ಭಾರತಕ್ಕೂ ಬಂತು ಮೊಮೊ ಗೇಮ್: ವಾಟ್ಸ್‌ಆಪ್ ಬಳಕೆ ಎಚ್ಚರ..!

|
Why shouldn't upload WhatsApp Status - KANNADA

ಮತ್ತೊಂದು ಸುಸೈಡ್ ಗೇಮ್ ವೈರಲ್ ಆಗಿದ್ದು, ಬ್ಲೂ ವೇಲ್ ನಂತರದಲ್ಲಿ ಹೆಚ್ಚಿನ ಮಂದಿ ಬಲಿ ಪಡೆದುಕೊಳ್ಳಲು ಬಂದಿರುವ ಮೊಮೊ ಚಾಲೆಂಜ್ ಗೇಮ್ ಭಾರತದಲ್ಲಿಯೂ ಕಾಲಿಟ್ಟಾಗಿದೆ. ಕೊಲ್ಕತ್ತಾದಲ್ಲಿ ಈ ಗೇಮ್ ಅನ್ನು ಹರಡುತ್ತಿದ್ದ ವಿದ್ಯಾರ್ಥಿಯೊರ್ವನ್ನು ಪೊಲೀಸರು ಬಂದಿಸಿದ್ದಾರೆ. ವೈರಲ್ ಆಗುತ್ತಿರುವ ಮೊಮೊ ಗೇಮ್‌ ಅನ್ನು ಹರಡದಂತೆ ಮಾಡು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಭಾರತಕ್ಕೂ ಬಂತು ಮೊಮೊ ಗೇಮ್: ವಾಟ್ಸ್‌ಆಪ್ ಬಳಕೆ ಎಚ್ಚರ..!

ಕೊಲ್ಕತ್ತಾದಲ್ಲಿ ಮೊಮೊ ಮೊದಲ ಪ್ರಕರಣ ದಾಖಲಾಗಿದ್ದು, ಮೊಮೊ ಆಡುವಂತೆ ಆಹ್ವಾನ ನೀಡುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಬ್ಲೂ ವೇಲ್‌ನಿಂದಲೇ ಹೆಚ್ಚಿನ ಪ್ರಮಾಣದ ಸಾವು ನೋವು ಉಂಟಾಗಿದೆ. ಈ ಹಿನ್ನಲೆಯಲ್ಲಿ ಮೊಮೊದಿಂದ ಹೆಚ್ಚಿನ ತೊಂದರೆಯಾಗಬರದು ಎನ್ನುವ ಕಾರಣಕ್ಕೆ ಇದನ್ನು ಆಡದೆ ಇದ್ದರೆ ಒಳ್ಳೆಯದು.

ಆಹ್ವಾನ:

ಆಹ್ವಾನ:

ಮೊಮೊ ಚಾಲೆಂಜ್‌ ವಾಟ್ಸ್‌ಆಪ್ ಮೂಲಕವೇ ಹರಡುತ್ತಿದ್ದು, ವಿದ್ಯಾರ್ಥಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಟಾರ್ಗೇಟ್ ಮಾಡಿದೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ಹೆಚ್ಚಿನ ಮಂದಿ ಬಳಕೆ ಮಾಡಿಕೊಳ್ಳುತ್ತಿರುವ ವಾಟ್ಸ್ಆಪ್ ಮೂಲಕ ಹರಡುತ್ತಿದೆ ಮತ್ತು ವಾಟ್ಸ್‌ಆಪ್ ನಿಂದಲೇ ಆಹ್ವಾನ ನೀಡುತ್ತಿದೆ.

ನೆಟ್‌ವರ್ಕ್‌:

ನೆಟ್‌ವರ್ಕ್‌:

ವಾಟ್ಸ್‌ಆಪ್ ನೆಟ್‌ವರ್ಕ್‌ನಿಂದ ಹರಡುತ್ತಿರುವ ಮೊಮೊ ಚಾಲೆಂಜ್‌ ಗೇಮ್ ಅನ್ನು ಆಡುವಂತೆ ಎಂಜಿನಿಯರಿಂಗ್ ವಿದ್ಯಾರ್ಥಿ ಆಹ್ವಾನ ನೀಡುತ್ತಿದ್ದ ಎನ್ನಲಾಗಿದೆ. ಸಹಪಾಠಿಗಳು, ಸಂಬಂಧಿಕರಿಗೆ ಮೊಮೊ ಆಟಕ್ಕೆ ಆಹ್ವಾನ ನೀಡುತ್ತಿರುವ ವಿಷಯ ತಿಳಿದ ನಂತರ ಪೊಲೀಸರು ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.

ಆಡಬೇಡಿ:

ಆಡಬೇಡಿ:

ನಿಮಗೆ ಯಾವುದೇ ಮೂಲದಿಂದ ಮೊಮೊ ಗೇಮ್ ಆಡುವ ಆಹ್ವಾನವನ್ನು ಯಾರಾದರು ಕಳುಹಿಸಿದರೆ ಅದನ್ನು ಯಾವುದೇ ಕಾರಣಕ್ಕೆ ಸ್ವೀಕರಿಸ ಬೇಡಿ. ಸ್ವೀಕರಿಸಿದರೆ ನೀವು ತೊಂದರೆಗೆ ಸಿಲುಕುವುದು ಖಂಡಿತ. ನೀವು ಆಡದ ಆಹ್ವಾನ ಕಳಹಿಸಿದವರ ಬಗ್ಗೆ ಮಾಹಿತಿಯನ್ನು ಪೊಲೀಸರಿಗೆ ನೀಡಿರಿ. ಇದರಿಂದ ಇನಷ್ಟು ತೊಂದರೆಗಳನ್ನು ತಡೆಯಬಹುದಾಗಿದೆ.

Best Mobiles in India

English summary
Momo challenge fear grips northern districts of West Bengal. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X