Just In
- 10 hrs ago
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- 12 hrs ago
ಜಿಯೋದ ಈ ಪ್ಲ್ಯಾನ್ ಸಖತ್ ಆಗಿದೆ!..ರೀಚಾರ್ಜ್ ಮಾಡಬೇಕಾ?.ಬೇಡವೇ?
- 12 hrs ago
ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್ವಾಚ್; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?
- 14 hrs ago
Vivo X90 Pro : ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್; ಖರೀದಿಗೆ ಕ್ಯೂ ಖಚಿತ!
Don't Miss
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Movies
Ramachari Serial: ವಿಹಾನ್ ಬಳಿ ಸತ್ಯ ಹೇಳಿಬಿಟ್ಟ ಚಾರು!
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಮೊಬೈಲ್ ನಂಬರ್ ಪೋರ್ಟ್' ಮಾಡಿಸುವುದರಲ್ಲಿ ಕರ್ನಾಟಕವೇ ನಂ.1!!
ಒಂದು ಟೆಲಿಕಾಂ ಕಂಪೆನಿಯನ್ನು ಬಿಟ್ಟು ಮತ್ತೊಂದು ಟೆಲಿಕಾಂ ಕಂಪೆನಿಯ ಸೇವೆ ಪಡೆಯಲು ಇರುವ ಮೊಬೈಲ್ ನಂಬರ್ ಪೋರ್ಟಬಿಲಿಟಿ (MNP) ಸೇವೆ ಬಳಕೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಅದರಲ್ಲೂ ಇಡೀ ದೇಶದಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು 'ಮೊಬೈಲ್ ಪೋರ್ಟೆಬಲಿಟಿ' ವಿನಂತಿಗಳು ಬಂದಿವೆ ಎಂದು ಇತ್ತೀಚಿನ ಟ್ರಾಯ್ ರಿಪೋರ್ಟ್ ತಿಳಿಸಿದೆ.
ಹೌದು, ಭಾರತದಲ್ಲಿ ಹರಿಯಾಣದಲ್ಲಿ ಮೊದಲು ಜಾರಿಗೊಳಿಸಲಾಗಿದ್ದ ಅಂತರ್ ಸೇವಾ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ಇಂದು ದೇಶದಾದ್ಯಂತ ಹೆಚ್ಚು ಬಳಕೆಯಲ್ಲಿದೆ. ಪ್ರತಿವರ್ಷ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ಅಂಕಿ ಸಂಖ್ಯೆಗಳು ಹೆಚ್ಚಾಗಿದ್ದು, 2018ರ ಜನವರಿಯಲ್ಲಿ 411.98 ಮಿಲಿಯನ್ ಜನರು ಈ ಸೇವೆ ಬಳಸಿದ್ದರೆ, 2019ರಲ್ಲಿ ಇದು ಮತ್ತಷ್ಟು ಏರಿಕೆಯಾಗಿದೆ.

ಮೊಬೈಲ್ ಸಂಖ್ಯೆಯನ್ನು ಉಳಿಸಿಕೊಂಡು ಮತ್ತೊಂದು ಕಂಪೆನಿಯಿಂದ ಸೇವೆ ಪಡೆಯುವ ಈ ವಿಶೇಷ ಆಯ್ಕೆಗೆ ಜನರು ಹೆಚ್ಚು ಒಲವು ತೋರುತ್ತಿದ್ದು, ಪ್ರತಿವರ್ಷ ಮೊಬೈಲ್ ಪೋರ್ಟಬಿಲಿಟಿ ಸೇವೆ ಬಳಸುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ. 2018ರ ಜ.ವೇಳೆಗೆ 411.98 ಮಿಲಿಯನ್ ಹಾಗೂ 2019ರ ಜ. ವೇಳೆಗೆ 417.82 ಮಿಲಿಯನ್ ಬಳಕೆದಾರರು ಈ ಸೇವೆಯನ್ನು ಬಳಸಿದ್ದಾರೆ.
ಇನ್ನು ದೇಶದ ಮೊಬೈಲ್ ನಂಬರ್ ಪೋರ್ಟೆಬಲಿಟಿ (MNP) ವಲಯವನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಉತ್ತರ ಮತ್ತು ಪಶ್ಚಿಮ ಭಾರತ ಹಾಗೂ (ದಕ್ಷಿಣ ಮತ್ತು ಪೂರ್ವ ಭಾರತ ಎಂದು ಗುರುತಿಸಲಾಗಿದೆ. ಈ ಎರಡೂ ವಿಭಾಗಗಳಲ್ಲಿಯೂ ಕರ್ನಾಟಕ (ಸುಮಾರು 39.18 ಮಿಲಿಯನ್) ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡು ಎರಡನೇ ಸ್ಥಾನ ಪಡೆದಿದೆ.

ಪೋರ್ಟಬಿಲಿಟಿ ನಿಯಮದಲ್ಲಿ ಬದಲಾವಣೆಯಾಗಿದ್ದು, ಈಗ ಕೇವಲ ಎರಡೇ ದಿನಗಳಲ್ಲಿ ನೆಟ್ವರ್ಕ್ ಬದಲಿಸಿಕೊಳ್ಳಬಹುದಾಗಿದೆ. ಪೋರ್ಟ್ ಮಾಡಿಸುವ ವೇಳೆ ಸೇವೆ ಸ್ಥಗಿತದ ಭಯ ಹೊಂದಿದ್ದ ಗ್ರಾಹಕರಿಗೆ ಈಗ ನಿರಾಳತೆಯಾಗಿದೆ ಹಾಗಾದರೆ, ಒಂದು ಟೆಲಿಕಾಂ ಕಂಪೆನಿಯಿಂದ ಮತ್ತೊಂದು ಕಂಪೆನಿಗೆ ಪೋರ್ಟ್ ಆಗುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

"1900" ಗೆ ಮೆಸೇಜ್ ಮಾಡಿ.
- ಒಂದು ಟೆಲಿಕಾಂ ಕಂಪೆನಿಯಿಂದ ಮತ್ತೊಂದು ಟೆಲಿಕಾಂ ಕಂಪೆನಿಗೆ ಪೋರ್ಟ್ ಆಗಲು, ನಿಮ್ಮ ಮೊಬೈಲ್ ಸಂಖ್ಯೆಯಿಂದ 'PORT' ಎಂದು ದಪ್ಪ ಅಕ್ಷರಗಳಲ್ಲಿ ಟೈಪ್ ಮಾಡಿ. ನಂತರ ಒಂದು ಸ್ಪೇಸ್ ಬಿಟ್ಟು ನಿಮ್ಮ ಪ್ರಸ್ತುತ ಬಳಸುತ್ತಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ. ನಂತರ "1900"ಗೆ ಮೆಸೇಜ್ ಮಾಡಿ. ಉದಾ: (PORT 84960**522)

"1901" ನಂಬರ್‌ನಿಂದ ಮೆಸೇಜ್ ಬರುತ್ತದೆ.
ನೀವು ಹೀಗೆ (PORT 84960**522) ಪೋರ್ಟ್ ಎಂದು ''1900"ಗೆ ಮೆಸೇಜ್ ಮಾಡಿದ ನಂತರ, ನಿಮ್ಮ ಮಾಹಿತಿ ಸರಿಯಾಗಿದ್ದಲ್ಲಿ ನಿಮ್ಮ ಮೊಬೈಲ್‌ಗೆ ತಕ್ಷಣವೇ ಸಂದೇಶವೊಂದು ವಾಪಸ್ ಬರಲಿದೆ. ನೀವು ''1900" ಮೆಸೇಜ್ ಸೆಂಡ್ ಮಾಡಿದರೆ, "1901" ನಂಬರ್‌ನಿಂದ ನಿಮ್ಮ ಮನವಿಯನ್ನು ವೆರಿಫೈ ಮಾಡಲು ಟೆಲಿಕಾಂ ಕಂಪೆನಿಯು ಸಂದೇಶದ ಮೂಲಕ ತಿಳಿಸುತ್ತದೆ.

ಯುನಿಕ್ ಪೋರ್ಟಲ್ ಕೋಡ್ ಪಡೆಯಿರಿ.
ನೀವು ಸಿಮ್ ಬಳಸುತ್ತಿರುವ ಟೆಲಿಕಾಂ ನಿಮ್ಮ ಮನವಿಯನ್ನು ವೆರಿಫೈ ಮಾಡಿದ ನಂತರ, ನಿಮಗೆ ಕೆಲವು ಗಂಟೆಗಳ ಒಳಗಾಗಿ ಯುನಿಕ್ ಪೋರ್ಟಲ್ ಕೋಡ್ ಬರುತ್ತದೆ. ಈ ಕೋಡ್ ಮೂಲಕ ನೀವು ನಿಮ್ಮ ಸಿಮ್ ಅನ್ನು ಇತರೆ ಯಾವುದೇ ಟೆಲಿಕಾಂ ಕಂಪೆನಿಯೊಂದಿಗೆ ಬದಲಾಯಿಸಿಕೊಳ್ಳಬಹುದಾಗಿದೆ. ಈಗ ಈ ಪ್ರಕ್ರಿಯೆ ಅತ್ಯಂತ ಸುಲಭವಾಗಿದೆ.

ಟೆಲಿಕಾಂ ಸ್ಟೋರ್‌ಗೆ ಭೇಟಿ ನೀಡಿ.
ಒಮ್ಮೆ ನೀವು ಈ ಯುನಿಕ್ ಪೋರ್ಟಲ್ ಕೋಡ್ ಪಡೆದ ನಂತರ, ನಿಮ್ಮ ಎರಡು ಭಾವಚಿತ್ರ ಮತ್ತು ನಿಮ್ಮ ಆಧಾರ್ ಐಡಿ ತೆಗೆದುಕೊಂಡು ನೀವು ಪೋರ್ಟ್ ಆಗಬೇಕಿರುವ ಯಾವುದೇ ಟೆಲಿಕಾಂ ಸ್ಟೋರ್‌ಗೆ ಭೇಟಿ ನೀಡಿ( ಸಾಮಾನ್ಯ ಅಂಗಡಿಗಳಲ್ಲೂ ಸಾಧ್ಯ). ನಂತರ ಅವರಿಗೆ ನೀವು ಪಡೆದಿರುವ ಯುನಿಕ್ ಪೋರ್ಟಲ್ ಕೋಡ್ ನೀಡಿ ಪೋರ್ಟ್ ಮಾಡುವಂತೆ ಕೇಳಿಕೊಳ್ಳಿ.

ನೀವು ಪೋರ್ಟ್ ಆಗುತ್ತೀರಾ!
ನೀವು ಸೂಚಿಸಿದ ಬೇರೊಂದು ಟೆಲಿಕಾಂ ಕಂಪೆನಿಗೆ ಬದಲಾಯಿಸಲು ಯುನಿಕ್ ಪೋರ್ಟಲ್ ಕೋಡ್ ಮತ್ತು ನಿಮ್ಮ ಆಧಾರ್ ಐಡಿಯನ್ನು ನೀಡಿದ ನಂತರ ನಿಮ್ಮ ಮೊಬೈಲ್ ನಂಬರ್ ಬೇರೊಂದು ಟೆಲಿಕಾಂ ಕಂಪೆನಿಗೆ ಪೋರ್ಟ್ ಆಗುತ್ತದೆ. ಮೊದಲು ಈ ಪ್ರಕ್ರಿಯೆ ಮುಗಿಯಲು ಹೆಚ್ಚು ದಿನ ಬೇಕಾಗುತ್ತಿದ್ದು, ಆದರೆ, ಈಗ ಕೇವಲ ಎರಡು ದಿನಗಳು ಸಾಕು.!
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470