ಮಕ್ಕಳಲ್ಲಿ ಅಪೌಷ್ಠಿಕತೆ ಮತ್ತು ಸ್ಲೀಪ್ ಡಿಸಾರ್ಡರ್ ಸಮಸ್ಯೆ ಕಾಡಲು ಮೊಬೈಲ್ ಕಾರಣ!!

|

ನಿಮ್ಮ ಮಕ್ಕಳು ಅಪೌಷ್ಠಿಕತೆ, ಒಬೆಸಿಟಿ, ಸ್ಲೀಪ್ ಡಿಸಾರ್ಡರ್ ಮತ್ತು ತೂಕ ಕಳೆದುಕೊಳ್ಳುವಿಕೆಯಂತಹ ಸಮಸ್ಯೆಗಳಿಗೆ ಸಿಲುಕಿದ್ದರೆ ಅದಕ್ಕೆ ಮೊಬೈಲ್ ಕಾರಣವಾಗಿರಬಹುದು ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಮಕ್ಕಳು ಊಟ ತಿಂಡಿ ಮಾಡಲು ಹಟ ಮಾಡಿದರೇ ಮಕ್ಕಳಿಗೆ ಮೊಬೈಲ್ ಕೈಗಿತ್ತು ಊಟ ಮಾಡಿಸುವ ಫೋಷಕರಿಗೆ ಇದು ಎಚ್ಚರಿಕೆ ಗಂಟೆಯಾಗಿದೆ.

ಹೌದು, ಮಕ್ಕಳು ಮೊಬೈಲ್ ಫೋನ್ ವೀಕ್ಷಿಸುತ್ತಾ ಊಟ ಮಾಡುತ್ತಾರೆ ಇದರಿಂದ ಅವರು ಅಪೌಷ್ಠಿಕತೆಯಿಂದ ಬಳಲುವುದಿಲ್ಲ ಎಂದು ನೀವು ತಿಳಿದರೆ ತಪ್ಪಾಗಬಹುದು. ಏಕೆಂದರೆ, ತಜ್ಞರು ಹೇಳುವ ಪ್ರಕಾರ, ಸ್ಕ್ರೀನ್ ಎಡಿಕ್ಷನ್ ಮಕ್ಕಳ ಹಸಿವು ಮತ್ತು ಊಟದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಮಕ್ಕಳು ಹಲವು ಸಮಸ್ಯೆಗಳಿಗೆ ಒಳಗಾಗುತ್ತಾರೆ ಎಂದು ಹೇಳಲಾಗಿದೆ.

ಮಕ್ಕಳಲ್ಲಿ ಅಪೌಷ್ಠಿಕತೆ ಮತ್ತು ಸ್ಲೀಪ್ ಡಿಸಾರ್ಡರ್ ಸಮಸ್ಯೆ ಕಾಡಲು ಮೊಬೈಲ್ ಕಾರಣ!!

ಮಕ್ಕಳು ಮೊಬೈಲ್ ಫೋನ್ ವೀಕ್ಷಿಸುತ್ತಾ ಊಟ ಮಾಡುವಾಗ ಆ ಸಮಯದಲ್ಲಿ ಮಕ್ಕಳು ಹೊಟ್ಟೆ ತುಂಬಿದಂತೆ ಭಾವಿಸುತ್ತಾರೆ. ಹೀಗೆ ಮೊಬೈಲ್ ಫೋನ್ ವೀಕ್ಷಣೆ ಮೂಲಕ ಊಟ ಮಾಡುವ ಮಕ್ಕಳು ಅಗತ್ಯಕ್ಕಿಂತ ಕಡಿಮೆ ಆಹಾರ ಸೇವಿಸಬಹುದು ಇಲ್ಲವೇ ಹೆಚ್ಚಾಗಿಯೂ ಸೇವಿಸಬಹುದು. ಇದು ಮಕ್ಕಳ ತೂಕ ಕಡಿಮೆಯಾಗಲು ಇಲ್ಲವೇ ಹೆಚ್ಚಾಗಲು ಕಾರಣವಾಗಬಹುದಾಗಿದೆ.

ಈ ಮೊಬೈಲ್ ಫೋನ್ ಬಂದ ಬಳಿಕ ಪೋಷಕರಿಗೂ ಮಕ್ಕಲಿಗೆ ಊಟ ಮಾಡಿಸುವ ಬಗೆ ಸುಲಭವಾದಂತಾಗಿದೆ. ಪೋಷಕರು ಇಂತಹ ಅಭ್ಯಾಸ ಮಾಡಿಸಿದಂತೆ ಮಕ್ಕಳು ಅದಕ್ಕೆ ಅಡಿಕ್ಟ್ ಆಗುತ್ತಿದ್ದಾರೆ. ಇದರಿಂದ ಅವರು ಅಪೌಷ್ಠಿಕತೆ, ಒಬೆಸಿಟಿ ಮತ್ತು ಸ್ಲೀಪ್ ಡಿಸಾರ್ಡರ್‌ನಂತ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ ಎಂದು ವೈದ್ಯರು ಹೇಳಿರುವುದನ್ನು ವರದಿಯೊಂದು ಉಲ್ಲೇಖಿಸಿದೆ.

ಮಕ್ಕಳಲ್ಲಿ ಅಪೌಷ್ಠಿಕತೆ ಮತ್ತು ಸ್ಲೀಪ್ ಡಿಸಾರ್ಡರ್ ಸಮಸ್ಯೆ ಕಾಡಲು ಮೊಬೈಲ್ ಕಾರಣ!!

ಇನ್ನು ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಊಟ ಮಾಡಿಸುವ ಪರಿಸ್ಥಿತಿ ಎದುರಾಗಲು ಪೋಷಕರೇ ಕಾರಣವಾಗಿದ್ದು, ಮೊಬೈಲ್‌ನಲ್ಲಿ ಬರುವ ಚಿತ್ರ, ವಿಡಿಯೋಗಳನ್ನು ನೋಡುತ್ತಾ ಡಿಜಿಟಲ್ ಪ್ರಪಂಚಕ್ಕೆ ಹೆಚ್ಚು ಅಂಟಿಕೊಳ್ಳುತ್ತಾ ಮೊಬೈಲ್‌ನಲ್ಲೇ ಕಾಲಕಳೆಯುವ ಮಕ್ಕಳನ್ನು ಅವರೇ ಸರಿದಾರಿಗೆ ತರಬೇಕಿದೆ. ಇಲ್ಲದಿದ್ದರೆ ಆಗುವ ಇಂತಹ ಅನಾಹುತಗಳಿಗೆ ಪೋಷಕರೇ ಜವಬ್ದಾರಿ.

Best Mobiles in India

English summary
Children are increasingly becoming underweight. All because parents give in to their demands of mobile phones at mealtime

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X