ಈ ಸ್ಥಳಗಳಲ್ಲಿ ಸೆಲ್ಫಿ ತೆಗೆಯಲು ಗಟ್ಟಿ ಗುಂಡಿಗೆ ಬೇಕು!!!
ಸೆಲ್ಫಿ ತೆಗೆಯುವ ತುಡಿತ ಯಾರಿಗಿರುವುದಿಲ್ಲ ಹೇಳಿ? ಇಂದಿನ ಫೋನ್ ಪ್ರಿಯರು ಮೊತ್ತ ಮೊದಲು ಪರಿಶೀಲಿಸುವ ಅಂಶವೇ ಸೆಲ್ಫಿ ಕ್ಯಾಮೆರಾ ಹೇಗಿದೆ ಎಂಬುದಾಗಿದೆ. ಹೆಚ್ಚಿನ ಸ್ಮಾರ್ಟ್‌ಫೋನ್ ತಯಾರಕರು ಕೂಡ ಬಳಕೆದಾರರ ಸೆಲ್ಫಿ ಅಂಶವನ್ನೇ ಮನಗಂಡು ಹೆಚ್ಚಿನ ಪ್ರಮಾಣದಲ್ಲಿ ಅತ್ಯುತ್ತಮ ಸೆಲ್ಫಿ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.

ಫೋನ್ ಕೈಗೆ ಬಂತೆಂದರೆ ಸಾಕು ಸೆಲ್ಫಿ ತೆಗೆದುಕೊಳ್ಳುವ ಒಂದೂ ಅವಕಾಶವನ್ನೂ ಮಿಸ್ ಮಾಡದೆಯೇ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಅಪಾಯದ ಸನ್ನಿವೇಶಗಳಲ್ಲೂ ಸೆಲ್ಫಿ ತೆಗೆಸಿಕೊಳ್ಳುವ ಹುಚ್ಚು ಕೆಲವರಿಗಿರುತ್ತದೆ ಇನ್ನು ಕೆಲವರಿಗೆ ಸೆಲ್ಫಿ ಮೋಹ ಎಷ್ಟಿದೆಯೆಂದರೆ ಇದಕ್ಕಾಗಿ ತಮ್ಮ ಪ್ರಾಣವನ್ನೂ ಕಳೆದುಕೊಂಡಿದ್ದವರಿದ್ದಾರೆ. ಇಂದಿನ ಲೇಖನದಲ್ಲಿ ಸೆಲ್ಫಿ ತೆಗೆಯಲೇಬಾರದೆಂಬ ನಿರ್ಬಂಧಕ್ಕೊಳಗಾಗಿರುವ ಕೆಲವೊಂದು ಸ್ಥಳಗಳ ಪರಿಚಯವನ್ನು ನಾವು ನಿಮಗೆ ಮಾಡಿಕೊಡುತ್ತಿದ್ದು ವಿಶ್ವದ ಬೇರೆ ಬೇರೆ ದೇಶಗಳನ್ನು ಈ ಪಟ್ಟಿ ಒಳಗೊಂಡಿದೆ.
ಹಾಂಗ್ ಕಾಂಗ್
ದ ಸೆಂಟರ್ ಬಿಲ್ಡಿಂಗ್
ಈ ಕಟ್ಟಡ 1,135 ಫೀಟ್ ಎತ್ತರವಾಗಿದ್ದು ಇಲ್ಲಿ ನಿಂತು ಸೆಲ್ಫಿ ತೆಗೆಸುವುದು ಎಂದರೆ ನಿಜಕ್ಕೂ ಅದೊಂದು ಭಯಾನಕ ಅನುಭವವಾಗಿದೆ.
ಆಸ್ಟ್ರಿಯಾ
ವೊಟೀವ್ ಚರ್ಚ್ ವಿಯೆನ್ನಾ
ಸ್ಟಂಟ್ ಮಾಡಲು ಇಚ್ಛಿಸುವ ಸೆಲ್ಫಿ ಪ್ರಿಯರ ಮೆಚ್ಚಿನ ತಾಣ ಅಂತೆಯೇ ಹೆಚ್ಚು ಅಪಾಯಕಾರಿ ಸ್ಥಳವಾಗಿದೆ.
ಭಾರತ
ರೊಹ್‌ಟಂಗ್ ಪಾಸ್
ಚಳಿಯಲ್ಲಿ ಥರಗುಟ್ಟಿಕೊಂಡು ಸೆಲ್ಫಿ ತೆಗೆಸುವ ಹುಚ್ಚು ನಿಮ್ಮದು ಎಂದಾದಲ್ಲಿ ಭಾರತದಲ್ಲಿ ರೊಹ್‌ಟಂಗ್ ಪ್ರಸಿದ್ಧವಾಗಿದೆ.
ಭಾರತ
ದ್ರಾಸ್
ವಿಶ್ವದಲ್ಲೇ ಎರಡನೆಯ ಹೆಚ್ಚು ಶೀತಪ್ರದೇಶವಾಗಿರುವ ದ್ರಾಸ್ ಯಾವಾಗಲೂ ಹಿಮಚ್ಛಾದಿತವಾಗಿರುತ್ತದೆ.
ಸ್ಪೇನ್
ಗೂಳಿಗಳೊಂದಿಗೆ ಸೆಲ್ಫಿ
ಗೂಳಿಗಳೊಂದಿಗೆ ಸೆಣಸಾಡುತ್ತಾ ಸೆಲ್ಫಿ ತೆಗೆಯುವ ಖಯಾಲಿ ಸ್ಪೇನ್‌ನ ಈ ಜನರಿಗಿದೆ.
ಬ್ರೆಜಿಲ್
ರೀಡಿಮರ್ ರಿಯೊ ಡಿ ಜನೇರಿಯೊ
ವಿಶ್ವದಲ್ಲೇ ಮಾನ್ಯತೆ ಪಡೆದ ಹೆಚ್ಚು ಎತ್ತರದ ಸ್ಥಳವಾಗಿದೆ ಈ ಜನೇರಿಯೊ. ಇದರ ಎತ್ತರ ನಿಜಕ್ಕೂ ನಿಮ್ಮನ್ನು ರೋಮಾಂಚನಗೊಳಿಸಲಿದೆ.
ದುಬೈ
ಪ್ರಿನ್ಸಸ್ ಟವರ್
ಪ್ರಪಂಚದ ಹೆಚ್ಚು ಎತ್ತರದ ಕಟ್ಟಡ ಎಂದೆನಿಸಿರುವ ಪ್ರಿನ್ಸಸ್ ಟವರ್ 1,350 ಫೀಟ್ ಎತ್ತರದಲ್ಲಿದೆ.
ಭಾರತ
ಫುಕ್ತಲ್ ಮೊನಾಸ್ಟ್ರಿ
ಇಲ್ಲಿ ಸೆಲ್ಫಿ ತೆಗೆಸಿಕೊಳ್ಳಲು ಎಂಟೆದೆ ಬೇಕು ಎಂಬ ಮಾತೂ ಇದ್ದು ಇದನ್ನು ಹತ್ತಿ ಸೆಲ್ಫಿ ತೆಗೆಯುವ ಎದೆಗಾರಿಗೆ ನಿಮಗಿರಬೇಕಾದ್ದು ಅತ್ಯವಶ್ಯಕ.
ಭಾರತ
ಗುರುಡೊಂಗ್‌ಮರ್
ಆಮ್ಲಜನಕ ಸರಿಯಾಗಿ ಲಭ್ಯವಾಗದೇ ಇರುವ ಪ್ರದೇಶವಾಗಿರುವ ಗುರುಡೊಂಗ್‌ನಲ್ಲಿ ಸೆಲ್ಫಿ ತೆಗೆಸಿಕೊಳ್ಳುವುದು ಎಂದರೆ ಅದೊಂದು ಉಸಿರುಗಟ್ಟಿಸುವ ಸಾಹಸವಾಗಿದೆ.
ಡಿಸ್ನಿಲ್ಯಾಂಡ್
ಸ್ಪಾಲ್ಯಾಶ್ ಮೌಂಟೆನ್ ಸೆಲ್ಫಿ
ಡಿಸ್ನಿಲ್ಯಾಂಡ್‌ನ ಸ್ಪಾಲ್ಯಾಶ್ ಮೌಂಟೆನ್ ಸೆಲ್ಫಿ ತೆಗೆಸಿಕೊಳ್ಳಬೇಕೆಂದಿರುವವರಿಗೆ ಇದು ಸೂಕ್ತ ಸ್ಥಳವಾಗಿದೆ.
ಭಾರತ
ರೂಪ್‌ಕುಂಡ್ ಗ್ಲೇಸಿಯರ್
ಹಿಮದಿಂದ ನಿಮ್ಮನ್ನು ಥರಗುಟ್ಟಿಸುವಂತೆ ಮಾಡುವ ರೂಪ್ ಕುಂಡ್ ನಿಜಕ್ಕೂ ಸೆಲ್ಫಿ ಪ್ರೇಮಿಗಳಿಗೆ ನಡುಕ ಹುಟ್ಟಿಸುವ ಅನುಭವವನ್ನು ನೀಡುತ್ತದೆ.
ಭಾರತ
ಕಿಶ್ತ್‌ವಾರ್ ಕೈಲಾಶ್ ರೋಡ್
ವಿಶ್ವದಲ್ಲೇ ಹೆಚ್ಚು ಭಯಾನಕ ಮತ್ತು ಅಪಾಯಕಾರಿ ರಸ್ತೆ ಎಂಬ ಹೆಗ್ಗಳಿಕೆ ಕೈಲಾಶ್ ರಸ್ತೆಗಿದ್ದು ಜಮ್ಮು ಕಾಶ್ಮೀರದ ಕಿಶ್ತ್‌ವಾರ್ ಜಿಲ್ಲೆಯಲ್ಲಿ ಈ ಸ್ಥಳವಿದೆ.
ರಷ್ಯನ್ ಸ್ಕೈಸ್ಕಾರ್ಪರ್
ರಷ್ಯಾದ ಹೆಚ್ಚು ಎತ್ತರದ ಕಟ್ಟಡ
ರಷ್ಯಾದ ಹೆಚ್ಚು ಎತ್ತರದ ಕಟ್ಟಡವೆಂದೇ ಪ್ರಸಿದ್ಧವಾಗಿರುವ ಸ್ಕೈಸ್ಕಾರ್ಪರ್ ಸೆಲ್ಫಿ ಪ್ರೇಮಿಗಳಿಗೆ ರೋಮಾಂಚನವನ್ನುಂಟು ಮಾಡುತ್ತದೆ.
ಭಾರತ
ರಿವರ್ ರಾಫ್ಟಿಂಗ್, ಮೋರಿ
ಯಮುನಾ ನದಿಯಲ್ಲಿ ಹೆಚ್ಚು ಚಾಲೆಂಜಿಂಗ್ ಸೆಲ್ಫಿ ತೆಗೆಯಲು ನಿಮಗೆ ಎಂಟೆದೆ ಇದೆಯೇ? ಹಾಗಿದ್ದರೆ ಸೆಲ್ಫಿ ಪ್ರೇಮಿಗಳು ಈ ಚಾಲೆಂಜ್ ಅನ್ನು ಸ್ವೀಕರಿಸಲೇಬೇಕು.


Click it and Unblock the Notifications








