Subscribe to Gizbot

ತಂತ್ರಜ್ಞಾನ ರಂಗದಲ್ಲಿ ನಡೆಯುವುದೇ ಮೋದಿ ಮೋಡಿ?

Written By:

ಮೋದಿ ಇನ್ನೇನು ಆಡಳಿತದ ಚುಕ್ಕಾಣಿ ಹಿಡಿಯುತ್ತಿರುವಂತೆ ಪ್ರತಿಯೊಂದು ರಂಗದಲ್ಲೂ ಮೋದಿ ಅಲೆ ಬೀಸಲಿದೆ. ಸರ್ಕಾರದ ಮೇಲೂ ಬಹು ದೊಡ್ಡ ಸಾಮಾಜಿಕ - ಆರ್ಥಿಕ ಪರಿಣಾಮ ಬೀರಲಿದೆ ಎಂಬುದು ಸಾಬೀತಾಗಿದೆ.

ತಾಂತ್ರಿಕ ತಂತ್ರಜ್ಞಾನ ರಂಗದ ಮೇಲೂ ಈ ಹೊಸ ಅಲೆ ನವ ಪರಿಣಾಮವನ್ನು ಬೀರಲಿದೆ. ತಂತ್ರಜ್ಞಾನ ರಂಗದಲ್ಲೂ ಬಹಳಷ್ಟು ಸುಧಾರಣೆಗಳನ್ನು ತರುವ ಗುರಿಯನ್ನಿಟ್ಟುಕೊಂಡಿರುವ ಮೋದಿ ಸರ್ಕಾರ ಕೆಲವೊಂದು ಯೋಜನೆಗಳನ್ನು ಹಾಕಿಕೊಂಡಿದೆ. ಆ ಯೋಜನೆಗಳು ಯಾವುವು? ಇದರಿಂದ ಭಾರತದ ಪ್ರಗತಿ ಹೇಗೆ ಸಾಧ್ಯ ಎಂಬ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಇಲ್ಲಿ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇ - ಆಡಳಿತ

#1

ಮೋದಿ ಸರ್ಕಾರ ಇ -ಆಡಳಿತಕ್ಕೆ ಹೆಚ್ಚು ಗಮನ ಕೊಡುತ್ತಿರುವ ವಿಚಾರ ಸ್ಪಷ್ಟವಾಗುತ್ತಿದೆ. ಅಂದರೆ ಅಂತರ್ಜಾಲ - ಸರಕಾರ. ಇತ್ತೀಚೆಗೆ ಮೋದಿಯವರು ಹೊಸ ಮೊಬೈಲ್ ಫೋನ್ ಮತ್ತು ಅಪ್ಲಿಕೇಶನ್ ಅನ್ನು ಸ್ಥಾಪಿಸಿದ್ದು ಅದನ್ನು 'ಜಾಬ್ಸ್ ಇನ್ ಜಿಒಜಿ' (ಗುಜರಾತ್ ಸರ್ಕಾರ) ಎಂದು ಕರೆದಿದ್ದಾರೆ. ಇದರ ಮುಖ್ಯ ಉದ್ದೇಶ ಎಲ್ಲಾ ರಾಜ್ಯ ಸರಕಾರಿ ಉದ್ಯೋಗಗಳಿಗೆ ಉದ್ಯೋಗ ಅವಕಾಶ ಕ್ಯಾಲೆಂಡರ್ ಅನ್ನು ಮುಂದಿನ ಹತ್ತು ವರ್ಷಗಳಿಗೆ ರಚಿಸುವುದಾಗಿದೆ.

ಟೆಲಿಕಮ್ಯುನಿಕೇಶನ್

#2

ಮೋದಿಯವರ ತ್ರಿಡಿ ಹೋಲೋಗ್ರಾಮ್ ಪ್ರೊಜೆಕ್ಷನ್ ಕ್ಯಾಂಪೈನ್ ದೊಡ್ ಯಶಸ್ಸನ್ನು ಗಳಿಸಿದೆ. ಸಂವಹನ ಕ್ಷೇತ್ರದಲ್ಲೂ ನಾವು ಮಹತ್ತರ ಬದಲಾವಣೆಯನ್ನು ನಿರೀಕ್ಷಿಸಬಹುದು. ಸ್ಟೇಕ್‌ಹೋಲ್ಡರ್‌ಗಳಿಗೆ ಇಂಡಸ್ಟ್ರಿಯಲ್ಲಿ ದೀರ್ಘ ಕಾಲದ ಹೂಡಿಕೆಯ ಅವಕಾಶವನ್ನು ಕಲ್ಪಿಸುವುದು ಮೋದಿ ಸರ್ಕಾರದ ಗುರಿಯಾಗಿದೆ. ಅಂದರೆ ಉತ್ತಮ ಅಂತರ್ಜಾಲ, ಫೋನ್ ನೆಟ್‌ವರ್ಕ್, ಹೆಚ್ಚು ಆಯ್ಕೆಗಳು, ಹಾಗೂ ಹೆಚ್ಚಿನ ಪ್ಯಾಕೇಜ್‌ಗಳನ್ನು ಒದಗಿಸುವ ಗುರಿ ಹೊಂದಿದೆ.

ಐಟಿ ಬೆಳವಣಿಗೆ

#3

ಜಾಗತಿಕ ಆರ್ಥಿಕತೆಯನ್ನು ಪ್ರಬಲಗೊಳಿಸುವ ನಿಟ್ಟಿನಲ್ಲಿ ಮೋದಿ ಸರಕಾರ ಹೆಚ್ಚು ನಿಚ್ಚಳವಾಘಿ ಕಾರ್ಯ ನಿರ್ವಹಿಸುವ ಗುರಿಯನ್ನು ಹೊಂದಿದೆ. ಅನಾಲಿಟಿಕ್ಸ್, ಮೊಬಿಲಿಟಿ, ಕ್ಲೌಡ್, ಸಾಮಾಜಿಕ ಮಾಧ್ಯಮ ಮತ್ತು ಆರೋಗ್ಯ ಕಾಳಜಿ ಹಾಗು ವೈದ್ಯಕೀಯ ಸೇವೆಗಳನ್ನು ಹೆಚ್ಚು ಸಾಮರ್ಥ್ಯಕಾರಿಯನ್ನಾಗಿಸುವ ನಿಟ್ಟಿನಲ್ಲಿ ಐಟಿಯನ್ನು ಸಬಲಗೊಳಿಸುವ ಗುರಿ ಮೋದಿಯದ್ದಾಗಿದೆ.

ಮೇಡ್ ಇನ್ ಇಂಡಿಯಾ

#4

ಮೋದಿಯವರು ತಮ್ಮ ಭಾಷಣದಲ್ಲಿ ಉತ್ಪಾದನೆಗೆ ಹೆಚ್ಚು ಒತ್ತು ನೀಡಿದ್ದಾರೆ. ಭಾರತದಲ್ಲಿ ತಯಾರಾಗುವ ಉತ್ಪಾದನೆಗೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಮೋದಿಯವರು ಈ ರಂಗದಲ್ಲೂ ತಮ್ಮ ಸಾಧನೆಯನ್ನು ಮಾಡಲಿದ್ದಾರೆ. ಇಲ್ಲಿ ತಯಾರಾಗುವ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಬರಬೇಕು ಮತ್ತು ಅದು ಚೆನ್ನಾಗಿ ಕಾರ್ಯಗತವಾಗಬೇಕೆಂಬುದು ಅವರ ಬಯಕೆಯಾಗಿದೆ.

ಆಕಾಶ್ ಟ್ಯಾಬ್ಲೆಟ್

#5

ಭಾರತದಲ್ಲಿ ದೊರೆಯುವ ಕಡಿಮೆ ಬೆಲೆಯ ಆಕಾಶ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಮೋದಿ ಇದ್ದಾರೆ. ಮೋದಿ ಸರ್ಕಾರ ಈ ಆಸೆಯನ್ನು ಆದಷ್ಟು ಬೇಗ ನನಸು ಮಾಡಲಿ ಎಂಬುದೇ ಈಗಿರುವ ನಿರೀಕ್ಷೆಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot