Home
ಸುದ್ದಿಜಾಲ

ಭಾರತದಲ್ಲಿ ಪ್ರಸ್ತುತ ಟೆಲಿಕಾಂ ಬಳಕೆದಾರರೆಷ್ಟು?..ಈಗ ಏರ್‌ಟೆಲ್‌ಗೆ ಎಷ್ಟನೇ ಸ್ಥಾನ?

ಈಗಲೂ ಕೂಡ ಭಾರ್ತಿ ಏರ್ಟೆಲ್ ಲಿಮಿಟೆಡ್ 29.63 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.!!

By Bhaskar N J

ಆಗಸ್ಟ್ 2017ರ ಅಂತ್ಯದಲ್ಲಿ ಒಟ್ಟು 948.54 ಮಿಲಿಯನ್ ಮೊಬೈಲ್ ಚಂದಾದಾರನ್ನು ಭಾರತೀಯ ಟೆಲಿಕಾಂ ಹೊಂದಿದ್ದಾಗಿ ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (COAI) ಘೋಷಿಸಿದೆ. ಈ ಮೂಲಕ ದಾಖಲೆ ಮಟ್ಟದ ಗ್ರಾಹಕರನ್ನು ಭಾರತೀಯ ಟೆಲಿಕಾಂ ಹೊಂದಿದ್ದು, ಮೊದಲ ಸ್ಥಾನದಲ್ಲಿರುವ ಚೀನಾವನ್ನು ಹಿಂದಿಕ್ಕುವ ಭರಾಟೆಯಲ್ಲಿದೆ.!!

ಜಿಯೋ ಬಂದಾಗಿನಿಂದ ಭಾರತದಲ್ಲಿ ಟೆಲಿಕಾಂ ಚಂದಾದಾರರಾಗುವ ಸಂಖ್ಯೆ ಹೆಚ್ಚಿದ್ದು, ಈಗಲೂ ಕೂಡ ಭಾರ್ತಿ ಏರ್ಟೆಲ್ ಲಿಮಿಟೆಡ್ 29.63 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ ಎಂದು ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (COAI) ವರದಿ ನೀಡಿದೆ.! ಹಾಗಾದರೆ, COAI ವರದಿಯಲ್ಲಿ ಏನೆಲ್ಲಾ ಅಂಶಗಳಿವೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಈಗಲೂ ಏರ್‌ಟೆಲ್ ಫಸ್ಟ್!!

ಈಗಲೂ ಏರ್‌ಟೆಲ್ ಫಸ್ಟ್!!

ಭಾರತೀಯ ಟೆಲಿಕಾಂಗಳ ಪೈಕಿ ಈಗಲೂ ಏರ್‌ಟೆಲ್ ಮೊದಲ ಸ್ಥಾನದಲ್ಲಿದೆ. ಶೇ 29.63 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಏರ್‌ಟೆಲ್ ಹೊಂದಿದೆ.! 208.14 ಮಿಲಿಯನ್ ಗ್ರಾಹಕರನ್ನು ಹೊಂದಿರುವ ವೊಡಾಫೋನ್ ಎರಡನೇ ಸ್ಥಾನದಲ್ಲಿದ್ದರೆ, 191.06 ಮಿಲಿಯನ್ ಚಂದಾದಾರರೊಂದಿಗೆ ಐಡಿಯಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.! ನಾಲ್ಕನೇ ಸ್ಥಾನದಲ್ಲಿ ಜಿಯೋ ಇದೆ.!!

4G ಯಲ್ಲಿ ಜಿಯೋ ಫಸ್ಟ್.!!

4G ಯಲ್ಲಿ ಜಿಯೋ ಫಸ್ಟ್.!!

ಭಾರತದ ಒಟ್ಟಾರೆ ಟೆಲಿಕಾಂ ಚಂದಾದಾರರಲ್ಲಿ ಏರ್‌ಟೆಲ್ ಫಸ್ಟ್ ಇದ್ದರೆ 4G ವೋಲ್ಟ್ ಸೇವೆಯನ್ನು ನೀಡುತ್ತಿರುವ ಟೆಲಿಕಾಂಗಳಲ್ಲಿ ಜಿಯೋ ಫಸ್ಟ್ ಇದೆ.!! ಜಿಯೋ ಒಟ್ಟು 13 ಕೋಟಿ ಗ್ರಾಹಕರನ್ನು ಸೆಳೆದಿದ್ದು, ಹೆಚ್ಚು ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ.!!

ಹೆಚ್ಚು ಚಂದಾದಾರರಿರುವುದು ಯುಪಿ(ಈಸ್ಟ್)ಯಲ್ಲಿ!!

ಹೆಚ್ಚು ಚಂದಾದಾರರಿರುವುದು ಯುಪಿ(ಈಸ್ಟ್)ಯಲ್ಲಿ!!

ಮೊದಲಿನಹಾಗೆ ಉತ್ತರ ಪ್ರದೇಶ (ಈಸ್ಟ್) ವಲಯ ಒಟ್ಟು 84.07 ಮಿಲಿಯನ್ ಗ್ರಾಹಕರೊಂದಿಗೆ ಮೊದಲಿನ ಸ್ಥಾನದಲ್ಲಿಯೇ ಉಳಿದಿದೆ. ಇನ್ನು ಏರ್‌ಟೆಲ್ 13 ವಲಯಗಳಲ್ಲಿ ಮಾರುಕಟ್ಟೆ ನಾಯಕನಾಗಿ ಉಳಿದಿದ್ದರೆ, ವೊಡಾಫೋನ್ ಐದು ಮತ್ತು ಐಡಿಯಾ ಮೂರು ವಲಯಗಳಲ್ಲಿ ನಾಯಕ ಸ್ಥಾನಗಳಲ್ಲಿವೆ.

ಆರ್ಥಿಕತೆಗೆ ಗಣನೀಯ ಕೊಡುಗೆ!!

ಆರ್ಥಿಕತೆಗೆ ಗಣನೀಯ ಕೊಡುಗೆ!!

"ಟೆಲಿಕಾಂ ಉದ್ಯಮವು ಭಾರತೀಯ ಆರ್ಥಿಕತೆಗೆ ಗಣನೀಯವಾಗಿ ಕೊಡುಗೆ ನೀಡುತ್ತಿದೆ.ಈ ಉದ್ಯಮವು ಸರ್ಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ದೇಶದ ದೂರದ ಮೂಲೆಗಳನ್ನು ತಲುಪುತ್ತದೆ ಮತ್ತು ಪ್ರತಿಯೊಬ್ಬರೂ ಹೊಸ ಸಂವಹನ ತಂತ್ರಜ್ಞಾನಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು COAI ನಿರ್ದೇಶಕ ರಾಜನ್ ಎಸ್ ಮ್ಯಾಥ್ಯೂಸ್ ಹೇಳಿದ್ದಾರೆ.

Best Mobiles in India

English summary
Cellular Operators Association of India (COAI) on Tuesday announced a total of 948.54 million mobile subscriptions at the end of August 2017.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+