ಕಡಿಮೆ ಬ್ಯಾಟರಿಯಲ್ಲಿ ಹೆಚ್ಚು ಕೆಲಸ ಮಾಡಲಿದೆ 12.9 ಇಂಚಿನ ಐಪ್ಯಾಡ್ ಪ್ರೋ

|

ಆಪಲ್ ಸಂಸ್ಥೆ ಕಳೆದ ಕೆಲವು ವಾರಗಳ ಹಿಂದೆ ಹೊಸದಾಗಿ ಪವರ್ ಫುಲ್ ಆಗಿರುವ ಐಪ್ಯಾಡ್ ನ್ನು ಪರಿಚಯಿಸಿದೆ. 12.9- ಇಂಚಿನ ಐಪ್ಯಾಡ್ ಪ್ರೋ(2018) ಬಲಿಷ್ಟ ವೈಶಿಷ್ಟ್ಯತೆಗಳಿಂದ ಕೂಡಿದೆ. ಹಿಂದಿನ ಜನರೇಷನ್ನಿನ 12.9 ಇಂಚಿನ ಐಪ್ಯಾಡ್ ಪ್ರೋ ಟ್ಯಾಬ್ಲೆಟ್ ನ ಅಪ್ ಗ್ರೇಡ್ ಕೂಡ ಆಗಿದೆ. ಆದರೆ ಇದರಲ್ಲಿರುವ ಒಂದು ವಿಭಾಗವು ಡಿವೈಸ್ ನ ಹಿಂದಿನ ವರ್ಷನ್ ಗೆ ಮ್ಯಾಚ್ ಆಗುವುದಿಲ್ಲ ಅದುವೇ ಬ್ಯಾಟರಿ!

ಕಡಿಮೆ ಬ್ಯಾಟರಿಯಲ್ಲಿ ಹೆಚ್ಚು ಕೆಲಸ ಮಾಡಲಿದೆ 12.9 ಇಂಚಿನ ಐಪ್ಯಾಡ್ ಪ್ರೋ

ಹೌದು ಐಫಿಕ್ಸಿಟ್ ಹೇಳುವ ಪ್ರಕಾರ ಹೊಸ 12.9 ಇಂಚಿನ ಐಪ್ಯಾಡ್ ಪ್ರೋ ಟ್ಯಾಬ್ಲೆಟ್ ನಿಮ್ಮ ರೆಗ್ಯುಲರ್ ಲ್ಯಾಪ್ ಟಾಪ್ ನ್ನು ಕೂಡ ರಿಪ್ಲೇಸ್ ಮಾಡುವಂತಿದೆ. ಹಿಂದಿನದ್ದಕ್ಕಿಂತ ಇದು ಕಡಿಮೆ ಬ್ಯಾಟರಿಯನ್ನು ಹೊಂದಿದೆ. ಐಫಿಕ್ಸಿಟ್ ಹೇಳುವ ಪ್ರಕಾರ ಈ ವರ್ಷದ ಮಾಡ್ಯೂಲ್ ನಲ್ಲಿ ಬ್ಯಾಟರಿ ಕೆಪಾಸಿಟಿ 9720mAh ಆಗಿದೆ. ಕಳೆದ ವರ್ಷಕ್ಕಿಂತ ಇದು ಕಡಿಮೆಯಾಗಿದ್ದು ಕಳೆದ ಬಾರಿ 10875mAh ಸಾಮರ್ಥ್ಯ ಬ್ಯಾಟರಿಯನ್ನು ಅಳವಡಿಸಲಾಗಿತ್ತು. ಟ್ಯಾಬ್ಲೆಟ್ ನ ಒಟ್ಟಾರೆ ಫೂಟ್ ಪ್ರಿಂಟ್ ನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಆಪಲ್ ಈ ಕ್ರಮವನ್ನು ಕೈಗೊಂಡಿದೆ ಎಂದು ವರದಿ ತಿಳಿಸುತ್ತಿದೆ.

ಕಂಪೆನಿಯ ಇದುವರೆಗಿನ ತೆಳುವಾದ ಐಪ್ಯಾಡ್ ಇದಾಗಿದೆ. ಅಷ್ಟೇ ಅಲ್ಲ ಐಫೋನ್ ಗಳಿಗಿಂತಲೂ ಇದು ತೆಳುವಾಗಿದೆ ಯಾಕೆಂದರೆ ಕಾಂಪೋನೆಂಟ್ಸ್ ಗಳನ್ನು ಅಂಟಿಸುವುದಕ್ಕೆ ಈ ಬಾರಿ ಕಂಪೆನಿಯು ತೆಳುವಾದ ವಸ್ತುಗಳನ್ನು ಬಳಕೆ ಮಾಡಿದೆ.

ನಿಜ ಹೊಸ 12.9 ಇಂಚಿನ ಐಪ್ಯಾಡ್ ಪ್ರೋ ನ ಬ್ಯಾಟರಿ ಕೆಪಾಸಿಟಿ ಕಡಿಮೆ ಇದೆ, ಹಾಗಂತ ಇದರ ಪ್ರದರ್ಶನದಲ್ಲಿ ಆಕರ್ಷಣೆ ಇಲ್ಲ ಎಂದು ಭಾವಿಸಬೇಡಿ. ಈ ಡಿವೈಸ್ ನಲ್ಲಿ ಎ12ಎಕ್ಸ್ ಬಯೋನಿಕ್ ಪ್ರೊಸೆಸರ್ ನ್ನು ಬಳಕೆ ಮಾಡಲಾಗಿದ್ದು ಈ ಹಿಂದಿನದ್ದಕ್ಕಿಂತಲೂ ಇದು ಹೆಚ್ಚು ಪವರ್ ಫುಲ್ ಆಗಿರುತ್ತದೆ.

ಆಪಲ್ ನ ಅಧಿಕೃತ ಪೇಜ್ ನಲ್ಲಿ ಈ ಟ್ಯಾಬ್ಲೆಟ್ ವೈಫೈ ಕನೆಕ್ಟಿವಿಟಿಯಲ್ಲಿ ಸುಮಾರು 100 ತಾಸುಗಳು ಕೆಲಸ ಮಾಡಬಹುದು, ವೀಡಿಯೋ ಅಥವಾ ಮ್ಯೂಸಿಕ್ ಆಲಿಸಬಹುದು ಎಂದು ವಿವರಿಸಿದೆ. ಸೆಲ್ಯುಲರ್ ಡಾಟಾದಲ್ಲಿ ಸುಮಾರು 9 ತಾಸುಗಳ ವರೆಗೆ ಕಾರ್ಯ ನಿರ್ವಹಿಸಬಹುದು ಎಂಬ ಭರವಸೆಯನ್ನು ಅಧಿಕೃತವಾಗಿ ನೀಡಲಾಗಿದೆ. ಬ್ಯಾಟರಿ ಬಗ್ಗೆ ಹೇಳುವುದಾದರೆ 12.9 ಇಂಚಿನ ಐಪ್ಯಾಡ್ ಪ್ರೋ ಇದೇ ಮೊದಲ ಬಾರಿಗೆ ಟೈಪ್-ಸಿ ಪೋರ್ಟ್ ನ್ನು ಚಾರ್ಜಿಂಗ್ ಗಾಗಿ ಬಳಕೆ ಮಾಡಲಾಗಿದೆ.

12.9 ಇಂಚಿನ ಐಪ್ಯಾಡ್ ಪ್ರೋ ಮತ್ತು 11 ಇಂಚಿನ ಐಪ್ಯಾಡ್ ಪ್ರೋ ಇತ್ತೀಚೆಗಷ್ಟೇ ಭಾರತದಲ್ಲಿ ಪ್ರೀ ಆರ್ಡರ್ ಗೆ ಅವಕಾಶ ನೀಡಿತ್ತು. ಇಲ್ಲಿದೆ ಅದರ ಸಂಪೂರ್ಣ ಪಟ್ಟಿ.

ಆಪಲ್ ಐಪ್ಯಾಡ್ ಪ್ರೋ(2018) 11 ಇಂಚಿನ ಬೆಲೆಯ ಪಟ್ಟಿ:

  • ಐಪ್ಯಾಡ್ ಪ್ರೋ11-ಇಂಚಿನ 64GB ವೈ-ಫೈ – ರೂಪಾಯಿ 71,900
  • ಐಪ್ಯಾಡ್ ಪ್ರೋ11-ಇಂಚಿನ 256GB ವೈ-ಫೈ – ರೂಪಾಯಿ 85,900
  • ಐಪ್ಯಾಡ್ ಪ್ರೋ11-ಇಂಚಿನ 512GB ವೈ-ಫೈ – ರೂಪಾಯಿ 1,03,900
  • ಐಪ್ಯಾಡ್ ಪ್ರೋ11-ಇಂಚಿನ 1TB ವೈ-ಫೈ – ರೂಪಾಯಿ 1,39,900
  • ಐಪ್ಯಾಡ್ ಪ್ರೋ11-ಇಂಚಿನ 64GB ವೈ-ಫೈ + ಸೆಲ್ಯೂಲರ್ – ರೂಪಾಯಿ 85,900
  • ಐಪ್ಯಾಡ್ ಪ್ರೋ11-ಇಂಚಿನ 256GB ವೈ-ಫೈ + ಸೆಲ್ಯೂಲರ್ – ರೂಪಾಯಿ 99,900
  • ಐಪ್ಯಾಡ್ ಪ್ರೋ11-ಇಂಚಿನ 512GB ವೈ-ಫೈ + ಸೆಲ್ಯೂಲರ್ – ರೂಪಾಯಿ 1,17,900
  • ಐಪ್ಯಾಡ್ ಪ್ರೋ11-ಇಂಚಿನ 1TB ವೈ-ಫೈ + ಸೆಲ್ಯೂಲರ್ – ರೂಪಾಯಿ 1,53,900

ಆಪಲ್ ಐಪ್ಯಾಡ್ ಪ್ರೋ(2018) 12.9 ಇಂಚಿನ ಪ್ರೈಸ್ ಲಿಸ್ಟ್

  • ಐಪ್ಯಾಡ್ ಪ್ರೋ12.9-ಇಂಚಿನ 64GB ವೈ-ಫೈ – ರೂಪಾಯಿ 89,900
  • ಐಪ್ಯಾಡ್ ಪ್ರೋ12.9-ಇಂಚಿನ 256GB ವೈ-ಫೈ – ರೂಪಾಯಿ 1,03,900
  • ಐಪ್ಯಾಡ್ ಪ್ರೋ12.9-ಇಂಚಿನ 512GB ವೈ-ಫೈ – ರೂಪಾಯಿ 1,21,900
  • ಐಪ್ಯಾಡ್ ಪ್ರೋ12.9-ಇಂಚಿನ 1TB ವೈ-ಫೈ – ರೂಪಾಯಿ 1,57,900
  • ಐಪ್ಯಾಡ್ ಪ್ರೋ12.9-ಇಂಚಿನ 64GB ವೈ-ಫೈ + ಸೆಲ್ಯೂಲರ್ – ರೂಪಾಯಿ 1,03,900
  • ಐಪ್ಯಾಡ್ ಪ್ರೋ12.9-ಇಂಚಿನ 256GB ವೈ-ಫೈ + ಸೆಲ್ಯೂಲರ್ – ರೂಪಾಯಿ 1,17,900
  • ಐಪ್ಯಾಡ್ ಪ್ರೋ12.9-ಇಂಚಿನ 512GB ವೈ-ಫೈ + ಸೆಲ್ಯೂಲರ್ – ರೂಪಾಯಿ 1,35,900
  • ಐಪ್ಯಾಡ್ ಪ್ರೋ12.9-ಇಂಚಿನ 1TB ವೈ-ಫೈ + ಸೆಲ್ಯೂಲರ್ – ರೂಪಾಯಿ 1,71,900
Best Mobiles in India

Read more about:
English summary
More power but less battery in 12.9-ಇಂಚಿನ iPad Pro, reveals tear down

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X