ರಾಜ್ಯದ ಯುವ ವಿಜ್ಞಾನಿಗೆ ಒಲಿದ 'ಬಾಲ ಪುರಸ್ಕಾರ'!..ಸುಹೇಲ್ ಸಾಧನೆಗೆ ದೇಶವೇ ಸಲಾಮ್!!

|

ರಾಕೆಟ್ ವೇಗದಲ್ಲಿ ಸಾಧನೆಯ ಶಿಖರ ಏರುತ್ತಿರುವ ರಾಜ್ಯದ ಹೆಮ್ಮೆಯ ಪುತ್ರ, ಯುವ ವಿಜ್ಞಾನಿ ಸಿ.ಎಸ್. ಮೊಹಮ್ಮದ್ ಸುಹೇಲ್ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರಿಂದ ಪ್ರಧಾನ್ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಸ್ಥಳೀಯ ಮಟ್ಟದಿಂದ ಸಂಶೋಧನೆಗಳನ್ನು ಆರಂಭಿಸಿ ಆರಂಭಿಸಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೊಹಮ್ಮದ್ ಸುಹೇಲ್ ಅವರಿಗೆ ಈ ವರ್ಷದ ನಾವೀನ್ಯದ (ಇನೊವೆಷನ್) ಕ್ಷೇತ್ರದಲ್ಲಿ ಬಾಲ ಪುರಸ್ಕಾರ ಪ್ರಶಸ್ತಿ ಒಲಿದುಬಂದಿದೆ.

ನಾವೀನ್ಯತೆ, ವಿದ್ವಾಂಸ, ಕ್ರೀಡಾ, ಕಲೆ ಮತ್ತು ಸಂಸ್ಕೃತಿ, ಸಾಮಾಜಿಕ ಸೇವೆ ಮತ್ತು ಶೌರ್ಯ ಕ್ಷೇತ್ರಗಳಲ್ಲಿ ಈ ವರ್ಷ ಒಟ್ಟು 26 ಮಕ್ಕಳಿಗೆ ಪ್ರಧಾನ್ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಪ್ರಶಸ್ತಿಯನ್ನು ನೀಡಲಾಗಿದೆ. ತನ್ನ ಹದಿನೆಂಟನೇ ವಯಸ್ಸಿನಲ್ಲೇ 4 ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಸುಹೇಲ್ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸಿಕ್ಕಿದ್ದು, ಬಾಲ್ಯದಿಂದಲೂ ವಿಜ್ಞಾನದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಮೊಹಮ್ಮದ್ ಸುಹೇಲ್ ಅವರು ನಾವೀನ್ಯದ ಕ್ಷೇತ್ರದಿಂದ ಈ ಕೀರ್ತಿಗೆ ಪಾತ್ರರಾಗಿದ್ದಾರೆ.

ರಾಜ್ಯದ ಯುವ ವಿಜ್ಞಾನಿಗೆ ಒಲಿದ 'ಬಾಲ ಪುರಸ್ಕಾರ'!.ಸುಹೇಲ್ ಸಾಧನೆಗೆ ದೇಶವೇ ಸಲಾಮ್!

ಅಲ್ಲದೇ, ಇದೇ ಜನವರಿ 26ರ ಗಣರಾಜ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಪತಿಗಳಿಂದ ನ್ಯಾಷನಲ್ ಚೈಲ್ಡ್ ಎಕ್ಸ್‌ಸಪ್ಶನಲ್ ಅವಾರ್ಡ್ ಇನ್ ಇನ್ನೋವೇಷನ್ ಪ್ರಶಸ್ತಿಯನ್ನು ಪಡೆದುಕೊಳ್ಳಲು ಸಜ್ಜಾಗಿದ್ದಾನೆ. ಹಾಗಾದರೆ, ದೇಶದ ಹೆಮ್ಮೆಯ ಪುತ್ರ, ಯುವ ವಿಜ್ಞಾನಿ ಸಿ.ಎಸ್. ಮೊಹಮ್ಮದ್ ಸುಹೇಲ್ ಹಿನ್ನಲೆ ಏನು?, ಮೊಹಮ್ಮದ್ ಸುಹೇಲ್‌ಗೆ ದೊರೆತಿರುವ ಪ್ರಶಸ್ತಿಗಳು ಯಾವುವು?, ಸುಹೇಲ್ ಹಾದಿ ಹಾದಿ ಹೇಗಿತ್ತು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಯಾರು ಈ ಸಿ.ಎಸ್. ಮೊಹಮ್ಮದ್ ಸುಹೇಲ್?

ಯಾರು ಈ ಸಿ.ಎಸ್. ಮೊಹಮ್ಮದ್ ಸುಹೇಲ್?

ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಸಾಧನೆಗೈದು ದೇಶಕ್ಕೆ ಕೀರ್ತಿ ತಂದಿರುವ ಸಿ.ಎಸ್. ಮೊಹಮ್ಮದ್ ಸುಹೇಲ್ ಶ್ರೀರಂಗಪಟ್ಟಣದ ಹುಡುಗ. ಸಾಹಿತಿ ದಂಪತಿಯಾದ ಅನಾರ್ಕಲಿ ಸಲೀಂ ಚಿಣ್ಯ ಮತ್ತು ಡಾ.ಪವೀರ್‍ನಾ ಸಲೀಂ ಅವರ ಪುತ್ರನಾದ ಸುಹೇಲ್, ಪ್ರಸ್ತುತ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ಮೈನರ್‌ ಪ್ಲಾನೆಟ್ ಒಂದಕ್ಕೆತನ್ನ ಹೆಸರು ಇಡುವಂತಹ ಸಾಧನೆ ಮಾಡಿರುವ ಈತ ಈಗಲೇ ಸೈಂಟಿಫಿಕ್‌ ರೀಸರ್ಚ್‌ ರಾಯಲ್‌ ಸೊಸೈಟಿಯ ಗೌರವ ಸದಸ್ಯತ್ವವನ್ನು ಪಡೆದಿದ್ದಾನೆ.

ಬಾಲ್ಯದಿಂದಲೂ ವಿಜ್ಞಾನದಲ್ಲಿ ಅಪಾರ ಆಸಕ್ತಿ.

ಬಾಲ್ಯದಿಂದಲೂ ವಿಜ್ಞಾನದಲ್ಲಿ ಅಪಾರ ಆಸಕ್ತಿ.

ಸುಹೇಲ್‌ಗೆ ಬಾಲ್ಯದಿಂದಲೂ ವಿಜ್ಞಾನದಲ್ಲಿ ಅಪಾರ ಆಸಕ್ತಿ .ಅದೇ ಆಸಕ್ತಿಯ ಫಲ ಇಂದು ಈತನನ್ನು ದೇಶ ಮತ್ತು ದೇಶದ ಗಡಿಯಾಚೆ ಬಾಲ ಸಾಧಕನನ್ನಾಗಿ ಮಾಡಿದೆ. 2017 ರಲ್ಲಿ ಅಪೌಷ್ಠಿಕತೆ ಬಗ್ಗೆ ಸಂಶೋಧನೆ ಮಾಡಿ ಅದನ್ನು ಅಮೆರಿಕಾದಲ್ಲಿ ಮಂಡಿಸಿ ಮೆಚ್ಚುಗೆ ಪಡೆದಿದ್ದ. ಸುಹೇಲ್ 4 ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾನೆ. ಅಮೆರಿಕದಲ್ಲಿ ಭಾರತ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಜ್ಞಾನ ಸಂಸ್ಥೆಯಲ್ಲಿ ದಕ್ಷಿಣ ಕನ್ನಡದ ಸ್ವಸ್ತಿಕ್‌ ಮತ್ತು ಮಂಡ್ಯದ ಮೊಹಮ್ಮದ್ ಸುಹೇಲ್ ತಂಡ ಭಾರತವನ್ನು ಪ್ರತಿನಿಧಿಸಿ 2ನೇ ಗ್ರ್ಯಾಂಡ್‌ ಅವಾರ್ಡ್‌ನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸುಹೇಲ್‌ನ ಸಾಹಸಯಾನ ಹೇಗಿತ್ತು?

ಸುಹೇಲ್‌ನ ಸಾಹಸಯಾನ ಹೇಗಿತ್ತು?

ಅಮೆರಿಕದಲ್ಲಿ 2018ರ ಮೇ ತಿಂಗಳಲ್ಲಿ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಮಂಡ್ಯದ 17 ವರ್ಷದ ಬಾಲಕ ಸಿ.ಎಸ್‌.ಮೊಹಮ್ಮದ್‌ ಸುಹೇಲ್ ಯುವ ವಿಜ್ಞಾನಿಯಾಗಿ ಭಾರತವನ್ನು ಪ್ರತಿನಿಧಿಸಿ, ಕನ್ನಡಿಗರ ಕೀರ್ತಿಯನ್ನು ಎತ್ತಿ ಹಿಡಿದಿದ್ದರು. ಅಮೆರಿಕದ ಸಾಮ್‌ವಿಡ್ ಸಂಸ್ಥೆಯಿಂದ ಅಬ್ದುಲ್‌ ಕಲಾಂ ಹೆಸರಿನ ಗೌರವ ಪ್ರಶಸ್ತಿ ಪಡೆದಿದಿರುವ ಈತ ಈಗ ಹತ್ತಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಪಾತ್ರನಾಗಿದ್ದಾನೆ. ಅಲ್ಲದೇ ಇದೇ ಜನವರಿ 26ರ ಗಣರಾಜ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಪತಿಗಳಿಂದ ನ್ಯಾಷನಲ್ ಚೈಲ್ಡ್ ಎಕ್ಸ್‌ಸಪ್ಶನಲ್ ಅವಾರ್ಡ್ ಇನ್ ಇನ್ನೋವೇಷನ್ ಪ್ರಶಸ್ತಿಯನ್ನು ಪಡೆದುಕೊಳ್ಳಲು ಸಜ್ಜಾಗಿದ್ದಾನೆ.

ಸುಹೇಲ್ ಮಾತುಗಳಲ್ಲಿ ಯುವ ವಿಜ್ಞಾನಿಯ ಕಥೆ!

ಸುಹೇಲ್ ಮಾತುಗಳಲ್ಲಿ ಯುವ ವಿಜ್ಞಾನಿಯ ಕಥೆ!

ನನಗೆ ಮೊದಲಿನಿಂದಲೂ ವಿಜ್ಞಾನ ಎಂದರೆ ಕೂತೂಹಲ ಹೆಚ್ಚಿಸುವ ವಿಷಯವಾಗಿತ್ತು. ಎಲ್ಲರಂತೆ ನಾನೂ ಶಾಲೆಯಲ್ಲಿ ಪಾಠ ಕೇಳಿ ಪರಿಸರದಲ್ಲಿ ಅವುಗಳ ಪ್ರಯೋಗ ಮಾಡುತ್ತಿದ್ದೆ. 7ನೇ ತರಗತಿಯಲ್ಲಿ ಇರುವಾಗ ಕಲುಷಿತವಾದ ನೀರನ್ನು ಹೇಗೆ ಮರುಬಳಕೆ ಮಾಡಬಹುದು ಎನ್ನುವುದರ ಬಗ್ಗೆ ಪ್ರಯೋಗ ಮಾಡಿದೆ. ಇದನ್ನು ಎಲ್ಲರೂ ಮೆಚ್ಚಿಕೊಂಡರು. ಆಮೇಲೆ ಮಾನವನ ನಡಿಗೆಯಿಂದ ಹೇಗೆ ವಿದ್ಯುತ್ ಉತ್ಪಾದನೆ ಮಾಡಬಹುದು ಎನ್ನುವುದರ ಬಗ್ಗೆ ಪ್ರಯೋಗ ಮಾಡಿದೆ. ಅದು ಯಶ ಕಂಡ ನಂತರ ಎಲ್ಲರೂ ನನ್ನ ಗುರುತಿಸಿದರು. ಈ ಸಾಧನೆ ಮಾಡಲು ನನಗೆ ನನ್ನ ತಂದೆ ತಾಯಿಯೇ ಸ್ಪೂರ್ತಿ ಎಂದು ಸುಹೇಲ್ ಹೇಳುತ್ತಾನೆ.

ಬಾಲ್ಯದಲ್ಲೇ ವಿಜ್ಞಾನಿಯಾಗಿ ಬೆಳೆದ ಸುಹೇಲ್!

ಬಾಲ್ಯದಲ್ಲೇ ವಿಜ್ಞಾನಿಯಾಗಿ ಬೆಳೆದ ಸುಹೇಲ್!

ನಾನು ಚಿಕ್ಕವನಿದ್ದಾಗಲೇ ನನ್ನ ಅಪ್ಪ ಅಮ್ಮ ನನಗೆ ಒಂದು ಎನ್ ಸೈಕ್ಲೋಪೀಡಿಯಾವನ್ನು ಕೊಡಿಸಿದ್ದರು. ಅದನ್ನು ಓದಿಕೊಂಡೇ ನಾನು ಬೆಳೆದೆ. ಅದರಿಂದ ಸಾಕಷ್ಟು ಕಲಿತೆ. ಆಮೇಲೆ ನನ್ನ ಹುಟ್ಟುಹಬ್ಬಕ್ಕೆ ಅಮ್ಮ ಲ್ಯಾಪ್‌ಟಾಪ್ ಕೊಡಿಸಿದರು. ಇದುವೇ ನನಗೆ ಹೊಸ ಅವಕಾಶಗಳ ಬಾಗಿಲು ತೆರೆಯುವಂತೆ ಮಾಡಿತು. ಇಂಟರ್‌ನೆಟ್‌ನಲ್ಲಿ ಸಾಕಷ್ಟು ವಿಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಹುಡುಕಿದೆ. ಹೊಸ ಹೊಸ ಆವಿಷ್ಕಾರಗಳ ಬಗ್ಗೆ ತಿಳಿದುಕೊಂಡೆ. ಹೀಗೆ ಮಾಡುತ್ತಲೇ ನಾನು ಏನು ಮಾಡಬೇಕು ಎನ್ನುವುದರ ಸ್ಪಷ್ಟತೆ ಹೆಚ್ಚುತ್ತಾ ಹೋಯಿತು ಎಂದು ಹೇಳುವ ಮೂಲಕ ಬಾಲ್ಯದಲ್ಲೇ ವಿಜ್ಞಾನಿಯಾಗಿ ಬೆಳೆದುದರ ಬಗ್ಗೆ ಸುಹೇಲ್ ಹೇಳುತ್ತಾನೆ.

ಯುವ ವಿಜ್ಞಾನಿಗೆ ಬಂದ ಹತ್ತಾರು ಪ್ರಶಸ್ತಿಗಳು

ಯುವ ವಿಜ್ಞಾನಿಗೆ ಬಂದ ಹತ್ತಾರು ಪ್ರಶಸ್ತಿಗಳು

ಈ ವಯಸ್ಸಿನಲ್ಲಿಯೇ ದೇಶದ ಪ್ರತಿಷ್ಟಿತ ಸಂಸ್ಥೆಗಳು ಇವನನ್ನು ಗುರುತಿಸಿ ಗೌರವಿಸಿವೆ. 2013 ಮತ್ತು 2018ರಲ್ಲಿ ಎರಡು ಬಾರಿ ರಾಜ್ಯ ಯುವ ವಿಜ್ಞಾನಿ, ರೋಟರಿ ವಿಜ್ಞಾನಿ, 2017 ಮತ್ತು 2018ರಲ್ಲಿ ಎರಡು ಬಾರಿ ಅಗಸ್ತ್ಯ ಜಿಗ್ನಾಸ್ಯಾ ರಾಷ್ಟ್ರೀಯ ವಿಜ್ಞಾನ ವಿಶೇಷ ಪ್ರಶಸ್ತಿ, ಜಿಲ್ಲಾ ಬಾಲ ವಿಜ್ಞಾನಿ, ಜಿಲ್ಲಾ ಯುವ ವಿಜ್ಞಾನಿ, 2017ರಲ್ಲಿ ರಾಜ್ಯ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ, ಜಿಲ್ಲಾ ಕಲಾ ಶ್ರೀ, ಜಿಲ್ಲಾ ಅಸಾಧಾರಣ ಪ್ರತಿಭಾ ಪ್ರಶಸ್ತಿ, 2015ರಲ್ಲಿ ರಾಜ್ಯ ಅಸಾಧಾರಣ ಪ್ರಶಸ್ತಿ, 2018ರ ಡಾ. ಶಿವರಾಮ ಕಾರಂತ ಬಾಲವನದ ಬಾಲ ವಿಜ್ಞಾನಿ ಪ್ರಶಸ್ತಿ, 2018ರ ರಾಷ್ಟ್ರೀಯ ಅಮೆಚೂರ್ ಸೈಂಟಿಸ್ಟ್ ಪ್ರಶಸ್ತಿ ಜೊತೆಗೆ ಈಗ ರಾಷ್ಟ್ರಪತಿಯವರಿಂದಪ್ರಧಾನ್ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಸಿಕ್ಕಿದೆ.

2019ರ ಮೇನಲ್ಲಿ ಅಮೆರಿಕಾದಲ್ಲಿ ಸಂಶೋಧನಾ ಪ್ರಬಂಧ ಮಂಡನೆ

2019ರ ಮೇನಲ್ಲಿ ಅಮೆರಿಕಾದಲ್ಲಿ ಸಂಶೋಧನಾ ಪ್ರಬಂಧ ಮಂಡನೆ

ಸದ್ಯ ಐರಿಸ್ ರಾಷ್ಟ್ರೀಯ ಗ್ರಾಂಡ್ ಅವಾರ್ಡ್-2018ರ ಗೌರವ ಪಡೆದಿರುವ ಸುಹೇಲ್, 2019ರ ಮೇ ತಿಂಗಳಿನಲ್ಲಿ ಅಮೆರಿಕದ ಫೋನೆಕ್ಸ್ ಆರಿಜೋನಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಎರಡನೇ ಬಾರಿಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡಿದ್ದಾರೆ. ಕಂಪ್ಯೂಟರ್ ಸೆಕ್ಯೂರಿಟಿ ವಿಷಯದ ಕುರಿತು ವೈಜ್ಞಾನಿಕ ಸಂಶೋಧನಾ ಪ್ರಬಂಧವನ್ನು ಸುಹೇಲ್ ಮಂಡಿಸಲಿದ್ದಾನೆ. ಈಗಾಗಲೇ ನಾಲ್ಕು ಪ್ರಖ್ಯಾತ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಈತನ ಗುರಿ ಇನ್ನು ದೊಡ್ಡದಾಗಿದೆ. ಆತ ತನ್ನ ಗುರಿ ತಲುಪಲು ನಿಮ್ಮ ಹಾರೈಕೆಯಷ್ಟೇ ಸಾಕಾಗಿದೆ.!

Best Mobiles in India

English summary
President Kovind presented the awards at Rashtrapati Bhavan in the presence of Minister for Women and Child Development Maneka Gandhi and other dignitaries. In the field of innovation, Mohammad Suhail Chinya Salimpasha, Arunima Sen, Aswath Suryanarayanan Sen, Naisargik Lenka, A U Nachiketh Kumar and Madhav Lavakare wer

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X