Home
ಸುದ್ದಿಜಾಲ

ಟ್ರಾಯ್ ಹೊಸ ನಿಯಮ: ಸಂಕಷ್ಟದಲ್ಲಿ ಟೆಲಿಕಾಂ ಕಂಪನಿಗಳು, ಬಳಕೆದಾರರಿಗೆ ಲಾಭ..!

By Srinidhi
Get 1GB free Jio 4G data with Cadbury Dairy Milk - KANNADA

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬದಲಾವಣೆಗೆ ಕಾರಣವಾಗಿದ್ದು ಮತ್ತು ಬಳಕೆದಾರರಿಗೆ ಹೆಚ್ಚಿನ ಸ್ವಾತಂತ್ರವನ್ನು ತಂದು ಕೊಟ್ಟು, ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಮತ್ತು ಉಳಿಸಿಕೊಳ್ಳಲು ಹರ ಸಾಹಸ ಪಡುವಂತೆ ಮಾಡಿದ್ದು ಮೊಬೈಲ್ ನಂಬರ್ ಪೋರ್ಟಬಲಿಟಿ ಎಂದರೆ ತಪ್ಪಾಗುವುದಿಲ್ಲ. ಬಳಕೆದಾರರಿಗೆ ಒಂದು ಮೊಬೈಲ್ ಟೆಲಿಕಾಂ ಆಪರೇಟರ್‌ನಿಂದ ಮತ್ತೊಂದು ಟೆಲಿಕಾಂ ಆಪರೇಟರ್‌ಗೆ ಬದಲಾಯಿಸಿಕೊಳ್ಳಲು ಇದು ಅವಕಾಶವನ್ನು ಮಾಡಿಕೊಟ್ಟಿತ್ತು.

ಟ್ರಾಯ್ ಹೊಸ ನಿಯಮ: ಸಂಕಷ್ಟದಲ್ಲಿ ಟೆಲಿಕಾಂ ಕಂಪನಿಗಳು, ಬಳಕೆದಾರರಿಗೆ ಲಾಭ..!

ಈ ಮೊಬೈಲ್‌ ನಂಬರ್ ಪೋರ್ಟಬಲಿಟಿಯಿಂದಾಗಿ ಅನೇಕ ಟೆಲಿಕಾಂ ಕಂಪನಿಗಳು ಬಳಕೆದಾರರನ್ನು ಕಳೆದುಕೊಂಡ ಮಾದರಿಯಲ್ಲಿಯೇ ಅನೇಕ ಟೆಲಿಕಾಂ ಕಂಪನಿಗಳು ಹೆಚ್ಚಿನ ಮಂದಿ ಬಳಕೆದಾರರನ್ನು ತಮ್ಮದಾಗಿಸಿಕೊಂಡವು. ಇದರಿಂದಾಗಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸಂಚಲನವು ಶುರುವಾಗಿತ್ತು. ಇದೇ ಮಾದರಿಯಲ್ಲಿ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಮೊಬೈಲ್ ನಂಬರ್ ಫೋರ್ಟಬಲಿಟಿಯನ್ನು ಪ್ರೋತ್ಸಾಹಿಸುವ ಹೊಸದೊಂದು ನಿಮಯವನ್ನು ಜಾರಿಗೆ ತರಲು ಮುಂದಾಗಿದೆ.

ಹೊಸ ನಿಮಯ ಜಾರಿಗೆ:

ಹೊಸ ನಿಮಯ ಜಾರಿಗೆ:

ಇಷ್ಟು ದಿನಗಳವರೆಗೆ ನೀವು ಮೊಬೈಲ್ ನಂಬರ್ ಪೋರ್ಟಬಲಿಯ ಲಾಭವನ್ನು ಪಡೆದುಕೊಳ್ಳಬೇಕಾದ ಸಂದರ್ಭದಲ್ಲಿ ಸಾಕಷ್ಟು ಶ್ರಮವನ್ನು ಪಡೆಬೇಕಾಗಿತ್ತು. ಅಲ್ಲದೇ ಒಂದು ವಾರಗಳ ಕಾಲ ಇದಕ್ಕದಾಗಿಯೇ ಕಾಯಬೇಕಾಗಿತ್ತು. ಆದರೆ ಇದು ಬದಲಾಗಿದೆ. ಶೀಘ್ರವೇ ಪೋರ್ಟಬಲಿಯನ್ನು ಮಾಡಿಕೊಡಲು ಹೊಸ ನಿಮಯವನ್ನು ಟ್ರಾಯ್ ಜಾರಿಗೆ ತರಲಿದೆ.

ಎರಡೇ ದಿನದಲ್ಲಿ ಪೋರ್ಟಬಲ್:

ಎರಡೇ ದಿನದಲ್ಲಿ ಪೋರ್ಟಬಲ್:

ಇನ್ನು ಮುಂದೆ ನೀವು ಇಂದು ಟೆಲಿಕಾಂ ಆಪರೇಟರ್‌ನಿಂದ ಮತ್ತೊಂದು ಟೆಲಿಕಾಂ ಅಪರೇಟರ್‌ಗೆ ವರ್ಗಾವಣೆಯನ್ನು ಹೊಂದಲು ಕೇವಲ ಎರಡು ದಿನಗಳು ಮಾತ್ರವೇ ಕಾಯಬೇಕಾಗಿದೆ. ಇದು ಮೊದಲು ಏಳು ದಿನಗಳ ಕಾಲ ಇತ್ತು. ಇನ್ನು ಮುಂದೆ ವೇಗವಾಗಿ ನೀವು ನಂಬರ್ ಪೋರ್ಟಬಲಿಟಿಯನ್ನು ಪಡೆಯಬಹುದಾಗಿದೆ.

ಬಳಕೆದಾರರಿಗೆ ಸಹಾಯಕಾರಿ:

ಬಳಕೆದಾರರಿಗೆ ಸಹಾಯಕಾರಿ:

ಎರಡೇ ದಿನದಲ್ಲಿ ಪೋರ್ಟಬಲ್ ಮಾಡಿಕೊಳ್ಳುವ ಅವಕಾಶವನ್ನು ನೀಡಿರುವುದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ. ಯಾವ ಟೆಲಿಕಾಂ ಆಪರೇಟರ್‌ ಉತ್ತಮ ಸೇವೆಯನ್ನು ನೀಡುವುದಿಲ್ಲವೋ ಅವರನ್ನು ತಿರಸ್ಕರಿಸಿ ಬೇರೆ ಟೆಲಿಕಾಂ ಅಪರೇಟರ್ ಅನ್ನು ಶೀಘ್ರವೇ ಆಯ್ಕೆ ಮಾಡಿಕೊಳ್ಳಲು ಇದು ಸಹಾಯವನ್ನು ಮಾಡಲಿದೆ.

ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಹವಾ:

ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಹವಾ:

ಇದು ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಹವಾ ಎಬ್ಬಿಸಲಿದೆ ಎನ್ನಲಾಗಿದೆ. ಈ ಹಿಂದೆ ಕಾಣಿಸಿಕೊಂಡಿದ್ದ ಪೋರ್ಟಬಲಿಟಿಯೊಂದಾಗಿ ಸಾಕಷ್ಟು ದೈತ್ಯ ಕಂಪನಿಗಳು ಬಳಕೆದಾರರನ್ನು ಕಳೆದುಕೊಂಡಿದ್ದವು ಇದೇ ಸಂದರ್ಭದಲ್ಲಿ ಈಗ ಇನ್ನಷ್ಟು ವೇಗವಾಗಿ ನಡೆಯುವುದರಿಂದ ಮತ್ತೊಂದು ಸುತ್ತಿನಲ್ಲಿ ಬದಲಾವಣೆ ಸಾಧ್ಯವಾಗಲಿದೆ.

ಜಿಯೋಗೆ ಲಾಭ:

ಜಿಯೋಗೆ ಲಾಭ:

ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಮಂದಿ ಜಿಯೋದಿಂದಾಗಿ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಆದರ ಜೊತೆಗೆ ಬೇರೆ ಟೆಲಿಕಾಂ ಸೇವೆಯನ್ನು ಆನಂದಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನೇಲ್ಲಾ ಜಿಯೋ ತನ್ನ ಕಡೆಗೆ ಸೆಳೆದುಕೊಳ್ಳಲು ಈ ಹೊಸ ಆಫರ್ ಸಹಾಯವನ್ನು ಮಾಡಲಿದೆ.

Best Mobiles in India

English summary
Mobile number portability to become faster. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+