2022ಕ್ಕೆ ಮಾರುಕಟ್ಟೆಗೆ ಎಂಟ್ರಿ ನೀಡಲಿರುವ ಟಾಪ್‌ ಸ್ಮಾರ್ಟ್‌ಫೋನ್‌ಗಳು!

|

ಸ್ಮಾರ್ಟ್‌ಫೋನ್‌ ಇಂದಿನ ದಿನಗಳಲ್ಲಿ ಪ್ರಮುಖವಾದ ಡಿವೈಸ್‌ ಆಗಿ ಗುರುತಿಸಿಕೊಂಡಿದೆ. ಎಲ್ಲಾ ಕೆಲಸ ಕಾರ್ಯಗಳಿಗೂ ಸ್ಮಾರ್ಟ್‌ಫೋನ್‌ ಅವಶ್ಯಕ ಎನಿಸಿದೆ. ಇದೇ ಕಾರಣಕ್ಕೆ ಟೆಕ್‌ ವಲಯದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆ ಇದೆ. ಆದರಿಂದ ಸ್ಮಾರ್ಟ್‌ಫೋನ್‌ ಕಂಪೆನಿಗಳು ಕೂಡ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಲೇ ಬಂದಿವೆ. ಇನ್ನು 2021ರಲ್ಲಿಯೂ ಕೂಡ ಹಲವು ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿವೆ. ಇದಲ್ಲದೆ ಮುಂದಿನ ವರ್ಷ 2022 ರಲ್ಲಿಯೂ ಹಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ನೀಡಲು ಸಿದ್ಧತೆ ನಡೆಸಿವೆ.

ಸ್ಮಾರ್ಟ್‌ಫೋನ್‌

ಹೌದು, 2022ಕ್ಕೆ ಮಾರುಕಟ್ಟೆಗೆ ಹಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ನೀಡಲು ಸಿದ್ಧತೆ ನಡೆಸಿವೆ. ಈ ಸ್ಮಾರ್ಟ್‌ಫೋನ್‌ಗಳು ಹೊಸ ಮಾದರಿಯ ಪ್ರೊಸೆಸರ್‌, ಕ್ಯಾಮೆರಾ ವಿನ್ಯಾಸ ಸೇರಿದಂತೆ ಅಧಿಕ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ ಸಾಧ್ಯತೆ ಇದೆ. ಅದರಲ್ಲೂ 2022 ರಲ್ಲಿ ಪ್ರಾರಂಭವಾಗುವ ಹೊಸ ಫೋನ್‌ಗಳು ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8 ಜನ್ 1 ನಂತಹ ಹೊಸ ಚಿಪ್‌ಸೆಟ್‌ಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಹಾಗಾದ್ರೆ ಮುಂಬರುವ ವರ್ಷದಲ್ಲಿ ಮಾರುಕಟ್ಟೆಗೆ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ನೀಡಲಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಸರಣಿ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಸರಣಿ

ಸ್ಯಾಮ್‌ಸಂಗ್‌ ಕಂಪೆನಿ ತನ್ನ ಗ್ಯಾಲಕ್ಸಿ S ಸರಣಿಯಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಈಗಾಗಲೇ S21 ಸರಣಿ ಪರಿಚಯಿಸಿ ಯಶಸ್ಸು ಕಂಡಿರುವ ಸ್ಯಾಮ್‌ಸಂಗ್‌ 2022ರಲ್ಲಿ ಗ್ಯಾಲಕ್ಸಿ S22 ಸರಣಿ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಸರಣಿಯು 2022ರ ಫೆಬ್ರವರಿ ಆರಂಭದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಹೊಸ ಆಂಡ್ರಾಯ್ಡ್ 12-ಆಧಾರಿತ One UI 4.0 ಸಾಫ್ಟ್‌ವೇರ್ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 FE
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್ ಕೂಡ 2022ರ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. S22 ಸರಣಿಯಲ್ಲಿ ಹೆಚ್ಚು ಖರ್ಚು ಮಾಡಲು ಬಯಸದ ಖರೀದಿದಾರರಿಗೆ ಬಜೆಟ್ ಬೆಲೆಯ ಸ್ನಾರ್ಟ್‌ಫೋನ್‌ ಖರೀದಿಸಲು ಇದು ಸೂಕ್ತವಾಗಿದೆ. ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್‌ಗಿಂತ ಕೆಲವು ಹೊಸ ವಿಶೇಷಣಗಳು ಮತ್ತು ಅದರ ಪೂರ್ವವರ್ತಿಗೆ ಹೋಲಿಸಿದರೆ ಹೊಸ ವಿನ್ಯಾಸವನ್ನು ನೀಡುವ ನಿರೀಕ್ಷೆಯಿದೆ.

ಒನ್‌ಪ್ಲಸ್‌ 10 ಸರಣಿ ಮತ್ತು ಒನ್‌ಪ್ಲಸ್‌ ನಾರ್ಡ್‌ 2 CE

ಒನ್‌ಪ್ಲಸ್‌ 10 ಸರಣಿ ಮತ್ತು ಒನ್‌ಪ್ಲಸ್‌ ನಾರ್ಡ್‌ 2 CE

ಒನ್‌ಪ್ಲಸ್‌ ಕಂಪೆನಿ ತನ್ನ ಹೊಸ ಒನ್‌ಪ್ಲಸ್‌ 10 ಸರಣಿಯ ಸಾಧನಗಳನ್ನು ಜನವರಿ 2022ರ ಆರಂಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಸರಣಿಯಲ್ಲಿ ಒನ್‌ಪ್ಲಸ್‌ 10 ಮತ್ತು ಒನ್‌ಪ್ಲಸ್‌ 10 ಪ್ರೊ ಫೋನ್‌ಗಳನ್ನು ಪ್ಯಾಕ್ ಮಾಡುವ ನಿರೀಕ್ಷೆಯಿದೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು ಹೊಸ ಸ್ನಾಪ್‌ಡ್ರಾಗನ್ 8 ಜನ್ 1 ಚಿಪ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಇದಲ್ಲದೆ ಒನ್‌ಪ್ಲಸ್‌ ಸಹ ಒನ್‌ಪ್ಲಸ್‌ 10 ಸರಣಿಯೊಂದಿಗೆ ಹೊಸ ಯೂನಿಫೈಡ್ OS ಸೆಟ್ ಅನ್ನು ತರಲು ಸಿದ್ಧವಾಗಿದೆ. ಹಾಗೆಯೇ ಒನ್‌ಪ್ಲಸ್‌ ಮುಂದಿನ ವರ್ಷದ ಫೆಬ್ರವರಿಯಲ್ಲಿ ಒನ್‌ಪ್ಲಸ್‌ ನಾರ್ಡ್‌ 2 CE ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಇದು ಬಜೆಟ್ ಮಧ್ಯಮ-ಶ್ರೇಣಿಯ ಫೋನ್ ಆಗಿರಲಿದೆ ಎನ್ನಲಾಗಿದೆ.

ಆಪಲ್‌ ಐಫೋನ್‌ 14 ಸರಣಿ ಮತ್ತು ಐಫೋನ್‌ SE 3

ಆಪಲ್‌ ಐಫೋನ್‌ 14 ಸರಣಿ ಮತ್ತು ಐಫೋನ್‌ SE 3

ಆಪಲ್ ಕಂಪೆನಿ ಈಗಾಗಲೇ ತನ್ನ ಹೊಸ ಐಫೋನ್ 14 ಸರಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಪಲ್ ಹೊಸ ಸಿಲಿಕಾನ್‌ನೊಂದಿಗೆ ಫೋನ್ ಅನ್ನು ಅಪ್‌ಗ್ರೇಡ್ ಮಾಡುವ ಸಾಧ್ಯತೆಯಿದೆ.
ಅಲ್ಲದೆ ಐಫೋನ್ SE 3 ಮುಂದಿನ ವರ್ಷ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದು SE-ಸರಣಿಯಲ್ಲಿ ಮೊದಲನೆಯದಾದ 5G ಸಂಪರ್ಕದೊಂದಿಗೆ Apple A15 ಚಿಪ್‌ ಹೊಂದಿರುವ ಫೋನ್‌ ಆಗಿರಲಿದೆ ಎಂದು ಹೇಳಲಾಗಿದೆ.

ಗೂಗಲ್‌ ಪಿಕ್ಸೆಲ್‌ 6A

ಗೂಗಲ್‌ ಪಿಕ್ಸೆಲ್‌ 6A

2022ರಲ್ಲಿ ಗೂಗಲ್‌ ಪಿಕ್ಸೆಲ್ 6ಎ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್‌ ಹೊಸ ಟೆನ್ಸರ್ ಚಿಪ್ ಅನ್ನು ಒಳಗೊಂಡಿರುವ ಸಾಧ್ಯತೆ ಇದೆ. ಗೂಗಲ್‌ ಪಿಕ್ಸೆಲ್‌ 6A ಹೆಚ್ಚು ಕೈಗೆಟುಕುವ ಮತ್ತು ಹೆಚ್ಚು ಖರೀದಿದಾರರಿಗೆ ಪ್ರವೇಶಿಸಬಹುದಾದ ಟೋನ್-ಡೌನ್ ಅನುಭವವನ್ನು ನೀಡುತ್ತದೆ ಎನ್ನಲಾಗಿದೆ.

Best Mobiles in India

English summary
Check out the top smartphones set to launch in 2022 that are worth saving your money for.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X