Home
ಸುದ್ದಿಜಾಲ

ಹೆಚ್ಚುತ್ತಿದೆ ಮೊಮೊ ಗೇಮ್ ಹಾವಳಿ..! ಮೊಮೊ ಮೆಸೇಜ್ ಬಂದರೆ ಪೊಲೀಸರನ್ನು ಸಂಪರ್ಕಿಸಿ..!

By Gizbot Bureau

ಒಮ್ಮೆ ನಿಮ್ಮ ಮೊಬೈಲ್ ಪರೀಕ್ಷಿಸಿಕೊಳ್ಳಿ. ನಿಮಗೇನಾದರೂ ಈ ಮೆಸೇಜ್ ಬಂದಿದ್ಯಾ ನೋಡಿಕೊಳ್ಳಿ. ಎಚ್ಚರಿಕೆಯಿಂದಿರಿ. ಯಾವುದಕ್ಕೂ ಈ ಲಿಂಕ್ ನ್ನು ಮಾತ್ರ ತರೆಯಲೇಬೇಡಿ. ಇದು ನಿಮ್ಮ ಜೀವಕ್ಕೆ ಹಾನಿಯಾಗಬಹುದು. ಹೌದು ದಿನದಿಂದ ದಿನಕ್ಕೆ ಒಬ್ಬರ ಮೊಬೈಲಿನಿಂದ ಮತ್ತೊಬ್ಬರ ಮೊಬೈಲಿಗೆ ಹೋಗುತ್ತಿರುವ ಮೋಮೇ ಗೇಮ್ ಈಗಾಗಲೇ ಇಬ್ಬರನ್ನು ಬಲಿಪಡೆದಿದೆ!

ಒಂದು ವೇಳೆ ನೀವೇನಾದರೂ ಮೋಮೊ ಚಾಲೆಂಜ್ ಗೇಮ್ ನ್ನು ಆಡಲು ಆಮಂತ್ರಣದ ಮೆಸೇಜ್ ಪಡೆದಲ್ಲಿ ಕೂಡಲೇ ಪೋಲೀಸರನ್ನು ಸಂಪರ್ಕಿಸುವಂತೆ ಪಶ್ಚಿಮ ಬಂಗಾಳದ ಸಿಐಡಿ ಇಂದು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾರಕವಾಗಿರುವ ಈ ಆಟವನ್ನು ಆಡುವಂತೆ ಹೆಚ್ಚಿನ ಜನರಿಗೆ ಮೆಸೇಜ್ ಗಳು ಬರುತ್ತಿರುವುದರ ಹಿನ್ನೆಲೆಯಲ್ಲಿ ಸಿಐಡಿಯ ಟ್ವೀಟರ್ ಅಕೌಂಟಿನಲ್ಲಿ ಈ ಮೆಸೇಜ್ ನ್ನು ಜನರಿಗೆ ತಲುಪಿಸಲಾಗಿದೆ.

ಹೆಚ್ಚುತ್ತಿದೆ ಮೊಮೊ ಗೇಮ್ ಹಾವಳಿ..! ಮೊಮೊ ಮೆಸೇಜ್ ಬಂದರೆ ಪೊಲೀಸರನ್ನು ಸಂಪರ್ಕಿಸಿ

ಪೋಷಕರಿಗೆ ಎಚ್ಚರಿಕೆ ನೀಡಿರುವ ಸಿಐಡಿ ಪೋಲೀಸರು ತಮ್ಮ ಮಕ್ಕಳು ಆನ್ ಲೈನ್ ನಲ್ಲಿ ಈ ಆಟವನ್ನು ಆಡದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲ ಮೋಮೊ ಚಾಲೆಂಜ್ ಇತ್ತೀಚಿನ ದಿನಗಳಲ್ಲಿ ಹೊಸ ರೀತಿಯ ಸಾಮಾಜಿಕ ಜಾಲತಾಣದ ಕಿಲ್ಲರ್ ಗೇಮ್ ಆಗಿದೆ ಎಂದು ವಿವರಣೆ ನೀಡಿದ್ದಾರೆ.

ನೋಟೀಸ್ ನಲ್ಲಿ ಹೀಗೆ ಬರೆಯಲಾಗಿದೆ “ ದಯವಿಟ್ಟು ನಿಮ್ಮ ಮಕ್ಕಳು ಈ ಆಟವನ್ನು ಆಡದಂತೆ ಗಮನ ಹರಿಸಿ. ಈ ಆಟದ ಬಗ್ಗೆ ಯಾವುದೇ ಮಾಹಿತಿ ಇಲ್ಲವೇ ಚಲನವಲನಗಳು ಗುರುತಿಸಲ್ಪಟ್ಟರೆ ದಯವಿಟ್ಟು ಸ್ಥಳೀಯ ಪೋಲೀಸ್ ಠಾಣೆಗೆ ಇಲ್ಲವೇ ಪಶ್ಚಿಮ ಬಂಗಾಳ ಪೋಲೀಸರಿಗೆ ಮಾಹಿತಿ ನೀಡಿ” ಎಂದು ಹೇಳಲಾಗಿದೆ.

ಸದ್ಯ ಪಶ್ಚಿಮ ಬಂಗಾಳದಲ್ಲಿ ಮೋಮೊ ಆಟವು ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಮನೀಷ್ ಸಾರ್ಕಿ(18)

ಡಾರ್ಜಲಿಂಗ್ ಜಿಲ್ಲೆಯ ಕುರ್ಸೊಂಗ್ ನ ವ್ಯಕ್ತಿಯು ಅಗಸ್ಟ್ 20 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮತ್ತೊಂದು ಪ್ರಕರಣವು ಮಾರನೇ ದಿನ ಅಂದರೆ ಅಗಸ್ಟ್ 21 ರಂದು ಕುರ್ಸೊಂಗ್ ನಲ್ಲಿಯೇ ನಡೆದಿದೆ. ಆತ್ಮೆಹತ್ಯ ಮಾಡಿಕೊಂಡ ಆಕೆಯ ಹೆಸರು ಅಧಿತಿ ಘೋಯಲ್ (26).

ಅಗಸ್ಟ್ 21 ರಂದು ಜಲ್ಪೈಗುರಿಯಲ್ಲಿ ವಾಸವಾಗಿರುವ ರಬಿತಾ ರೈಗೂ ಕೂಡ ಇದೇ ರೀತಿಯ ಆಮಂತ್ರಣ ಬಂದಿದ್ದು ಆಕೆ ಈ ಬಗ್ಗೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಪೋಲೀಸ್ ಮೂಲಗಳು ತಿಳಿಸಿವೆ. ಇದೇ ಜಿಲ್ಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜ್ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿತ್ತು.

ಐಟಿ ವೃತ್ತಿಯಲ್ಲಿರುವ ಇನ್ನೊಬ್ಬ ಮಹಿಳೆಯೂ ಕೂಡ ಕಳೆದ ಗುರುವಾರ ಇದೇ ರೀತಿಯ ಆಮಂತ್ರಣವೊಂದನ್ನು ಸ್ವೀಕರಿಸಿದ್ದಾರೆ ಮತ್ತು ಕೂಡಲೇ ಕೊಲ್ಕತ್ತಾ ಪೋಲೀಸ್ ಸೈಬರ್ ಸೆಲ್ ನಲ್ಲಿ ದೂರು ದಾಖಲಿಸಿದ್ದಾರೆ. ಹೀಗೆ ದಿನದಿಂದ ದಿನಕ್ಕೆ ಈ ಬಗ್ಗೆ ಪೋಲೀಸ್ ಠಾಣೆಗಳಲ್ಲಿ ದೂರುಗಳು ಹೆಚ್ಚುತ್ತಲೇ ಇವೆ ಎಂದು ಸಿಐಡಿ ಅಧಿಕೃತ ಮೂಲಗಳು ತಿಳಿಸಿವೆ.

ಜನರು ತಮ್ಮ ವಾಟ್ಸ್ ಆಪ್ ನಂಬರ್ ನಲ್ಲಿ ಈ ಆಟದ ಬಗೆಗಿನ ಆಮಂತ್ರಣವನ್ನು ಪಡೆಯುತ್ತಿದ್ದಾರೆ.ಹಾಗಾಗಿ ಅಂತಹ ಲಿಂಕ್ ನ್ನು ದಯವಿಟ್ಟು ಯಾರೂ ಕೂಡ ತೆರೆಯಬಾರದು ಮತ್ತು ಇದು ಜಂಕ್ ಆಗಿರುತ್ತದೆ ಮತ್ತು ಇದು ನಿಮಗೆ ಮಾರಕವಾಗಿರುವ ಸಾಧ್ಯತೆಯೂ ಇದೆ. ಹಾಗಾಗಿ ದಯವಿಟ್ಟು ಈ ಕಾನೂನುಬಾಹಿರ ಆಟವನ್ನು ಯಾರೂ ಆಡಬಾರದು ಮತ್ತು ಒಂದು ವೇಳೆ ಆಮಂತ್ರಣ ಸ್ವೀಕರಿಸಿದ್ದೇ ಆದಲ್ಲಿ ಪೋಲೀಸರಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಷ್ಟೇ ಅಲ್ಲ ವಿಶ್ವವಿದ್ಯಾಲಯಗಳಿಗೆ ಮತ್ತು ಕಾಲೇಜು, ಸ್ಕೂಲುಗಳಿಗೂ ಮಾಹಿತಿ ನೀಡಲಾಗಿದ್ದು, ಯಾವುದೇ ವಿದ್ಯಾರ್ಥಿ ಈ ಸಮಸ್ಯೆಗೆ ಸಿಲುಕಿ ಭೀತಿ ಎದುರಿಸುತ್ತಿರುವಂತೆ ಕಂಡರೆ ಅರ್ಥಾತ್ ಎಂದಿನಂತೆ ವರ್ತಿಸದೇ ಭಿನ್ನವಾಗಿ ಕಂಡುಬಂದಲ್ಲಿ ದಯವಿಟ್ಟು ಪೋಲೀಸ್ ಠಾಣೆಗೆ ತಿಳಿಸುವಂತೆ ಪೋಲೀಸರು ಹೇಳಿದ್ದಾರೆ.

ಕಳೆದ ವರ್ಷ ಬ್ಲೂ ವೇಲ್ ಚಾಲೆಂಜ್ ನಂತೆ ಈ ವರ್ಷ ಮೋಮೊ ಚಾಲೆಂಜ್ ನ ಆನ್ ಲೈನ್ ಗೇಮ್ ಹಲವು ದೇಶಗಳಿಗೆ ತಲೆನೋವಾಗಿ ಪರಿಣಮಿಸಿರುವುದಂತೂ ಸುಳ್ಳಲ್ಲು. ಯಾವುದಕ್ಕೂ ನೀವು ಮತ್ತು ನಿಮ್ಮವರು ಹುಷಾರಾಗಿರಿ!

Best Mobiles in India

English summary
Momo game: CID asks people to contact police after receiving. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+