ಲ್ಯಾಪ್‌ಟಾಪ್, ಮೊಬೈಲ್‌ನಿಂದಲೂ ಕೊರೊನಾ ಭೀತಿ..! ವೈರಸ್ ನಿಯಂತ್ರಣಕ್ಕೆ ಈ ಕೆಲಸಗಳನ್ನು ಮಾಡಿ
ಪ್ರಪಂಚದಾದ್ಯಂತ ಕೊರೊನಾ ವೈರಸ್ ತನ್ನ ಮರಣ ಮೃದಂಗವನ್ನು ಮುಂದುವರೆಸಿದೆ. ಈಗಾಗಲೇ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 93,500 ದಾಟಿದ್ದು, COVID-19 ನಿಯಂತ್ರಣಗೊಳಿಸುವ ಜವಾಬ್ದಾರಿ ಎಲ್ಲಾ ನಾಗರಿಕರ ಮೇಲಿದೆ. ಆದರೆ, ಆತಂಕಗೊಳ್ಳುವ ಅವಶ್ಯಕತೆಯಿಲ್ಲ. ಮೂಲಭೂತ ನೈರ್ಮಲ್ಯ ಕಾಪಾಡುವ ಮೂಲಕ ಎಚ್ಚರಿಕೆಯಿಂದಿರಬೇಕು. ಮುಖವಾಡಗಳು, ಕೈಗ್ಲೌಸುಗಳು ಮತ್ತು ಕೈಗಳನ್ನು ತೊಳೆಯುವಲ್ಲಿ ಹೆಚ್ಚಿನ ಗಮನ ನೀಡಿ.

ಇದರ ಜೊತೆ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ವೈಯಕ್ತಿಕ ಗ್ಯಾಜೆಟ್‌ಗಳನ್ನು ನಿಯಮಿತವಾಗಿ ಸೋಂಕು ರಹಿತಗೊಳಿಸುವುದು ಸಹ ಮುಖ್ಯವಾಗಿದೆ. ಮೊಬೈಲ್ ಫೋನ್‌ಗಳು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಗೆ ಹಾಟ್‌ಬೆಡ್ ಆಗಿರುತ್ತವೆ ಮತ್ತು ಅವಿಭಾಜ್ಯ ರೋಗ ವಾಹಕಗಳಾಗಿರಬಹುದು ಎಂದು ಜಾಗತಿಕ ಆರೋಗ್ಯ ಸಂಶೋಧನಾ ವರದಿಗಳು ಎಚ್ಚರಿಸಿವೆ. ಆದ್ದರಿಂದ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಸ್ವಚ್ಛಗೊಳಿಸಿ, ಕೊರೊನಾ ಹರಡದಂತೆ ತಡೆಯುವುದು ಹೇಗೆ ಎಂಬುದದನ್ನು ಮುಂದೆ ನೋಡಿ.

ಕರವಸ್ತ್ರ, ಮೊಬೈಲ್ ಫೋನ್ ಒಂದೇ ಜೇಬಲ್ಲಿ ಬೇಡ
ನಿಮ್ಮ ಮೊಬೈಲ್ ಫೋನ್ ಮತ್ತು ಕರವಸ್ತ್ರವನ್ನು ಒಂದೇ ಪ್ಯಾಂಟ್ ಜೇಬಿನಲ್ಲಿ ಇಡಬೇಡಿ. ಒಂದೇ ಕಡೆ ಇಡುವುದರಿಂದ ವೈರಸ್ ಹರಡುವ ಸಾಧ್ಯತೆ ಹೆಚ್ಚು.

ಕಾಲ್‌ಗೆ ಇಯರ್‌ಫೋನ್ ಬಳಸಿ
ಕರೆ ಮಾಡಲು ಇಯರ್‌ಫೋನ್‌ಗಳನ್ನು ಬಳಸಿ. ಇದು ಫೋನ್‌ನಿಂದ ನಿಮ್ಮ ಮುಖಕ್ಕೆ ವೈರಸ್ ವರ್ಗಾವಣೆಯ ಅವಕಾಶವನ್ನು ಬಹಳಷ್ಟು ಕಡಿಮೆ ಮಾಡುತ್ತದೆ

ಪಬ್ಲಿಕ್ ಕಂಪ್ಯೂಟರ್ ಬಳಸಬೇಡಿ
ಇಂಟರ್ನೆಟ್ ಕೆಫೆ ಅಥವಾ ಕಚೇರಿಗಳಲ್ಲಿ ಸಾರ್ವಜನಿಕ ಕಂಪ್ಯೂಟರ್‌ಗಳನ್ನು ಬಳಸುವುದನ್ನು ತಪ್ಪಿಸಿ. ನೀವು ನಿಜವಾಗಿಯೂ ಅವುಗಳನ್ನು ಬಳಸಬೇಕಾದರೆ ಕೈಗೆ ಗ್ಲೌಸ್ ಹಾಕಿಕೊಳ್ಳುವುದು ಉತ್ತಮ.

ಸ್ಮಾರ್ಟ್‌ಫೋನ್ ಐಪಿ68 ವಾಟರ್ ರೆಸಿಸ್ಟೆಂಟ್ ಆಗಿದ್ದರೆ ಹ್ಯಾಂಡ್ ಸ್ಯಾನಿಟೈಸರ್ ಅಥವಾ ಸೋಪ್ ಮತ್ತು ನೀರನ್ನು ಬಳಸಬಹುದು
ಸ್ಮಾರ್ಟ್‌ಫೋನ್ ಸ್ವಚ್ಛತೆಗೂ ಮುನ್ನ, ಮೊದಲು ನಿಮ್ಮ ಫೋನ್ ಸ್ವಿಚ್ ಆಫ್ ಮಾಡಲು ಮರೆಯಬೇಡಿ. ಗ್ಯಾಜೆಟ್‌ಗಳನ್ನು ಸ್ವಚ್ಛಗೊಳಿಸಲು ಹ್ಯಾಂಡ್ ಸ್ಯಾನಿಟೈಸರ್ ಅಥವಾ ಆಲ್ಕೋಹಾಲ್ ಬಳಸಲ್ಲ. ಆದರೆ, ಅನಿವಾರ್ಯ ಸಮಯದಲ್ಲಿ ಇವುಗಳ ಅಗತ್ಯವಿರುತ್ತದೆ. SARS-CoV-2 ವೈರಸ್ ಕೊಲ್ಲಲು ನಿಮಗೆ ಕನಿಷ್ಠ ಶೇ.60ರಷ್ಟು ಮದ್ಯ ಬೇಕಾಗುತ್ತದೆ.

ಲ್ಯಾಪ್‌ಟಾಪ್ ಸ್ವಚ್ಛತೆಗೆ ಹ್ಯಾಂಡ್ ಸ್ಯಾನಿಟೈಸರ್ ಬಳಸಿ
ಲ್ಯಾಪ್‌ಟಾಪ್ ಸ್ವಚ್ಛಗೊಳಿಸುವ ಮುಂಚೆ ನಿಮ್ಮ ಲ್ಯಾಪ್‌ಟಾಪ್ ಸ್ವಿಚ್ ಆಫ್ ಮಾಡಲು ಮರೆಯಬೇಡಿ. ಗ್ಯಾಜೆಟ್‌ಗಳನ್ನು ಸ್ವಚ್ಛಗೊಳಿಸಲು ಹ್ಯಾಂಡ್ ಸ್ಯಾನಿಟೈಸರ್ ಅಥವಾ ಆಲ್ಕೋಹಾಲ್ ಸೇರಿ ಯಾವುದೇ ಶುಚಿಗೊಳಿಸುವ ಉತ್ಪನ್ನವನ್ನು ಸಾಮಾನ್ಯವಾಗಿ ಶಿಫಾರಸು ಮಾಡುವುದಿಲ್ಲ. ಆದರೆ, ಅಗತ್ಯದ ಸಂದರ್ಭದಲ್ಲಿ ಇವುಗಳನ್ನು ಬಳಸಬಹುದು. ಬಳಸಿದ ನಂತರ ಟಿಸ್ಯೂ ಪೇಪರ್‌ನಿಂದ ಕ್ಲೀನ್ ಮಾಡಬೇಕು.

ಇಯರ್‌ಫೋನ್ ಸ್ವಚ್ಛಗೊಳಿಸಿ
ಇಯರ್‌ಫೋನ್ ಕ್ಲೀನ್ ಮಾಡುವುದನ್ನು ಮರೆಯಬೇಡಿ. ಇದಕ್ಕಾಗಿ ನೀವು ಯಾವುದೇ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಬಳಸಬಹುದು.

ಗ್ಯಾಜೆಟ್ ಸ್ವಚ್ಛತೆಗೆ ದ್ರವ ಬಳಸಬೇಡಿ
ಏಕೆಂದರೆ ಅದು ಬಣ್ಣದ ಬದಲಾವಣೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.

ಗ್ಯಾಜೆಟ್ ಸ್ವಚ್ಛತೆ ನಂತರ ಕೈ ತೊಳೆಯಿರಿ
ನಿಮ್ಮ ಫೋನ್ ಅಥವಾ ಲ್ಯಾಪ್‌ಟಾಪ್‌ನ್ನು ಸ್ವಚ್ಛಗೊಳಿಸಿದ ನಂತರ, ಯಾವಾಗಲೂ ನಿಮ್ಮ ಕೈಗಳನ್ನು ಸೋಪ್ ಮತ್ತು ನೀರಿನಿಂದ ಚೆನ್ನಾಗಿ ತೊಳೆಯಿರಿ.

ಗ್ಯಾಜೆಟ್‌ಗಳನ್ನು ಸ್ವಚ್ಛಗೊಳಿಸಿ
ನಿಮ್ಮ ವೈಯಕ್ತಿಕ ಗ್ಯಾಜೆಟ್‌ಗಳನ್ನು ದಿನಕ್ಕೆ ಒಮ್ಮೆಯಾದರೂ ನಿಯಮಿತವಾಗಿ ಸ್ವಚ್ಛಗೊಳಿಸುವ ಅಭ್ಯಾಸ ಮಾಡಿಕೊಳ್ಳಿ.

ಬೇರೆಯವರ ಲ್ಯಾಪ್‌ಟಾಪ್ ಅಥವಾ ಮೊಬೈಲ್ ಮುಟ್ಟದಿರಿ
ಇನ್ನೊಬ್ಬರ ಫೋನ್ ಅಥವಾ ಲ್ಯಾಪ್‌ಟಾಪ್ ಮುಟ್ಟದಿರಲ ಪ್ರಯತ್ನಿಸಿ, ಹಾಗೂ ನಿಮ್ಮ ಗ್ಯಾಜೆಟ್‌ಗಳನ್ನು ಇತರರಿಗೆ ನೀಡುವುದನ್ನು ತಪ್ಪಿಸಿ.


Click it and Unblock the Notifications








