Home
ಸುದ್ದಿಜಾಲ

ತ್ವರಿತವಾಗಿ ₹60 ಸಾವಿರ ಸಾಲ ನೀಡಲಿದೆ ಮೊಬಿಕ್ವಿಕ್‌..!

ನಿಮಗೆ ಸಾಲ ಬೇಕಿತ್ತಾ? ಬ್ಯಾಂಕಿಗೆ ಓಡಾಡಿ ಓಡಾಡಿ ಸುಸ್ತಾಗಿದೆಯಾ? ಎಲ್ಲಿ ತಿರುಗಿದ್ರೂ ಒಂದು ರೂಪಾಯಿಯೂ ಸಾಲ ಸಿಗುತ್ತಿಲ್ಲವಾ? ಹಾಗಾದ್ರೆ ಚಿಂತಿಸಬೇಡಿ. ನಿಮ್ಮ ಸಹಾಯಕ್ಕೆ ಮೊಬಿಕ್ವಿಕ್‌ ಬರಲಿದೆ. ಕ್ಷಣಮಾತ್ರದಲ್ಲಿ ಅಂದರೆ ಕೇವಲ 90 ಸೆಕೆಂಡ್ ನಲ್ಲಿ ನಿಮ್ಮ ಅಕೌಂಟಿಗೆ 60,000 ರೂಪಾಯಿ ಸಾಲವನ್ನು ಮೊಬಿಕ್ವಿಕ್‌ ನೀಡಲಿದೆ. ಆಶ್ಚರ್ಯವಾಗುತ್ತಿದೆಯಾ? ಹಾಗಾದ್ರೆ ಮುಂದೆ ಓದಿ.

ತ್ವರಿತವಾಗಿ ₹60 ಸಾವಿರ ಸಾಲ ನೀಡಲಿದೆ ಮೊಬಿಕ್ವಿಕ್‌..!

ಡಿಜಿಟಲ್ ಫೈನಾನ್ಶಿಯಲ್ ಸೇವೆಯ ಫ್ಲಾಟ್ ಫಾರ್ಮ್ ಆಗಿರುವ ಮೊಬಿಕ್ವಿಕ್‌ ತನ್ನ ಹೊಸ ಪ್ರೊಡಕ್ಟ್ "ಬೂಸ್ಟ್" ನ್ನು ಬಿಡುಗಡೆಗೊಳಿಸುವ ಬಗ್ಗೆ ಪ್ರಕಟಣೆ ನೀಡಿದೆ. ಇದು ಕ್ಷಿಪ್ರ ಸಾಲ(ಇನ್ಸೆಂಟ್ ಲೋನ್) ಕ್ಕೆ ಅನುಮತಿ ಮತ್ತು ದರ ವಿತರಣೆಯನ್ನು ಗ್ರಾಹಕರಿಗೆ ಮಾಡುವ ವಿಭಿನ್ನ ಆಫರ್ ನ್ನು ನೀಡಲಿದೆ.

60,000 ರುಪಾಯಿ ವರೆಗಿನ ಸಾಲ

60,000 ರುಪಾಯಿ ವರೆಗಿನ ಸಾಲ

ಇದು ಕ್ರೆಡಿಟ್ ವಿತರಣೆಯ ಮೊದಲ ಪ್ರೊಡಕ್ಟ್ ಆಗಿದ್ದು, ಇಲ್ಲಿ 60,000 ರುಪಾಯಿ ವರೆಗಿನ ಸಾಲದ ವಿತರಣೆ ನಡೆಯುತ್ತದೆ. ಈ ಇಷ್ಟು ಮೊತ್ತದ ಸಾಲ ಪಡೆಯಲು ಬೇಕಾಗುವ ಸಮಯ ಕೇವಲ 90 ಸೆಕೆಂಡ್ ಗಳು ಅಂದರೆ ನಿಮಗೆ ಆಶ್ಚರ್ಯವಾಗಬಹುದು.

ಮೊಬಿಕ್ವಿಕ್‌ ಇದಕ್ಕಾಗಿ ಹಲವು ಎನ್ ಬಿಎಫ್ ಸಿ ಗಳ ಜೊತೆ ಕೈಜೋಡಿಸಿದ್ದು ತನ್ನ ಗ್ರಾಹಕರಿಗೆ ಈ ಸಾಲದ ಸೇವೆಯನ್ನು ಒದಗಿಸಿಕೊಡಲಿದೆ.

ಮೊದಲ ವ್ಯಾಲೆಟ್ ಪ್ಲೇಯರ್:

ಮೊದಲ ವ್ಯಾಲೆಟ್ ಪ್ಲೇಯರ್:

ಮೊಬಿಕ್ವಿಕ್‌ ಹೀಗೆ ಬಳಕೆದಾರರ ಮೊಬೈಲ್ ವ್ಯಾಲೆಟ್ ಗೆ ಸಾಲ ವಿತರಣೆಯನ್ನು ಮಾಡುವ ಮೊದಲ ವ್ಯಾಲೆಟ್ ಪ್ಲೇಯರ್ ಆಗಿದೆ.

ಕ್ರಾಂತಿಗೆ ಕಾರಣವಾಗುತ್ತಾ ಮೊಬಿಕ್ವಿಕ್‌?

ಕ್ರಾಂತಿಗೆ ಕಾರಣವಾಗುತ್ತಾ ಮೊಬಿಕ್ವಿಕ್‌?

ಮೊಬಿಕ್ವಿಕ್‌ ನ ಕೋಫೌಂಡರ್ ಆಗಿರುವ ಉಪಾಸನ ಟಾಕು ಅವರ ಹೇಳುವಂತೆ " ಈ ರೀತಿ ಸಾಲ ಸೌಲಭ್ಯ ಕೊಡುವ ಭಾರತದ ಮೊದಲ ವ್ಯವಸ್ಥೆ ಮೊಬಿಕ್ವಿಕ್‌ ಆಗಿದ್ದು ಒಂದು ಕ್ರಾಂತಿಯನ್ನು ಇದು ಸೃಷ್ಟಿ ಮಾಡಲಿದೆ. ಭಾರತದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯೂ ಕೂಡ ಈ ಕ್ಷಿಪ್ರ ಸಾಲವನ್ನು ಮೊಬಿಕ್ವಿಕ್‌ ಮೂಲಕ ಪಡೆಯಲು ಸಾಧ್ಯವಾಗುತ್ತದೆ. ಕೇವಲ 90 ಸೆಕೆಂಡ್ ಗಳಲ್ಲಿ ಈ ಸಾಲ ಸೌಲಭ್ಯವು ಗ್ರಾಹಕರನ್ನು ಮೊಬಿಕ್ವಿಕ್‌ ಆಪ್ ಮೂಲಕ ತಲುಪುತ್ತದೆ" ಎನ್ನುತ್ತಾರೆ.

ಸಾಲ ನೀಡುವುದಕ್ಕೆ 1 ಲಕ್ಷ ಜನ ತಯಾರು

ಸಾಲ ನೀಡುವುದಕ್ಕೆ 1 ಲಕ್ಷ ಜನ ತಯಾರು

" ಪ್ರಾರಂಭಿಕ ತಿಂಗಳುಗಳಲ್ಲಿ ಈಗಾಗಲೇ 1 ಲಕ್ಷ ಜನ ಸಾಲ ನೀಡುವುದಕ್ಕೆ ತಯಾರಿದ್ದಾರೆ. ಗ್ರಾಹಕರ ವಿವಿಧ ಬೇಡಿಕೆಗಳನ್ನು ಈಡೇರಿಸುವುದಕ್ಕಾಗಿ ನಾವು ಸಾಲ ಹೂಡಿಕೆಯಲ್ಲಿ ಹೊಸ ಉತ್ಪನ್ನಗಳನ್ನು ಹೊರಡಿಸುತ್ತಿದ್ದೇವೆ" ಎಂದು ಟಾಕು ಅಭಿಪ್ರಾಯ ಪಟ್ಟಿದ್ದಾರೆ.

"ಬೂಸ್ಟ್" ಯಾವುದೇ ಹೆಚ್ಚಿನ ತೊಂದರೆಯನ್ನು ನೀಡದೇ, ಕಾಗದ ಪತ್ರಗಳನ್ನು ಹೆಚ್ಚು ಬೇಡದೆ ನಿಮಗೆ ಸಾಲ ಸೌಲಭ್ಯವನ್ನು ನೀಡುತ್ತದೆ.ಲೋನ್ ನೀಡಬೇಕೆ ಅಥವಾ ಬೇಡವೆ ಎಂಬ ನಿರ್ಧಾರವನ್ನು ಕೇವಲ 30 ಸೆಕೆಂಡ್ ಗಳಲ್ಲಿ ಮಾಡಲಾಗುತ್ತದೆ.ಅದಕ್ಕಾಗಿ ಮೊಬಿಕ್ವಿಕ್‌ ಅಭಿವೃದ್ಧಿ ಪಡಿಸಿರುವ ಮೊಬಿಸ್ಕೋರ್ ನ ವಿವರಗಳನ್ನು ಪಡೆಯಲಾಗುತ್ತದೆ.

ಮೊಬಿಸ್ಕೋರ್ ವಿವರಗಳಿಂದ ಸಾಲ ನೀಡುವಿಕೆಯ ನಿರ್ಧಾರ:

ಮೊಬಿಸ್ಕೋರ್ ವಿವರಗಳಿಂದ ಸಾಲ ನೀಡುವಿಕೆಯ ನಿರ್ಧಾರ:

ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರು 5000 ರುಪಾಯಿಯಿಂದ ಹಿಡಿದು 60,000 ರುಪಾಯಿ ವರೆಗೆ ಸಾಲದ ಸೌಲಭ್ಯಕ್ಕಾಗಿ ಇಲ್ಲಿ ಅಪ್ಲೈ ಮಾಡಬಹುದು. ಮೊಬಿಕ್ವಿಕ್‌ ನಲ್ಲಿ ಸಾಲ ಸೌಲಭ್ಯ ಪಡೆಯುವ ಗ್ರಾಹಕರು ತಮ್ಮ ಲೋನ್ ಅಮೌಂಟ್ ನ್ನು ನೇರವಾಗಿ ಅವರ ಬ್ಯಾಂಕ್ ಅಕೌಂಟಿಗೆ ಪಡೆಯಲಿದ್ದಾರೆ.

ಈ ಲೋನ್  ಪ್ರಕ್ರಿಯೆ 4 ಸರಳ ಹಂತಗಳನ್ನು ಒಳಗೊಂಡಿದೆ.

ಈ ಲೋನ್ ಪ್ರಕ್ರಿಯೆ 4 ಸರಳ ಹಂತಗಳನ್ನು ಒಳಗೊಂಡಿದೆ.

1. ಮೊಬಿಕ್ವಿಕ್‌ ಆಪ್ ನಲ್ಲಿ ಬೂಸ್ಟ್ ನ್ನು ಸೆಲೆಕ್ಟ್ ಮಾಡಿ.

2. ಇನ್ಸ್ಟೆಂಟ್ ಲೋನ್ ಗಾಗಿ ಬೂಸ್ಟ್ ನ್ನು ಆಕ್ಟಿವೇಟ್ ಮಾಡಿ.

3. PAN ನ್ನು ಇನ್ಸರ್ಟ್ ಮಾಡಿ ಮತ್ತು ಲೋನ್ ಆಫರ್ ತನೋಡಲು ಇತರೆ ಪ್ರಮುಖ ವಿವರಗಳನ್ನು ನೀಡಿ.

4. ಲೋನ್ ಆಫರ್ ನ್ನು ಅಸೆಪ್ಟ್ ಮಾಡಿ ಮತ್ತು ಇನ್ಸ್ಟೆಂಟ್ ಲೋನ್ ನ್ನು ಪಡೆಯಿರಿ.

Best Mobiles in India

English summary
Mobikwik launches new product Boost for instant loan. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+