ವಿದೇಶದಲ್ಲಿ ಬೆಸ್ಟ್ ಎನ್ನುವ WiFi ಇಂಟರ್ನೆಟ್ ಅನ್ನು ಭಾರತದಲ್ಲಿ ಬೇಡ ಎನ್ನೋಕೆ ಕಾರಣ ಏನು..?
ದೇಶಿಯ ಮಾರುಕಟ್ಟೆಯಲ್ಲಿ ಜಿಯೋ ಆರಂಭದ ನಂತರದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದಾಗಿದೆ. ಮೊಬೈಲ್ ಡೇಟಾ ಬಳಕೆ ಮಾಡುವ ದೇಶಗಳ ಪಟ್ಟಿಯಲ್ಲಿ ಮೂರಂಕಿಯ ಸ್ಥಾನದಲ್ಲಿದ್ದ ಭಾರತ, ಇಂದು ಮೊದಲ ಸ್ಥಾನವನ್ನು ಅಲಂಕರಿಸುವಲ್ಲಿ ಜಿಯೋ ಪಾತ್ರವು ಬಹಳ ದೊಡ್ಡದಿದೆ. ಜಗತ್ತಿನ ಸೂಪರ್ ಪವರ್ ದೇಶಗಳಾದ ಅಮೆರಿಕಾ, ಚೀನಾ ಹಾಗೂ ರಷ್ಯಾಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಡೇಟಾವನ್ನು ಭಾರತೀಯರು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ.

ಜಿಯೋ ಆರಂಭದ ನಂತರದಲ್ಲಿ ದೇಶಿಯ ಇಂಟರ್ನೆಟ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬಳಕೆದಾರರನ್ನು ಸೆಳೆದಿದೆ. ಸುಮಾರು 20 ಕೋಟಿ ಹೊಸ ಮೊಬೈಲ್ ಇಂಟರ್ನೆಟ್ ಬಳಕೆದಾರರು ಹೊಸದಾಗಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೊಸದೊಂದು ವರದಿಯೂ ಈ ಮಾಹಿತಿಯನ್ನು ಹೊರ ಹಾಕಿದೆ. ಇದರ ಅನ್ವಯ ಮೊಬೈಲ್ ಇಂಟರ್ನೆಟ್ ಬಳಕೆದಾರರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ.

WiFi ಬೇಡ ಅಂತಾರೇ ಇಂಡಿಯನ್ಸ್:
ವಿದೇಶಗಳಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ Wi-Fi, ಹೆಚ್ಚಿನ ಬಳಕೆದಾರರಿಗೆ ಇಂಟರ್ನೆಟ್ ಸೇವೆಯನ್ನು ನೀಡುತ್ತಿದೆ. ಆದರೆ ಭಾರತದಲ್ಲಿ ಈ ಪರಿಸ್ಥಿತಿಯೂ ಬದಲಾಗಿದೆ, ಹೆಚ್ಚಿನ ಭಾರತೀಯರು ಮೊಬೈಲ್ ಇಂಟರ್ನೆಟ್ ಅನ್ನು ಬಳಕೆ ಮಾಡಿಕೊಳ್ಳಲು ಒಲವು ತೋರಿಸುತ್ತಿದ್ದಾರೆ ಎನ್ನಲಾಗಿದೆ.

ಜಿಯೋ ಕಾರಣ:
ಬೇರೆ ದೇಶಗಳಲ್ಲಿ WiFi ಇಂಟರ್ನೆಟ್ ಕಡಿಮೆ ಬೆಲೆಗೆ ದೊರೆಯಲಿದೆ. ಇದೇ ಮಾದರಿಯಲ್ಲಿ ಭಾರತದಲ್ಲಿ ಮೊಬೈಲ್ ಇಂಟರ್ನೆಟ್ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಜಿಯೋ ಎಂದರೆ ತಪ್ಪಾಗುವುದಿಲ್ಲ. ತಿಂಗಳಿಗೆ ಒಂದು GB ಡೇಟಾ ಬಳಕೆ ಮಾಡುತ್ತಿದ್ದವರಿಗೆ ನಿತ್ಯ 1GB ಬಳಕೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದು ಜಿಯೋ.

ಹೊಸ ಅವಕಾಶ:
ದೇಶದಲ್ಲಿ ಮೊಬೈಲ್ ಡೇಟಾ ಬಳಕೆಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಾರತದಲ್ಲಿ ಇಂಟರ್ನೆಟ್ ಆರ್ಥಿಕತೆಯ ಚಿತ್ರಣವೇ ಬದಲಾಗಲಿದ್ದು, ಮುಂದಿನ ಮೂರರಿಂದ ಐದು ವರ್ಷದಲ್ಲಿ ಭಾರೀ ಪ್ರಮಾಣದಲ್ಲಿ ಅವಕಾಶಗಳ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಭಾರತೀಯರಿಗೆ ಬೆಲೆ:
ಈ ಹಿಂದೆ ಎಲ್ಲಾ ಟೆಕ್ ಕಂಪನಿಗಳು ಭಾರತಕ್ಕೆ ಕೊನೆ ಎನ್ನುವ ಭಾವವನ್ನು ಹೊಂದಿದ್ದವು, ಆದರೆ ಇಂದು ಭಾರತಕ್ಕಾಗಿಯೇ ನಿರ್ಮಿಸಿ ಎನ್ನುವ ಘೋಷ ವಾಕ್ಯದೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಪ್ರಮುಖ ಕಾರಣ ಕಡಿಮೆ ಬೆಲೆಗೆ ದೊರೆಯುವ ಡೇಟಾ ಎಂದರೆ ತಪ್ಪಾಗುವುದಿಲ್ಲ.

ಜಿಯೋ ದಿಂದಲೇ:
ಜಿಯೋ ಕೇವಲ ತಾನು ಮಾತ್ರವೇ ಕಡಿಮೆ ಬೆಲೆಗೆ ಡೇಟಾವನ್ನು ನೀಡುವುದಲ್ಲದೇ ಮಾರುಕಟ್ಟೆಯಲ್ಲಿ ಎಲ್ಲಾ ಟೆಲಕಾಂ ಕಂಪನಿಗಳು ಅತೀ ಕಡಿಮೆ ಬೆಲೆಗೆ ಡೇಟಾವನ್ನು ನೀಡುವಂತೆ ಮಾಡಿದೆ. ಜಿಯೋ ವೊಂದು ದೇಶದಲ್ಲಿ ಆರಂಭವಾಗದೆ ಇದ್ದಿದ್ರೆ ಮಾರುಕಟ್ಟೆಯಲ್ಲಿ ಇಷ್ಟು ದೊಡ್ಡ ಮಟ್ಟದ ಬದಲಾವಣೆಯೂ ಕಾಣಲು ಸಾಧ್ಯವಾಗುತ್ತಿರಲಿಲ್ಲ.


Click it and Unblock the Notifications








