ಸಿಮ್‌ನಲ್ಲಿ ಕನಿಷ್ಠ 20 ರೂ ಇದ್ರೆ ನಿಷ್ಕ್ರಿಯವಿಲ್ಲ

Written By:

ಪ್ರಿಪೇಡ್‌ ಮೊಬೈಲ್‌ ಸಿಮ್‌ನಲ್ಲಿ ಕನಿಷ್ಟ 20 ರೂಪಾಯಿ ಇದ್ದರೆ ಆ ಸಿಮ್‌ನ್ನು ಯಾವುದೇ ಕಾರಣಕ್ಕೆ ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲವೆಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ.ಆದರೆ ಇದೇ ಸಂದರ್ಭದಲ್ಲಿ ಈ ಸಿಮ್‌ನ್ನು ನಿಷ್ಕ್ರಿಯಗೊಳಿಸಲು 90ದಿನಗಳ ಗಡವು ನೀಡಿದ್ದು ಈ ಗಡುವಿನ ನಂತರ ಗ್ರಾಹಕರು ಬಳಸದೇ ಇದ್ದ ಪಕ್ಷದಲ್ಲಿ ಈ ಸಿಮ್‌ನ್ನು ಮೊಬೈಲ್‌ ಕಂಪೆನಿಗಳು ನಿಷ್ಕ್ರಿಯಗೊಳಿಸಬಹುದು ಎಂದು ತಿಳಿಸಿದೆ.

ಸಿಮ್‌ನಲ್ಲಿ ಕನಿಷ್ಠ 20 ರೂ ಇದ್ರೆ ನಿಷ್ಕ್ರಿಯವಿಲ್ಲ

ಇಷ್ಟೇ ಅಲ್ಲದೇ 90 ದಿನಗಳ ಬಳಿಕ ನಿಷ್ಕ್ರಿಯಗೊಂಡ ಸಿಮ್‌ನ್ನು 15 ದಿನಗಳ ಒಳಗೆ ಕಂಪೆನಿಗಳಿಗೆ ದಾಖಲೆ ಸಲ್ಲಿಸಿದರೆ ಪುನಃ ಗ್ರಾಹಕರು ಆ ಸಿಮ್‌ ಪಡೆಯಬಹುದು ಎಂದು ಟ್ರಾಯ್‌ ಹೇಳಿದೆ.

ಕೆಲ ವ್ಯಕ್ತಿಗಳು ಸಿಮ್‌ನಲ್ಲಿ ಅತ್ಯಲ್ಪ ಹಣವನ್ನು ಇರಿಸಿಕೊಂಡು ಆ ಸಿಮ್‌ನ್ನು ಯಾವುದೇ ತಮ್ಮ ಕೆಲಸಕ್ಕೆ ಬಳಸುತ್ತಿರಲಿಲ್ಲ. ಸಿಮ್‌ನಿಂದ ಫೋನ್‌ ಮಾಡದೇ ಮತ್ತು ಕರೆನ್ಸಿ ಹಾಕದೇ ಇದ್ದರಿಂದ ಮೊಬೈಲ್‌ ಕಂಪೆನಿಗಳಿಗೆ ತುಂಬಾ ನಷ್ಟವಾಗುತಿತ್ತು. ಈ ಹಿನ್ನೆಲೆಯಲ್ಲಿ ಈ ಸಮಸ್ಯೆ ನಿವಾರಿಸಲು ಟ್ರಾಯ್‌ ಈ ನಿಮಮವನ್ನು ಜಾರಿಗೆ ತಂದಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot