ಮಾಂಟ್‌ಬ್ಲ್ಯಾಂಕ್‌ ಕಂಪೆನಿಯಿಂದ ಹೊಸ ಸ್ಮಾರ್ಟ್‌ ಹೆಡ್‌ಫೋನ್‌ ಬಿಡುಗಡೆ!

|

ಜರ್ಮನಿ ಮೂಲದ ಮಾಂಟ್‌ಬ್ಲ್ಯಾಂಕ್‌ ಕಂಪೆನಿ ಲಕ್ಸುರಿ ಎಲೆಕ್ಟ್ರಾನಿಕ್ಸ್‌ ಆಕ್ಸಿಸರೀಸ್‌ಗಳ ಮೂಲಕ ಟೆಕ್‌ವಲಯದಲ್ಲಿ ಸಾಕಷ್ಟು ಪ್ರಸಿದ್ಧಿಯನ್ನ ಪಡೆದಿದೆ. ಫ್ಯಾಷನ್‌ ಹಾಗೂ ರಾಯಲ್‌ ಲೈಪ್‌ಸ್ಟೈಲ್‌ ಅನ್ನೇ ಆಧಾರವಾಗಿಟ್ಟುಕೊಂಡು ಹೊಸ ಮಾದರಿಯ ವೈವಿಧ್ಯಮಯ ಆಕ್ಸಿಸರೀಸ್‌ಗಳನ್ನ ಪರಿಚಯಿಸಿದೆ. ಈಗಾಗ್ಲೆ ಸಾಕಷ್ಟು ಮಾದರಿಯ ಉತ್ಪನ್ನಗಳ ಮೂಲಕ ಸೈ ಎನಿಸಿಕೊಂಡಿರುವ ಮಾಂಟ್‌ಬ್ಲ್ಯಾಂಕ್‌ ಇದೀಗ ಜೋಡಿ ವಾಯರ್‌ಲೆಸ್‌ ಹೆಡ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ.

ಹೌದು

ಹೌದು, ಮಾಂಟ್‌ಬ್ಲ್ಯಾಕ್‌ ಕಂಪೆನಿ ತನ್ನ ಹೊಸ ಆವೃತ್ತಿಯ ಮಾಂಟ್‌ಬ್ಲ್ಯಾಂಕ್‌ ಸ್ಮಾರ್ಟ್‌ಹೆಡ್‌ಫೋನ್‌ ಅನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಹೆಡ್‌ಫೋನ್‌ ಪ್ರೀಮಿಯಂ ನಾಯಿಸ್‌ ಕ್ಯಾನ್ಸಲಿಂಗ್‌ ಹೆಡ್‌ಫೋನ್‌ ಆಗಿದ್ದು, ಲಕ್ಸುರಿ ಬ್ಯುಸಿನೆಸ್‌ ಲೈಫ್‌ಸ್ಟೈಲ್‌ ಹೊಂದಿರುವ, ಪ್ರವಾಸ ಮಾಡುವ ಅದರಲ್ಲೂ ಪುರುಷ ಗ್ರಾಹಕರ ಆಶಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಹೆಡ್‌ಫೋನ್‌ನ ಪ್ರೇಮ್‌ಗಳನ್ನ ಕುರಿ ಚರ್ಮದಿಂದ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಕ್ಯಾನ್‌ಗಳನ್ನ ಸಿಲಿಕೋನ್‌ನಿಂದ ತಯಾರಿಸಲಾಗಿದೆ ಎನ್ನಲಾಗಿದೆ.

ಮಾಂಟ್‌ಬ್ಲ್ಯಾಂಕ್‌

ಮಾಂಟ್‌ಬ್ಲ್ಯಾಂಕ್‌ ಕಂಪೆನಿಯ ಈ ಹೆಡ್‌ಫೋನ್‌ ಬಳಕೆದಾರರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳುವ ನಾಯಿಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಅನ್ನ ಒಳಗೊಂಡಿದೆ. ಇದೇ ಮಾದರಿಯ ಹೆಡ್‌ಫೋನ್‌ಗಳನ್ನ ಈಗಾಗ್ಲೆ ಬೋಸ್‌ ಹಾಗೂ ಸೋನಿ ಕಂಪೆನಿ ಕೂಡ ಬಿಡುಗಡೆ ಮಾಡಿರುವುದರಿಂದ ಈ ಕಂಪೆನಿಗಳ ಜೊತೆ ಪೈಪೋಟಿಯನ್ನ ಎದುರಿಸಬೇಕಾಗಿದೆ. ಇದೇ ಕಾರಣಕ್ಕೆ ಈ ಸ್ಮಾರ್ಟ್‌ಹೆಡ್‌ಫೋನ್‌ ನ ಹೆಡ್‌ಬ್ಯಾಂಡ್‌ ಸಾಫ್ಟ್‌ ಲೆದರ್‌ ನಿಂದ ವಿನ್ಯಾಸಗೊಳಿಸಲಾಗಿದ್ದು, ಪ್ಲ್ಯಾಸ್ಟಿಕ್‌ ಮೆಟಲ್‌ ನಿಂದ ಇಯರ್‌ಕಪ್ಸ್‌ ಅನ್ನು ತಯಾರಿಸಲಾಗಿದೆ.

ಸ್ಮಾರ್ಟ್‌

ಅಲ್ಲದೆ ಈ ಸ್ಮಾರ್ಟ್‌ ಹೆಡ್‌ಫೋನ್‌ ಕ್ವಾಲ್ಕಾಮ್‌ ಚಿಪ್‌ಸೆಟ್‌ ಪ್ರೊಸೆಸರ್‌ ವೇಗವನ್ನು ಹೊಂಡಿದೆ. ಅಲ್ಲದೆ ಅತ್ಯುತ್ತಮ ಬ್ಲೂಟೂತ್‌ ಕನೆಕ್ಟಿವಿಟಿ ಆಯ್ಕೆಯನ್ನ ನೀಡಲಾಗಿದ್ದು, ಇದರಿಂದ ಉತ್ತಮ ಸೌಂಡ್‌ ಸಿಸ್ಟಂ ಅನ್ನು ಪಡೆಯಬಹುದಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಹೆಡ್‌ಫೋನ್‌ ಕಂಟ್ರೋಲ್‌ ಮ್ಯೂಸಿಕ್‌ ಮತ್ತು ಪಾಸ್‌ ಥ್ರೋ ಮೋಡ್‌ ಅನ್ನು ಹೊಂದಿದೆ. ಜೊತೆಗೆ ಇದು ಗೂಗಲ್‌ ಅಸಿಸ್ಟೆಂಟ್‌, ಅನ್ನು ಬೆಂಬಲಿಸುತ್ತದೆ. ಇದಕ್ಕಾಗಿ ಒಂದು ಪ್ರತ್ಯೇಕ ಕೀ ಅನ್ನು ಸಹ ನೀಡಲಾಗಿದೆ. ಆದರೆ ಈ ಹೆಡ್‌ಫೋನ್‌ ಸಿರಿ ಅನ್ನು ಬೆಂಬಲಿಸುವುದಿಲ್ಲ.

ಇದಲ್ಲದೆ

ಇದಲ್ಲದೆ ಈ ಸ್ಮಾರ್ಟ್‌ಹೆಡ್‌ಫೋನ್‌ ಯುಎಸ್‌ಬಿ-ಸಿ ಚಾರ್ಜಿಂಗ್‌ ಪೋರ್ಟ್‌ ಅನ್ನು ಹೊಂದಿದೆ. ಜೊತೆಗೆ ಯುಎಸ್‌ಬಿ-ಎ ಹಾಗೂ ಯುಎಸ್‌ಬಿ-ಸಿ ಎರಡರಲ್ಲೂ ಚಾರ್ಜಿಂಗ್‌ ಅನ್ನು ಮಾಡಬಹುದಾಗಿದೆ. ಇನ್ನು ಇದರಲ್ಲಿ ಟಚ್‌ ಕಂಟ್ರೂಲ್‌ ಅನ್ನು ನೀಡಲಾಗಿದ್ದು, ಅಲ್ಲದೆ ಬಟನ್‌ಗಳ ಮೂಲಕವೂ ಮ್ಯೂಸಿಕ್‌ ಪ್ಲೇ ಇಲ್ಲವೇ ಅಥವಾ ಸ್ಟಾಪ್‌ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ಎರಡು ಬದಿಯ ಇಯರ್‌ ಕಪ್ಸ್‌ಗಳಲ್ಲಿ ಕಂಪೆನಿಯ ಲೋಗೊವನ್ನ ಮುದ್ರಿಸಲಾಗಿದ್ದು, ಉತ್ತಮ ಡಿಸೈನ್‌ನಲ್ಲಿ ಮೂಡಿ ಬಂದಿದೆ.

ಉತ್ತಮ

ಇನ್ನು ಮಾಂಟ್‌ಬ್ಲ್ಯಾಂಕ್‌ ಕಂಪೆನಿ ಉತ್ತಮ ಹೆಡ್‌ಫೋನ್‌ಗಳನ್ನ ಪರಿಚಯಿಸುವುದಕ್ಕಾಗಿ ಸೌಂಡ್‌ ಎಕ್ಸ್‌ಪರ್ಟ್‌ ಆಲೆಕ್ಸ್‌ ರೋಸನ್‌ ಮತ್ತು ಆವಾರ್ಡ್‌ ವಿನ್ನಿಂಗ್‌ ಇಂಜಿನಿಯರ್ಸ್‌ ಹಾಗೂ ಡಿಸೈನರ್ಸ್‌ಗಳ ಜೊತೆ ಪಾಲುದಾರಿಕೆಯನ್ನ ಹೊಂದಿದೆ. ವಿಮಾನ ಪ್ರಯಾಣದ ಸಂದರ್ಭದಲ್ಲಿ ಈ ಹೆಡ್‌ಫೋನ್‌ ಕನಿಷ್ಟ 20 ಗಂಟೆಗಳ ಬ್ಯಾಟರಿ ಪ್ಯಾಕ್‌ಅಪ್‌ ಕೊಡುವ ಸಾಮರ್ಥ್ಯ ಹೊಂದಿರಬೇಕು ಅನ್ನುವ ಯೋಜನೆಯನ್ನ ಹೊಂದಿದೆ. ಸದ್ಯ ಇದೀಗ ಬಿಡುಗಡೆಯಾಗಿರುವ ಮಾಂಟ್‌ಬ್ಲ್ಯಾಂಕ್‌ ಹೆಡ್‌ಫೋನ್‌ ಬೆಲೆ $595 (ಅಂದಾಜು 44,174.ರೂ,)ಆಗಿದ್ದು ಬ್ಲ್ಯಾಕ್‌ ಆಂಡ್‌ ಗೋಲ್ಡ್‌, ಬ್ಲ್ಯಾಕ್‌ ಆಂಡ್‌ ಸಿಲ್ವರ್‌, ಗ್ರೇ ಆಂಡ್‌ ಸಿಲ್ವರ್‌ ಕಲರ್‌ಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Montblanc says that they are aimed at “mostly male travelers with luxury business lifestyles” who want “premium noise cancelling headphones”. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X