ರಾಜ್ಯಾದ್ಯಂತ ಶಾಲಾ,ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್!?..ಶಾಕಿಂಗ್ ಕಾರಣವೇನು ಗೊತ್ತಾ?

|

ಶೈಕ್ಷಣಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿರಬೇಕಾದ ಮಕ್ಕಳು, ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಕ್ಕೆ ಅತಿಯಾಗಿ ಒಗ್ಗಿಕೊಂಡಿರುವುದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ, ರಾಜ್ಯಾದಂತ್ಯ ಶಾಲಾ ಕಾಲೇಜಿಗಳಲ್ಲಿ ಮೊಬೈಲ್ ಬ್ಯಾನ್ ಮಾಡುವುದು ಸೇರಿದಂತೆ ಹಲವು ಹೊಸ ನಿಯಮಗಳಲ್ಲಿ ರಚಿಸಲು ಇಲಾಖೆಯ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಇತ್ತಿಚಿಗಷ್ಟೇ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜಿನೀಶ್ ಅವರು ಸಿಐಡಿ ಇಲಾಖೆಗೆ ಬರೆದಿರುವ ಪತ್ರವೊಂದು ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಶಾಲೆಗೆ ಮೊಬೈಲ್ ತೆಗೆದುಕೊಂಡು ಹೋಗುವ ಮಕ್ಕಳು ಶಾಲೆಯಲ್ಲಿ ಕುಳಿತು ಮೊಬೈಲ್​ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿರುವ ವಿಷಯದ ಬಗ್ಗೆ ಶಾಲಿನಿ ರಜಿನೀಶ್ ಅವರು ಆತಂಕ ವ್ಯಕ್ತಪಡಿಸಿದ್ದರು. ಈ ಘಟನೆ ವರದಿಯಾದ ನಂತರ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ರಾಜ್ಯಾದ್ಯಂತ ಶಾಲಾ,ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್!?.ಶಾಕಿಂಗ್ ಕಾರಣವೇನು ಗೊತ್ತಾ?

ಶಾಲಾ, ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಮಾಡುವುದು ಸೇರಿದಂತೆ ಲೆಯಿಂದ ಮನೆಗೆ ತೆರಳಿದ ಮಕ್ಕಳು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣದ ಬಳಕೆಯಲ್ಲಿ ಕಾಲಕಳೆಯುವುದನ್ನು ತಪ್ಪಿಸಲು ಹಾಗೂ ಈ ಬಗ್ಗೆ ಪಾಲಕ, ಪೋಷಕರಲ್ಲಿ ಅರಿವು ಮೂಡಿಸಲು ಹೊಸ ನಿಯಮ ರಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಹಾಗಾದರೆ, ಏನಿದು ವರದಿ? ಶಿಕ್ಷಣ ಇಲಾಖೆ ಮೊಬೈಲ್ ಬಳಕೆಯನ್ನು ಗಂಭೀರವಾಗಿ ಪರಿಗಣಿಸಿರುವುದು ಏಕೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಬೆಚ್ಚಿಬಿದ್ದಿದ್ದ ರಾಜ್ಯದ ಪೋಷಕರು!

ಬೆಚ್ಚಿಬಿದ್ದಿದ್ದ ರಾಜ್ಯದ ಪೋಷಕರು!

ಇಷ್ಟು ದಿನ ಮಕ್ಕಳು ಮೊಬೈಲ್​ನಲ್ಲಿ ಆಟ ಆಡ್ಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ತಿಳಿದಿದ್ದ ಪೋಷಕರಿಗೆ ಮೊನ್ನೆ ಹೊರಬಿದ್ದಿದ್ದ ಸುದ್ದಿ ಬೆಚ್ಚಿಬೀಳಿಸಿತ್ತು. ಮೊಬೈಲ್​ನಿಂದ ಮಕ್ಕಳಲ್ಲಿರುವ ಮುಗ್ಧ ಭಾವನೆಗಳು ಕೂಡ ಕಡಿಮೆಯಾಗ್ತಿವೆ. ಮೊಬೈಲ್‌ಗೆ ಅಡಿಕ್ಟ್ ಆಗಿರೋದ್ರಿಂದ ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಿದ್ದಾರೆ. ಇದಲ್ಲದೇ ವಿದ್ಯಾರ್ಥಿಗಳು ಮೊಬೈಲ್ ಬಳಸಿ ಶಾಲಾ ಟಾಯ್ಲೆಟ್‌ಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಈ ಬಗ್ಗೆ ಪೋಷಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಶಾಲಿನಿ ರಜಿನೀಶ್ ಅವರು ಬರೆದಿರುವ ಪತ್ರ ಪೋಷಕರನ್ನು ಚಿಂತೆಗೀಡುಮಾಡಿತ್ತು.

ವಿವಿಧ ಇಲಾಖೆ ಅಧಿಕಾರಿಗಳಿಗೆ ಪತ್ರ

ವಿವಿಧ ಇಲಾಖೆ ಅಧಿಕಾರಿಗಳಿಗೆ ಪತ್ರ

ಶಿಕ್ಷಣ ಇಲಾಖೆ ರಾಜ್ಯದ ವಿವಿಧ ಶಾಲೆಗಳಲ್ಲಿ ಇರುವ ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸೇವೆ ಸಲ್ಲಿಸುತ್ತಿದೆ. ಮಕ್ಕಳು ಮೊಬೈಲ್‌ ಮತ್ತು ಸಾಮಾಜಿಕ ಜಾಲತಾಣದ ದುರ್ಬಳಕೆ ತಪ್ಪಿಸಲು ಹೊಸ ನಿಯಮ ಒಂದನ್ನು ಅಗತ್ಯವಾಗಿ ರೂಪಿಸಬೇಕಿದೆ. ಪಾಲಕ, ಪೋಷಕರು, ಶಾಲಾಡಳಿತ ಮಂಡಳಿ ಹಾಗೂ ಸಾರ್ವಜನಿಕರು ಸೇರಿದಂತೆ ಇಡೀ ಸಮಾಜವೇ ವಿದ್ಯಾರ್ಥಿಗಳ ರಕ್ಷಣೆ ಮತ್ತು ಸುರಕ್ಷತೆಯಲ್ಲಿ ಭಾಗಿಯಾಗುವಂತ ನಿಯಮ ರೂಪಿಸುವ ಅಗತ್ಯವಿದೆ ಎಂಬುದನ್ನು ಉಲ್ಲೇಖೀಸಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು, ಅವರಿಂದ ಮಾಹಿತಿ ಕೋರಿದ್ದರು.

ನಿಮ್ಹಾನ್ಸ್‌ನ ತಜ್ಞ ವೈದ್ಯರ ಸಲಹೆ!

ನಿಮ್ಹಾನ್ಸ್‌ನ ತಜ್ಞ ವೈದ್ಯರ ಸಲಹೆ!

ಶಾಲಾ ಮಕ್ಕಳನ್ನು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣದಿಂದ ದೂರವಿಡುವಲ್ಲಿ ಪಾಲಕ, ಪೋಷಕರ ಕರ್ತವ್ಯ ಅತಿ ಮುಖ್ಯವಾಗಿದೆ. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್‌ ಇಲಾಖೆ(ಸೈಬರ್‌ ವಿಭಾಗ), ಆರೋಗ್ಯ ಇಲಾಖೆ ಮತ್ತು ನಿಮ್ಹಾನ್ಸ್‌ನ ತಜ್ಞ ವೈದ್ಯರು ಮತ್ತು ಶಿಕ್ಷಣ ತಜ್ಞರ ಸಲಹೆ ಪಡೆಯುಲು ನಿರ್ಧರಿಸಿದೆ. ಕರ್ನಾಟಕ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಸಂಘಟನೆ(ಕ್ಯಾಮ್ಸ್) ಕೂಡ ಈ ಬಗ್ಗೆ ಶಿಕ್ಷಣ ಇಲಾಖೆಗೆ ದೂರು ನೀಡಿದೆ.

ಶಾಲಾ, ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್?

ಶಾಲಾ, ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್?

ಶೈಕ್ಷಣಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿರಬೇಕಾದ ಮಕ್ಕಳು, ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಕ್ಕೆ ಅತಿಯಾಗಿ ಒಗ್ಗಿಕೊಂಡಿರುವುದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ, ರಾಜ್ಯಾದಂತ್ಯ ಶಾಲಾ ಕಾಲೇಜಿಗಳಲ್ಲಿ ಮೊಬೈಲ್ ಬ್ಯಾನ್ ಮಾಡುವುದು ಸೇರಿದಂತೆ ಹಲವು ಹೊಸ ನಿಯಮಗಳಲ್ಲಿ ರಚಿಸಲು ಇಲಾಖೆಯ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.

ಪಾಲಕರಿಗೆ ಅರಿವು .

ಪಾಲಕರಿಗೆ ಅರಿವು .

ಶಾಲಿಯಲ್ಲಿ ಈ ಕಥೆಯಾದರೆ, ಶಾಲೆಯಿಂದ ಮನೆಗೆ ಹೋದ ಬಹುತೇಕ ವಿದ್ಯಾರ್ಥಿಗಳು ಮೊದಲು ಮುಟ್ಟುವುದೇ ಪಾಲಕರ ಮೊಬೈಲ್‌. ಇದನ್ನು ತುರ್ತು ತಪ್ಪಿಸಬೇಕಿದೆ. ಮಕ್ಕಳು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಕ್ಕೆ ಹೊಂದಿಕೊಂಡಷ್ಟು ಅವರಲ್ಲಿ ಬೇರೆ ರೀತಿಯ ಬದಲಾವಣೆಗಳು ಆಗುತ್ತಿರುತ್ತದೆ. ಶಾಲೆಗಳಲ್ಲಿ ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುವಂತೆ ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣದ ಬಳಕೆ ವಿಚಾರವಾಗಿ ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಲೇ ಬೇಕು. . ಇದಕ್ಕಾಗಿ ಪಾಲಕ, ಪೋಷಕರಿಗೆ ಅರಿವು ಮೂಡಿಸಲೇ ಬೇಕು ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಾನಸಿಕ ಖನ್ನತೆಗೆ ಕಾರಣ

ಮಾನಸಿಕ ಖನ್ನತೆಗೆ ಕಾರಣ

ಶಾಲಾ ಮಕ್ಕಳು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣ ಬಳಸುವುದರಿಂದ ಶೈಕ್ಷಣಿಕವಾಗಿ ಹಿಂದುಳಿಯುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ಪಾಲಕರಿಗೆ ಅರಿವಿಲ್ಲದೇ, ತಮ್ಮ ಮಕ್ಕಳಿಗೆ ಮೊಬೈಲ್‌ ನೀಡುತ್ತಾರೆ. ಇದು ಮಕ್ಕಳು ಸುಲಭವಾಗಿ ಸಾಮಾಜಿಕ ಜಾಲತಾಣ ಪ್ರವೇಶಿಸಲು ದಾರಿಯಾಗಿದೆ.ಫೇಸ್‌ಬುಕ್‌, ವಾಟ್ಸ್‌ಆಪ್‌ ಮೊದಲಾದ ಜಾಲತಾಣಗಳಿಂದ ಮಾನಸಿಕ ಖನ್ನತೆಗೆ ಒಳಗಾಗಿರುವ ನಿದರ್ಶನವೂ ಇದೆ. ಹೀಗಾಗಿ ಪೋಷಕರಿಗೆ ಅರಿವು ಮೂಡಿಸಲು ಹೊಸ ನಿಯಮ ರಚಿಸುವಂತೆ ಶಿಕ್ಷಣ ಇಲಾಖೆಗೆ ಕೋರಿಕೊಂಡಿದ್ದೇವೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಅವರು ಹೇಳಿದ್ದಾರೆ.

ಮೊಬೈಲ್‌ನಿಂದ ನಿದ್ರಾ ವ್ಯವಸ್ಥೆಗೆ ತೊಂದರೆ.

ಮೊಬೈಲ್‌ನಿಂದ ನಿದ್ರಾ ವ್ಯವಸ್ಥೆಗೆ ತೊಂದರೆ.

ಮಾನವನ ದೇಹಕ್ಕೆ ಅಗತ್ಯ ಪ್ರಮಾಣದಷ್ಟು ನಿದ್ರೆ ಬೇಕು. ಮಕ್ಕಳಿಗೆ ಇನ್ನು ಹೆಚ್ಚಿನ ನಿದ್ರೆ ಇದ್ದರೆ ಉತ್ತಮ. ಆದರೆ, ಹೆಚ್ಚು ಮೊಬೈಲ್ ಬಳಕೆ ಮಾಡುವ ಮಕ್ಕಳನಿದ್ರಾ ವ್ಯವಸ್ಥೆಯಲ್ಲಿ ಶೇ.50 ಪರ್ಸೆಂಟ್‌ಗಿಂತಲೂ ಹೆಚ್ಚು ಬದಲಾವಣೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 10,000 ಕ್ಕೂ ಹೆಚ್ಚು ಜನರ ಮೇಲೆ ಅಧ್ಯಯನ ನಡೆಸಿ ಈ ಸಂಶೋಧನೆ ನಡೆಸಲಾಗಿದೆ.

ಮಕ್ಕಳಲ್ಲಿ ನರಗಳ ಬೆಳವಣಿಗೆಯಲ್ಲಿ ತೊಂದರೆ.

ಮಕ್ಕಳಲ್ಲಿ ನರಗಳ ಬೆಳವಣಿಗೆಯಲ್ಲಿ ತೊಂದರೆ.

ಮಕ್ಕಳ ನರಮಂಡಲದ ರಚನೆ ಇನ್ನೂ ಬೆಳವಣಿಗೆ ಹಂತದಲ್ಲಿರುವಾಗ ಮೊಬೈಲ್ ಬಳಕೆ ಮಾಡಿದರೆ ನರಗಳು ಶಕ್ತಿಹೀನವಾಗುತ್ತವೆ. ಇದರಿಂದಾಗಿ ಮುಂದೆ ಸ್ಮರಣ ಶಕ್ತಿ ಮತ್ತು ದೃಷ್ಟಿ ಮೇಲೆ ಸಮಸ್ಯೆಗಳು ತಲೆದೂರಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಇದು ಅವರ ಭವಿಷ್ಯಕ್ಕೆ ಖಂಡಿತವಾಗಿಯೂ ಮಾರಕವಾಗಲಿದೆ ಎಂದು ಸಂಶೋಧನೆ ಹೇಳಿದೆ.

ಮೊಬೈಲ್‌ನಿಂದ ಮಾನಸಿಕ ಒತ್ತಡ.

ಮೊಬೈಲ್‌ನಿಂದ ಮಾನಸಿಕ ಒತ್ತಡ.

ಮಕ್ಕಳು ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದಷ್ಟು ಒಳ್ಳೆಯದು ಎನ್ನುತ್ತದೆ ಈ ವರದಿ. ಸಾಮಾಜಿಕ ಮಾಧ್ಯಮಗಳಿಂದ ಹರಡುವ ಸುದ್ದಿಗಳು, ಇತರ ಜೀವನದ ಫ್ಯಾಶನ್, ಜಾಹಿರಾತುಗಳು ಮಕ್ಕಳ ಮನಸ್ಸಿನ ಮೇಲೆ ಒತ್ತಡ ತರುತ್ತವೆ ಎಂದು ಎಲ್ಲಾ ವರದಿಗಳು ಹೇಳುತ್ತವೆ. ಹಾಗಾಗಿ, ಈ ಬಗ್ಗೆ ಪೋಷಕರು ಎಚ್ಚರಿಕೆಯಿಂದ ಇದ್ದರೆ ಒಳಿತು.

 ಪೋಷಕರ ಪ್ರೀತಿಯೇ ಔಷದ.

ಪೋಷಕರ ಪ್ರೀತಿಯೇ ಔಷದ.

ಮಕ್ಕಳ ಮೇಲೆ ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳು ಬೀರುತ್ತಿರುವ ಕೆಟ್ಟ ಪ್ರಬಾವವನ್ನು ತಡೆಯಲು ಪ್ರೀತಿಗಿಂತ ಬೇರೊಂದು ಲಸಿಕೆ ಇಲ್ಲ ಎಂದು ಎಲ್ಲಾ ವರದಿಗಳು ಹೇಳುತ್ತವೆ. ಮಕ್ಕಳಿಗೆ ಪ್ರೀತಿಯ ಜೊತೆಗೆ ವಾಸ್ತವ ಪ್ರಪಂಚದ ಬಗ್ಗೆ ಅರಿವು ಮೂಡಿಸುವ ಕಾರ್ಯ ಪೋಷಕರಿಂದ ಆಗಬೇಕಿದೆ. ಇದು ಅವರ ಭವಿಷ್ಯದ ಪ್ರಶ್ನೆ ಕೂಡ ಆಗಿದೆ. ಇದಕ್ಕೆ ನೀವೇನು ಮಾಡುತ್ತಿರಾ? ನಿಮ್ಮ ಚಿಂತನೆ ಏನು ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Most Read Articles
Best Mobiles in India

English summary
Ban mobile phones in schools, colleges. Cell phones can't go to school and college anymore.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more