ಭಾರತದ ಮೊಬೈಲ್ ಇತಿಹಾಸದ ಬಗ್ಗೆ ನೀವು ತಿಳಿಯದ ರೋಚಕ ವಿಷಯಗಳು!!

|

ಮೊಬೈಲ್ ಎಂಬ ಮಾಯೆ ನಮ್ಮನ್ನು ಆವರಿಸಿ ಗತಕಾಲವೇ ಆಯಿತೇನೋ ಎನ್ನುವ ಭಾವನೆ ನಮಗೆಲ್ಲಾ ಮೂಡಿಬಿಟ್ಟಿದೆ. ಆದರೆ, ಇಂದು ಹದಿಹರಯಕ್ಕೆ ಕಾಲಿಟ್ಟಿರುವ ಎಷ್ಟೋ ಯುವಕರ ವಯಸ್ಸಿನಷ್ಟೂ ಸಹ ಭಾರತದ ಮೊಬೈಲ್ ಪ್ರಪಂಚಕ್ಕೆ ವಯಸ್ಸಾಗಿಲ್ಲ ಎಂದರೆ ಆಶ್ಚರ್ಯವಾಗಬಹುದು. ಏಕೆಂದರೆ, ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮೊಬೈಲ್ ಕರೆ ಮಾಡಿದ್ದು ಕೇವಲ 23 ವರ್ಷಗಳ ಹಿಂದೆ.!

ಹೌದು, ಇಂದು ಭಾರತದಲ್ಲಿ 77 ಕೋಟಿಗೂ ಹೆಚ್ಚು ಜನ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ನೂರು ಕೋಟಿಗೂ ಹೆಚ್ಚು ಮೊಬೈಲ್‌ ಸಿಮ್ ಬಳಕೆಯಾಗುತ್ತಿವೆ. 46.20 ಕೋಟಿ ಜನರು ಅಂತರ್ಜಾಲವನ್ನು ಬಳಸುತ್ತಿದ್ದಾರೆ. 25 ಕೋಟಿ ಜನರು ಸಾಮಾಜಿಕ ಜಾಲತಾಣಗಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ, 23 ವರ್ಷಗಳ ಹಿಂದಷ್ಟೆ ಮಾತ್ರ ಮೊದಲ ಕರೆಯೊಂದನ್ನು ಮಾಡಿದ್ದಾರೆ.

ಭಾರತದ ಮೊಬೈಲ್ ಇತಿಹಾಸದ ಬಗ್ಗೆ ನೀವು ತಿಳಿಯದ ರೋಚಕ ವಿಷಯಗಳು!!

ಅಂದು ಆರಂಭವಾದ ಈ ಸೇವೆ ಇಂದು ಕೋಟ್ಯಾಂತರ ಜನರನ್ನು ತಲುಪಿದೆ. ಆದರೆ ಈ ಸೇವೆ ಯಾವಾಗ, ಯಾವ ಕಂಪನಿಯಿಂದ, ಎಲ್ಲಿಂದ ಆರಂಭವಾಯಿತು, ಮೊದಲ ಕರೆ ಯಾವಾಗ, ಯಾರು ಮಾಡಿದರು ಎಂಬುದರ ಬಗ್ಗೆ ನಿಮಗೆ ಮಾಹಿತಿ ಇದೆಯೇ? ಈ ಮಾಹಿತಿಯನ್ನು ತಿಳಿಯುವ ಕುತೋಹಲವೇ? ಹಾಗಿದ್ದರೆ ಮುಂದೆ ಓದಿ ಕುತೋಹಲದ ಮಾಹಿತಿಗಳನ್ನು ತಿಳಿಯಿರಿ.

ಭಾರತದಲ್ಲಿ ಮೊದಲ ಕರೆ ಯಾವಾಗ?

ಭಾರತದಲ್ಲಿ ಮೊದಲ ಕರೆ ಯಾವಾಗ?

1995ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರು ಆಗಿನ ಕೇಂದ್ರ ದೂರಸಂಪರ್ಕ ಸಚಿವರಾಗಿದ್ದ ಸುಖರಾಮ್ ಅವರೊಂದಿಗೆ ಮೊದಲ ಬಾರಿ ಮೊಬೈಲ್ ಕರೆ ಮಾಡಿ ಮಾತನಾಡಿದ್ದರು. ಇಂದು ಇತಿಹಾಸದಲ್ಲಿ ದಾಖಲಾಗಿರುವ ಭಾರತದ ಈ ಮೊದಲ ಮೊಬೈಲ್ ಕರೆಯನ್ನು ಕೋಲ್ಕತ್ತಾದಿಂದ ದೆಹಲಿಗೆ ಮಾಡಲಾಗಿತ್ತು.

ಯಾವ ಕಂಪನಿಯಿಂದ ಮೊದಲ ಕರೆ?

ಯಾವ ಕಂಪನಿಯಿಂದ ಮೊದಲ ಕರೆ?

ಭಾರತದ ಮೋದಿ ಗ್ರೂಪ್ ಮತ್ತು ಆಸ್ಟ್ರೇಲಿಯಾದ ಟೆಲಿಕಾಂ ಕಂಪೆನಿ ಟೆಲ್ಸ್ಟ್ರಾ ನಡುವಿನ ಜಂಟಿ ಉದ್ಯಮ 'ಮೋದಿ ಟೆಲ್ಸ್ಟ್ರಾ' ನೆಟ್ವರ್ಕ್‌ನಲ್ಲಿ ಮೊದಲ ಮೊಬೈಲ್ ಕರೆಯನ್ನು ಮಾಡಲಾಗಿತ್ತು.ಈ ಸೇವೆಯನ್ನು ಮೊಬೈಲ್ ನೆಟ್ ಎಂದು ಕರೆಯಲಾಯಿತು. ದೇಶದಲ್ಲಿ ಸೆಲ್ಯುಲರ್ ಸೇವೆ ಒದಗಿಸಲು ಪರವಾನಗಿ ಪಡೆದ 8 ಕಂಪನಿಗಳಲ್ಲಿ ಈ ಕಂಪನಿಯೂ ಒಂದಾಗಿತ್ತು.

ಆರಂಭದ ಕರೆಗಳ ಬೆಲೆ ಎಷ್ಟು?

ಆರಂಭದ ಕರೆಗಳ ಬೆಲೆ ಎಷ್ಟು?

ಇಂಟರ್‌ನೆಟ್ ಪಡೆದರೆ ಅನ್‌ಲಿಮಿಟೆಡ್ ಉಚಿತ ಕರೆಗಳನ್ನು ಮಾಡಬಹುದಾದ ಇಂದಿನ ದಿನಕ್ಕೂ ಮತ್ತು 23 ವರ್ಷಗಳ ಹಿಂದೆ ಬಹಳಷ್ಟು ವ್ಯತ್ಯಾಸವಿತ್ತು. ಆರಂಭದಲ್ಲಿ ಹೊರಹೋಗುವ ಕರೆಗಳಿಗೆ ಒಂದು ನಿಮಿಷಕ್ಕೆ 16 ರೂ.ಗಳನ್ನೂ ವಿಧಿಸಲಾಗುತ್ತಿತ್ತು. ಒಳಬರುವ ಕರೆಗಳಿಗೂ ಸಹ ಹಣ ತೆರಬೇಕಾಗಿತ್ತು. ಇದರಿಂದ ಮೊಬೈಲ್ ಎಂಬುದು ಶ್ರೀಮಂತರ ಸ್ವತ್ತಾಗಿತ್ತು.

1995ರಲ್ಲಿಯೇ ಇಂಟರ್ನೆಟ್

1995ರಲ್ಲಿಯೇ ಇಂಟರ್ನೆಟ್

1995ರಲ್ಲಿ, ಸ್ವಾತಂತ್ರ್ಯ ದಿನದಂದು ಭಾರತದ ಜನರಿಗೆ ಇಂಟರ್ನೆಟ್ ಸಂಪರ್ಕ ಸೇವೆಯನ್ನು ವಿದೇಶ್ ಸಂಚಾರ್ ನಿಗಮ್ ಲಿಮಿಟೆಡ್ ಒದಗಿಸಿತು. ಕಂಪೆನಿಯು ದೇಶದಲ್ಲಿ ಗೇಟ್ವೇ ಇಂಟರ್ನೆಟ್ ಆಕ್ಸಿಸ್ ಸೇವೆಯ ಪ್ರಾರಂಭವನ್ನು ಪ್ರಾರಂಭಿಸಿತು. ಆರಂಭದಲ್ಲಿ ಈ ಸೇವೆಯನ್ನು ನಾಲ್ಕು ಮೆಟ್ರೊ ನಗರಗಳಲ್ಲಿ ಮಾತ್ರ ಒದಗಿಸಲಾಯಿತು.

ಅಂದು ಅಂತರ್ಜಾಲದ ಬೆಲೆ?

ಅಂದು ಅಂತರ್ಜಾಲದ ಬೆಲೆ?

ಲೀಸ್ಡ್ ಲೈನ್ಸ್ ಅಥವಾ ಡಯಲ್-ಅಪ್ ಸೌಲಭ್ಯಗಳೊಂದಿಗೆ ದೂರಸಂಪರ್ಕ ಇಲಾಖೆಯ ಇ-ನೆಟ್ನಿಂದಾಗಿ ಜನರು ಅಂತರ್ಜಾಲವನ್ನು ಬಳಸುತ್ತಿದ್ದರು. ಆ ಸಮಯದಲ್ಲಿ 250 ಗಂಟೆಗಳ ಅಂತರ್ಜಾಲ ಬಳಕೆಗೆ 5 ಸಾವಿರ ರೂ.ಗಳನ್ನು ನೀಡಬೇಕಾಗಿತ್ತು. ಕಾರ್ಪೋರೇಟ್ ಕ್ಷೇತ್ರಗಳಲ್ಲಿ ಅಂತರ್ಜಾಲ ಬಳಕೆಗೆ 15,000 ರೂಪಾಯಿಗಳನ್ನು ತೆರಬೇಕಾಗಿತ್ತು.

ಮೊದಲ ಕರೆ ಮಾಡಿದ ಮೊಬೈಲ್?

ಮೊದಲ ಕರೆ ಮಾಡಿದ ಮೊಬೈಲ್?

ನೋಕಿಯಾ ಮೊಬೈಲ್ ಫೋನಿನಲ್ಲಿ ಭಾರತದ ಮೊದಲ ಮೊಬೈಲ್ ಫೋನ್ ಕರೆಯನ್ನು ಮಾಡಲಾಯಿತು (ನಿಖರ ಮೊಬೈಲ್‌ಗಳ ಮಾಹಿತಿ ಇಲ್ಲ) . 1998 ರಲ್ಲಿ ದೇಶದ ಮೊದಲ ರಿಂಗ್‌ ಟೋನ್ ಅನ್ನು ನೋಕಿಯಾ 5110 ಮೊಬೈಲ್‌ನಲ್ಲಿ ಪರಿಚಯಿಸಲಾಯಿತು. 'ಸಾರೆ ಜಹಾನ್ ಸೆ ಅಚ್ಚಾ' ಗೀತೆ ಮೊದಲ ರಿಂಗ್ ಟೋನ್ ಆಗಿತ್ತು.

ಮೊದಲ ಕ್ಯಾಮೆರಾ ಫೋನ್!

ಮೊದಲ ಕ್ಯಾಮೆರಾ ಫೋನ್!

ಭಾರತದಲ್ಲಿ ಮೊದಲ ಕ್ಯಾಮೆರಾ ಫೋನ್ ಅನ್ನು ನೋಕಿಯಾ ಕಂಪೆನಿಯೇ ಪರಿಚಯಿಸಿತು. ನೋಕಿಯಾ 7650 ಮೊಬೈಲ್ ಫೋನ್ ಭಾರತದಲ್ಲಿ ಬಿಡುಗಡೆಯಾದ ಮೊಬೈಲ್ ಕ್ಯಾಮೆರಾ ಫೋನ್ ಆಗಿತ್ತು. ಈ ಮೊಬೈಲ್ ಫೋನ್ ನಂತರವೇ ಮೊಬೈಲ್‌ನಲ್ಲಿ ಮಲ್ಟಿ ಮೀಡಿಯಾ ಬಳಕೆ ಮಾಡಬಹುದು ಎಂಬುದನ್ನು ಹೆಚ್ಚಿನ ಭಾರತಿಯರು ತಿಳಿದುಕೊಂಡರು.

ಮೊಬೈಲ್ ಇತಿಹಾಸದ ಈ 5 ವಿಶೇಷ ಮಾಹಿತಿ ಆಶ್ಚರ್ಯ ಮೂಡಿಸದೇ ಇರವು!!

ಮೊಬೈಲ್ ಇತಿಹಾಸದ ಈ 5 ವಿಶೇಷ ಮಾಹಿತಿ ಆಶ್ಚರ್ಯ ಮೂಡಿಸದೇ ಇರವು!!

ಬಾರಿಗೆ ಕೈಯಲ್ಲಿ ಹಿಡಿದು ಮಾತನಾಡುವ ಮೊಬೈಲ್ ಅನ್ನು ಅಭಿವೃದ್ದಿಗೊಳಿಸಿದ್ದು ಮೊಟೊರೊಲಾ ಕಂಪನಿ. ಅಲ್ಲದೇ ಮೊಟ್ಟ ಮೊದಲ ಕರೆಯನ್ನು ಮೊಬೈಲ್ ಅನ್ನು ಕೈಯಲ್ಲಿ ಹಿಡಿದು ಕಾಲ್ ಮಾಡಿದ್ದು ಸಹ ಮೊಟೊರೊಲಾ ಸಂಶೋಧಕ ಮತ್ತು ಕಾರ್ಯನಿರ್ವಾಹಕರಾದ 'ಮಾರ್ಟಿನ್ ಕೂಪರ್'! ಇದು ಮೊಟ್ಟ ಮೊದಲ ಮೊಬೈಲ್ ಕರೆ!!

ಹೌದು, ಇಂದು ಮೊಬೈಲ್ ಸ್ಮಾರ್ಟ್‌ಫೋನ್ ಉಪಯೋಗಿಸುವವರಿಗೆ ಇಂತಹ ಮಾಹಿತಿಗಳು ಹಲವು ತಿಳಿದಿಲ್ಲ.ಮೊಬೈಲ್ ಎನ್ನುವುದು ಪ್ರತಿಯೊಬ್ಬರ ಜೀವನದ ಒಂದು ಅವಿಭಾಜ್ಯ ಭಾಗವಾಗಿಹೋದರು ಮೊಬೈಲ್ ಬಗೆಗೆ ಇರುವ ಕುತೋಹಲಕಾರಿ ಅಂಶಗಳು ಜನರನ್ನು ತಲುಪಿಲ್ಲ.! ಹಾಗಾಗಿ, ಇಂದಿನ ಲೇಖನದಲ್ಲಿ ಮೊಬೈಲ್ ಬಗ್ಗೆ ಇರುವ ಕುತೂಹಲಕಾರಿ ವಿಷಯಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

1) ಜಗತ್ತಿನ ಮೊದಲ ಮೊಬೈಲ್ ಫೋನ್.!!

1) ಜಗತ್ತಿನ ಮೊದಲ ಮೊಬೈಲ್ ಫೋನ್.!!

ಜಗತ್ತಿನ ಮೊತ್ತಮೊದಲ ಬಾರಿಗೆ ವಾಣಿಜ್ಯಾತ್ಮಕವಾಗಿ ಮೊಬೈಲ್ ಫೋನುಗಳು ಮಾರಾಟವಾಗಿದ್ದು 1983ರಲ್ಲಿ. ಮೊಟೊರೊಲಾ DynaTAC 8000X ಅನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಲಾಯಿತು. ಅಂದು ಬಿಡುಗಡೆಯಾದ ಫೋನ್ ಬೆಲೆ $3,955 . ಆದರೆ ಇಂದು ಸ್ಮಾರ್ಟ್ಫೋನ್ಗಳು 250 ರೂಪಾಯಿಗಳಿಗೂ ಸಿಗುತ್ತವೆ.!!

2) ಮೊದಲ ಮೊಬೈಲ್ ಕರೆ ಮಾಡಿದ್ದು

2) ಮೊದಲ ಮೊಬೈಲ್ ಕರೆ ಮಾಡಿದ್ದು

ಮೊದಲ ಮೊಬೈಲ್ ಕರೆ ಮಾಡಿದ್ದು ಮೋಟೊರೋಲಾ ಸಂಸ್ಥಾಪಕ ಮಾರ್ಟಿನ್ ಕೂಪರ್. ಮಾರ್ಟಿನ್ ಕೂಪರ್'ರವರು ನ್ಯೂಯಾರ್ಕ್ ಸಿಟಿಯ 53 ಮತ್ತು 54ನೇ ಬೀದಿ ನಡುವೆ 6 ಮುಖ್ಯ ವಿಶಾಲ ಬೀದಿಯಲ್ಲಿ 900MHz ಮುಖ್ಯ ಕೇಂದ್ರ ಹೊಂದಿದ್ದರು. ಏಪ್ರಿಲ್ 3, 1973 ರಲ್ಲಿ ಮೊಟೊರೊಲಾ ಮೊಬೈಲ್‌ನಿಂದ ಮೊದಲ ಕರೆಯನ್ನು ನ್ಯೂಜರ್ಸಿಯ ಬೆಲ್ ಲ್ಯಾಬ್‌ಗೆ ಕರೆ ಮಾಡಲಾಗಿತ್ತು.

3) 1.1 ಕೆಜಿ ತೂಕವಿತ್ತು

3) 1.1 ಕೆಜಿ ತೂಕವಿತ್ತು

ಮೊಟ್ಟ ಮೊದಲ 'ಮೊಟೊರೊಲಾ DynaTAC' ಫೋನ್ 23cm ಉದ್ದವಿತ್ತು. ಅತ್ಯಂತ ಅಚ್ಚರಿ ವಿಷಯ ಅಂದ್ರೆಮೊಬೈಲ್ 1.1 ಕೆಜಿ ತೂಕವಿತ್ತು.!! 1kg ತೂಕ ಹೊಂದಿದ್ದ ಈ ಮೊಬೈಲ್ ಸಂಪೂರ್ಣ ಚಾರ್ಜ್ ಹೊಂದಲು 10 ಗಂಟೆಗಳ ಸಮಯ ಬೇಕಿತ್ತು. ಆದರೆ ಬಳಕೆ ಆಗುತ್ತಿದ್ದದ್ದು ಮಾತ್ರ ಕೇವಲ 35 ನಿಮಿಷಗಳು.!!

4) ನೊಕಿಯಾ ವಿಶ್ವ ಸಾಮ್ರಾಟ್

4) ನೊಕಿಯಾ ವಿಶ್ವ ಸಾಮ್ರಾಟ್

ಸ್ಮಾರ್ಟ್‌ಫೋನ್ ಬರುವುದಕ್ಕೂ ಮುಂಚೆ ನೊಕಿಯಾ ಸಂಸ್ಥೆ ವಿಶ್ವದ ಮೊಬೈಲ್ ಸಾಮ್ರಾಟನಾಗಿತ್ತು. ನೊಕಿಯಾದ ಜನಪ್ರಿಯ 1100 ಮಾಡೆಲ್'ನ ಹ್ಯಾಂಡ್'ಸೆಟ್'ಗಳು ಬರೋಬ್ಬರಿ 25 ಕೋಟಿ ಸಂಖ್ಯೆಯಲ್ಲಿ ಮಾರಾಟ ಕಂಡಿವೆ. ಇದು ವಿಶ್ವದಲ್ಲಿ ಅತೀ ಹೆಚ್ಚು ಮಾರಾಟವಾಗಿರುವ ಎಲೆಕ್ಟ್ರಾನಿಕ್ ಸಾಧನವೆನಿಸಿದೆ.!!

5) ನೋಮೋಫೋಬಿಯಾ

5) ನೋಮೋಫೋಬಿಯಾ

ಮೊಬೈಲ್ ಫೋನ್ ಅನ್ನು ಬಿಟ್ಟಿರಲಾರದಷ್ಟು ಮಟ್ಟಿಗೆ ಅದರ ಮೇಲೆ ಜನರು ಅವಲಂಬಿತವಾಗುತ್ತಿದ್ದಾರೆ. ಈ ಮೊಬೈಲ್ ಆತಂಕವನ್ನು ವಿಜ್ಞಾನಿಗಳು ನೋಮೋಫೋಬಿಯಾ ಎಂದು ಕರೆಯುತ್ತಾರೆ. ನಮ್ಮಲ್ಲಿ ಈ ಫೋಬಿಯಾ ಇದೆಯಾ ಎಂದು ಪತ್ತೆಹಚ್ಚಲೆಂದೇ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳು ಸಹ ಇವೆ.!!

Best Mobiles in India

English summary
Which was the first mobile phone provider in india? And which company was the first cellular network provider?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X