Home
ಸುದ್ದಿಜಾಲ

ಮಕ್ಕಳು ಸಕ್ಕರೆಕಾಯಿಲೆಗೆ ತುತ್ತಾಗಲು ಸ್ಮಾರ್ಟ್‌ಫೋನ್‌ ಕಾರಣ!..ತಿಳಿಯಿರಿ.!!

ಒಂದು ಗಂಟೆಗೂ ಅಧಿಕ ಸಮಯ ಸ್ಮಾರ್ಟ್ ಫೋನ್ ಮತ್ತು ಟಿವಿ ವೀಕ್ಷಿಸಿದರೆ ಸಕ್ಕರೆ ಕಾಯಿಲೆ ಖಂಡಿತಾ ತುತ್ತಾಗುತ್ತಿದ್ದು, ಇಂತಹ ಸಾವಿರಾರು ಪ್ರಕರಣಗಳು ವಿಶ್ವಾದ್ಯಂತ ವರದಿಯಾಗುತ್ತಿದೆ.

By Bhaskar N J

ಇನ್ನು ಪ್ರತಿನಿತ್ಯ ಮಕ್ಕಳು ಒಂದು ಗಂಟೆಗೂ ಅಧಿಕ ಸಮಯ ಸ್ಮಾರ್ಟ್ ಫೋನ್ ಮತ್ತು ಟಿವಿ ನೋಡುತ್ತ ಮಗ್ನರಾಗಿದ್ದರೆ ಅಂತಹ ಮಕ್ಕಳಲ್ಲಿ ಖಂಡಿತಾ ಸಕ್ಕರೆ ಕಾಯಿಲೆ ಅಪಾಯ ಹೆಚ್ಚು.ಯುವ ಹಂತಕ್ಕೆ ಬರುವ ವೇಳೆಗೆ ಸಕ್ಕರೆ ಕಾಯಿಲೆಗೆ ತುತ್ತಾಗಿರುತ್ತಾರೆ ಎಂಬ ಶಾಕಿಂಗ್ ವರದಿಯನ್ನು ವೈದ್ಯ ಅಧ್ಯಯನ ತಂಡ ಬಿಡುಗಡೆ ಮಾಡಿದೆ.!!

ಒಂದು ಗಂಟೆಗೂ ಅಧಿಕ ಸಮಯ ಸ್ಮಾರ್ಟ್ ಫೋನ್ ಮತ್ತು ಟಿವಿ ವೀಕ್ಷಿಸಿದರೆ ಸಕ್ಕರೆ ಕಾಯಿಲೆ ಖಂಡಿತಾ ತುತ್ತಾಗುತ್ತಿದ್ದು, ಇಂತಹ ಸಾವಿರಾರು ಪ್ರಕರಣಗಳು ವಿಶ್ವಾದ್ಯಂತ ವರದಿಯಾಗುತ್ತಿದೆ. ಹಾಗಾಗಿ, ಈ ಬಗ್ಗೆ ವೈದ್ಯರ ತಂಡ ಅಧ್ಯಯನ ನಡೆಸಿದ್ದು, ವರದಿಯಲ್ಲಿ ಹಲವು ಶಾಕಿಂಗ್ ವಿಷಯಗಳನ್ನು ತಿಳಿಸಿದೆ.! ಅವುಗಳು ಈ ಕೆಳಕಂಡಂತಿವೆ.!!

ಬದಲಾದ ಜೀವನ ಶೈಲಿ!!

ಬದಲಾದ ಜೀವನ ಶೈಲಿ!!

ಅಧ್ಯಯನದಲ್ಲಿ ಪ್ರಮುಖ ಅಂಶಗಳಲ್ಲಿ ಮಕ್ಕಳು ಸೇರಿದಂತೆ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರ ಬದಲಾದ ಜೀವನ ಶೈಲಿಯನ್ನು ವೈದ್ಯ ತಂಡ ಪ್ರಮುಖವಾಗಿ ಗಮನಿಸಿದೆ. ಹೆಚ್ಚು ಹೊತ್ತು ಸ್ಮಾರ್ಟ್ ಫೋನ್, ಟಿವಿ, ಕಂಪ್ಯೂಟರ್, ಗೇಮ್‌ಗಳಲ್ಲಿ ಕಾಲ ಕಳೆಯುವ ಮಕ್ಕಳಲ್ಲಿ ರೋಗದ ಅಪಾಯ ಹೆಚ್ಚಾಗಿತ್ತು ಎಂದು ಅವರು ಹೇಳಿದ್ದಾರೆ.

ಮಧುಮೇಹ ಖಾಯಿಲೆಗೆ ಮೊಬೈಲ್ ಕಾರಣ!!

ಮಧುಮೇಹ ಖಾಯಿಲೆಗೆ ಮೊಬೈಲ್ ಕಾರಣ!!

ಈವರೆಗೂ ಮಕ್ಕಳ ದೈಹಿಕ ಚಟುವಟಿಕೆ, ಆಹಾರ ವ್ಯವಸ್ಥೆ ಮತ್ತು ಕುಟುಂಬದ ಆರೋಗ್ಯ ಇತಿಹಾಸದಿಂದ ಮಧುಮೇಹ ಖಾಯಿಲೆಯನ್ನು ಪರಿಗಣಿಸಲಾಗುತ್ತಿತ್ತು. ಆದರೆ ಬದಲಾದ ಜೀವನ ಶೈಲಿಯಿಂದಾಗಿ ಸ್ಮಾರ್ಟ್ ಗ್ಯಾಜೆಟ್‌ಗಳು ಪರಿಣಾಮ ಬೀರುತ್ತಿವೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.!! .

4500 ಮಕ್ಕಳ ಮೇಲೆ ಅಧ್ಯಯನ!!

4500 ಮಕ್ಕಳ ಮೇಲೆ ಅಧ್ಯಯನ!!

ಮಕ್ಕಳಲ್ಲಿ ಮಧುಮೇಹ ತೊಂದರೆ ಹೆಚ್ಚಾಗುತ್ತಿರುವ ಸಾವಿರಾರು ಪ್ರಕರಣಗಳು ವಿಶ್ವಾದ್ಯಂತ ವರದಿಯಾಗುತ್ತಿದ್ದು, ಈ ಬಗ್ಗೆ ತಜ್ಞರು ಸುಮಾರು 4500 ಮಕ್ಕಳ ಜೀವನ ಶೈಲಿಯನ್ನು ಅಧ್ಯಯನ ಮಾಡಿದ್ದಾರೆ.!! ಅಧ್ಯಯನದಲ್ಲಿ ಮಕ್ಕಳು ಗ್ಯಾಜೆಟ್ ಬಳಕೆ ಮಾಡುವ ಬಗ್ಗೆ ಸಂಪೂರ್ಣ ಮಾಹಿತಿ ಕಲೆಯಾಕಿದ್ದಾರೆ.!!

ಸಮೀಕ್ಷೆ ರಿಪೋರ್ಟ್ ಹೀಗಿದೆ.!!

ಸಮೀಕ್ಷೆ ರಿಪೋರ್ಟ್ ಹೀಗಿದೆ.!!

ಇನ್ನು ಈ ಪೈಕಿ ಶೇ.37ರಷ್ಟು ಮಕ್ಕಳು ಮಾತ್ರ ಒಂದು ಗಂಟೆಗೂ ಕಡಿಮೆ ಅವಧಿ ಗ್ಯಾಜೆಟ್ ಬಳಸುತ್ತಿದ್ದರೆ, ಶೇ.28ರಷ್ಟು ಮಕ್ಕಳು 1-2 ಗಂಟೆ, ಶೇ.13 ರಷ್ಟು ಮಕ್ಕಳು 2-3 ಗಂಟೆ ಹಾಗೂ ಶೇ.18ರಷ್ಟು ಮಕ್ಕಳು 3-4 ಗಂಟೆ ಹೊತ್ತು ಸ್ಮಾರ್ಟ್ ಗ್ಯಾಜೆಟ್ ಬಳಕೆ ಮಾಡುತ್ತಿದ್ದರು ಎಂದು ತಜ್ಞರು ಹೇಳಿದ್ದಾರೆ.!!

ಗ್ಯಾಜೆಟ್‌ನಿಂದ ಮಧುಮೇಹ!!

ಗ್ಯಾಜೆಟ್‌ನಿಂದ ಮಧುಮೇಹ!!

ಈ ಅಧ್ಯಯನದಲ್ಲಿ ಕಡಿಮೆ ಗ್ಯಾಜೆಟ್ ಬಳಕೆ ಮಾಡುತ್ತಿರುವ ಮಕ್ಕಳಲ್ಲಿ ರೋಗದ ಅಪಾಯ ಕಡಿಮೆ ಕಂಡುಬಂದಿದ್ದರೆ. 3-4 ಗಂಟೆ ಹೊತ್ತು ಸ್ಮಾರ್ಟ್ ಗ್ಯಾಜೆಟ್ ಬಳಕೆ ಮಾಡುವ ಮಕ್ಕಳಲ್ಲಿ ಟೈಪ್-2 ಸಕ್ಕರೆ ಕಾಯಿಲೆ ಅಪಾಯ ಹೆಚ್ಚಿತ್ತು ಎಂದು ವೈದ್ಯರು ತಿಳಿಸಿದ್ದಾರೆ.!!

Best Mobiles in India

English summary
shocking way sugar affects your kid’s health.to know more visi to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+