೇಟೈಮ್ ಅನ್ನು ನೀಡಲಿದ್ದು, ಟೈಪ್ C ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಇದರಿಂದ ಈ ಇಯರ್‌ಬಡ್ಸ್‌ ಕೇವಲ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 500 ನಿಮಿಷಗಳ ಪ್ಲೇಟೈಮ್ ಅನ್ನು ನೀಡಲಿದೆ. ಜೊತೆಗೆ AAC ಬ್ಲೂಟೂತ್ ಕೊಡೆಕ್ ಬೆಂಬಲ ಮತ್ತು ಡ್ಯುಯಲ್ ಕನೆಕ್ಷನ್ ಮೋಡ್‌ಗೆ ಸಹ ಬೆಂಬಲವನ್ನು ಹೊಂದಿದೆ.

Mivi ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಅನಾವರಣ! 55 ಗಂಟೆಗಳ ಪ್ಲೇ ಬ್ಯಾಕ್‌ ಟೈಂ!

ಮಿವಿ ಡ್ಯುಯೋಪಾಡ್ಸ್‌ A750 ಇಯರ್‌ಬಡ್ಸ್‌ ಮಲ್ಟಿ-ಕನೆಕ್ಟಿವಿಟಿಯನ್ನ ಬೆಂಬಲಿಸಲಿದ್ದು, ಬ್ಲೂಟೂತ್ 5.3ಯನ್ನು ಹೊಂದಿದೆ. ಇದು 240 ಮೀ ವ್ಯಾಪ್ತಿಯವರೆಗೆ ಬೆಂಬಲವನ್ನು ನೀಡಲಿದೆ. ಜೊತೆಗೆ ಈ ಇಯರ್‌ಬಡ್ಸ್‌ ಅನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಿಸಲಾಗಿದ್ದು, ಒಂದು ವರ್ಷದ ಖಾತರಿಯೊಂದಿಗೆ ಲಭ್ಯವಾಗಲಿದೆ.

ಬೆಲೆ ಮತ್ತು ಲಭ್ಯತೆ
ಮಿವಿ ಡ್ಯುಯೋಪಾಡ್ಸ್‌ A750 ಇಯರ್‌ಬಡ್ಸ್‌ ಭಾರತದಲ್ಲಿ 1,399ರೂ ಬೆಲೆಯನ್ನು ಪಡೆದುಕೊಂಡಿದೆ. ಇದು ನವೆಂಬರ್‌ 30ರಿಂದ ಖರೀದಿಗೆ ಲಭ್ಯವಾಗಲಿದೆ. ಇದನ್ನು ನೀವು ನೀಲಿ, ಕಪ್ಪು, ಹಸಿರು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

ಇನ್ನು ಮಿವಿ ಕಂಪೆನಿ ಕಳೆದ ವರ್ಷ ಭಾರತದಲ್ಲಿ ತನ್ನ ಮೊದಲ ಸ್ಮಾರ್ಟ್‌ವಾಚ್‌ ಮಿವಿ ಮಾಡೆಲ್ ಇ (Mivi Model E Smartwatch) ಅನ್ನು ಪರಿಚಯಿಸಿತ್ತು. ಈ ಸ್ಮಾರ್ಟ್‌ವಾಚ್‌ SpO2 ಮಾನಿಟರ್, ಸ್ಲೀಪ್ ಟ್ರ್ಯಾಕರ್ ಮತ್ತು ಇನ್ನಿತರೆ ಆರೋಗ್ಯ ಸಂಬಂಧಿ ಮಾಹಿತಿಯನ್ನು ಟ್ರ್ಯಾಕ್‌ ಮಾಡುತ್ತದೆ. ಇನ್ನು ಮಿವಿ ಮಾಡೆಲ್ ಇ ಸ್ಮಾರ್ಟ್‌ವಾಚ್‌ 1.69 ಇಂಚಿನ TFT ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 240 x 280 ಪಿಕ್ಸೆಲ್‌ಗಳ ರೆಸಲ್ಯೂಶನ್ ಜೊತೆಗೆ 500 ನಿಟ್ಸ್ ಬ್ರೈಟ್‌ನೆಸ್ ನೀಡಲಿದೆ. ಹಾಗೆಯೇ 50 ಕ್ಲೌಡ್ ವಾಚ್ ಫೇಸ್‌ ಅನ್ನು ಇದು ಪಡೆದುಕೊಂಡಿದೆ. ಇನ್ನು ಪ್ರೀಮಿಯಂ ಸ್ಟ್ರಾಪ್ ಮತ್ತು ಮೆಟಾಲಿಕ್ ಫಿನಿಶ್‌ನೊಂದಿಗೆ ವಿಶೇಷ ಆಕರ್ಷಣೆ ಪಡೆದುಕೊಂಡಿದೆ.

ಈ ಸ್ಮಾರ್ಟ್‌ವಾಚ್‌ ಹೃದಯ ಬಡಿತದ ಸಂವೇದಕ, SpO2 ಮಾನಿಟರ್, ಸ್ಲೀಪ್ ಟ್ರ್ಯಾಕರ್, ಸ್ಟೆಪ್ಸ್ ಕೌಂಟರ್ ಮತ್ತು ಮಹಿಳೆಯರ ಆರೋಗ್ಯ ಸಂಬಂಧಿ ವಿಷಯದ ಟ್ರ್ಯಾಕಿಂಗ್‌ ಸೇರಿದಂತೆ ಇನ್ನಿತರೆ ಮಾಹಿತಿ ನೀಡಲಿದೆ. ಹಾಗೆಯೇ ಯಾವುದೇ ದೈಹಿಕ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಇದು ಅನುಕೂಲಕರ. ಅಂತೆಯೇ 120 ಸ್ಪೋರ್ಟ್ಸ್‌ಮೋಡ್‌ ಆಯ್ಕೆಯನ್ನು ಹೊಂದಿದ್ದು, ಮಿವಿ ಆಪ್‌ ಮೂಲಕವೂ ನೀವು ವಿವರವನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Mivi DuoPods A750 earbuds launched in india: Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+