ಮೊಬೈಲ್ ಫೋನ್ ಕಂಡುಹಿಡಿದವರೆ ಮೊಬೈಲ್ ಫೋನ್ ಬಳಕೆಯ ಬಗ್ಗೆ ಹೇಳಿದ್ದೇನು?
ಪ್ರಸ್ತುತ ದಿನಗಳಲ್ಲಿ ಮೊಬೈಲ್ ಫೋನ್ ಇಲ್ಲದೆ ಮನೆಯಿಂದ ಹೊರಹೋಗುವುದೇ ಇಲ್ಲ ಎನ್ನುವ ಸ್ಥಿತಿಗೆ ತಲುಪಿದ್ದೇವೆ. ಮೊಬೈಲ್ ಫೋನ್ ಇಲ್ಲದೆ ಅರೆ ಕ್ಷಣವೂ ಕೂಡ ಕಳೆಯಲು ಸಾಧ್ಯವಿಲ್ಲ ಎನ್ನುವವರು ಇದ್ದಾರೆ. ಇದು ಯಾವ ಪರಿಯಿದೆ ಎಂದರೆ ಸ್ವತಃ ಮೊಬೈಲ್ ಫೋನ್ ಕಂಡುಹಿಡಿದ ಮಾರ್ಟಿನ್ ಕೂಪರ್ ಕೂಡ ಬೇಸರ ಪಡುವ ಮಟ್ಟಿಗೆ.
ಹೌದು, ಮೊಬೈಲ್ ಫೋನ್ ಆವಿಷ್ಕಾರ ಮಾಡಿದ ಮಾರ್ಟಿನ್ ಕೂಪರ್ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಮೊಬೈಲ್ ಫೋನ್ ಬಳಕೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇಂದಿನ ದಿನಗಳಲ್ಲಿ ಜನ ರಸ್ತೆ ದಾಟುವಾಗಲೂ ಕೂಡ ಮೊಬೈಲ್ ಫೋನ್ ಬಳಸುತ್ತಿರುವುದು ನೋಡಿ ನನಗೆ ಬೇಸರವಾಗಿದೆ ಎಂದು ಹೇಳಿದ್ದಾರೆ. ಹಾಗಾದ್ರೆ ಮಾರ್ಟಿನ್ ಕೂಪರ್ ಹೇಳಿದ್ದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಯೆಸ್ ಮೊಬೈಲ್ ಫೋನ್ ಪರಿಚಯಿಸುವ ಮೂಲಕ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿ ಮಾಡಿದ ಮಾರ್ಟಿನ್ ಕೂಪರ್ ಕೂಡ ಮೊಬೈಲ್ ಬಳಕೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇಂದಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳ ಗಾತ್ರ ಚಿಕ್ಕದಾಗಿದೆ, ಆದರೆ ಅತಿರೇಕದ ಬಳಕೆ ನನ್ನನ್ನು ಬೇಸರಪಡಿಸಿದೆ ಎಂದು ಹೇಳಿದ್ದಾರೆ. ಮೊಬೈಲ್ ಫೋನ್ ಪರಿಚಯಿಸಿ ಐವತ್ತು ವರ್ಷಗಳಾಗಿದ್ದು, ಇಷ್ಟು ವರ್ಷಗಳಲ್ಲಿ ಮೊಬೈಲ್ ಹೇಗೆ ವಿಕಸನಗೊಂಡಿದೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಮಾರ್ಟಿನ್ ಕೂಪರ್ "ಸೆಲ್ ಫೋನ್‌ನ ಪಿತಾಮಹ" ಎಂದು ಗುರುತಿಸಿಕೊಂಡಿದ್ದಾರೆ. ಏಪ್ರಿಲ್ 3, 1973 ರಂದು ಮೊಟೊರೊಲಾದಿಂದ ಮೊದಲ ಹ್ಯಾಂಡ್‌ಹೆಲ್ಡ್ ಮೊಬೈಲ್ ಫೋನ್‌ನ ಪರಿಚಯಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಆದರೆ ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಒಂದು ಗೀಳಾಗಿರುವುದರ ಬಗ್ಗೆ ಕೂಪರ್ ಬೇಸರ ಹೊಂದಿದ್ದಾರರೆ. ಅದರಲ್ಲೂ ಫೋನ್‌ಗಳನ್ನು ನೋಡುತ್ತಲೇ ರಸ್ತೆಗಳನ್ನು ದಾಟುವ ಜನರನ್ನು ದನ್ನು ನೋಡಿದರೆ ಬೇಸರವಾಗುತ್ತಿದೆ ಎಂದಿದ್ದಾರೆ. ಇದರ ನಡುವೆಯೂ ಸಮಾಜದಲ್ಲಿ ಧನಾತ್ಮಕವಾಗಿ ಪರಿವರ್ತನೆ ತರುವಲ್ಲಿ ಮೊಬೈಲ್ ಫೋನ್ ಅಗಾಧವಾದ ಸಾಮರ್ಥ್ಯವನ್ನು ಹೊಂದಿದೆ ಎಂದು ಕೂಪರ್ ಹೇಳಿದ್ದಾರೆ.

ಕೂಪರ್ ಯಾವ ಫೋನ್ ಬಳಸುತ್ತಿದ್ದಾರೆ?
ಸದ್ಯ ಮಾರ್ಟಿನ್ ಕೂಪರ್ ಕ್ಯಾಲಿಫೋರ್ನಿಯಾದ ಡೆಲ್ ಮಾರ್‌ನಲ್ಲಿರುವ ಡೈನಾ ಎಲ್‌ಎಲ್‌ಸಿಯ ಸಹ-ಸ್ಥಾಪಕ ಹಾಗೂ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಇನ್ನು ಇವರು ಟಾಪ್ ಎಂಡ್ ಐಫೋನ್ ಅನ್ನು ಬಳಸುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಆಪಲ್ ವಾಚ್ ಬಳಕೆ ಮಾಡುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.

ವಿಶ್ವದ ಮೊದಲ ಫೋನ್ ಹೇಗಿತ್ತು?
ಮೊಟ್ಟ ಮೊದಲ 'ಮೊಟೊರೊಲಾ DynaTAC' ಫೋನ್ 23cm ಉದ್ದ ಮತ್ತು 1.1kg ತೂಕ ಹೊಂದಿತ್ತು. ಅಲ್ಲದೇ ಇದು ಸಂಪೂರ್ಣ ಚಾರ್ಜ್ ಹೊಂದಲು 10 ಗಂಟೆಗಳ ಸಮಯ ಬೇಕಿತ್ತು. ಆದರೆ ಬಳಕೆ ಆಗುತ್ತಿದ್ದದ್ದು ಮಾತ್ರ ಕೇವಲ 35 ನಿಮಿಷಗಳು. ವಿಶ್ವದ ಮೊಟ್ಟ ಮೊದಲ ವಾಣಿಜ್ಯ ಫೋನ್ "Motorola DynaTAC" ಆಗಿದ್ದು, ಅಮೇರಿಕದ ನ್ಯೂಯಾರ್ಕ್‌ನಲ್ಲಿ ಸೆಲ್‌ಫೋನ್ ಕರೆಯನ್ನು ಮೊದಲ ಬಾರಿಗೆ ಮಾಡಲಾಗಿತ್ತು. ಮಾರ್ಟಿನ್ ಕೂಪರ್'ರವರು ನ್ಯೂಯಾರ್ಕ್ ಸಿಟಿಯ 53 ಮತ್ತು 54ನೇ ಬೀದಿ ನಡುವೆ 6 ಮುಖ್ಯ ವಿಶಾಲ ಬೀದಿಯಲ್ಲಿ 900MHz ಮುಖ್ಯ ಕೇಂದ್ರ ಹೊಂದಿದ್ದರು. ಹಾಗೆಯೇ, ಮೊದಲ ಕರೆಯನ್ನು ನ್ಯೂಜರ್ಸಿಯ ಬೆಲ್ ಲ್ಯಾಬ್ಸ್‌ಗೆ ಕರೆ ಮಾಡಲಾಗಿತ್ತು. ಮಾರ್ಟಿನ್ ಕೂಪರ್'ರವರು ತಮ್ಮ ಮೊದಲ ಡಿವೈಸ್ ಅನ್ನು ಹೊರತರಲು ಪೇಟೆಂಟ್ ಸಹ ಪಡೆದು ವಿನ್ಯಾಸಕಾರರಾದ 'ರುಡಿ ಕ್ರೊಲಾಪ್ಪ್' ಜೊತೆಗೆ ಕಾರ್ಯನಿರ್ವಹಿಸಿದ್ದರು. ಅವರಿಬ್ಬರು ಸೇರಿ DynaTAC (Dynamic Adaptive Total Area Coverage) ಫೋನ್ ಅನ್ನು ಅಭಿವೃದ್ದಿ ಪಡಿಸಿದ್ದರು.


Click it and Unblock the Notifications








