Mobile Recharge: ಚುನಾವಣೆ ಫಲಿತಾಂಶ ಬಳಿಕ ದುಬಾರಿಯಾಗಲಿದೆ ಮೊಬೈಲ್ ರೀಚಾರ್ಜ್ ದರ!
ಇಡೀ ದೇಶವೇ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಈ ಸಮಯದಲ್ಲೇ ದೇಶದ ಜನರಿಗೆ ದೊಡ್ಡ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮೊಬೈಲ್ ರೀಚಾರ್ಜ್ ದರ (Mobile Recharge Rate) ದುಬಾರಿಯಾಗಲಿದೆ. ಟೆಲಿಕಾಂ ವಲಯದಲ್ಲಿ ಸುಂಕ ಹೆಚ್ಚಳವು ಬಹಳ ದಿನಗಳಿಂದ ಬಾಕಿ ಉಳಿದಿದ್ದು, ಫಲಿತಾಂಶದ ನಂತರ ದರ ಹೆಚ್ಚಳ ಖಚಿತವಾಗಿದೆ. ಟೆಲಿಕಾಂ ಉದ್ಯಮದಲ್ಲಿ ಅಂದಾಜು ಶೇ.15 ರಿಂದ 17% ಅಥವಾ 25% ರಷ್ಟು ಸುಂಕ ಹೆಚ್ಚಳವಾಗಲಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ಆ್ಯಂಟಿಕ್ ಸ್ಟಾಕ್ ಬ್ರೋಕಿಂಗ್ ವರದಿ ಬಹಿರಂಗಪಡಿಸಿದೆ.
ಹೌದು, ಪ್ರಸ್ತುತ ದಿನಬಳಕೆಯ ವಸ್ತುಗಳ ಏರಿಕೆಯಿಂದ ಕಂಗಾಲಾಗಿರುವ ಜನರು ಇನ್ನೊಂದು ಹೊಡೆತಕ್ಕೆ ಸಿದ್ದರಾಗಬೇಕಿದೆ. ಚುನಾವಣಾ ಫಲಿತಾಂಶದ ಬಳಿಕ ದೇಶದ ಕೋಟ್ಯಂತರ ಜನರ ಜೇಬಿಗೆ ಕತ್ತರಿ ಬೀಳಲಿದೆ. ಮೊಬೈಲ್ ಸೇವಾ ಸಂಸ್ಥೆಗಳು ಸುಂಕ ಹೆಚ್ಚಿಸಲು ತುದಿಗಾಲಿನಲ್ಲಿ ನಿಂತಿದ್ದು, ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮೊಬೈಲ್ ರೀಚಾರ್ಜ್(Mobile Recharge) ದುಬಾರಿಯಾಗಲಿದೆ ಎಂದು ವರದಿಯಲ್ಲಿ ತಿಳಿಸಿದೆ. ಒಂದುವೇಳೆ ದರ ಹೆಚ್ಚಳವಾದರೆ, ಪ್ರಸ್ತುತ ಇರುವ 300 ರೂ.ಗಳ ರೀಚಾರ್ಜ್ ದರ ಸುಮಾರು 351 ರೂ.ಗೆ ಹೆಚ್ಚಳವಾಗುವುದು ಗ್ಯಾರಂಟಿ.

ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್ 19 ರಿಂದ ಜೂನ್ 1 ರವರೆಗೆ 7 ಹಂತಗಳಲ್ಲಿ ನಡೆದಿವೆ. ಇಂದು (ಜೂನ್ 4) ಮತ ಎಣಿಕೆ ನಡೆದಿದೆ. ಆ್ಯಂಟಿಕ್ ಸ್ಟಾಕ್ ಬ್ರೋಕಿಂಗ್‌ನ ಈ ವರದಿಯ ಪ್ರಕಾರ ಟೆಲಿಕಾಂ ವಲಯದಲ್ಲಿ ಸುಂಕ ಹೆಚ್ಚಳವು (Mobile Recharge) ಬಹಳ ದಿನಗಳಿಂದ ಬಾಕಿ ಉಳಿದಿದ್ದು, ಚುನಾವಣೆ ಫಲಿತಾಂಶದ ಬಳಿಕ Mobile Recharge Rate ಹೆಚ್ಚಳ ಖಚಿತ ಎಂದು ಹೇಳಲಾಗಿದೆ. ಇದರಿಂದ ಭಾರತಿ ಏರ್‌ಟೆಲ್‌ಗೆ ಹೆಚ್ಚಿನ ಲಾಭವಾಗಲಿದೆ.
300 ರೂ.ನ ರೀಚಾರ್ಜ್ ದರ 351 ರೂ.ಗೆ ಹೆಚ್ಚಳ!
ಕಳೆದ ಡಿಸೆಂಬರ್ 2021ರಲ್ಲಿ ಕೊನೆಯ ಬಾರಿಗೆ ಶೇ.20 ರಷ್ಟು Mobile Recharge Rate ಹೆಚ್ಚಿಸಲಾಗಿತ್ತು. ಸುಮಾರು 3 ವರ್ಷಗಳ ನಂತರ ಸುಂಕವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಅದರಂತೆ, ಚುನಾವಣಾ ಫಲಿತಾಂಶದ ಬಳಿಕ ಟಿಲಿಕಾಂ ಉದ್ಯಮವು ಶೇ.15 ರಿಂದ 25ರಷ್ಟು ಶುಲ್ಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉದಾಹರಣೆಗೆ, ಶೇ.17ರಷ್ಟು ಶುಲ್ಕ ಹೆಚ್ಚಳವಾದರೆ, ನಾವು ಈಗ 300 ರೂ. ರೀಚಾರ್ಜ್‌ಗೆ ಪಾವತಿಸುವ ದರವು, ಶುಲ್ಕ ಹೆಚ್ಚಳದ ನಂತರ 351 ರೂ.ಗೆ ಏರಿಕೆಯಾಗಲಿದೆ.
2027ರ ಅಂತ್ಯದ ವೇಳೆಗೆ ಮತ್ತಷ್ಟು ದುಬಾರಿ?
2027ರ ಅಂತ್ಯದ ವೇಳೆಗೆ Mobile Recharge Rate ಮತ್ತಷ್ಟು ಹೆಚ್ಚಳವಾಗಬಹುದು. ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಭಾರ್ತಿ ಏರ್‌ಟೆಲ್ ಪ್ರತಿ ಗ್ರಾಹಕನಿಗೆ ಸರಾಸರಿ ಗಳಿಕೆಯ ಬ್ಲೂಪ್ರಿಂಟ್ ಬಹಿರಂಗಪಡಿಸಿದೆ. ಇದರಂತೆ, ಕಂಪನಿಯ ಪ್ರಸ್ತುತ ಎಆರ್‌ಪಿಯು 208 ರೂ. ಆಗಿದೆ. 2026-27ರ ವೇಳೆಗೆ 286 ರೂ. ತಲುಪುವ ಸಾಧ್ಯತೆಯಿದೆ. ಭಾರ್ತಿ ಏರ್‌ಟೆಲ್‌ನ ಗ್ರಾಹಕರ ಸಂಖ್ಯೆಯು ವರ್ಷಕ್ಕೆ ಸುಮಾರು ಎರಡು ಪ್ರತಿಶತದಷ್ಟು ಏರಿಕೆಯಾಗುತ್ತದೆ. ಆದರೆ, ಉದ್ಯಮವು ವರ್ಷಕ್ಕೆ ಒಂದು ಪ್ರತಿಶತದಷ್ಟು ಬೆಳೆಯುತ್ತದೆ ಎಂದು ತಿಳಿಸಿದೆ.

ವೊಡಾಫೋನ್ ನಷ್ಟ, ಜಿಯೋಗೆ ಲಾಭ!
ಭಾರ್ತಿ ಏರ್‌ಟೆಲ್‌ನ ಮಾರುಕಟ್ಟೆ ಪಾಲು ಸೆಪ್ಟೆಂಬರ್ 2018 ರಲ್ಲಿ ಶೇ.29.4ರಿಂದ ಶೇ.33ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಜಿಯೋದ ಮಾರುಕಟ್ಟೆ ಪಾಲು ಶೇ. 21.6 ರಿಂದ ಶೇ.39.7ಕ್ಕೆ ಏರಿದೆ. ಇನ್ನೂ, ವೊಡಾಫೋನ್ ಐಡಿಯಾದ ಮಾರುಕಟ್ಟೆ ಪಾಲು ಸೆಪ್ಟೆಂಬರ್ 2018 ರಲ್ಲಿ ಶೇ.37.2 ರಿಂದ ಸುಮಾರು ಅರ್ಧದಷ್ಟು, ಅಂದರೆ ಡಿಸೆಂಬರ್ 2023 ರಲ್ಲಿ ಶೇ.19.3ಕ್ಕೆ ಕುಸಿದಿದೆ. ವರದಿಯ ಪ್ರಕಾರ ಜಿಯೋಗೆ ಲಾಭವಾಗಿದ್ದರೆ, ವೊಡಾಫೋನ್ ಐಡಿಯಾ ನಷ್ಟ ಅನುಭವಿಸಿದೆ.
ಗ್ರಾಮೀಣ ಪ್ರದೇಶದಲ್ಲಿ ಶೇ.5.9 ರಷ್ಟು ಹೆಚ್ಚಳ!
ಇನ್ನೂ, ನಗರ ಪ್ರದೇಶದ ಗ್ರಾಹಕರಿಗೆ ತಮ್ಮ ಒಟ್ಟು ವೆಚ್ಚದ ಶೇ.3.2 ರಿಂದ ಶೇ.3.6ರಷ್ಟು Mobile Recharge ದರವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಗ್ರಾಮೀಣ ಪ್ರದೇಶದ ಗ್ರಾಹಕರು ಶೇ.5.2 ರಿಂದ ಶೇ.5.9 ರಷ್ಟು ದರ ಏರಿಕೆಯ ಬಿಸಿ ಅನುಭವಿಸುವ ಸಾಧ್ಯತೆಯಿದೆ. ಅದೇನೇ ಇರಲಿ, ಸದ್ಯ ದಿನಬಳಕೆಯ ವಸ್ತುಗಳ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇದೀಗ, Mobile Recharge Rate ಏರಿಕೆಯ ಹೊಡೆತವು, ಗಾಯದ ಮೇಲೆ ಬರೆ ಎಳೆದಂತಾಗಲಿದೆ. ಯಾವುದಕ್ಕೂ ಹೆಚ್ಚು ಶುಲ್ಕ ಪಾವತಿಸಲು ಸಿದ್ಧರಾಗಿ!


Click it and Unblock the Notifications








