ಮೊಬೈಲ್ ಫೋನ್ ಹಾವಳಿ ವಿಚಾರಣೆಗೆ ಕೋರ್ಟು ಬೇಕು

Posted By: Varun
ಮೊಬೈಲ್ ಫೋನ್ ಹಾವಳಿ ವಿಚಾರಣೆಗೆ ಕೋರ್ಟು ಬೇಕು

ಮೊಬೈಲ್‌ ನಲ್ಲಿ ಏನೇನೆಲ್ಲಾ ಮಾಡಬಹುದು. ಕರೆ ಮಾಡುವುದು, ಎಸ್.ಎಂ.ಎಸ್ ಕಳಿಸಬಹುದು, ಫೋಟೋ ತೆಗೆಯಬಹುದು, ಬಣ್ಣ ಬಣ್ಣದ ಚಿತ್ರ ನೋಡಬಹುದು, ಟಾರ್ಚ್ ಥರ ಉಪಯೋಗಿಸಬಹುದು, ವೈ-ಫೈ ಇದ್ದರೆ ಅಂತರ್ಜಾಲದಲ್ಲಿ ಏನೆಲ್ಲ ಹುಡುಕಬಹುದು.

ಮನೆಗೆ ತಿಂಡಿ ತರಿಸಬಹುದು, ರೈಲು , ಬಸ್ ಟಿಕೆಟ್ ಬುಕ್ ಮಾಡಬಹುದು.. ಉಫ್. ಇಷ್ಟೆಲ್ಲಾ ಉಪಯೋಗವಿದ್ದರೂ ಕೆಲವು ಬಾರಿ ಇದೇ ಮೊಬೈಲ್ ನಮಗೆ ಕೆಲವು ಆತಂಕ, ಆಪತ್ತುಗಳನ್ನೂ ತಂದುಕೊಡಬಹುದು. ಇದು ಚಾಕು ಇದ್ದಂತೆ. ಟೊಮೆಟೋ ಹೆಚ್ಚಬಹುದು, ಕುಯ್ಯಬಹುದು.

ಸರ್ವಾಂತರ್ಯಾಮಿ ಮೊಬೈಲ್ ಫೋನ್‌ಗಳ ವ್ಯಾಪಕ ಬಳಕೆಯಿಂದ ಉಂಟಾಗಿರುವ ಹಾವಳಿಯಿಂದ ಅಪರಾಧ ಪ್ರಕರಣಗಳೂ ಹೆಚ್ಚಾಗಿವೆ. ಒಂದು ಅಂದಾಜಿನ ಪ್ರಕಾರ, ಕೋರ್ಟ್ ನಲ್ಲಿ ವಿಚಾರಣೆಗೆ ಬರುವ ಪ್ರತಿ 3 ಕೇಸುಗಳಲ್ಲಿ ಒಂದು ಮೊಬೈಲ್ ಅಪರಾಧಕ್ಕೆ ಸಂಬಂಧಪಟ್ಟಿರುತ್ತದೆ ಎಂಬುದು ನ್ಯೂಸ್ ಫಾರ್ ಯು.

ಮೊಬೈಲ್ ಗ್ರಾಹಕರು ಹೆಚ್ಚಿದಂತೆ ಇಂತಹ ಪ್ರಕರಣಗಳ ಸಂಖ್ಯೆಯೂ ಏರುತ್ತಿದೆ. ಮೊಬೈಲ್ ಫೋನ್ ಮೂಲಕ ಸಾಮಾಜಿಕ ಸಂವಹನ ತಾಣಗಳನ್ನು ಸಂಪರ್ಕಿಸಿ ಅಪರಾಧ ಎಸಗಿರುವ ಹಲವು ಪ್ರಕರಣಗಳು ಪತ್ತೆಯಾಗಿವೆ. ಅನೇಕರ ಮೊಬೈಲ್ ಫೋನ್ ಬ್ಯಾಂಕಿಂಗ್ ಖಾತೆಗಳನ್ನು ಸೈಬರ್ ಅಪಾಧಿಗಳು ಹ್ಯಾಕ್ ಮಾಡಿದ್ದಾರೆ. ಲವ್ ಹೇಟ್ ಎಸ್ ಎಂ ಎಸ್ಸುಗಳ, ಎಂಎಂಎಸ್ಸುಗಳ ಸುದ್ದಿಗದ್ದಲ ಎಷ್ಟು ಬಣ್ಣಿಸಿದರೂ ಸಾಲದು!

ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಾಧೀಶ ಮತ್ತು ಸೈಬರ್ ಕಾನೂನು ತಜ್ಞ ಪವನ್ ದುಗ್ಗಲ್ ಅವರು ಬರೆದಿರುವ Mobile Law ಪುಸ್ತಕವನ್ನು ನೀವು ಒಮ್ಮೆ ತಿರುವು ಹಾಕುವುದು ಒಳಿತು. ಅವರ ಪ್ರಕಾರ, ಸದ್ಯ ದೇಶದಲ್ಲಿ ಸೈಬರ್ ಕಾನೂನು ಇರುವಂತೆ ಮೊಬೈಲ್ ಫೋನ್ ಆಧಾರಿತ ಪ್ರಕರಣಗಳ ವಿಚಾರಣೆ ನಡೆಸಲು ಪ್ರತ್ಯೇಕ ಮೊಬೈಲ್ ಕಾನೂನಿನ ಅಗತ್ಯವಿದೆ . ಮುಖ್ಯವಾಗಿ, ಮೌಲ್ಯವರ್ಧಿತ ಸೇವೆಗಳ ಮೇಲೆ ಕೆಲವು ನಿಬಂಧನೆಗಳನ್ನು ವಿಧಿಸಬೇಕು ಎನ್ನುವುದು ಅವರ ಅಭಿಮತ.

ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಮೊಬೈಲ್ ಗೆ ಸಂಬಂಧಪಟ್ಟ ಕಾನೂನುಗಳ ಬಗ್ಗೆ ಅರಿವು ಮೂಡಿಸಲೆಂದು ಎಲ್ಲರಿಗೂ ಉಪಯೋಗವಾಗುವಂಥ ಪುಸ್ತಕವನ್ನು ಪವನ್ ದುಗ್ಗಲ್ ಹೊರ ತಂದಿದ್ದಾರೆ. ಪುಸ್ತಕದ ಹೆಸರು Mobile Law . ( Rs. 695/) ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿದೆ ಲಿಂಕ್ -http://www.pavanduggal.net/mobile.php

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot