ಮೊಬೈಲ್ ಎಸೆಯುವ ವಿಶ್ವ ಚಾಂಪಿಯನ್‌ಶಿಪ್!..ಈತ ಜಗತ್ತಿನ ಉತ್ತಮ 'ಮೊಬೈಲ್' ಎಸೆತಗಾರ!
ಹಳೆಯ ಮೊಬೈಲ್‌ಗಳನ್ನು ಎಸೆಯುವ ಸ್ಪರ್ಧೆಗಳ ಬಗ್ಗೆ ನೀವು ಇತ್ತೀಚಿಗೆ ಕೇಳಿರುತ್ತೀರಾ. ಆದರೆ, ಇಲ್ಲೊಂದು ದೇಶದಲ್ಲಿ 2000ನೇ ಇಸವಿಯಿಂದಲೇ ಮೊಬೈಲ್ ಅನ್ನು ಎಸೆಯುವ ಸ್ಫರ್ಧೆ ನಡೆಯುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇಲ್ಲಿನ ಮತ್ತೊಂದು ವಿಶೇಷತೆ ಎಂದರೆ, ಈ ಆಟದ ಸ್ಫರ್ಧಿಗಳು ತಮ್ಮ ಸ್ವಂತ ಮೊಬೈಲ್ ಅನ್ನು ಎಸೆಯಬೇಕಾಗಿಲ್ಲ.
ಹೌದು, ಮೂರು ಹೊತ್ತು ಮೊಬೈಲ್‌ನಲ್ಲೇ ಮುಳುಗಿರುತ್ತೀರಲ್ಲ, ಒಂದಿನ ಅದನ್ನು ಕಿತ್ತು ದೂರ ಎಸೆಯುತ್ತೇನೆ ನೋಡು ಎಂದು ಅಮ್ಮಂದಿರು ಬೈಯ್ಯುವುದನ್ನೇ ಸೀರಿಸ್ಸಾಗಿ ಪರಿಗಣಿಸಿರುವ ಫಿನ್‌ಲ್ಯಾಂಡ್ ದೇಶದ ಜನ ಅದನ್ನೇ ಒಂದು ಸ್ಪರ್ಧೆಯನ್ನಾಗಿ ಮಾಡಿದ್ದಾರೆ. ಆಯೋಜಕರೇ ನೀಡುವ ಮೊಬೈಲ್ ಅನ್ನು ಅತಿ ದೂರಕ್ಕೆ ಎಸೆಯುವವರಿಗೆ ಬಹುಮಾನವನ್ನು ಸಹ ನೀಡುತ್ತಾರೆ.

ಕ್ರಿಕೆಟ್‌ನಲ್ಲಿ ವರ್ಲ್ಡ್ ಕಪ್ ಇರುವಂತೆ ಈ ಮೊಬೈಲ್ ಎಸೆಯುವ ಆಟದಲ್ಲೂ ವಿಶ್ವ ಚಾಂಪಿಯನ್‌ಶಿಪ್ ನಡೆಯುತ್ತದೆ. ಅಲ್ಲದೆ ಚಿಕ್ಕ ಮಕ್ಕಳಿಗಾಗಿ ಜೂನಿಯರ್ ಚಾಂಪಿಯನ್‌ಶಿಪ್ ಸ್ಫರ್ಧೆಗಳನ್ನೂ ಆಯೋಜಿಸುತ್ತಾರೆ. ಹಾಗಾದರೆ, ಏನಿದು ವಿಶೇಷ ವರದಿ? ಅತಿ ಹೆಚ್ಚು ದೂರ ಮೊಬೈಲ್ ಅನ್ನು ಎಸೆದಿರುವವರು ಯಾವು ಎಂಬ ಕುತೋಹಲ ವಿಷಯವನ್ನು ಮುಂದೆ ಓದಿ.

ಮೊಬೈಲ್ ಎಸೆಯುವ ಸ್ಪರ್ಧೆ!
2000ನೇ ಇಸವಿಯಿಂದಲೇ ಮೊಬೈಲ್ ಅನ್ನು ಎಸೆಯುವ ಸ್ಫರ್ಧೆಯು ಫಿನ್‌ಲ್ಯಾಂಡ್ ದೇಶದಲ್ಲಿರುವ ಸಾವೋನ್ಲಿನಾ ನಗರದಲ್ಲಿ ನಡೆಯುತ್ತಿದೆ. ಇಲ್ಲಿ ಜನರು ತಮ್ಮ ಮೊಬೈಲ್ ಎಸೆಯಬೇಕಿಲ್ಲ. ಬದಲಿಗೆ ಆಯೋಜಕರೇ ಮೊಬೈಲ್‌ಗಳನ್ನು ನೀಡುತ್ತಾರೆ. ಹಳೆಯದಾದ, ಬಳಸಲು ಯೋಗ್ಯವಾಗಿಲ್ಲದ ಮೊಬೈಲ್‌ಗಳನ್ನು ಈ ಸ್ಪರ್ಧೆಯಲ್ಲಿ ಬಳಸಲಾಗುತ್ತದೆ.

ವಿಧದ ತೂಕದ ಮೊಬೈಲ್‌ಗಳು!
ನಿಯಮವನ್ನು ಪಾಲಿಸಿ ಮೊಬೈಲ್ ಎಸೆಯಲು 220 ರಿಂದ 400 ಗ್ರಾಂ ತೂಕವುಳ್ಳ ವಿಧದ ಮೊಬೈಲ್‌ಗಳನ್ನು ಈ ಸ್ಪರ್ಧೆಯಲ್ಲಿ ಒದಗಿಸಲಾಗುತ್ತದೆ. ಸ್ಫರ್ಧಾಳುಗಳು ತಮಗೆ ಬೇಕಾದದ್ದನ್ನು ಅಲ್ಲಿ ಆಯ್ದುಕೊಂಡು ಸ್ಫರ್ಧೆಯಲ್ಲಿ ಭಾಗವಸಬಹುದು. ವಿಶ್ವಮಟ್ಟದ ಸ್ಪರ್ಧೆಯಿದಾಗಿರುವುದರಿಂದ ಮೊಬೈಲ್ ಎಸೆಯುವುದಕ್ಕೆ ಇನ್ನಿತರ ಕೆಲವು ನಿಯಮಗಳನ್ನು ಸಹ ನೀಡಲಾಗುತ್ತದೆ.

ಬೇಕಾಬಿಟ್ಟಿ ಎಸೆಯೋ ಹಾಗಿಲ್ಲ
ಮೊಬೈಲ್ ಎಸೆಯುವುದು ಎಂದರೆ ಅದನ್ನು ಬೇಕಾಬಿಟ್ಟಿ ಎಸೆಯೋ ಹಾಗಿಲ್ಲ. ನಮ್ಮಲ್ಲಿನ ಗುಂಡು ಎಸೆತದ ಸ್ಫರ್ಧೆಯ ಮಾದರಿಯಲ್ಲೇ ಈ ಸ್ಪರ್ಧೆ ನಡೆಯುತ್ತದೆ. ಒಂದು ನಿರ್ದಿಷ್ಟ ಸ್ಥಳವನ್ನು ಗುರುತು ಮಾಡಿ, ಆ ವೃತ್ತದೊಳಗೆ ಸ್ಪರ್ಧಿ ನಿಂತು, ಕೈಯಲ್ಲಿರುವ ಮೊಬೈಲ್ ಅನ್ನು ಭುಜದ ಮೇಲಿನಿಂದ ಎಸೆಯಬೇಕು. ಯಾರು ಅತೀ ದೂರಕ್ಕೆ ಎಸೆಯುತ್ತಾರೋ ಅವರು ಗೆದ್ದಂತೆ.

ವಿಶ್ವದಾಖಲೆ ಯಾರು ಹೆಸರಿನಲ್ಲಿದೆ!
ವಿಶ್ವ ಮಟ್ಟದ ಈ ಸ್ಪರ್ಧೆಯಲ್ಲಿ ಜಗತ್ತಿನ ಉತ್ತಮ ಮೊಬೈಲ್ ಎಸೆತಗಾರನೆಂಬ ವಿಶ್ವದಾಖಲೆಯು ಬೆಲ್ಜಿಯಂನ ಡ್ರೆಸ್ ಫೆರಿಮನ್ಸ್ ಎಂಬಾತನ ಹೆಸರಿನಲ್ಲಿದೆ. ಆತ ಪುರುಷರ ಭಾಗದಲ್ಲಿ 110.42 ಮೀಟರುಗಳಷ್ಟು ದೂರದವರೆಗೆ ಮೊಬೈಲ್ ಎಸೆದು ದಾಖಲೆ ನಿರ್ಮಿಸಿದ್ದಾರೆ. ಮಹಿಳಾ ಭಾಗದಲ್ಲಿ 53.52 ಮೀಟರ್ ದಾಖಲೆಯು ಜಾನ್ ಸಿಂಗ್ಲೆಟಾನ್ ಎಂಬಾಕೆಯ ಹೆಸರಿನಲ್ಲಿದೆ.

ಮೊಬೈಲ್‌ಗಳನ್ನು ಕಂಪೆನಿಗಳೇ ಕೊಡುತ್ತವೆ
ಯುರೋಪ್‌ನ ಈ ಪ್ರತಿಷ್ಠಿತ ಮೊಬೈಲ್ ಕಂಪನಿಗಳು ನಾಮುಂದು ತಾಮುಂದು ಎಂದು ಮುಗಿಬಿದ್ದು ಸ್ಪರ್ಧೆಗೆ ಮೊಬೈಲ್‌ಗಳನ್ನು ನೀಡುತ್ತವಂತೆ. ಅತಿ ಹೆಚ್ಚು ದುರ ಎಸೆಯುವ ಮೊಬೈಲ್ ತನ್ನದಾಗಿರಬೇಕು ಎಂಬುದು ಕಂಪೆನಿಗಳ ಆಸೆಯಂತೆ. ಅತಿ ದೂರಕ್ಕೆ ಎಸೆದ ಮೊಬೈಲ್ ಯಾವುವು ಎಂಬ ಜನರ ಕುತೋಹಲವನ್ನೇ ಜಾಹಿರಾತು ಎಂಬುದು ಅವುಗಳ ಉದ್ದೇಶ.


Click it and Unblock the Notifications