ಈ ರಿಪೋರ್ಟ್ ನೋಡಿ ಮಕ್ಕಳಿಗೆ 'ಮೊಬೈಲ್' ಮುಟ್ಟಿಸಲು ಸಹ ಹೆದರಬಹುದು!!

|

ಒಂದು ಒಂದೂವರೆ ವರ್ಷದ ನನ್ನ ಮಗ/ಮಗಳು ಸ್ಮಾರ್ಟ್‌ಫೋನ್‌ ಅನ್ನು ಆಪರೇಟ್ ಮಾಡುತ್ತಾರೆ ಎಂಬುದೇ ನಿಮ್ಮ ಖುಷಿಯ ವಿಷಯವಾಗಿದ್ದರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಏಕೆಂದರೆ, ಮಕ್ಕಳ ಆವಶ್ಯಕತೆಗಾಗಿ ಅವಲಂಬಿಸುವ ಫೋನ್ ಬಳಕೆಯು ಕ್ರಮೇಣ ಮನೋರಂಜನೆಗೂ ದಾರಿ ಮಾಡಿಕೊಡುತ್ತ, ಕ್ರಮೇಣ ಅದೇ ಚಟವಾಗುತ್ತದೆ ಎಂಬುದು ನಿಮಗೆ ಗೊತ್ತಾ?.

ಹೌದು, ಬಹುತೇಕ ತಾಯಂದಿರು ತಮ್ಮ ಏಳೆಂಟು ತಿಂಗಳ ಮಕ್ಕಳಿಗೆ ಊಟ ಮಾಡಿಸುವಾಗ, ಆಡಿಸುವಾಗ, ಮಕ್ಕಳನ್ನು ಓಲೈಸಲು ಮೊಬೈಲ್ ತೋರಿಸುವುದನ್ನು ನೋಡಬಹುದು. ಮಕ್ಕಳಿಗೆ ಇಂಟರ್‌ನೆಟ್‌ನಿಂದ ಮಾಹಿತಿಯನ್ನು ಹುಡುಕಿ ಹೋಮ್‌ವರ್ಕ್ ಮಾಡಿ ಎಂಬ ಸಲಹೆಯನ್ನು ನೀಡುತ್ತಿರುವು ಪೋಷಕರು ಸಹ ಇದ್ದಾರೆ. ಇವೆಲ್ಲದರ ಪರಿಣಾಮ ಈಗ ಮಕ್ಕಳ ಮೇಲಾಗುತ್ತಿದೆ.

ಈ ರಿಪೋರ್ಟ್ ನೋಡಿ ಮಕ್ಕಳಿಗೆ 'ಮೊಬೈಲ್' ಮುಟ್ಟಿಸಲು ಸಹ ಹೆದರಬಹುದು!!

ಆನ್‌ಲೈನ್ ಗೇಮ್‌ಗಳು ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸುವ ಮಕ್ಕಳು ಈಗ ಅವುಗಳಿಗೆ ದಾಸರಾಗಿದ್ದಾರೆ. ವಿದ್ಯಾರ್ಥಿಗಳು ಕೆಲವು ಆನ್‌ಲೈನ್ ಗೇಮ್‌ಗಳ ಬಲೆಗೆ ಬಿದ್ದು ಅವುಗಳಿಗಾಗಿ ಪ್ರಾಣ ತೆತ್ತಿದ್ದಾರೆ. ಈ ಒಂದು ಪರಿಸ್ಥಿತಿ ಈಗ ಸಾಮೂಹಿಕ ರೋಗವಾಗಿ ಬದಲಾಗಿದೆ. ಹಾಗಾಗಿ, ಇಂದಿನ ಲೆಖನದಲ್ಲಿ ಈ ಬಗ್ಗೆ ತಿಳಿಸಲೇಬೇಕಾದ ಅವಶ್ಯಕತೆ ಕೂಡ ಒದಗಿಬಂದಿದೆ.

ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳು

ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳು

ಒಂದು ದಿನಕ್ಕೆ ಎರಡು ಗಂಟೆಗಳಿಗಿಂತಲೂ ಹೆಚ್ಚು ಕಾಲ ಮೊಬೈಲ್, ಇಂಟರ್‌ನೆಟ್ ಬಳಸುವ ಯಾವುದೇ ಮಕ್ಕಳಲ್ಲಿ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳು ಕಂಡುಬರುತ್ತಿವೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಮಕ್ಕಳಲ್ಲಿನ ಅತಿಯಾದ ಬೊಜ್ಜು, ಚರ್ಮ ಕಾಯಿಲೆಗಳು, ದೃಷ್ಟಿದೋಷ ಕಾಣಿಸಿಕೊಳ್ಳಲು ಇದು ಒಂದು ಕಾರಣ .

ಇಷ್ಟು ಸಮಸ್ಯೆ ಇದೆ ಅಂತ ಯೋಚಿಸಿದ್ದೀರಾ!

ಇಷ್ಟು ಸಮಸ್ಯೆ ಇದೆ ಅಂತ ಯೋಚಿಸಿದ್ದೀರಾ!

ಶಾರೀರಿಕವಾಗಿ ಬರುವ ಸಮಸ್ಯೆಗಳನ್ನು ಹೊರತುಪಡಿಸಿದರೆ, ಆತಂಕ, ಆಕ್ರಮಣಕಾರಿ ವರ್ತನೆ, ಕೆಟ್ಟ ಆಲೋಚನೆ, ಆತ್ಮಹತ್ಯೆ, ಭಾವವಿಕಾರಗಳು, ಸಂವೇದನಾ ರಹಿತತೆ, ಸಂವಹನ ಸಾಮರ್ಥ್ಯದ ಕೊರತೆ, ಖಿನ್ನತೆ, ಒಂಟಿತನ, ಹತೋಟಿಯಿಲ್ಲದ ಆವೇಗಗಳು, ಮಾದಕವ್ಯಸನ ಮುಂತಾದ ಸಮಸ್ಯೆಗಳಿಗೆ ತಂತ್ರಜ್ಞಾನದ ಉಪಕರಣಗಳ ಅತಿಯಾದ ಬಳಕೆಯೆ ಕಾರಣ.

ಮೊಬೈಲ್‍ ಬಳಕೆ ಒಂದು ಚಟ!

ಮೊಬೈಲ್‍ ಬಳಕೆ ಒಂದು ಚಟ!

ಈಗ ಮೊಬೈಲ್‍ ಬಳಕೆ ಮತ್ತು ಸೆಲ್ಫೀ ತೆಗೆದುಕೊಳ್ಳುವುದು ಕೂಡ ಚಟ ಎಂಬುದು ಸಾಬೀತಾಗಿದೆ ಎಂಬುದು ನಿಮಗೆ ತಿಳಿದಿದ್ದರೆ ಒಳಿತು. ಒಂದು ಕಡೆ ಜನರು ಕೂತಕಡೆಯಿಂದ ಅಲುಗಾಡದೇ ಅವುಗಳಲ್ಲಿ ತಲ್ಲೀನರಾಗಿರುತ್ತಿದ್ದರೆ, ಮಕ್ಕಳು ಮೊಬೈಲ್ ಎಂಬ ಮಾಯೆಯೊಳಗೆ ಕಾಲಿಟ್ಟಿದ್ದಾರೆ. ಮೊಬೈಲ್‌ನಿಂದ ಮಕ್ಕಳು ವಾಸ್ತವತೆಯಿಂದ ದೂರಾಗುತ್ತಿದ್ದಾರೆ ಎನ್ನುತ್ತಾರೆ ಮನಶಾಸ್ತ್ರಜ್ಞರು.!

ಹಾರ್ಮೋನ್‌ಗಳ ವ್ಯತ್ಯಾಸ

ಹಾರ್ಮೋನ್‌ಗಳ ವ್ಯತ್ಯಾಸ

ಮೊಬೈಲ್‌ ಬಳಕೆಯಿಂದ ದೇಹದ ನರವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಇದು ಖಿನ್ನತೆ ಮತ್ತು ಆತಂಕಕ್ಕೆ ಕಾರಣವಾಗುವುದಲ್ಲದೆ, ಮಕ್ಕಳಲ್ಲಿ ಚಯಾಪಚಯ ಕ್ರಿಯೆ ಮತ್ತು ಆರೋಗ್ಯದ ರಕ್ಷಣೆ ಸೂಕ್ಷ್ಮವಾಗಿರುವುದರಿಂದ ಹಾರ್ಮೋನ್‌ಗಳ ವ್ಯತ್ಯಾಸಕ್ಕೂ ಸಹ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ. ಅಂದರೆ ಫೋನ್ ಬಳಕೆಯಿಂದ ಹಾರ್ಮೋನ್‌ಗಳು ವ್ಯತ್ಯಾಸವಾಗುತ್ತವೆ.!

ನಿದ್ರೆಗೆ ತೊಂದರೆಯಾಗುತ್ತಿದೆ!

ನಿದ್ರೆಗೆ ತೊಂದರೆಯಾಗುತ್ತಿದೆ!

ಮಕ್ಕಳು 4 ಗಂಟೆಗೂ ಅಧಿಕ ಸಮಯ ಡಿಜಿಟಲ್‌ ಸ್ಕ್ರೀನ್ ನಿರಂತರವಾಗಿ ನೋಡಿದರೆ ಶೇ 49 ರಷ್ಟು ನಿದ್ರೆಗೆ ತೊಂದರೆಯಾಗುತ್ತದೆ ಎನ್ನುತ್ತವೆ ವರದಿಗಳು. ಮಲಗುವ ಮೊದಲು ಮೊಬೈಲ್‌, ಟಿ.ವಿ. ಕಂಪ್ಯೂಟರ್‌ಳಿಂದ ಕನಿಷ್ಠ 1 ಗಂಟೆಯಾದರೂ ಮಕ್ಕಳು ಅವುಗಳಿಂದ ದೂರ ಇರಬೇಕು. ಇಲ್ಲವಾದರೆ ಮಕ್ಕಳಿಗೆ ಉತ್ತಮ ನಿದ್ದೆಮಾಡಲು ಸಾಧ್ಯವಿಲ್ಲಾ ಎಂದು ವೈದ್ಯರು ಹೇಳುತ್ತಾರೆ.

ಸೂಕ್ತವಲ್ಲದ ಅಂತರ್ಜಾಲ ತಾಣ ವೀಕ್ಷಣೆ!

ಸೂಕ್ತವಲ್ಲದ ಅಂತರ್ಜಾಲ ತಾಣ ವೀಕ್ಷಣೆ!

ಜಗತ್ತಿನ ಶೇ 54% ಮಕ್ಕಳು ಸೂಕ್ತವಲ್ಲದ ಅಂತರ್ಜಾಲ ತಾಣಗಳನ್ನು ನೋಡಿರುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ರಾತ್ರಿ ವೇಳೆ ಗ್ಯಾಜೆಟ್ ಬಳಕೆ ಮಾಡುವ ಮಕ್ಕಳು ಹೆಚ್ಚು ಸಮಯ ಬೇಡದ ಅಂತರ್ಜಾಲ ತಾಣಗಳಿಗೆ ಭೇಟಿ ನೀಡಿರುತ್ತಾರೆ ಎಂದು ಹೇಳಲಾಗಿದೆ. ಇದು ಪೋಷಕರಿಗೂ ಗೊತ್ತಿದ್ದರೂ, ವಯಸ್ಕ ಮಕ್ಕಳ ಮುಂದೆ ಬುದ್ದಿವಾದ ಹೇಳಲು ಭಯವಂತೆ.

Most Read Articles
Best Mobiles in India

English summary
There's growing concern about how the amount of time children spend on smart phones (mobile) impacts their brains. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more