Subscribe to Gizbot

ಆಕಾಶದಲ್ಲೂ ಮೊಬೈಲ್‌ನಲ್ಲಿ ಮಾತನಾಡಿ, ವಾಟ್ಸ್‌ಆಪ್ ಚಾಟ್ ಮಾಡಿ..!

Written By:

ವಿಮಾನ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದು ಲಭ್ಯವಾಗಿದ್ದು, ಇಷ್ಟು ದಿನ ವಿಮಾನ ಹತ್ತಿದ ಕೂಡಲೇ ಮೊಬೈಲ್ ಸ್ವೀಚ್ ಆಫ್ ಮಾಡಿ ಎನ್ನುವ ಮಾತು ಇನ್ನು ಕೇಳುವುದಿಲ್ಲ ಎನ್ನಲಾಗಿದೆ. ಇನ್ನು ವಿಮಾನದಲ್ಲಿಯೇ ಇಂಟರ್ನೆಟ್ ಸೇವೆಯನ್ನು ಪಡೆಯಬಹುದಾಗಿದೆ. ಇದಲ್ಲದೇ ಮೊಬೈಲ್‌ನಲ್ಲಿಯೂ ಕರೆಮಾಡಿ ಮಾತನಾಡುವ ಅವಕಾಶವು ದೊರೆಯಲಿದೆ.

ಆಕಾಶದಲ್ಲೂ ಮೊಬೈಲ್‌ನಲ್ಲಿ ಮಾತನಾಡಿ, ವಾಟ್ಸ್‌ಆಪ್ ಚಾಟ್ ಮಾಡಿ..!

ಇನ್ನು ಮುಂದೆ ವಿಮಾನ ಪ್ರಯಾಣದ ವೇಳೆ ಮೊಬೈಲ್‌ ಬಳಕೆ ಹಾಗೂ ಇಂಟರ್ನೆಟ್‌ ಸೇವೆ ಒದಗಿಸಲು ಅವಕಾಶ ನೀಡುವಂತೆ ಕೇಂದ್ರ ದೂರಸಂಪರ್ಕ ಇಲಾಖೆಗೆ ಭಾರತೀಯ ದೂರಸಂಪರ್ಕ ಪ್ರಾಧಿಕಾರ ಶಿಫಾರಸು ಮಾಡಿದೆ ಎನ್ನಲಾಗಿದೆ. ಇದರಿಂದಾಗಿ ಶೀಘ್ರವೇ ವಿಮಾನದಲ್ಲಿ ಯಾವುದೇ ತೊಂದರೆ ಇಲ್ಲದೇ ಮೊಬೈಲ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ಓದಿರಿ: ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್: ಮೊಬೈಲ್ ಮೇಲೆ ಶೇ.40ರಷ್ಟು ರಿಯಾಯಿತಿ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಟಲೈಟ್‌ ನಿಂದ ನೆಟ್ ಸೇವೆ..!

ಸ್ಯಾಟಲೈಟ್‌ ನಿಂದ ನೆಟ್ ಸೇವೆ..!

ವಿಮಾನದಲ್ಲಿ ಪ್ರಯಾಣ ಮಾಡುವವರಿಗಾಗಿಯೇ ಸ್ಯಾಟಲೈಟ್‌ ಇಲ್ಲವೇ ಸಾಮಾನ್ಯ ಟವರ್‌ಗಳನ್ನೇ ಬಳಸಿ ವಿಮಾನದಲ್ಲಿ ಮೊಬೈಲ್‌ ಸೇವೆಗಳನ್ನು ಒದಗಿಸಬಹುದು ಎನ್ನಲಾಗಿದ್ದು, ಒಂದು ವೇಳೆ ವಿಮಾನದಲ್ಲಿ ಟೆಲಿಕಾಂ ನೆಟ್‌ವರ್ಕ್‌ ಸೌಲಭ್ಯ ಒದಗಿಸಲು ಕಷ್ಟವಾದರೆ ಕಡೆ ಪಕ್ಷ ವೈಫೈ ಮೂಲಕವಾದರೂ ಇಂಟರ್ನೆಟ್‌ ಸೇವೆ ಒದಗಿಸಬೇಕು ಎಂದು ಟ್ರಾಯ್ ತಿಳಿಸಿದೆ ಎನ್ನಲಾಗಿದೆ.

Oppo A83 ಸ್ಮಾರ್ಟ್‌ಫೋನ್ ಹೇಗಿದೆ..?
ವಿಮಾನದಲ್ಲಿ ಇಂಟರ್ನೆಟ್:

ವಿಮಾನದಲ್ಲಿ ಇಂಟರ್ನೆಟ್:

ಈ ಹಿಂದಿನಂತೆ ಪ್ರಯಾಣಿಕರು ವಿಮಾನ ಏರುತ್ತಿದ್ದಂತೆಯೇ ಇಂಟರ್ನೆಟ್ ಸೇವೆ ಮತ್ತು ಕರೆ ಮಾಡುವ ಅವಕಾಶದ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದು ಟ್ರಾಯ್‌ ಸೂಚಿಸಿದೆ. ವಿಮಾನದೊಳಗೆ ಮೊಬೈಲ್‌ ಸೇವೆ ಒದಗಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದೆ.

ಬಹುದಿನಗಳ ಕನಸು:

ಬಹುದಿನಗಳ ಕನಸು:

ಈ ಹಿಂದಿನಿಂದಲೂ ಮೊಬೈಲ್ ಬಳಕೆದಾರರ ಒಂದೇ ಬೇಡಿಕೆ ಎಂದರೆ ವಿಮಾನದಲ್ಲಿ ಮೊಬೈಲ್ ಬಳಕೆ ಮಾಡಲು ಅವಕಾಶವನ್ನು ಮಾಡಿಕೊಡಬೇಕು ಎನ್ನುವುದು. ಇನ್ನು ಮುಂದೆ ಮೊಬೈಲ್‌ ಬಳಕೆದಾರರು ವಿಮಾನದಲ್ಲಿಯೂ ಯಾವುದೇ ಅಡೆತಡೆ ಇಲ್ಲದೇ ಇಂಟರ್ನೆಟ್ ಅನ್ನು ಪಡೆಯಬಹುದು, ಮಾತುಕತೆಯನ್ನು ನಡೆಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
mobile phone signal in plane. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot